ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Earthquakes In India: ಪ್ರತಿ ವರ್ಷ 5 ಸೆಂಟಿ ಮೀಟರ್‌ ಚಲಿಸುತ್ತಿದೆ ಭಾರತದ ಟೆಕ್ಟೋನಿಕ್‌ ಪ್ಲೇಟ್‌; ಹಿಮಾಲಯ ಭಾಗದಲ್ಲಿ ಭೂಕಂಪದ ಆತಂಕ

Earthquakes in India: ಪ್ರತಿ ವರ್ಷ 5 ಸೆಂಟಿ ಮೀಟರ್‌ ಚಲಿಸುತ್ತಿದೆ ಭಾರತದ ಟೆಕ್ಟೋನಿಕ್‌ ಪ್ಲೇಟ್‌; ಹಿಮಾಲಯ ಭಾಗದಲ್ಲಿ ಭೂಕಂಪದ ಆತಂಕ

HT Kannada Desk HT Kannada

Feb 22, 2023 11:32 AM IST

ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್

  • Earthquakes in India: ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ 5 ಸೆಂಟಿಮೀಟರ್‌ ಚಲಿಸುತ್ತಿದೆ. ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ದೊಡ್ಡ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಮುಖ ಹವಾಮಾನ ವಿಜ್ಞಾನಿ ಮತ್ತು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.

ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್
ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್ (ANI)

ಹೈದರಾಬಾದ್‌: ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ ಸುಮಾರು 5 ಸೆಂಟಿಮೀಟರ್ ಚಲಿಸುತ್ತಿದೆ. ಇದು ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಮುಖ ಹವಾಮಾನ ವಿಜ್ಞಾನಿ ಮತ್ತು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್ ಮಂಗಳವಾರ ಎಎನ್‌ಐ ಜತೆ ಈ ವಿಚಾರ ಹಂಚಿಕೊಂಡಿದ್ದಾರೆ.

ಭೂಮಿಯ ಮೇಲ್ಮೈ ನಿರಂತರವಾಗಿ ಚಲನೆಯಲ್ಲಿರುವ ವಿವಿಧ ಪ್ಲೇಟ್‌ಗಳನ್ನು ಒಳಗೊಂಡಿದೆ. ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ 5 ಸೆಂಟಿಮೀಟರ್‌ ಚಲಿಸುತ್ತಿದೆ. ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ದೊಡ್ಡ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ನಾವು ಉತ್ತರಾಖಂಡದಲ್ಲಿ 18 ಭೂಕಂಪನ ಕೇಂದ್ರಗಳ ಪ್ರಬಲ ಜಾಲವನ್ನು ಹೊಂದಿದ್ದೇವೆ. ಹಿಮಾಚಲ ಮತ್ತು ಉತ್ತರಾಖಂಡ ಸೇರಿ ನೇಪಾಳದ ಪಶ್ಚಿಮ ಭಾಗದ ನಡುವಿನ ಭೂಕಂಪನ ಅಂತರ ಎಂದು ಉಲ್ಲೇಖಿಸಲಾದ ಪ್ರದೇಶವು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಭೂಕಂಪಗಳಿಗೆ ಗುರಿಯಾಗುತ್ತದೆ ಎಂದು ಮುಖ್ಯ ವಿಜ್ಞಾನಿ ಹೇಳಿದರು.

ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಉತ್ತರಕ್ಕೆ 56 ಕಿಮೀ ದೂರದಲ್ಲಿ ಸೋಮವಾರ ರಾತ್ರಿ 10.38 ಕ್ಕೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರವು ಭೂಮಿಯ ಮೇಲ್ಮೈಯಿಂದ 10 ಕಿಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ 56 ಕಿಮೀ ಉತ್ತರಕ್ಕೆ ನಿನ್ನೆ ರಾತ್ರಿ 10:38 ರ ಸುಮಾರಿಗೆ 3.6 ರ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿಮೀ ಆಳದಲ್ಲಿದೆ" ಎಂದು ಎನ್‌ಸಿಎಸ್ ಹೇಳಿಕೆಯಲ್ಲಿ ತಿಳಿಸಿದೆ.

ಫೆಬ್ರವರಿ 19 ರಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗಾಮ ಪಟ್ಟಣದಲ್ಲಿ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಗಮನಿಸಬಹುದಾದ ಸುದ್ದಿಗಳು

Gold Price Today February 22: ಚಿನ್ನದ ದರ ಇಳೀತಿದೆ ನೋಡಿ; ಬೆಳ್ಳಿಯ ರೇಟ್‌ ಎಷ್ಟು ಅಂತೀರಾ...

ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಇಂದು ಚಿನ್ನಾಭರಣ ಪ್ರಿಯರಿಗೆ ಒಂದು ಗುಡ್‌ನ್ಯೂಸ್.‌ ಚಿನ್ನದ ದರ ಇಳಿಮುಖವಾಗಿರುವುದು ಖರೀದಿ ಮಾಡುವವರ ಪಾಲಿಗೆ ಪ್ಲಸ್‌ ಪಾಯಿಂಟ್.‌ ನಿನ್ನೆಗಿಂತ ಇಂದಿಗೆ 10 ಗ್ರಾಂ ಚಿನ್ನದ ದರ ಮತ್ತೆ 100 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿಯ ದರ ಸ್ಥಿರವಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

US Visa: ಭಾರತವೇ ನಂಬರ್‌ 1, ಭಾರತಕ್ಕೇ ಆದ್ಯತೆ, 36% ಹೆಚ್ಚುವರಿ ವೀಸಾ ಕೊಟ್ಟಿದ್ದೇವೆ- ಎಂದ ಅಮೆರಿಕ ವೀಸಾ ಅಧಿಕಾರಿಗಳು

ಈಗ ನಮ್ಮ ಮೊದಲ ಆದ್ಯತೆ ಭಾರತ. ನಾವೀಗ ಕೋವಿಡ್‌ ಸಂಕಷ್ಟದಿಂದ ಹೊರಬಂದಿದ್ದೇವೆ. ಭಾರತದಲ್ಲಿ ಯಾರಾದರೂ ಅಮೆರಿಕ ವೀಸಾದ ಅಪಾಯಿಂಟ್‌ಮೆಂಟ್‌ ಅಥವಾ ವೀಸಾಗಾಗಿ ಕಾಯಬೇಕು ಎಂದಿಲ್ಲ. ಅದನ್ನು ನಾವು ಬಯಸುವುದೂ ಇಲ್ಲ ಎಂದು ಬ್ಯೂರೋ ಆಫ್ ಕಾನ್ಸುಲರ್ ಅಫೇರ್ಸ್‌ನ ವೀಸಾ ಸೇವೆಗಳ ಉಪ ಸಹಾಯಕ ಕಾರ್ಯದರ್ಶಿ ಜೂಲಿ ಸ್ಟಫ್ಟ್ ಹೇಳಿದರು. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ