ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today December 25: ಹಬ್ಬಕ್ಕೆ ಹಳದಿ ಲೋಹ ತುಟ್ಟಿ, ಬೆಳ್ಳಿ ಬೆಲೆಯೂ ಏರಿಕೆ; ಹೀಗಿದೆ ಭಾನುವಾರದ ಮಾರುಕಟ್ಟೆ

Gold Price Today December 25: ಹಬ್ಬಕ್ಕೆ ಹಳದಿ ಲೋಹ ತುಟ್ಟಿ, ಬೆಳ್ಳಿ ಬೆಲೆಯೂ ಏರಿಕೆ; ಹೀಗಿದೆ ಭಾನುವಾರದ ಮಾರುಕಟ್ಟೆ

HT Kannada Desk HT Kannada

Dec 25, 2022 06:59 AM IST

ಬಂಗಾರದ ಬೆಲೆ ಏರಿಕೆ

    • ಚಿನ್ನ ಮಹಿಳೆಯರಿಗೆ ಅಚ್ಚುಮೆಚ್ಚು. ಅಲ್ಲದೆ ಎಲ್ಲಾ ರೀತಿಯ ಹೂಡಿಕೆದಾರರಿಗೆ ಚಿನ್ನವು ಹೆಚ್ಚು ಆದ್ಯತೆಯ ಆಸ್ತಿಯಾಗಿದೆ. ವಿಶ್ವದ‌ಲ್ಲೇ ಅತಿ ಹೆಚ್ಚು ಚಿನ್ನ ಬಳಸುವ ದೇಶ ಭಾರತ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿವೆ. ಹೂಡಿಕೆಗೆ ಚಿನ್ನ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಹೀಗಾಗಿ ಚಿನ್ನದ ದರವು ಮಾರುಕಟ್ಟೆಯಲ್ಲಿ ಏರಿಳಿತವನ್ನು ಕಾಣುತ್ತಿರುತ್ತದೆ.
ಬಂಗಾರದ ಬೆಲೆ ಏರಿಕೆ
ಬಂಗಾರದ ಬೆಲೆ ಏರಿಕೆ

ಕ್ರಿಸ್‌ಮಸ್‌ ಹಬ್ಬದ ನಡುವೆ ಹಳದಿ ಲೋಹ ದುಬಾರಿಯಾಗಿದೆ. ಹಬ್ಬದ ಸಂಭ್ರಮದ ನಡುವೆ ಚಿನ್ನ ಖರೀದಿಗೆ ಯೋಜಿಸಿದವರಿಗೆ, ಬಂಗಾರ ತುಟ್ಟಿಯಾಗಿದೆ. ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ಕಳೆದ ಶನಿವಾರ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ ಇಂದು ಏಕಾಏಕಿ 150 ರೂಪಾಯಿ ಏರಿಕೆಯಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಆಂತರಿಕ ಮಾರುಕಟ್ಟೆಯಲ್ಲಿ ಶನಿವಾರ 22 ಕ್ಯಾರಟ್‌​​ನ 10 ಗ್ರಾಂ ಚಿನ್ನದ ದರ 60 ರೂಪಾಯಿ ಕುಸಿದಿತ್ತು. 24 ಕ್ಯಾರೆಟ್‌​​ನ 10 ಗ್ರಾಂ ಚಿನ್ನದ ದರ 600 ರೂಪಾಯಿ ಇಳಿಕೆಯಾಗಿತ್ತು. ಆದರೆ, ಹಬ್ಬದ ದಿನಕ್ಕೆ ಹಳದಿ ಲೋಹ ತುಸು ದುಬಾರಿಯಾಗಿದೆ. ಇಂದು 22 ಕ್ಯಾರಟ್‌​ನ 10 ಗ್ರಾಂ ಚಿನ್ನದ 49,850 ರೂಪಾಯಿ ಆಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 160 ರೂಪಾಯಿ ಏರಿಕೆಯಾಗಿ 54,380 ರೂ. ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ 49,750 ರೂ. ಆಗಿತ್ತು. ಇಂದು ಇಂದು 22 ಕ್ಯಾರಟ್‌ನ​ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಳವಾಗಿದೆ. ಏರಿಕೆಯ ಬಳಿಕ 49,900ಕ್ಕೆ ಬಂದು ನಿಂತಿದೆ. ಮತ್ತೊಂದೆಡೆ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 54,270 ರೂ. ಆಗಿತ್ತು. ಇಂದಿನ ಬೆಲೆ 54,410.

ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂ. ಹೆಚ್ಚಳವಾಗಿದೆ.

ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ. ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆಯನ್ನು ಇಲ್ಲಿ ಕೊಡಲಾಗಿದೆ.

ನವದೆಹಲಿ: 50,000 ರೂ.(22 ಕ್ಯಾರಟ್‌) ಮತ್ತು 54,530 ರೂ. (24 ಕ್ಯಾರಟ್‌)

ಮುಂಬೈ: 49,850 ರೂ.(22 ಕ್ಯಾರಟ್‌) ಮತ್ತು 54,380 ರೂ. (24 ಕ್ಯಾರಟ್‌)

ಕೋಲ್ಕತ್ತಾ: 49,850 ರೂ.(22 ಕ್ಯಾರಟ್‌) ಮತ್ತು 54,380 ರೂ. (24 ಕ್ಯಾರಟ್‌)

ಚೆನ್ನೈ: 50,790 ರೂ.(22 ಕ್ಯಾರಟ್‌) ಮತ್ತು 55,400 ರೂ. (24 ಕ್ಯಾರಟ್‌)

ಹೈದರಾಬಾದ್:‌ 49,850 ರೂ. (22 ಕ್ಯಾರಟ್‌) ಮತ್ತು 54,380 ರೂ. (24 ಕ್ಯಾರಟ್‌)

ಮಂಗಳೂರು- 54,410 ರೂ.(22 ಕ್ಯಾರಟ್‌) ಮತ್ತು 54,410 ರೂ. (24 ಕ್ಯಾರಟ್‌)

ಮೈಸೂರು- 54,410 ರೂ.(22 ಕ್ಯಾರಟ್‌) ಮತ್ತು 54,410 ರೂ. (24 ಕ್ಯಾರಟ್‌)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆ ಕೂಡಾ ಏಕಾಏಕಿ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿ ಮೇಲಿನ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ. ಚಿನ್ನದ ಬೆಲೆಯ ಮೇಲೆ ವಿವಿಧ ರಾಜಕೀಯ, ಆರ್ಥಿಕ ಮತ್ತು ಜಾಗತಿಕ ಅಂಶಗಳು ಪ್ರಭಾವ ಬೀರುತ್ತವೆ. ಜಿಡಿಪಿ ದರಗಳು, ಸ್ಟಾಕ್ ಮಾರುಕಟ್ಟೆ ಸೂಚ್ಯಂಕ, ಕರೆನ್ಸಿಗಳ ವಿನಿಮಯ ದರ, ಯುದ್ಧ ಸೇರಿದಂತೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುವ ಅನೇಕ ಘಟನೆಗಳು ಜಾಗತಿಕವಾಗಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ.

ಚಿನ್ನ ಮಹಿಳೆಯರಿಗೆ ಅಚ್ಚುಮೆಚ್ಚು. ಅಲ್ಲದೆ ಎಲ್ಲಾ ರೀತಿಯ ಹೂಡಿಕೆದಾರರಿಗೆ ಚಿನ್ನವು ಹೆಚ್ಚು ಆದ್ಯತೆಯ ಆಸ್ತಿಯಾಗಿದೆ. ವಿಶ್ವದ‌ ಅತಿ ಹೆಚ್ಚು ಚಿನ್ನ ಬಳಸುವ ದೇಶ ಭಾರತ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿವೆ. ಹೂಡಿಕೆಗೆ ಚಿನ್ನ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಹೀಗಾಗಿ ಚಿನ್ನದ ದರವು ಮಾರುಕಟ್ಟೆಯಲ್ಲಿ ಏರಿಳಿತವನ್ನು ಕಾಣುತ್ತಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ