ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today December 3: ಅರರೆ.. ಚಿನ್ನ, ಬೆಳ್ಳಿ ರೇಟ್‌ ಏರ್ತಾನೆ ಇದೆಯಲ್ಲ! ಇಂದು ಚಿನ್ನ, ಬೆಳ್ಳಿ ದರ ಎಷ್ಟಾಯಿತು?

Gold Price Today December 3: ಅರರೆ.. ಚಿನ್ನ, ಬೆಳ್ಳಿ ರೇಟ್‌ ಏರ್ತಾನೆ ಇದೆಯಲ್ಲ! ಇಂದು ಚಿನ್ನ, ಬೆಳ್ಳಿ ದರ ಎಷ್ಟಾಯಿತು?

HT Kannada Desk HT Kannada

Dec 03, 2022 07:20 AM IST

ಚಿನ್ನ ಮತ್ತು ಬೆಳ್ಳಿಯ ದರ ಡಿಸೆಂಬರ್‌ 3 2022 (ಸಾಂದರ್ಭಿಕ ಚಿತ್ರ)

  • Gold and silver Price Today December 3: ಇಂದು ವೈಕುಂಠ ಏಕಾದಶಿ. ಡಿಸೆಂಬರ್‌ 3. ಚಿನ್ನ, ಬೆಳ್ಳಿ ಖರೀದಿಗೂ ಶುಭದಿನವೇ ಸರಿ. ಹೌದು ಇಂದು  ಚಿನ್ನ, ಬೆಳ್ಳಿ ರೇಟ್‌ ಎಷ್ಟು? ನಿನ್ನೆಯಿಂದ ಎರಡೂ ಲೋಹಗಳ ದರ ಗಗನಮುಖಿಯಾಗಿವೆ! ಬೆಂಗಳೂರು, ಮೈಸೂರು, ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ? ವಿವರ ಇಲ್ಲಿದೆ.

ಚಿನ್ನ ಮತ್ತು ಬೆಳ್ಳಿಯ ದರ ಡಿಸೆಂಬರ್‌ 3 2022 (ಸಾಂದರ್ಭಿಕ ಚಿತ್ರ)
ಚಿನ್ನ ಮತ್ತು ಬೆಳ್ಳಿಯ ದರ ಡಿಸೆಂಬರ್‌ 3 2022 (ಸಾಂದರ್ಭಿಕ ಚಿತ್ರ) (AP)

ಇಂದಿನ ದಿನ ಬಹಳ ವಿಶೇಷ. ವೈಕುಂಠ ಏಕಾದಶಿ, ಮೋಕ್ಷದ ಏಕಾದಶಿ ಆಚರಣೆ ಒಂದೆಡೆ. ಇನ್ನೊಂದೆಡೆ ಗೀತಾ ಜಯಂತಿ ಆಚರಣೆ. ಶನಿವಾರ ಆದರೂ ಇದಕ್ಕಿಂತ ಶುಭ ದಿನ ಮತ್ತೊಂದಿಲ್ಲ. ಅನೇಕರು ಇಂದೇ ಚಿನ್ನಾಭರಣ ಖರೀದಿಗೆ ಹೋಗಬಹುದು. ವಿಷಾದ ಏನು ಅಂದರೆ ನಿನ್ನೆಯಿಂದ ಚಿನ್ನ, ಬೆಳ್ಳಿ ದರ ಗಗನ ಮುಖಿಯಾಗಿವೆ! ಇಂದು ಚಿನ್ನದ ದರ 500 ರೂಪಾಯಿ, ಬೆಳ್ಳಿಯ ದರ 700 ರೂಪಾಯಿ ಏರಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆ ಕಂಡ ಚಿನ್ನದ ಬೆಲೆ, ಸತತ ಒಂದು ವಾರದಿಂದ ಏರುತ್ತಿದೆ ಬೆಳ್ಳಿ ದರ; ಇಂದಿನ ದರ ಗಮನಿಸಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದಾಗ್ಯೂ, ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, December 3)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು 500 ರೂಪಾಯಿ ಏರಿಕೆಯಾಗಿ 49,250 ರೂಪಾಯಿ ಆಗಿದೆ. ನಿನ್ನೆ 200 ರೂಪಾಯಿ ಏರಿಕೆಯಾಗಿ 48,750 ರೂಪಾಯಿ ಆಗಿತ್ತು. ಅಪರಂಜಿ ಚಿನ್ನ 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ 550 ರೂಪಾಯಿ ಏರಿಕೆಯಾಗಿ 53,730 ರೂಪಾಯಿ ಆಗಿದೆ. ನಿನ್ನೆ 210 ರೂಪಾಯಿ ಏರಿ 53,180 ರೂಪಾಯಿ ಆಗಿತ್ತು.

ಇದೇ ರೀತಿ, ಬೆಳ್ಳಿಯ ಬೆಲೆ ಒಂದು ಕಿಲೋಕ್ಕೆ 700 ರೂಪಾಯಿ ಏರಿಕೆಯಾಗಿ 64,300 ರೂಪಾಯಿ ಆಗಿದೆ. ನಿನ್ನೆ 2,200 ರೂಪಾಯಿ ಏರಿ 63,600 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 49,300 ರೂಪಾಯಿ.

ಮಂಗಳೂರು- 49,300 ರೂಪಾಯಿ.

ಮೈಸೂರು- 49,300 ರೂಪಾಯಿ.

ಚೆನ್ನೈ- 50,200 ರೂಪಾಯಿ.

ಮುಂಬೈ- 49,250 ರೂಪಾಯಿ.

ದೆಹಲಿ- 49,400 ರೂಪಾಯಿ.

ಕೋಲ್ಕತ- 49,250 ರೂಪಾಯಿ.

ಹೈದರಾಬಾದ್- 49,250 ರೂಪಾಯಿ.

ಕೇರಳ- 49,250 ರೂಪಾಯಿ.

ಪುಣೆ- 49,250 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 ಕ್ಯಾರೆಟ್ ಚಿನ್ನ)ದ ದರ

ಬೆಂಗಳೂರು- 53,780 ರೂಪಾಯಿ.

ಮಂಗಳೂರು- 53,780 ರೂಪಾಯಿ.

ಮೈಸೂರು- 53,780 ರೂಪಾಯಿ.

ಚೆನ್ನೈ- 54,760 ರೂಪಾಯಿ.

ಮುಂಬೈ- 53,730 ರೂಪಾಯಿ.

ದೆಹಲಿ- 53,900 ರೂಪಾಯಿ.

ಕೋಲ್ಕತ- 53,730 ರೂಪಾಯಿ.

ಹೈದರಾಬಾದ್- 53,730 ರೂಪಾಯಿ.

ಕೇರಳ- 53,730 ರೂಪಾಯಿ.

ಪುಣೆ- 53,730 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ

ಬೆಂಗಳೂರು- 71,000 ರೂಪಾಯಿ.

ಮೈಸೂರು- 71,000 ರೂಪಾಯಿ.

ಮಂಗಳೂರು- 71,000 ರೂಪಾಯಿ.

ಮುಂಬೈ- 64,300 ರೂಪಾಯಿ.

ಚೆನ್ನೈ- 71,000 ರೂಪಾಯಿ.

ದೆಹಲಿ- 64,300 ರೂಪಾಯಿ.

ಹೈದರಾಬಾದ್- 71,000 ರೂಪಾಯಿ.

ಕೋಲ್ಕತ್ತ- 64,300 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ