ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today February 22: ಚಿನ್ನದ ದರ ಇಳೀತಿದೆ ನೋಡಿ; ಬೆಳ್ಳಿಯ ರೇಟ್‌ ಎಷ್ಟು ಅಂತೀರಾ...

Gold Price Today February 22: ಚಿನ್ನದ ದರ ಇಳೀತಿದೆ ನೋಡಿ; ಬೆಳ್ಳಿಯ ರೇಟ್‌ ಎಷ್ಟು ಅಂತೀರಾ...

Gold and silver Price Today February 22: ಈ ದಿನ ಬುಧವಾರ. ಚಿನ್ನ, ಬೆಳ್ಳಿ ಖರೀದಿಗೂ ಶುಭದಿನವೇ ಸರಿ. ಚಿನ್ನದ ದರ ಇಳಿಮುಖವಾಗಿರುವುದು ಈಗ ಪ್ಲಸ್‌ ಪಾಯಿಂಟ್‌. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ರೇಟ್‌ ಎಷ್ಟಿದೆ? ಆ ಡಿಟೇಲ್ಸ್‌ ಇಲ್ಲಿದೆ.

ಇಂದು ಚಿನ್ನ-ಬೆಳ್ಳಿ ದರ ಎಷ್ಟು?
ಇಂದು ಚಿನ್ನ-ಬೆಳ್ಳಿ ದರ ಎಷ್ಟು? (REUTERS)

ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಇಂದು ಚಿನ್ನಾಭರಣ ಪ್ರಿಯರಿಗೆ ಒಂದು ಗುಡ್‌ನ್ಯೂಸ್.‌ ಚಿನ್ನದ ದರ ಇಳಿಮುಖವಾಗಿರುವುದು ಖರೀದಿ ಮಾಡುವವರ ಪಾಲಿಗೆ ಪ್ಲಸ್‌ ಪಾಯಿಂಟ್.‌ ನಿನ್ನೆಗಿಂತ ಇಂದಿಗೆ 10 ಗ್ರಾಂ ಚಿನ್ನದ ದರ ಮತ್ತೆ 100 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿಯ ದರ ಸ್ಥಿರವಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಚಿನ್ನದ ಬೆಲೆಯ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದ್ದು, ಅವುಗಳೇ ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, February 22)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. 22 ಕ್ಯಾರೆಟ್‌ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 100 ರೂಪಾಯಿ ಇಳಿದಿದೆ. ಅಂದರೆ ನಿನ್ನೆ 52,100 ರೂಪಾಯಿ ಇದ್ದದ್ದು ಇಂದು 52,000 ರೂಪಾಯಿ ಆಗಿದೆ. 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ 100 ರೂಪಾಯಿ ಇಳಿಕೆಯಾಗಿದೆ. 56,830 ರೂಪಾಯಿ ಇದ್ದದ್ದು, 56,730 ರೂಪಾಯಿ ಆಗಿದೆ.

ಆದರೆ, ಒಂದು ಕಿಲೋ ಬೆಳ್ಳಿಯ ಬೆಲೆ ಸ್ಥಿರವಾಗಿದೆ. ನಿನ್ನೆ ಬೆಳ್ಳಿಯ ದರ 100 ರೂಪಾಯ ಇಳಿದಿತ್ತು. ಸೋಮವಾರ 68,600 ರೂಪಾಯಿ ಇದ್ದ ಬೆಲೆ ಮಂಗಳವಾರ 68,500 ರೂಪಾಯಿ ಆಗಿತ್ತು. ಅದುವೇ ಇಂದು ಮುಂದುವರಿದಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 52,050 ರೂಪಾಯಿ.

ಮಂಗಳೂರು- 52,050 ರೂಪಾಯಿ.

ಮೈಸೂರು- 52,050 ರೂಪಾಯಿ.

ಚೆನ್ನೈ- 52,750 ರೂಪಾಯಿ.

ಮುಂಬೈ- 52,000 ರೂಪಾಯಿ.

ದೆಹಲಿ- 52,150ರೂಪಾಯಿ.

ಕೋಲ್ಕತ- 52,050 ರೂಪಾಯಿ.

ಹೈದರಾಬಾದ್- 52,050 ರೂಪಾಯಿ.

ಕೇರಳ- 52,000 ರೂಪಾಯಿ.

ಪುಣೆ- 52,000 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 56,780 ರೂಪಾಯಿ.

ಮಂಗಳೂರು- 56,780 ರೂಪಾಯಿ.

ಮೈಸೂರು- 56,780 ರೂಪಾಯಿ.

ಚೆನ್ನೈ- 57,550 ರೂಪಾಯಿ.

ಮುಂಬೈ- 56,730 ರೂಪಾಯಿ.

ದೆಹಲಿ- 56,880ರೂಪಾಯಿ.

ಕೋಲ್ಕತ- 56,730 ರೂಪಾಯಿ.

ಹೈದರಾಬಾದ್- 56,730 ರೂಪಾಯಿ.

ಕೇರಳ- 56,730 ರೂಪಾಯಿ.

ಪುಣೆ- 56,730 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 71,700 ರೂಪಾಯಿ.

ಮೈಸೂರು- 71,700 ರೂಪಾಯಿ.

ಮಂಗಳೂರು- 71,700 ರೂಪಾಯಿ.

ಮುಂಬೈ- 68,500 ರೂಪಾಯಿ.

ಚೆನ್ನೈ- 71,700 ರೂಪಾಯಿ.

ದೆಹಲಿ- 68,500 ರೂಪಾಯಿ.

ಹೈದರಾಬಾದ್- 71,700 ರೂಪಾಯಿ.

ಕೋಲ್ಕತ್ತ- 71,700 ರೂಪಾಯಿ.

IPL_Entry_Point