ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today December 2: ಇಂದು ಶುಭ ಶುಕ್ರವಾರ; ಓಹ್ಹೋ.. ಚಿನ್ನಕ್ಕೂ ಬೆಳ್ಳಿಗೂ ಏರಿತು ದರ!

Gold Price Today December 2: ಇಂದು ಶುಭ ಶುಕ್ರವಾರ; ಓಹ್ಹೋ.. ಚಿನ್ನಕ್ಕೂ ಬೆಳ್ಳಿಗೂ ಏರಿತು ದರ!

HT Kannada Desk HT Kannada

Dec 02, 2022 06:49 AM IST

ಚಿನ್ನ, ಬೆಳ್ಳಿ ರೇಟ್‌ ಇಂದು ಡಿಸೆಂಬರ್‌ 2, 2022

  • Gold and silver Price Today December 2: ಇಂದು ಶುಭ ಶುಕ್ರವಾರ, ಡಿಸೆಂಬರ್‌ 2. ಚಿನ್ನ, ಬೆಳ್ಳಿ ಖರೀದಿ ಮಾಡೋಣ ಅಂತ ಹೊರಟಾಗ ಚಿನ್ನ, ಬೆಳ್ಳಿ ರೇಟ್‌ ಎಷ್ಟು ಎಂಬ ಕುತೂಹಲ ಸಹಜ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ? ವಿವರ ಇಲ್ಲಿದೆ.

ಚಿನ್ನ, ಬೆಳ್ಳಿ ರೇಟ್‌ ಇಂದು ಡಿಸೆಂಬರ್‌ 2, 2022
ಚಿನ್ನ, ಬೆಳ್ಳಿ ರೇಟ್‌ ಇಂದು ಡಿಸೆಂಬರ್‌ 2, 2022 (PTI (ಸಾಂದರ್ಭಿಕ ಚಿತ್ರ))

ಇಂದು ಶುಭ ಶುಕ್ರವಾರ. ಅನೇಕರು ಈ ದಿನ ಚಿನ್ನ, ಬೆಳ್ಳಿ ಖರೀದಿಸುತ್ತಾರೆ. ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆ ಇದಕ್ಕೆ ಕಾರಣ. ಅಂದ ಹಾಗೆ, ಇಂದು ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆ ಕಂಡ ಚಿನ್ನದ ಬೆಲೆ, ಸತತ ಒಂದು ವಾರದಿಂದ ಏರುತ್ತಿದೆ ಬೆಳ್ಳಿ ದರ; ಇಂದಿನ ದರ ಗಮನಿಸಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದಾಗ್ಯೂ, ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, December 2)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು 200 ರೂಪಾಯಿ ಏರಿಕೆಯಾಗಿ 48,750 ರೂಪಾಯಿ ಆಗಿದೆ. ನಿನ್ನೆ 48,550 ರೂಪಾಯಿ ಇತ್ತು. ಆಭರಣ ಚಿನ್ನ 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ 210 ರೂಪಾಯಿ ಏರಿ 53,180 ರೂಪಾಯಿ ಆಗಿದೆ. ಇದೇ ರೀತಿ, ಬೆಳ್ಳಿಯ ಬೆಲೆ ಒಂದು ಕಿಲೋಕ್ಕೆ 2,200 ರೂಪಾಯಿ ಏರಿ 63,600 ರೂಪಾಯಿ ಆಗಿದೆ. ನಿನ್ನೆ 61,400 ರೂಪಾಯಿ ಇತ್ತು.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 48,800 ರೂಪಾಯಿ.

ಮಂಗಳೂರು- 48,800 ರೂಪಾಯಿ.

ಮೈಸೂರು- 48,800 ರೂಪಾಯಿ.

ಚೆನ್ನೈ- 49,550 ರೂಪಾಯಿ.

ಮುಂಬೈ- 48,750 ರೂಪಾಯಿ.

ದೆಹಲಿ- 48,800 ರೂಪಾಯಿ.

ಕೋಲ್ಕತ- 48,750 ರೂಪಾಯಿ.

ಹೈದರಾಬಾದ್- 48,750 ರೂಪಾಯಿ.

ಕೇರಳ- 48,750 ರೂಪಾಯಿ.

ಪುಣೆ- 48,750 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 ಕ್ಯಾರೆಟ್ ಚಿನ್ನ)ದ ದರ

ಬೆಂಗಳೂರು- 53,230 ರೂಪಾಯಿ.

ಮಂಗಳೂರು- 53,230 ರೂಪಾಯಿ.

ಮೈಸೂರು- 53,230 ರೂಪಾಯಿ.

ಚೆನ್ನೈ- 54,050 ರೂಪಾಯಿ.

ಮುಂಬೈ- 53,180 ರೂಪಾಯಿ.

ದೆಹಲಿ- 53,330 ರೂಪಾಯಿ.

ಕೋಲ್ಕತ- 53,180 ರೂಪಾಯಿ.

ಹೈದರಾಬಾದ್- 53,180 ರೂಪಾಯಿ.

ಕೇರಳ- 53,180 ರೂಪಾಯಿ.

ಪುಣೆ- 53,180 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ

ಬೆಂಗಳೂರು- 69,800 ರೂಪಾಯಿ.

ಮೈಸೂರು- 69,800 ರೂಪಾಯಿ.

ಮಂಗಳೂರು- 69,800 ರೂಪಾಯಿ.

ಮುಂಬೈ- 63,600 ರೂಪಾಯಿ.

ಚೆನ್ನೈ- 69,800 ರೂಪಾಯಿ.

ದೆಹಲಿ- 63,600 ರೂಪಾಯಿ.

ಹೈದರಾಬಾದ್- 69,800 ರೂಪಾಯಿ.

ಕೋಲ್ಕತ್ತ- 63,600 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ