logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today January 22: ಭಾನುವಾರಕ್ಕೆ ಬಾಗಿದ ಬಂಗಾರ ಬೆಲೆ; ಬೆಳ್ಳಿ ತುಸು ತುಟ್ಟಿ

Gold Price Today January 22: ಭಾನುವಾರಕ್ಕೆ ಬಾಗಿದ ಬಂಗಾರ ಬೆಲೆ; ಬೆಳ್ಳಿ ತುಸು ತುಟ್ಟಿ

HT Kannada Desk HT Kannada

Jan 22, 2023 07:07 AM IST

ಚಿನ್ನದ ಬೆಲೆ ಇಳಿಕೆ

    • ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ, ಚಿನ್ನದ ದರದಲ್ಲಿ ತುಸು ಇಳಿಕೆ ಕಂಡುಬಂದಿದೆ. ಇಂದಿನ ಚಿನ್ನ-ಬೆಳ್ಳಿ ದರಪಟ್ಟಿಯ ಮಾಹಿತಿ ಇಲ್ಲಿದೆ.
ಚಿನ್ನದ ಬೆಲೆ ಇಳಿಕೆ
ಚಿನ್ನದ ಬೆಲೆ ಇಳಿಕೆ

ನವದೆಹಲಿ: ಬಂಗಾರ ಪ್ರಿಯರಿಗೆ ಇಂದು ಶುಭಸುದ್ದಿ ಇದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ, ಇಂದು ದಿಢೀರ್‌ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಬಂಗಾರ ತುಸು ಅಗ್ಗವಾಗಿದ್ದು, ಭಾನುವಾರ‌ ಬಂಗಾರ ಖರೀದಿಗೆ ಯೋಜಿಸಿರುವವರು ಚಿನ್ನದಂಗಡಿಗೆ ತೆರಳಬಹುದು. ಮಾರುಕಟ್ಟೆಯಲ್ಲಿ ಹಾವು ಏಣಿಯಾಟ ಮುಂದುವರೆದಿದ್ದು, ಇಂದು ಹಳದಿ ಲೋಹ ಖರೀದಿಗೆ ಸೂಕ್ತ ದಿನವಾಗಿದೆ. ಆದರೆ ಬೆಳ್ಳಿ ಮತ್ತೆ ದುಬಾರಿಯಾಗಿದೆ. ದೇಶದ ಪ್ರಮುಖ ನಗರ ಹಾಗೂ ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ ಎಂಬುದನ್ನು ಇಲ್ಲಿ ನೋಡಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

ದೇಶದಲ್ಲಿ ಇಂದು 22 ಕ್ಯಾರೆಟ್‌​​ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿದೆ. ಇದೇ ವೇಳೆ 24 ಕ್ಯಾರೆಟ್‌​​ನ 10 ಗ್ರಾಂ ಚಿನ್ನದ ಬೆಲೆಯಲ್ಲೂ 50 ರೂ. ಇಳಿಕೆಯಾಗಿದೆ. 22 ಕ್ಯಾರೆಟ್‌​ನ 10 ಗ್ರಾಂ ಚಿನ್ನದ ದರ ಇಂದು 52,250 ರೂಪಾಯಿಗೆ ಬಂದು ನಿಂತಿದೆ. ನಿನ್ನೆ (ಶನಿವಾರ) ಇದರ ಬೆಲೆ 52,350 ರೂಪಾಯಿ ಆಗಿತ್ತು. ಇತ್ತ 24 ಕ್ಯಾರೆಟ್ ಚಿನ್ನದ ಬೆಲೆ 50 ರೂ. ಕುಸಿದು 57,060 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ಏರಿಕೆಯಾಗಿ 72,300 ರೂಪಾಯಿಗೆ ಬಂದು ನಿಂತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (10 ಗ್ರಾಂ)

ನವದೆಹಲಿ: 52,400 ರೂ.(22 ಕ್ಯಾರಟ್‌) ಮತ್ತು 57,210 ರೂ. (24 ಕ್ಯಾರಟ್‌)

ಮುಂಬೈ: 52,250 ರೂ.(22 ಕ್ಯಾರಟ್‌) ಮತ್ತು 57,060 ರೂ. (24 ಕ್ಯಾರಟ್‌)

ಕೋಲ್ಕತ್ತಾ: 52,250 ರೂ.(22 ಕ್ಯಾರಟ್‌) ಮತ್ತು 57,060 ರೂ. (24 ಕ್ಯಾರಟ್‌)

ಚೆನ್ನೈ: 53,200 ರೂ.(22 ಕ್ಯಾರಟ್‌) ಮತ್ತು 58,040 ರೂ. (24 ಕ್ಯಾರಟ್‌)

ಹೈದರಾಬಾದ್:‌ 52,250 ರೂ.(22 ಕ್ಯಾರಟ್‌) ಮತ್ತು 57,060 ರೂ. (24 ಕ್ಯಾರಟ್‌)

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (22 ಕ್ಯಾರಟ್‌) ಚಿನ್ನದ ಬೆಲೆ 52,300 ರೂ. ಆಗಿದ್ದು, ನಿನ್ನೆ (ಜ.20-ಶುಕ್ರವಾರ) ಇದರ ಬೆಲೆ 52,400 ರೂಪಾಯಿ ಆಗಿತ್ತು. ಅಂದರೆ ಒಂದು ದಿನದಲ್ಲಿ 100 ರೂಪಾಯಿ ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನ(24 ಕ್ಯಾರಟ್‌)ದ ಬೆಲೆ 57,060 ರೂಪಾಯಿ ಆಗಿದೆ. ನಿನ್ನೆ (ಜ.21-ಶನಿವಾರ) ಇದರ ಬೆಲೆ 57,160 ರೂಪಾಯಿ ಆಗಿತ್ತು. ಅಂದರೆ ಒಂದು ದಿನದಲ್ಲಿ ಇಲ್ಲೂ 100 ರೂಪಾಯಿ ಇಳಿಕೆಯಾಗಿದೆ.

ಮಂಗಳೂರು- 52,300 ರೂ.(22 ಕ್ಯಾರಟ್‌) ಮತ್ತು 57,110 ರೂ. (24 ಕ್ಯಾರಟ್‌)

ಮೈಸೂರು- 52,300 ರೂ.(22 ಕ್ಯಾರಟ್‌) ಮತ್ತು 57,110 ರೂ. (24 ಕ್ಯಾರಟ್‌)

ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 72,300 ರೂ. ಆಗಿದೆ. ನಿನ್ನೆ (ಜ.21-ಶನಿವಾರ) ಒಂದು ಕೆಜಿ ಬೆಳ್ಳಿ ಬೆಲೆ 72,100 ರೂಪಾಯಿ ಆಗಿತ್ತು. ಅಂದರೆ ಒಂದು ದಿನದಲ್ಲಿ 200 ರೂ. ಏರಿಕೆ ಕಂಡುಬಂದಿದೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 74,300 ರೂ. ಆಗಿದ್ದು, ನಿನ್ನೆ (ಜ.21-ಶನಿವಾರ) ಒಂದು ಕೆಜಿ ಬೆಳ್ಳಿ ಬೆಲೆ 74,500 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 200 ರೂಪಾಯಿ ಇಳಿಕೆ ಕಂಡುಬಂದಿದೆ. ಮೈಸೂರಿನಲ್ಲಿ ಬೆಳ್ಳಿ ಬೆಲೆ 74,300 ರೂಪಾಯಿ ಆಗಿದ್ದು, ಮಂಗಳೂರಿನಲ್ಲಿ 74,300 ರೂಪಾಯಿ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ