ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Dowry Killing Punishment: ವರದಕ್ಷಿಣೆ- ಹತ್ಯೆ ಪ್ರಕರಣ; ಐವರಿಗೆ ಜೀವಾವಧಿ ಶಿಕ್ಷೆ

Dowry killing punishment: ವರದಕ್ಷಿಣೆ- ಹತ್ಯೆ ಪ್ರಕರಣ; ಐವರಿಗೆ ಜೀವಾವಧಿ ಶಿಕ್ಷೆ

HT Kannada Desk HT Kannada

Jan 17, 2023 02:53 PM IST

ವರದಕ್ಷಿಣೆ- ಹತ್ಯೆ ಪ್ರಕರಣ; ಐವರಿಗೆ ಜೀವಾವಧಿ ಶಿಕ್ಷೆ (ಸಾಂಕೇತಿಕ ಚಿತ್ರ)

  • Dowry killing punishment: ಯುವತಿಯ ತಂದೆ ಕೊಟ್ಟ ದೂರಿನ ಪ್ರಕಾರ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಕೋರ್ಟ್‌, ಐವರು ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ವರದಕ್ಷಿಣೆ- ಹತ್ಯೆ ಪ್ರಕರಣ; ಐವರಿಗೆ ಜೀವಾವಧಿ ಶಿಕ್ಷೆ (ಸಾಂಕೇತಿಕ ಚಿತ್ರ)
ವರದಕ್ಷಿಣೆ- ಹತ್ಯೆ ಪ್ರಕರಣ; ಐವರಿಗೆ ಜೀವಾವಧಿ ಶಿಕ್ಷೆ (ಸಾಂಕೇತಿಕ ಚಿತ್ರ) (canva)

ಲಖನೌ: ಬಲ್ಲಿಯಾ ಜಿಲ್ಲಾ ಕೋರ್ಟ್‌ ವರದಕ್ಷಿಣೆಗಾಗಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ, ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜಿಲ್ಲಾ ನ್ಯಾಯಾಧೀಶರಾದ ಜಿತೇಂದ್ರ ಕುಮಾರ್‌ ಪಾಂಡೆ ಈ ಕೇಸ್‌ ವಿಚಾರಣೆ ನಡೆಸಿದ್ದು, ಆರೋಪಿಗಳಿಗೆ ತಲಾ 10,000 ರೂಪಾಯಿ ದಂಡ ವಿಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

Closing Bell: ಷೇರುಪೇಟೆಗೆ ಬಲ ತುಂಬಿದ ಇಂಧನ-ಆಟೊಮೊಬೈಲ್‌, ಸೆನ್ಸೆಕ್ಸ್‌-ನಿಫ್ಟಿ ಏರಿಕೆ; ಇಂದು ಲಾಭ ಗಳಿಸಿದ ಷೇರುಗಳ ವಿವರ ಹೀಗಿದೆ

Sushil Kumar Modi: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅನಾರೋಗ್ಯದಿಂದ ವಿಧಿವಶ; ಗಣ್ಯರ ಕಂಬನಿ

ಸರ್ಕಾರಿ ವಕೀಲ ಸಂಜೀವ ಕುಮಾರ್‌ ಸಿಂಗ್‌ ಈ ವಿಚಾರ ಮಾಧ್ಯಮಕ್ಕೆ ತಿಳಿಸಿದ್ದು, ಈ ವರದಕ್ಷಿಣಗಾಗಿ ಹತ್ಯೆ ಪ್ರಕರಣ 2019ರಲ್ಲಿ ನಡೆದುದು. ಬಿಂದು (25) ಎಂಬ ಗರ್ಭಿಣಿಯನ್ನು ಪತಿಯ ಮನೆಯವರು ಸಜೀವವಾಗಿ ಸುಟ್ಟು ಕೊಂದಿದ್ದರು. ಒಂದು ಮೋಟಾರ್‌ ಸೈಕಲ್‌ ಮತ್ತು 2 ಲಕ್ಷ ರೂಪಾಯಿ ನಗದು ಹಣ ತರುವಂತೆ ಆಕೆಯನ್ನು ಅವರು ಪೀಡಿಸಿದ್ದರು.

ಕೊನೆಗೆ 2019ರ ಮಾರ್ಚ್‌ 30ರಂದು ಆಕೆ ಮಲಗಿ ನಿದ್ರಿಸುತ್ತಿದ್ದ ವೇಳೆ, ಸಜೀವವಾಗಿ ಸುಟ್ಟುಕೊಂದರು. ಈ ರೀತಿ ಹತ್ಯೆ ಮಾಡಿದ ವೇಳೆ ಆಕೆ ಗರ್ಭಿಣಿಯಾಗಿದ್ದಳು. ಬಿಂದುವಿನ ತಂದೆ ಈ ಕುರಿತು ಪೊಲೀಸ್‌ ದೂರು ದಾಖಲಿಸಿದ್ದರು. ಬಿಂದುವಿನ ಪತಿ ಸಂಗ್ರಾಮ್‌ ಯಾದವ್‌, ಆತನ ಅಣ್ಣ ಸತ್ಯೇಂದ್ರ, ತಂದೆ ಧರಮ್‌ ಚಂದ್ರ ಮತ್ತು ಪುಷ್ಪಾ ದೇವಿ, ಶಾರದಾ ದೇವಿ ವಿರುದ್ಧ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ದೂರಿನ ಪ್ರಕಾರ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಕೋರ್ಟ್‌, ಆರೋಪಿಗಳ ವಿರುದ್ಧ ಆರೋಪಗಳನ್ನು ದೃಢೀಕರಿಸುವ ಸಾಕ್ಷ್ಯಗಳ ಕಾರಣ ದೋಷಿಗಳು ಎಂದು ಘೋಷಿಸಿದೆ. ಅಲ್ಲದೆ, ಐವರಿಗೂ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಭಾರತದಲ್ಲಿ 2017ರಿಂದ 2021ರ ಅವಧಿಯಲ್ಲಿ ದಿನಕ್ಕೆ 20 ಡೌರಿ ಡೆತ್‌

ದೇಶದಲ್ಲಿ 2017ರಿಂದ 2021ರ ನಡುವಿನ ಅವಧಿಯಲ್ಲಿ ದಿನಕ್ಕೆ 20 ವರದಕ್ಷಿಣೆಗಾಗಿ ಹತ್ಯೆ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ ಗರಿಷ್ಠ ದಿನಕ್ಕೆ 6 ಹತ್ಯೆ ದಾಖಲಾಗಿದ್ದು, ಮುಂಚೂಣಿಯಲ್ಲಿದೆ.

ಕೇಂದ್ರ ಸರ್ಕಾರ ಇತ್ತೀಚಿನ ಸಂಸತ್‌ ಕಲಾಪದಲ್ಲಿ ಈ ಕುರಿತ ದತ್ತಾಂಶವನ್ನು ಶೇರ್‌ ಮಾಡಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರಾ ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ 2017 ಮತ್ತು 2021ರ ನಡುವೆ ವರದಕ್ಷಿಣೆಗೋಸ್ಕರ ನಡೆದ ಹತ್ಯೆ ಪ್ರಕರಣಗಳ ಸಂಖ್ಯೆ 35,493.

ದೇಶದಲ್ಲಿ 2017ರಲ್ಲಿ 7,466 ಡೌರಿ ಡೆತ್‌ ಸಂಭವಿಸಿದರೆ, 2018ರಲ್ಲಿ 7,167, 2019ರಲ್ಲಿ 7,141 ಮತ್ತು 2020ರಲ್ಲಿ 6,966 ಮತ್ತು 2021ರಲ್ಲಿ 6,753 ಪ್ರಕರಣಗಳು ದಾಖಲಾಗಿದ್ದವು.

ಈ ಐದು ವರ್ಷದ ಅವಧಿಯನ್ನು ಗಮನಿಸಿದರೆ ಉತ್ತರ ಪ್ರದೇಶದಲ್ಲೇ ಗರಿಷ್ಠ ಪ್ರಕರಣ ದಾಖಲಾಗಿದ್ದವು. 11,874 ಪ್ರಕರಣ ಈ ಅವಧಿಯಲ್ಲಿ ದಾಖಲಾಗಿವೆ. ಈ ಲೆಕ್ಕಾಚಾರ ಪ್ರಕಾರ ಗಮನಿಸಿ ಹೇಳುವುದಾದರೆ ದಿನಕ್ಕೆ ಆರು ಹತ್ಯೆ ಪ್ರಕರಣಗಳು ದಾಖಲಾಗಿವೆ.

ರಾಜ್ಯವಾರು ಅಂಕಿ ಅಂಶ ಗಮನಿಸಿದರೆ, 2017 ಮತ್ತು 2021ರ ನಡುವಿನ ಅವಧಿಯಲ್ಲಿ ಬಿಹಾರದಲ್ಲಿ 5,354 ಡೌರಿ ಡೆತ್‌, ಮಧ್ಯಪ್ರದೇಶದಲ್ಲಿ 2,859 ಡೌರಿ ಡೆತ್‌, ಪ‍ಶ್ಚಿಮ ಬಂಗಾಳದಲ್ಲಿ 2,389, ರಾಜಸ್ಥಾನದಲ್ಲಿ 2,244 ಡೌರಿ ಡೆತ್‌ ಪ್ರಕರಣ ದಾಖಲಾಗಿದ್ದವು ಎಂದು ಸಚಿವ ಮಿಶ್ರಾ ರಾಜ್ಯಸಭೆಗೆ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ