logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today February 23: ಚಿನ್ನ ಖರೀದಿಗೆ ಹೊರಟ್ರಾ..? ಚಿನ್ನದ ರೇಟ್‌ ಸ್ಥಿರ, ಬೆಳ್ಳಿ ಸ್ವಲ್ಪ ಹೆಚ್ಚಾಗಿದೆ ನೋಡಿ..

Gold Price Today February 23: ಚಿನ್ನ ಖರೀದಿಗೆ ಹೊರಟ್ರಾ..? ಚಿನ್ನದ ರೇಟ್‌ ಸ್ಥಿರ, ಬೆಳ್ಳಿ ಸ್ವಲ್ಪ ಹೆಚ್ಚಾಗಿದೆ ನೋಡಿ..

HT Kannada Desk HT Kannada

Feb 23, 2023 05:39 AM IST

google News

ಚಿನ್ನ, ಬೆಳ್ಳಿ ದರ ಇಂದು ಹೇಗಿದೆ? (ಸಾಂಕೇತಿಕ ಚಿತ್ರ)

  • Gold and silver Price Today February 23: ಈ ದಿನ ಗುರುವಾರ. ಚಿನ್ನ, ಬೆಳ್ಳಿ ಖರೀದಿಗೂ ಉತ್ತಮ ದಿನ. ಚಿನ್ನದ ದರ ಇಳಿಮುಖವಾಗಿ ಇಂದು ಸ್ಥಿರವಾಗಿರುವುದು ಖರೀದಿಗೆ ಪೂರಕ ವಿದ್ಯಮಾನ. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ರೇಟ್‌ ಎಷ್ಟಿದೆ? ಆ ವಿವರ ಇಲ್ಲಿದೆ.

ಚಿನ್ನ, ಬೆಳ್ಳಿ ದರ ಇಂದು ಹೇಗಿದೆ? (ಸಾಂಕೇತಿಕ ಚಿತ್ರ)
ಚಿನ್ನ, ಬೆಳ್ಳಿ ದರ ಇಂದು ಹೇಗಿದೆ? (ಸಾಂಕೇತಿಕ ಚಿತ್ರ) (HT File Photo)

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಅದು ಆಭರಣಕ್ಕೂ ಸೈ, ಆಪದ್ಧನವಾಗಿಯೂ ಸೈ. ಹೀಗಾಗಿ ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಚಿನ್ನದ ದರ ಸತತ ಇಳಿಕೆ ನಂತರ ಈ ದಿನ ಸ್ಥಿರವಾಗಿದೆ. ಇದು ಚಿನ್ನ ಖರೀದಿಸುವವರ ಪಾಲಿಗೆ ಪೂರಕ ವಿದ್ಯಮಾನ. ಬೆಳ್ಳಿಯ ದರ ನಿನ್ನೆ ಸ್ಥಿರವಾಗಿತ್ತು. ಇಂದು 300 ರೂಪಾಯಿ ಹೆಚ್ಚಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನದ ಬೆಲೆಯ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದ್ದು, ಅವುಗಳೇ ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, February 23)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ನಿನ್ನೆ 22 ಕ್ಯಾರೆಟ್‌ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 100 ರೂಪಾಯಿ ಇಳಿದಿತ್ತು. ಅಂದರೆ ಮಂಗಳವಾರ 52,100 ರೂಪಾಯಿ ಇದ್ದದ್ದು ಬುಧವಾರ 52,000 ರೂಪಾಯಿ ಆಗಿದೆ. ಅದು ಇಂದು ಕೂಡ ಹಾಗೆಯೇ ಮುಂದುವರಿದಿದೆ. ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ ಬುಧವಾರ 100 ರೂಪಾಯಿ ಇಳಿಕೆಯಾಗಿದೆ. ಮಂಗಳವಾರ 56,830 ರೂಪಾಯಿ ಇದ್ದದ್ದು, 56,730 ರೂಪಾಯಿ ಆಗಿದೆ. ಅದು ಇಂದು ಕೂಡ ಮುಂದುವರಿದಿದೆ.

ಆದರೆ, ಒಂದು ಕಿಲೋ ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಮಂಗಳವಾರ ಬೆಳ್ಳಿಯ ದರ 100 ರೂಪಾಯ ಇಳಿದಿತ್ತು. ಸೋಮವಾರ 68,600 ರೂಪಾಯಿ ಇದ್ದ ಬೆಲೆ ಮಂಗಳವಾರ 68,500 ರೂಪಾಯಿ ಆಗಿತ್ತು. ಅದು ಬುಧವಾರ ಸ್ಥಿರವಾಗಿತ್ತು. ಇಂದು ಗುರುವಾರ 300 ರೂಪಾಯಿ ಏರಿ ಆಗಿ 68,800 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 52,050 ರೂಪಾಯಿ.

ಮಂಗಳೂರು- 52,050 ರೂಪಾಯಿ.

ಮೈಸೂರು- 52,050 ರೂಪಾಯಿ.

ಚೆನ್ನೈ- 52,750 ರೂಪಾಯಿ.

ಮುಂಬೈ- 52,000 ರೂಪಾಯಿ.

ದೆಹಲಿ- 52,150ರೂಪಾಯಿ.

ಕೋಲ್ಕತ- 52,050 ರೂಪಾಯಿ.

ಹೈದರಾಬಾದ್- 52,050 ರೂಪಾಯಿ.

ಕೇರಳ- 52,000 ರೂಪಾಯಿ.

ಪುಣೆ- 52,000 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 56,780 ರೂಪಾಯಿ.

ಮಂಗಳೂರು- 56,780 ರೂಪಾಯಿ.

ಮೈಸೂರು- 56,780 ರೂಪಾಯಿ.

ಚೆನ್ನೈ- 57,550 ರೂಪಾಯಿ.

ಮುಂಬೈ- 56,730 ರೂಪಾಯಿ.

ದೆಹಲಿ- 56,880ರೂಪಾಯಿ.

ಕೋಲ್ಕತ- 56,730 ರೂಪಾಯಿ.

ಹೈದರಾಬಾದ್- 56,730 ರೂಪಾಯಿ.

ಕೇರಳ- 56,730 ರೂಪಾಯಿ.

ಪುಣೆ- 56,730 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 72,000 ರೂಪಾಯಿ.

ಮೈಸೂರು- 72,000 ರೂಪಾಯಿ.

ಮಂಗಳೂರು- 72,000 ರೂಪಾಯಿ.

ಮುಂಬೈ- 68,800 ರೂಪಾಯಿ.

ಚೆನ್ನೈ- 72,000 ರೂಪಾಯಿ.

ದೆಹಲಿ- 68,800 ರೂಪಾಯಿ.

ಹೈದರಾಬಾದ್- 72,000 ರೂಪಾಯಿ.

ಕೋಲ್ಕತ್ತ- 72,000 ರೂಪಾಯಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ