ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today March 9: ಚಿನ್ನಾಭರಣ ಪ್ರಿಯರಿಗೆ ಇದಕ್ಕಿಂತ ಖುಷಿ ಬೇರೆ ಬೇಕಾ; ಚಿನ್ನ, ಬೆಳ್ಳಿ ದರ ಇಳಿದಿದೆ ನೋಡಿ

Gold Price Today March 9: ಚಿನ್ನಾಭರಣ ಪ್ರಿಯರಿಗೆ ಇದಕ್ಕಿಂತ ಖುಷಿ ಬೇರೆ ಬೇಕಾ; ಚಿನ್ನ, ಬೆಳ್ಳಿ ದರ ಇಳಿದಿದೆ ನೋಡಿ

HT Kannada Desk HT Kannada

Mar 09, 2023 07:26 AM IST

ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ

  • Gold and silver Price Today March 9: ಚಿನ್ನದ ದರ ಎರಡು ದಿನ ಸ್ಥಿರವಾಗಿತ್ತು. ಇಂದು 650 ರೂಪಾಯಿ ಇಳಿದಿದೆ. ಇದು ಚಿನ್ನಾಭರಣ ಖರೀದಿಗೆ ಪೂರಕ ವಿದ್ಯಮಾನ. ಇಂದು ಗುರುವಾರ ಚಿನ್ನ, ಬೆಳ್ಳಿ ಖರೀದಿಗೂ ಉತ್ತಮ ದಿನ. ಈ ದಿನ ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ರೇಟ್‌ ಎಷ್ಟಿದೆ?

ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ
ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ

ಕಳೆದ ಎರಡು ದಿನಗಳ ಅವಧಿಯಲ್ಲಿ ಚಿನ್ನದ ದರ ಇಳಿಮುಖವಾಗಿದೆ. ಮಂಗಳವಾರದಿಂದ ಸ್ಥಿರವಾಗಿದ್ದ ಚಿನ್ನದ ದರ ಇಂದು 650 ರೂಪಾಯಿ ಇಳಿದಿದೆ. ಹೌದು.. ಚಿನ್ನಾಭರಣ ಪ್ರಿಯರು ನಿತ್ಯವೂ ಚಿನ್ನ, ಬೆಳ್ಳಿ ರೇಟ್‌ ಗಮನಿಸುವುದು ಸಹಜ. ಚಿನ್ನದ ದರ ಇಳಿಮುಖವಾಗಿರುವ ಕಾರಣ ಚಿನ್ನ ಖರೀದಿಸುವವರ ಪಾಲಿಗೆ ಪೂರಕ ವಿದ್ಯಮಾನ. ಆದರೆ ಬೆಳ್ಳಿಯ ದರವೂ ಅಂದರೆ ಒಂದು ಕಿಲೋ ಮೇಲೆ 1450 ರೂಪಾಯಿ ಇಳಿಕೆಯಾಗಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಚಿನ್ನ, ಬೆಳ್ಳಿಯ ದರಗಳ ಏರಿಳಿತವು ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳನ್ನು ಅವಲಂಬಿಸಿದೆ. ಅವುಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಆದಾಗ್ಯೂ, ನಮ್ಮ ದೇಶದಲ್ಲಿ ಸಾಗಣೆ ವೆಚ್ಚ ಮತ್ತು ಇತರೆ ವೆಚ್ಚಗಳ ಕಾರಣ ನಗರದಿಂದ ನಗರಕ್ಕೆ ಚಿನ್ನ, ಬೆ‍ಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ಬೆಂಗಳೂರು, ಮೈಸೂರು, ಮಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ರೇಟ್‌ ಎಷ್ಟಿದೆ ? ಇಲ್ಲಿದೆ ವಿವರ.

ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, March 9)

ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್​ ಆಭರಣ ಚಿನ್ನದ ಬೆಲೆ ಮಂಗಳವಾರದಿಂದ 51,650 ರೂಪಾಯಿಯಲ್ಲಿ ಸ್ಥಿರವಾಗಿತ್ತು. ಆದರೆ ಇಂದು 650 ರೂಪಾಯಿ ಇಳಿದು, 51,000 ರೂಪಾಯಿ ತಲುಪಿದೆ.

ಅದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ಬೆಲೆ ಕೂಡ 10 ಗ್ರಾಂಗೆ ಸೋಮವಾರ 56,550 ರೂಪಾಯಿ ಇದ್ದದ್ದು, ಮಂಗಳವಾರ ಸ್ಥಿರವಾಗಿತ್ತು. ಬುಧವಾರ 56,350 ರೂಪಾಯಿ ಆಗಿ ಇಂದು 55,630 ರೂಪಾಯಿ ಆಗಿದೆ. ಅಂದರೆ 720 ರೂಪಾಯಿ ಇಳಿಕೆಯಾಗಿದೆ.

ಆದರೆ, ಒಂದು ಕಿಲೋ ಬೆಳ್ಳಿಯ ಬೆಲೆ ನಿನ್ನೆಗಿಂತ 1,450 ರೂಪಾಯಿ ಇಳಿದಿದೆ. ನಿನ್ನೆ 67,000 ರೂಪಾಯಿ ಇದ್ದ ಬೆಳ್ಳಿಯ ಬೆಲೆ ಇಂದು 65,550 ರೂಪಾಯಿ ಆಗಿದೆ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 51,050 ರೂಪಾಯಿ.

ಮಂಗಳೂರು- 51,050 ರೂಪಾಯಿ.

ಮೈಸೂರು- 51,0500 ರೂಪಾಯಿ.

ಚೆನ್ನೈ- 51,620 ರೂಪಾಯಿ.

ಮುಂಬೈ- 51,000 ರೂಪಾಯಿ.

ದೆಹಲಿ- 51,150ರೂಪಾಯಿ.

ಕೋಲ್ಕತ- 51,000 ರೂಪಾಯಿ.

ಹೈದರಾಬಾದ್- 51,000 ರೂಪಾಯಿ.

ಕೇರಳ- 51,000 ರೂಪಾಯಿ.

ಪುಣೆ- 51,000 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 55,680 ರೂಪಾಯಿ.

ಮಂಗಳೂರು- 55,680 ರೂಪಾಯಿ.

ಮೈಸೂರು- 55,680 ರೂಪಾಯಿ.

ಚೆನ್ನೈ- 56,320 ರೂಪಾಯಿ.

ಮುಂಬೈ- 55,630 ರೂಪಾಯಿ.

ದೆಹಲಿ- 55,780ರೂಪಾಯಿ.

ಕೋಲ್ಕತ- 55,630 ರೂಪಾಯಿ.

ಹೈದರಾಬಾದ್- 55,630 ರೂಪಾಯಿ.

ಕೇರಳ- 55,630 ರೂಪಾಯಿ.

ಪುಣೆ- 55,630 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today)

ಬೆಂಗಳೂರು- 67,500 ರೂಪಾಯಿ.

ಮೈಸೂರು- 67,500 ರೂಪಾಯಿ.

ಮಂಗಳೂರು- 67,500 ರೂಪಾಯಿ.

ಮುಂಬೈ- 67,000 ರೂಪಾಯಿ.

ಚೆನ್ನೈ- 67,500 ರೂಪಾಯಿ.

ದೆಹಲಿ- 65,550 ರೂಪಾಯಿ.

ಹೈದರಾಬಾದ್- 67,500 ರೂಪಾಯಿ.

ಕೋಲ್ಕತ್ತ- 67,500 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ