ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 7: ಚಿನ್ನಾಭರಣ ಖರೀದಿಗೆ ಇಂದು ಶುಭ ಮಂಗಳವಾರ; ನಿಮ್ಮೂರಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

Gold Price Today March 7: ಚಿನ್ನಾಭರಣ ಖರೀದಿಗೆ ಇಂದು ಶುಭ ಮಂಗಳವಾರ; ನಿಮ್ಮೂರಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

HT Kannada Desk HT Kannada

Mar 07, 2023 07:18 AM IST

Gold and silver Price Today March 7: ಇಂದಿನ ಚಿನ್ನ-ಬೆಳ್ಳಿ ದರ

  • Gold and silver Price Today March 7: ಚಿನ್ನದ ದರ ಇಂದು ಸ್ಥಿರವಾಗಿದೆ. ಚಿನ್ನಾಭರಣ ಖರೀದಿಗೆ ಪೂರಕ ವಿದ್ಯಮಾನ. ಇಂದು ಶುಭ ಮಂಗಳವಾರ. ಚಿನ್ನ, ಬೆಳ್ಳಿ ಖರೀದಿಗೂ ಉತ್ತಮ ದಿನ. ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ರೇಟ್‌ ಇಂದು ಎಷ್ಟಿದೆ? ಆ ವಿವರ ಇಲ್ಲಿದೆ.

Gold and silver Price Today March 7: ಇಂದಿನ ಚಿನ್ನ-ಬೆಳ್ಳಿ ದರ
Gold and silver Price Today March 7: ಇಂದಿನ ಚಿನ್ನ-ಬೆಳ್ಳಿ ದರ

ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಚಿನ್ನದ ದರ ಈ ದಿನ ಸ್ಥಿರವಾಗಿದೆ. ಇದು ಚಿನ್ನ ಖರೀದಿಸುವವರ ಪಾಲಿಗೆ ಪೂರಕ ವಿದ್ಯಮಾನ. ಆದರೆ ಬೆಳ್ಳಿಯ ದರ ಸ್ವಲ್ಪ ಅಂದರೆ ಒಂದು ಕಿಲೋ ಮೇಲೆ 100 ರೂಪಾಯಿ ಏರಿಕೆಯಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿ ಚಿನ್ನದ ಬೆಲೆಯ ಏರಿಳಿತ ದಾಖಲಾಗುತ್ತದೆ. ಈ ವಿಚಾರದಲ್ಲಿ ಅವುಗಳೇ ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ನಮ್ಮ ದೇಶದಲ್ಲಿ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ. ಸಾಗಣೆ ವೆಚ್ಚ ಮತ್ತು ಇತರೆ ವೆಚ್ಚಗಳ ಕಾರಣ ಹೀಗಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, March 7)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ನಿನ್ನೆ 22 ಕ್ಯಾರೆಟ್‌ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 51,850 ರೂಪಾಯಿ ತಲುಪಿತ್ತು. ಅಂದರೆ ಸೋಮವಾರ ಇದ್ದ ಇದೇ 51,850 ರೂಪಾಯಿ ಇಂದು ಕೂಡ ಹಾಗೆಯೇ ಮುಂದುವರಿದಿದೆ.

ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ ಸೋಮವಾರ 56,550 ರೂಪಾಯಿ ಇದ್ದದ್ದು, ಮಂಗಳವಾರ ಅಂದರೆ ಇಂದು ಕೂಡ ಹಾಗೆಯೇ ಮುಂದುವರಿದಿದೆ.

ಆದರೆ, ಒಂದು ಕಿಲೋ ಬೆಳ್ಳಿಯ ಬೆಲೆ ಸೋಮವಾರಕ್ಕಿಂತ 100 ರೂಪಾಯಿ ಹೆಚ್ಚಾಗಿದೆ. ಸೋಮವಾರ 66,900 ರೂಪಾಯಿ ಇದ್ದ ಬೆಲೆ ಮಂಗಳವಾರ 67,000 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 51,900 ರೂಪಾಯಿ.

ಮಂಗಳೂರು- 51,900 ರೂಪಾಯಿ.

ಮೈಸೂರು- 51,900 ರೂಪಾಯಿ.

ಚೆನ್ನೈ- 52,500 ರೂಪಾಯಿ.

ಮುಂಬೈ- 51,850 ರೂಪಾಯಿ.

ದೆಹಲಿ- 51,950ರೂಪಾಯಿ.

ಕೋಲ್ಕತ- 51,850 ರೂಪಾಯಿ.

ಹೈದರಾಬಾದ್- 51,850 ರೂಪಾಯಿ.

ಕೇರಳ- 51,850 ರೂಪಾಯಿ.

ಪುಣೆ- 51,850 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 56,600 ರೂಪಾಯಿ.

ಮಂಗಳೂರು- 56,600 ರೂಪಾಯಿ.

ಮೈಸೂರು- 56,600 ರೂಪಾಯಿ.

ಚೆನ್ನೈ- 57,270 ರೂಪಾಯಿ.

ಮುಂಬೈ- 56,550 ರೂಪಾಯಿ.

ದೆಹಲಿ- 56,700ರೂಪಾಯಿ.

ಕೋಲ್ಕತ- 56,550 ರೂಪಾಯಿ.

ಹೈದರಾಬಾದ್- 56,550 ರೂಪಾಯಿ.

ಕೇರಳ- 56,550 ರೂಪಾಯಿ.

ಪುಣೆ- 56,550 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 70,600 ರೂಪಾಯಿ.

ಮೈಸೂರು- 70,600 ರೂಪಾಯಿ.

ಮಂಗಳೂರು- 70,600 ರೂಪಾಯಿ.

ಮುಂಬೈ- 67,000 ರೂಪಾಯಿ.

ಚೆನ್ನೈ- 70,600 ರೂಪಾಯಿ.

ದೆಹಲಿ- 67,000 ರೂಪಾಯಿ.

ಹೈದರಾಬಾದ್- 70,600 ರೂಪಾಯಿ.

ಕೋಲ್ಕತ್ತ- 70,600 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ