ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Economy: ಅಮೆರಿಕ ಜಪಾನ್‌ ಜರ್ಮನಿಗಳನ್ನು ಹಿಂದಿಕ್ಕಿ 2075ಕ್ಕೆ ವಿಶ್ವದ 2ನೇ ಬೃಹತ್‌ ಆರ್ಥಿಕತೆಯಾಗಲಿದೆಯಂತೆ ಭಾರತ, ಈ ಸಾಧನೆ ಹೇಗೆ

India Economy: ಅಮೆರಿಕ ಜಪಾನ್‌ ಜರ್ಮನಿಗಳನ್ನು ಹಿಂದಿಕ್ಕಿ 2075ಕ್ಕೆ ವಿಶ್ವದ 2ನೇ ಬೃಹತ್‌ ಆರ್ಥಿಕತೆಯಾಗಲಿದೆಯಂತೆ ಭಾರತ, ಈ ಸಾಧನೆ ಹೇಗೆ

Praveen Chandra B HT Kannada

Jul 11, 2023 03:37 PM IST

2075ಕ್ಕೆ ವಿಶ್ವದ 2ನೇ ಬೃಹತ್‌ ಆರ್ಥಿಕತೆಯಾಗಲಿದೆ ಭಾರತ

  • 2075 India largest economy: ಭಾರತವು 2075ಕ್ಕೆ ಜಪಾನ್‌, ಜರ್ಮನಿ ಮಾತ್ರವಲ್ಲದೆ ಅಮೆರಿಕವನ್ನೂ ಹಿಂದಿಕ್ಕಿ ಭಾರತವು ಬೃಹತ್‌ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಈ ಸಾಧನೆ ಹೇಗೆ ಎಂದು ತಿಳಿಯೋಣ ಬನ್ನಿ

2075ಕ್ಕೆ ವಿಶ್ವದ 2ನೇ ಬೃಹತ್‌ ಆರ್ಥಿಕತೆಯಾಗಲಿದೆ ಭಾರತ
2075ಕ್ಕೆ ವಿಶ್ವದ 2ನೇ ಬೃಹತ್‌ ಆರ್ಥಿಕತೆಯಾಗಲಿದೆ ಭಾರತ (AFP)

ಬೆಂಗಳೂರು: ಭಾರತವು ಜಗತ್ತಿನ ಎರಡನೇ ಬೃಹತ್‌ ಅರ್ಥವ್ಯವಸ್ಥೆಯಾಗುವತ್ತ ದಾಪುಗಾಲಿಡುತ್ತಿದೆ. 2075ಕ್ಕೆ ಜಪಾನ್‌, ಜರ್ಮನಿ ಮಾತ್ರವಲ್ಲದೆ ಅಮೆರಿಕವನ್ನೂ ಹಿಂದಿಕ್ಕಿ ಭಾರತವು ಬೃಹತ್‌ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಸದ್ಯ ಭಾರತವು ಅರ್ಥವ್ಯವಸ್ಥೆಯಲ್ಲಿ ಜಗತ್ತಿನ ಅಗ್ರ 5ನೇ ದೇಶವಾಗಿದೆ. ಅಂದರೆ, ಜರ್ಮನಿ, ಜಪಾನ್‌, ಚೀನಾ ಮತ್ತು ಅಮೆರಿಕದ ನಂತರದ ಸ್ಥಾನವನ್ನು ಪಡೆದಿದೆ. ಮುಂಬರುವ ವರ್ಷಗಳಲ್ಲಿ ಅನ್ವೇಷಣೆ ಮತ್ತು ತಂತ್ರಜ್ಞಾನ, ಅತ್ಯಧಿಕ ಬಂಡವಾಳ ಹೂಡಿಕೆ, ಉತ್ಪಾದಕತೆ ಹೆಚ್ಚಳ ಇತ್ಯಾದಿಗಳ ನೆರವಿನಿಂದ ಭಾರತವು ತನ್ನ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಇನ್ವೆಸ್ಟ್‌ಬ್ಯಾಂಕ್‌ ಗೋಲ್ಡ್‌ಮನ್‌ ಸ್ಯಾಚ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಗೋಲ್ಡ್‌ಮನ್‌ ಸ್ಯಾಚ್ಸ್ ವರದಿಯಲ್ಲೇನಿದೆ?

ಭಾರತವು ಅಮೆರಿಕ, ಜಪಾನ್‌, ಜರ್ಮನಿಯನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅಗ್ರ ಆರ್ಥಿಕತೆಯಾಗಲಿದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್ ವರದಿಯಲ್ಲಿ ತಿಳಿಸಲಾಗಿದೆ. "ಮುಂದಿನ ಎರಡು ದಶಕಗಳಲ್ಲಿ, ಭಾರತದ ಅವಲಂಬನೆ ಅನುಪಾತವು ಪ್ರಾದೇಶಿಕ ಆರ್ಥಿಕತೆಗಳಲ್ಲಿ ಅತ್ಯಂತ ಕಡಿಮೆ ಇರಲಿದೆ" ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ರಿಸರ್ಚ್‌ನ ಸಂತನು ಸೇನ್‌ಗುಪ್ತಾ ಹೇಳಿದ್ದಾರೆ. "ಭಾರತದದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಸಾಮರ್ಥ್ಯವನ್ನು ಉತ್ಪಾದಕತೆ ಹೆಚ್ಚಳಕ್ಕೆ ಬಳಸುವುದರ ಮೂಲಕ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬಹುದು" ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯು ಕಾರ್ಮಿಕ ಪಡೆಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಇದು ಕಿಟಕಿಯಾಗಿರುತ್ತದೆ. ಇದರಿಂದ ಸೇವಾ ವಲಯದ ಬೆಳವಣಿಗೆ ಹೆಚ್ಚಾಗಲಿದೆ. ಇದಕ್ಕಾಗಿ ಮೂಲಸೌಕರ್ಯ ಬೆಳವಣಿಗೆಯನ್ನು ಮುಂದುವರೆಸುವ ಅವಶ್ಯಕತೆಯೂ ಇದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದನೆ ಮತ್ತು ಸೇವಾ ವಿಭಾಗದಲ್ಲಿ ಸಾಮರ್ಥ್ಯ ಸೃಷ್ಟಿಸಲು ಖಾಸಗಿ ವಲಯಕ್ಕೆ ಇದು ಸೂಕ್ತವಾದ ಸಮಯ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಈ ರೀತಿ ಉತ್ಪಾದನೆ ಮತ್ತು ಸೇವಾ ವಿಭಾಗದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರಿಂದ ಉದ್ಯೋಗ ಸೃಷ್ಟಿ ಹೆಚ್ಚಳವಾಗುತ್ತದೆ. ದೊಡ್ಡ ಕಾರ್ಮಿಕ ಪಡೆಗೆ ಉದ್ಯೋಗಾವಕಾಶವೂ ಹೆಚ್ಚುತ್ತದೆ. ಉತ್ಪಾದನೆಯೂ ಹೆಚ್ಚಾಗುತ್ತದೆ ಎಂದು ಹೂಡಿಕೆ ಬ್ಯಾಂಕ್‌ ತಿಳಿಸಿದೆ.

ಭಾರತದ ಉಳಿತಾಯ ದರವು ಅವಲಂಬನೆ ಅನುಪಾತ ಕಡಿಮೆ ಮಾಡುತ್ತಿದೆ. ಇದರೊಂದಿಗೆ ಹೆಚ್ಚುತ್ತಿರುವ ಆದಾಯ, ಹಣಕಾಸು ವಲಯದ ಅಭಿವೃದ್ಧಿಯೂ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಬಂಡವಾಳ ಸಂಗ್ರಹ ಲಭ್ಯತೆಯೂ ಹೆಚ್ಚಾಗಲಿದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ತನ್ನ ವರದಿಯಲ್ಲಿ ತಿಳಿಸಿದೆ. "ಭಾರತದಲ್ಲಿ ಕಾರ್ಮಿಕ ಪಡೆಯ ಪಾಲ್ಗೊಳ್ಳುವಿಕೆ ಕಳೆದ 15 ವರ್ಷಗಳಲ್ಲಿ ಕಡಿಮೆಯಾಗಿದೆ" ಎಂಬ ಅಂಶವನ್ನೂ ವರದಿಯಲ್ಲಿ ದಾಖಲಿಸಲಾಗಿದೆ. "ಪುರುಷರಿಗೆ ಹೋಲಿಸಿದರೆ ಉದ್ಯೋಗಪಡೆಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯು ಗಮನಾರ್ಹವಾಗಿ ತಗ್ಗಿದೆ" ಎಂದು ವರದಿ ತಿಳಿಸಿದೆ.

ಭಾರತದ ಆರ್ಥಿಕ ಪ್ರಗತಿಗೆ ನಿವ್ವಳ ರಫ್ತಿನ ಕೊಡುಗೆಯೂ ಏರಿಕೆಯಾಗಲಿದೆ. ಈಗ ಭಾರತವು ಚಾಲ್ತಿ ಖಾತೆ ಕೊರತೆ ಎದುರಿಸುತ್ತಿದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ತಿಳಿಸಿದೆ. ಈ ಹಿಂದೆ ಎಸ್‌ಆಂಡ್‌ಪಿ ಗ್ಲೋಬಲ್‌ ಮತ್ತು ಮೋರ್ಗಾನ್‌ ಸ್ಟಾನ್ಲಿ ಕೂಡ ಭಾರತವು 2030 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ