ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 23: ಹಬ್ಬದ ನೆಕ್ಸ್ಟ್‌ ಡೇನೇ ಚಿನ್ನ, ಬೆಳ್ಳಿ ದರ ಇಳಿಯಿತು ನೋಡಿ! ಹೊಟ್ಟೆ ಉರಿಯಲ್ವ?

Gold Price Today March 23: ಹಬ್ಬದ ನೆಕ್ಸ್ಟ್‌ ಡೇನೇ ಚಿನ್ನ, ಬೆಳ್ಳಿ ದರ ಇಳಿಯಿತು ನೋಡಿ! ಹೊಟ್ಟೆ ಉರಿಯಲ್ವ?

HT Kannada Desk HT Kannada

Mar 23, 2023 06:06 AM IST

ಚಿನ್ನ ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)

  • Gold and silver Price Today March 22: ಯುಗಾದಿ ಹಬ್ಬದ ಮಾರನೇ ದಿನವೇ ಬೆಳ್ಳಿ, ಬಂಗಾರದ ದರ ಇಳಿಯಿತು. ಹೊಟ್ಟೆ ಉರಿಯಲ್ವ? ಹೌದು, ಚಿನ್ನ ಮತ್ತು ಬೆಳ್ಳಿಯ ದರ ಇಂದು ಇಳಿಕೆಯಾಗಿದೆ. ಚಿನ್ನ, ಬೆಳ್ಳಿ ದರ ಇಂದು ಯಾವ ಊರಲ್ಲಿ ಎಷ್ಟು? ವಿವರ ಮುಂದಿದೆ.

ಚಿನ್ನ ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ)
ಚಿನ್ನ ಬೆಳ್ಳಿ ದರ ಇಂದು (ಸಾಂಕೇತಿಕ ಚಿತ್ರ) (PTI Photo/Swapan Mahapatra)

ಯುಗಾದಿ ಹಬ್ಬ, ಹೊಸ ವರ್ಷದ ಆರಂಭ ಅಂತ ನಿನ್ನೆ ಚಿನ್ನ, ಬೆಳ್ಳಿ ಖರೀದಿಸಿದವರಿಗೆ ಇಂದು ಶಾಕ್‌. ಹಬ್ಬದ ಮಾರನೇ ದಿನವೇ ಬೆಳ್ಳಿ, ಬಂಗಾರದ ದರ ಇಳಿದು ಬಿಡುವುದೇ? ಹೊಟ್ಟೆ ಉರಿಯಲ್ವ!

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಹೌದು, ಚಿನ್ನ, ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಚಿನ್ನದ ದರ 10 ಗ್ರಾಮಿಗೆ ಸುಮಾರು 800 ರೂಪಾಯಿ ಇಳಿದರೆ, ಬೆಳ್ಳಿಯ ದರ ಒಂದು ಕಿಲೋಗೆ ಅಂದಾಜು 500 ರೂಪಾಯಿ ಇಳಿಕೆಯಾಗಿದೆ.

ಚಿನ್ನ, ಬೆಳ್ಳಿಯ ದರಗಳ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದೆ. ಅವುಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ಸಾಗಣೆ ವೆಚ್ಚ ಮತ್ತು ಇತರೆ ವೆಚ್ಚಗಳ ಕಾರಣ ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು.

ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, March 23)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಸೋಮವಾರ 55,300 ರೂಪಾಯಿ ಇತ್ತು. ಅದು ಮಂಗಳವಾರ 500 ರೂಪಾಯಿ ಇಳಿದು 54,800 ರೂಪಾಯಿ, ಬುಧವಾರ 200 ರೂಪಾಯಿ ಏರಿ 55,000 ರೂಪಾಯಿ ಆಗಿತ್ತು. ಇಂದು 800 ರೂಪಾಯಿ ಇಳಿದು 54,200 ರೂಪಾಯಿ ಆಗಿದೆ.

ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ ಸೋಮವಾರ 60,320 ರೂಪಾಯಿ ಇದ್ದದ್ದು, ಮಂಗಳವಾರ 540 ರೂಪಾಯಿ ಇಳಿದು 59,780 ರೂಪಾಯಿ, ಬುಧವಾರ 220 ರೂಪಾಯಿ ಏರಿ 60,000 ರೂಪಾಯಿ ಆಗಿತ್ತು. ಇಂದು 870 ರೂಪಾಯಿ ಇಳಿದು 59,130 ರೂಪಾಯಿ ಆಗಿದೆ.

ಇನ್ನು, ಒಂದು ಕಿಲೋ ಬೆಳ್ಳಿಯ ಬೆಲೆ ಸೋಮವಾರ 72,100 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಮಂಗಳವಾರ 72,000 ರೂಪಾಯಿ, ಬುಧವಾರ 100 ರೂಪಾಯಿ ಏರಿ ಮತ್ತೆ 72,100 ರೂಪಾಯಿ ಆಗಿತ್ತು. ಇಂದು 500 ರೂಪಾಯಿ ಇಳಿದು 71,600 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 54,250 ರೂಪಾಯಿ.

ಮಂಗಳೂರು- 54,250 ರೂಪಾಯಿ.

ಮೈಸೂರು- 54,250 ರೂಪಾಯಿ.

ಚೆನ್ನೈ- 54,700 ರೂಪಾಯಿ.

ಮುಂಬೈ- 54,200 ರೂಪಾಯಿ.

ದೆಹಲಿ- 54,350ರೂಪಾಯಿ.

ಕೋಲ್ಕತ- 54,200 ರೂಪಾಯಿ.

ಹೈದರಾಬಾದ್- 54,200 ರೂಪಾಯಿ.

ಕೇರಳ- 54,200 ರೂಪಾಯಿ.

ಪುಣೆ- 54,200 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 59,180 ರೂಪಾಯಿ.

ಮಂಗಳೂರು- 59,180 ರೂಪಾಯಿ.

ಮೈಸೂರು- 59,180 ರೂಪಾಯಿ.

ಚೆನ್ನೈ- 59,670 ರೂಪಾಯಿ.

ಮುಂಬೈ- 59,130 ರೂಪಾಯಿ.

ದೆಹಲಿ- 59,280ರೂಪಾಯಿ.

ಕೋಲ್ಕತ- 59,130 ರೂಪಾಯಿ.

ಹೈದರಾಬಾದ್- 59,130 ರೂಪಾಯಿ.

ಕೇರಳ- 59,130 ರೂಪಾಯಿ.

ಪುಣೆ- 59,130 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 74,000 ರೂಪಾಯಿ.

ಮೈಸೂರು- 74,000 ರೂಪಾಯಿ.

ಮಂಗಳೂರು- 74,000 ರೂಪಾಯಿ.

ಮುಂಬೈ- 71,600 ರೂಪಾಯಿ.

ಚೆನ್ನೈ- 74,000 ರೂಪಾಯಿ.

ದೆಹಲಿ- 71,600 ರೂಪಾಯಿ.

ಹೈದರಾಬಾದ್- 74,000 ರೂಪಾಯಿ.

ಕೋಲ್ಕತ್ತ- 71,600 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ