Abhinaya Gets Two Year Jail: ವರದಕ್ಷಿಣೆ ಕಿರುಕುಳ ಆರೋಪ; ‘ಅನುಭವ’ ಸಿನಿಮಾ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ!
ಕನ್ನಡ ಸುದ್ದಿ  /  ಮನರಂಜನೆ  /  Abhinaya Gets Two Year Jail: ವರದಕ್ಷಿಣೆ ಕಿರುಕುಳ ಆರೋಪ; ‘ಅನುಭವ’ ಸಿನಿಮಾ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ!

Abhinaya Gets Two Year Jail: ವರದಕ್ಷಿಣೆ ಕಿರುಕುಳ ಆರೋಪ; ‘ಅನುಭವ’ ಸಿನಿಮಾ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ!

ಕಾಶೀನಾಥ್‌ ನಟಿಸಿದ್ದ ‘ಅನುಭವ’ದಲ್ಲಿ ನಟಿಸಿದ್ದ ಅಭಿನಯಾಗೆ ಆ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತ್ತು. ಚಿತ್ರರಂಗದಲ್ಲಿ ನೆಲೆ ಕಲ್ಪಿಸಿತ್ತು. ಅದಾದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಅಭಿನಯ, ನಾಯಕಿಯಾಗಿ, ಸಹೋದರಿಯಾಗಿ ನಟಿಸಿದರು.

ವರದಕ್ಷಿಣೆ ಕಿರುಕುಳ ಆರೋಪ; ‘ಅನುಭವ’ ಸಿನಿಮಾ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ!
ವರದಕ್ಷಿಣೆ ಕಿರುಕುಳ ಆರೋಪ; ‘ಅನುಭವ’ ಸಿನಿಮಾ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ!

Abhinaya Gets Two Year Jail: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹಾಗೂ ದಶಕಗಳ ಕಾಲದಿಂದಲೂ ಹಿರಿತೆರೆ ಮತ್ತು ಬೆಳ್ಳಿತೆರೆಮೇಲೆ ಗುರುತಿಸಿಕೊಂಡ ‘ಅನುಭವ’ ಸಿನಿಮಾ ಖ್ಯಾತಿಯ ನಟಿ ಅಭಿನಯಾಗೆ ಸಂಕಷ್ಟ ಎದುರಾಗಿದೆ. ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಭಿನಯಾಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ತೀರ್ಪು ನೀಡಿದೆ.

ಅಭಿನಯಾಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದರೆ, ಅವರ ತಾಯಿ ಜಯಮ್ಮ ಅವರಿಗೆ 5 ವರ್ಷ ಜೈಲು ಶಿಕ್ಷೆ ನೀಡಿ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ವರದಕ್ಷಿಣ ಕಿರುಕುಳಕ್ಕೆ ಸಂಬಂಧಿಸಿದಂತೆ ಅಭಿನಯಾ ಅಣ್ಣ ಶ್ರೀನಿವಾಸ್‌ ಅವರ ಪತ್ನಿ ಲಕ್ಷ್ಮೀದೇವಿ ಎಂಬುವವರು ಈ ಹಿಂದೆ ಅಭಿನಯಾ ಮತ್ತು ಅವರ ತಾಯಿ ಜಯಮ್ಮ ವಿರುದ್ಧ ದೂರು ನೀಡಿದ್ದರು.

ಬೆಂಗಳೂರಿನ ಚಂದ್ರಾ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಪ್ರಕರಣ ಸತ್ಯಾಸತ್ಯತೆ ಅರಿತು ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಕಟಿಸಿದೆ. ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ಆದೇಶದಲ್ಲಿ ಜೈಲು ಶಿಕ್ಷೆ ವಿಧಿಸಿದೆ. ಮಾಡಿದ ತಪ್ಪಿಗೆ ನಟಿ ಅಭಿನಯಾ ಜೈಲು ಸೇರುವಂತಾಗಿದೆ.

ಅಂದಹಾಗೆ, ಕಾಶೀನಾಥ್‌ ನಟಿಸಿದ್ದ ‘ಅನುಭವ’ದಲ್ಲಿ ನಟಿಸಿದ್ದ ಅಭಿನಯಾಗೆ ಆ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತ್ತು. ಚಿತ್ರರಂಗದಲ್ಲಿ ನೆಲೆ ಕಲ್ಪಿಸಿತ್ತು. ಅದಾದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಅಭಿನಯ, ನಾಯಕಿಯಾಗಿ, ಸಹೋದರಿಯಾಗಿ ನಟಿಸಿದರು. ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿಯೇ ಅಭಿನಯಾ ನಟಿಸುತ್ತಿದ್ದಾರೆ.

ಏನಿದು ಪ್ರಕರಣ...

ಅಂದಹಾಗೆ ಇಂದು ನಿನ್ನೆಯ ಕೇಸ್‌ ಇದಲ್ಲ. 1998ರಲ್ಲಿ ಶ್ರೀನಿವಾಸ್‌ ಜತೆಗೆ ಲಕ್ಷ್ಮೀದೇವಿ ಅವರ ವಿವಾಹವಾಗಿತ್ತು. ವರದಕ್ಷಿಣಿಯಾಗಿ 80 ಸಾವಿರ ನಗದು, ಚಿನ್ನಾಭರಣವನ್ನು ಪಡೆದಿದ್ದರು. ಬಳಿಕ ಮತ್ತೆ ಹಣ ತರುವಂತೆ ಕಿರುಕುಳ ನೀಡಿದ್ದರು. ಇದರಿಂದ ಬೇಸತ್ತ ಲಕ್ಷ್ಮೀದೇವಿ 2002ರಲ್ಲಿಯೇ ಇವರೆಲ್ಲರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು.

2012ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಐವರು ಆರೋಪಿಗಳಿಗೆ (ಜಯಮ್ಮ, ಅಭಿನಯಾ, ಶ್ರೀನಿವಾಸ್‌, ರಾಮಕೃಷ್ಣ ಮತ್ತು ಚೆಲುವರಾಜು) ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಖುಲಾಸೆಗೊಂಡು ಹೊರಬಂದಿದ್ದರು. ಇದನ್ನು ಮರು ಪ್ರಶ್ನಿಸಿದ್ದ ಲಕ್ಷ್ಮೀದೇವಿ, ಹೈಕೋರ್ಟ್‌ ಮೊರೆ ಹೋಗಿದ್ದರು. ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಮೇಲ್ಮನವಿ ವಿಚಾರಣೆ ಮಾಡಿದ ಕೋರ್ಟ್‌ ಬದುಕಿರುವ ಮೂವರು ಆರೋಪಿಗಳಿಗೆ (ಜಯಮ್ಮ, ಅಭಿನಯಾ, ಚೆಲುವರಾಜು) ಶಿಕ್ಷೆ ಜತೆಗೆ ದಂಡವನ್ನೂ ವಿಧಿಸಿದೆ.

Whats_app_banner