ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ಬಳಿಕ ಡೆಪಾಸಿಟ್, ಟ್ರಾನ್ಸಾಕ್ಷನ್, ಇಎಂಐ ಮುಂದುವರೆಸಬಹುದೇ? ಗೊಂದಲಗಳಿಗೆ ಇಲ್ಲಿದೆ ಪರಿಹಾರ

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ಬಳಿಕ ಡೆಪಾಸಿಟ್, ಟ್ರಾನ್ಸಾಕ್ಷನ್, ಇಎಂಐ ಮುಂದುವರೆಸಬಹುದೇ? ಗೊಂದಲಗಳಿಗೆ ಇಲ್ಲಿದೆ ಪರಿಹಾರ

Prasanna Kumar P N HT Kannada

Feb 16, 2024 09:15 PM IST

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ಖಾತೆಯ ಗೊಂದಲಗಳಿಗೆ ಇಲ್ಲಿದೆ ಪರಿಹಾರ

    • Paytm Payments Bank Account : ಮಾರ್ಚ್ 15ರ ನಂತರ ಯಾವುದೇ ಡೆಪಾಸಿಟ್, ಟ್ರಾನ್ಸಾಕ್ಷನ್ ನಡೆಸಬಾರದು ಎಂದು ತಿಳಿಸಿದ್ದರ ನಡುವೆಯೂ ಹಲವರಿಗೆ ಗೊಂದಲಗಳು ನಿರ್ಮಾಣವಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಸಂಬಂಧಿಸಿದ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ಖಾತೆಯ ಗೊಂದಲಗಳಿಗೆ ಇಲ್ಲಿದೆ ಪರಿಹಾರ
ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ಖಾತೆಯ ಗೊಂದಲಗಳಿಗೆ ಇಲ್ಲಿದೆ ಪರಿಹಾರ

ನಕಲಿ ಖಾತೆ, ಅನುಮಾನ ಹುಟ್ಟಿಸುವ ವಹಿವಾಟು ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ಎಚ್ಚರಿಕೆ ಕೊಟ್ಟಿದ್ದರೂ ನಿರ್ಲಕ್ಷಿಸಿದ್ದ ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ನಿರ್ಬಂಧಕ್ಕೆ ಆರ್​ಬಿಐ ಆದೇಶ ಹೊರಡಿಸಿದೆ. ಫೆಬ್ರವರಿ 29ರ ನಂತರ ವಹಿವಾಟು ನಡೆಸುವಂತಿಲ್ಲ ಎಂದಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಆ ಗಡುವನ್ನು ವಿಸ್ತರಿಸಿದೆ. ಮಾರ್ಚ್ 15ರವರೆಗೂ ಡೆಡ್​​ಲೈನ್ ವಿಸ್ತರಿಸಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

PM Narendra Modi Interview: ನಮಗೆ ಜನಪ್ರಿಯತೆ ಅಗತ್ಯವಿಲ್ಲ, ನಮ್ಮ ಕೆಲಸದ ವೇಗವನ್ನು ಜನ ನೋಡಿದ್ದಾರೆ; ಪ್ರಧಾನಿ ಮೋದಿ

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

ಆರ್​​ಬಿಐ ಈ ನಿರ್ಧಾರದ ಬೆನ್ನಲ್ಲೇ ವ್ಯಾಪಾರಿಗಳು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. ಈಗ ಗಡುವು ವಿಸ್ತರಿಸಿದ ಬೆನ್ನಲ್ಲೇ ಅವರು ನಿಟ್ಟುಸಿರುವ ಬಿಟ್ಟಿದ್ದಾರೆ. ಮಾರ್ಚ್ 15ರ ನಂತರ ಯಾವುದೇ ಡೆಪಾಸಿಟ್, ಟ್ರಾನ್ಸಾಕ್ಷನ್ ನಡೆಸಬಾರದು ಎಂದು ತಿಳಿಸಿದ್ದರ ನಡುವೆಯೂ ಹಲವರಿಗೆ ಗೊಂದಲಗಳು ನಿರ್ಮಾಣವಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಸಂಬಂಧಿಸಿದ ಗೊಂದಲಗಳಿಗೆ ಇಲ್ಲಿದೆ ಉತ್ತರ.

1. ಪ್ರಶ್ನೆ: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಅಥವಾ ಚಾಲ್ತಿ ಖಾತೆ ಹೊಂದಿರುವವರು ಮಾರ್ಚ್ 15ರ ನಂತರ ಈ ಖಾತೆಯಿಂದ ಹಣ ಹಿಂಪಡೆಯುವುದನ್ನು ಮುಂದುವರಿಸಬಹುದೇ? ಈ ಬ್ಯಾಂಕ್ ನೀಡಿದ ಡೆಬಿಟ್ ಕಾರ್ಡ್ ಬಳಕೆ ಮುಂದುವರಿಸಬಹುದೇ?

ಉತ್ತರ: ಹೌದು, ಅಕೌಂಟ್​ನಲ್ಲಿ ಲಭ್ಯವಿರುವ ಹಣವನ್ನು ಬಳಸಲು ಮತ್ತು ಹಿಂಪಡೆಯಲು, ವರ್ಗಾಯಿಸಲು ಮುಂದುವರಿಸಬಹುದು. ಹಾಗೆಯೇ ಖಾತೆಯಲ್ಲಿ ಲಭ್ಯವಿರುವ ಬ್ಯಾಲೆನ್ಸ್‌ವರೆಗೆ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಡೆಬಿಟ್ ಕಾರ್ಡ್ ಅನ್ನು ನೀವು ಮುಂದುವರಿಸಬಹುದು.

2. ಪ್ರಶ್ನೆ: ಪೇಟಿಎಂ ಪೇಮೆಂಟ್ಸ್​​​ ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಬ್ಯಾಂಕ್ ಅಥವಾ ಚಾಲ್ತಿ ಖಾತೆ ಹೊಂದಿರುವವರು, ಮಾರ್ಚ್ 15ರ ನಂತರ ಈ ಖಾತೆಗೆ ಹಣವನ್ನು ಡೆಪಾಸಿಟ್ ಮಾಡಬಹುದೇ ಅಥವಾ ಟ್ರಾನ್ಸ್​ಫರ್ ಮಾಡಬಹುದೇ?

ಉತ್ತರ: ಇಲ್ಲ. ಮಾರ್ಚ್ 15ರ ನಂತರ ಹಣವನ್ನು ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ. ಬಡ್ಡಿ ಹೊರತುಪಡಿಸಿ ಸಾಲ ದೊರೆಯುವುದಿಲ್ಲ. ಪಾಲುದಾರ ಬ್ಯಾಂಕ್‌ಗಳಿಂದ ಸ್ವೀಪ್-ಇನ್ ಅಥವಾ ಮರುಪಾವತಿ, ಕ್ಯಾಶ್‌ಬ್ಯಾಕ್‌, ಕ್ರೆಡಿಟ್ ಮಾಡಲು ಅನುಮತಿಸಲಾಗಿದೆ.

3. ಪ್ರಶ್ನೆ: ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್​​​ ಬ್ಯಾಂಕ್‌ ಖಾತೆಯಲ್ಲಿ ರಿಫಂಡ್ ನಿರೀಕ್ಷಿಸುವುದು ಸಾಧ್ಯವೇ? ಈ ರಿಫಂಡ್ ಅನ್ನು ಖಾತೆಗೆ ಕ್ರೆಡಿಟ್ ಮಾಡಬಹುದೇ?

ಉತ್ತರ: ಹೌದು, ಪಾಲುದಾರ ಬ್ಯಾಂಕ್‌ಗಳಿಂದ ಸ್ವೀಪ್-ಇನ್ ಅಥವಾ ಬಡ್ಡಿ, ರಿಫಂಡ್ (ಮರುಪಾವತಿ), ಕ್ಯಾಶ್‌ಬ್ಯಾಕ್‌ ಅನ್ನು ಮಾರ್ಚ್ 15ರ ನಂತರವೂ ಖಾತೆಗೆ ಕ್ರೆಡಿಟ್‌ ಆಗಲು ಅನುಮತಿಸಲಾಗಿದೆ.

4. ಪ್ರಶ್ನೆ: ಮಾರ್ಚ್ 15ರ ನಂತರ 'ಸ್ವೀಪ್ ಇನ್ ಅಥವಾ ಸ್ವೀಪ್‌ ಔಟ್' ವ್ಯವಸ್ಥೆಗಳ ಮೂಲಕ ಪಾಲುದಾರ ಬ್ಯಾಂಕ್‌ಗಳೊಂದಿಗೆ ನಿರ್ವಹಿಸಲಾದ ಠೇವಣಿಗಳು ಏನಾಗುತ್ತ

ಉತ್ತರ: ಪಾಲುದಾರ ಬ್ಯಾಂಕ್‌ಗಳೊಂದಿಗೆ ನಿರ್ವಹಿಸಲಾಗುತ್ತಿರುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಗ್ರಾಹಕರ ಅಸ್ತಿತ್ವದಲ್ಲಿರುವ ಠೇವಣಿಗಳನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಖಾತೆಗಳಿಗೆ ಹಿಂಪಡೆಯಬಹುದು (ಸ್ವೀಪ್-ಇನ್ ಮಾಡಬಹುದು). ಆದರೆ, ಪ್ರತಿ ಗ್ರಾಹಕನಿಗೆ ದಿನಕ್ಕೆ 2 ಲಕ್ಷ ರೂಪಾಯಿವರೆಗೆ ಮಾತ್ರ). ಸ್ವೀಪ್-ಇನ್‌ ಮಾಡಲಾದ ಬ್ಯಾಲೆನ್ಸ್‌ಗಳನ್ನು ಬಳಸಲು ಅಥವಾ ವಿತ್‌ಡ್ರಾ ಮಾಡಲು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಗ್ರಾಹಕರಿಗೆ ಅನುಮತಿ ಇರುತ್ತದೆ. ಆದರೆ, ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್‌ ಬ್ಯಾಂಕ್ ಮೂಲಕ ಪಾಲುದಾರ ಬ್ಯಾಂಕ್‌ಗಳೊಂದಿಗೆ ಯಾವುದೇ ಹೊಸ ಠೇವಣಿಗಳಿಗೆ ಅನುಮತಿ ನೀಡಲಾಗುವುದಿಲ್ಲ.

5. ಪ್ರಶ್ನೆ: ಮಾರ್ಚ್​​ 15ರ ನಂತರ ಪೇಟಿಎಂ ಪೇಮೆಂಟ್ ಬ್ಯಾಂಕ್​​ ಖಾತೆಗೆ ಸಂಬಳ ಸ್ವೀಕರಿಸುವುದನ್ನು ಮುಂದುವರಿಸಬಹುದೇ?

ಉತ್ತರ: ಇಲ್ಲ. ಖಾತೆಗೆ ಅಂತಹ ಯಾವುದೇ ಕ್ರೆಡಿಟ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಅನನುಕೂಲತೆಯನ್ನು ತಪ್ಪಿಸಲು ಮಾರ್ಚ್ 15ರೊಳಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.

6. ಪ್ರಶ್ನೆ: ಆಧಾರ್‌ ಕಾರ್ಡ್​ಗೆ ಲಿಂಕ್ ಮಾಡಲಾದ ಸರ್ಕಾರದ ಸಬ್ಸಿಡಿ ಅಥವಾ ಕೆಲವು ನೇರ ಲಾಭ ವರ್ಗಾವಣೆಗಳನ್ನು ಈ ಖಾತೆಗೆ ಸ್ವೀಕರಿಸುವುದನ್ನು ಮುಂದುವರಿಸಬಹುದೇ?

ಉತ್ತರ: ಇಲ್ಲ, ಅಂತಹ ಯಾವುದೇ ಕ್ರೆಡಿಟ್ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಅನಾನುಕೂಲತೆ ಅಥವಾ ಅಡಚಣೆಯನ್ನು ತಪ್ಪಿಸಲು ಲಿಂಕ್ ಮಾಡಲಾದ ಖಾತೆಯನ್ನು ಮಾರ್ಚ್ 15ರೊಳಗೆ ಮತ್ತೊಂದು ಬ್ಯಾಂಕ್‌ಗೆ ಬದಲಾಯಿಸಲು ವ್ಯವಸ್ಥೆ ಮಾಡಿ.

7. ಪ್ರಶ್ನೆ: ಪೇಟಿಎಂ ಪೇಮೆಂಟ್​ ಬ್ಯಾಂಕ್ ಖಾತೆಯಿಂದ ಮಾಸಿಕ ವಿದ್ಯುತ್ ಬಿಲ್ ಅನ್ನು ಸ್ವಯಂಚಾಲಿತವಾಗಿ ಪಾವತಿಸಲಾಗುತ್ತದೆಯೇ? ಇದು ಮುಂದುವರೆಯಬಹುದೇ?

ಉತ್ತರ: ಖಾತೆಯಲ್ಲಿ ಬ್ಯಾಲೆನ್ಸ್ ಇರುವವರೆಗೆ ವಿತ್​ಡ್ರಾ/ಡೆಬಿಟ್ ಮ್ಯಾಂಡೇಟ್‌ ಕಾರ್ಯಗತಗೊಳ್ಳುವುದನ್ನು ಮುಂದುವರಿಸಲಾಗುತ್ತದೆ. ಆದಾಗ್ಯೂ, ಮಾರ್ಚ್ 15ರ ನಂತರ ನಿಮ್ಮ ಖಾತೆಗಳಲ್ಲಿ ಕ್ರೆಡಿಟ್ ಅಥವಾ ಡೆಪಾಸಿಟ್ ಮಾಡಲು ಅನುಮತಿಸಲಾಗುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

8. ಪ್ರಶ್ನೆ: ಮಾಸಿಕ ಓಟಿಟಿ ಚಂದಾದಾರಿಕೆಯನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ ಖಾತೆಯಿಂದ ಸ್ವಯಂಚಾಲಿತವಾಗಿ ಪಾವತಿಸಲಾಗುತ್ತದೆಯೇ? ಇದು ಮುಂದುವರೆಯಬಹುದೇ?

9. ಪ್ರಶ್ನೆ: ಸಾಲದ ಕಂತು (EMI) ಅನ್ನು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ನ ಖಾತೆಯ ಮೂಲಕ ಸ್ವಯಂಚಾಲಿತವಾಗಿ ಪಾವತಿಸಲಾಗುತ್ತದೆ. ಇದು ಮುಂದುವರೆಯಬಹುದೇ?

ಉತ್ತರ: 8 ಮತ್ತು 9ನೇ ಪ್ರಶ್ನೆಗಳಿಗೂ 7 ಪ್ರಶ್ನೆಯ ಉತ್ತರ ನೋಡಿ.

10. ಪ್ರಶ್ನೆ: ಸಾಲದ ಕಂತು (EMI) ಅನ್ನು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್‌ನಲ್ಲಿರುವ ಖಾತೆಯ ಮೂಲಕ ಸ್ವಯಂಚಾಲಿತವಾಗಿ ಪಾವತಿಸಲಾಗುತ್ತದೆಯೇ? ಇದು ಮುಂದುವರೆಯಬಹುದೇ?

ಉತ್ತರ: ಹೌದು, ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ಖಾತೆ ಹೊರತುಪಡಿಸಿ ಯಾವುದೇ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಇಎಂಐಗಳನ್ನು ಮುಂದುವರಿಯಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ