ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Price Today: ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ, ಚಿನಿವಾರ ಪೇಟೆಯಲ್ಲಿ ಇಂದಿನ ದರ ತಿಳಿದುಕೊಳ್ಳಿ

Gold Silver Price today: ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ, ಚಿನಿವಾರ ಪೇಟೆಯಲ್ಲಿ ಇಂದಿನ ದರ ತಿಳಿದುಕೊಳ್ಳಿ

Praveen Chandra B HT Kannada

May 02, 2023 06:00 AM IST

Gold Silver Price today: ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ, ಚಿನಿವಾರ ಪೇಟೆಯಲ್ಲಿ ಇಂದಿನ ದರ ತಿಳಿದುಕೊಳ್ಳಿ

    • Gold Sliver Price Down Today: ಚಿನ್ನ ಮತ್ತು ಬೆಳ್ಳಿ ದರ ಇಂದು ಇಳಿಮುಖವಾಗಿದೆ. ಇಂದು 22 ಕ್ಯಾರೆಟ್‌ ಚಿನ್ನದ ದರ ಗ್ರಾಂಗೆ 15 ರೂ. ಇಳಿಕೆ ಕಂಡಿದ್ದು, 5,575 ರೂ.ಗೆ ತಲುಪಿದೆ. ಇದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ ಇಂದು ಗ್ರಾಂ.ಗೆ 6,081 ರೂ. ಇದೆ. ಬೆಳ್ಳಿ ದರವೂ ಇಳಿಕೆಯಾಗಿದ್ದು, ಇಂದು ಗ್ರಾಂಗೆ 80.20 ರೂ. ಇದೆ.
Gold Silver Price today: ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ, ಚಿನಿವಾರ ಪೇಟೆಯಲ್ಲಿ ಇಂದಿನ ದರ ತಿಳಿದುಕೊಳ್ಳಿ
Gold Silver Price today: ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ, ಚಿನಿವಾರ ಪೇಟೆಯಲ್ಲಿ ಇಂದಿನ ದರ ತಿಳಿದುಕೊಳ್ಳಿ

ಬೆಂಗಳೂರು: ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ದರ (Gold Silver Price today) ತುಸು ಇಳಿಕೆ ಕಂಡಿದೆ. ಮೇ ತಿಂಗಳ ಆರಂಭದಲ್ಲಿಯೇ ಚಿನ್ನ ಖರೀದಿಸಬೇಕೆಂದು ಬಯಸುವವರಿಗೆ ಇದರಿಂದ ತುಸು ಹಣ ಉಳಿತಾಯವಾಗಲಿದೆ. ಚಿನ್ನ ಮತ್ತು ಬೆಳ್ಳಿ ದರ ಇಂದು ಇಳಿಮುಖವಾಗಿದೆ. ಇಂದು 22 ಕ್ಯಾರೆಟ್‌ ಚಿನ್ನದ ದರ ಗ್ರಾಂಗೆ 15 ರೂ. ಇಳಿಕೆ ಕಂಡಿದ್ದು, 5,575 ರೂ.ಗೆ ತಲುಪಿದೆ. ಇದೇ ರೀತಿ 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ ಇಂದು ಗ್ರಾಂ.ಗೆ 6,081 ರೂ. ಇದೆ. ಬೆಳ್ಳಿ ದರವೂ ಇಳಿಕೆಯಾಗಿದ್ದು, ಇಂದು ಗ್ರಾಂಗೆ 80.20 ರೂ. ಇದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ ಇಳಿಕೆ ಕಂಡಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನದ ದರ ಇಳಿಕೆ ಕಂಡಿದೆ.

22 ಕ್ಯಾರೆಟ್‌ ಚಿನ್ನದ ದರ (22 carat gold rate)

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,575 ರೂ. ಇದೆ. ನಿನ್ನೆಯ 5,590 ರೂ.ಗೆ ಹೋಲಿಸಿದರೆ 15 ರೂ. ಇಳಿಕೆ ಕಂಡಿದೆ. ಇಂದು 8 ಗ್ರಾಂ ಚಿನ್ನ ಖರೀದಿಸುವುದಾದರೆ 44600 ರೂ. ನೀಡಬೇಕು. ನಿನ್ನೆ 44720 ರೂ. ಇತ್ತು. ನಿನ್ನೆಗಿಂತ ಇಂದು 120 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55750 ರೂ. ಇದೆ. ನಿನ್ನೆಯ 55900 ರೂ. ಗೆ ಹೋಲಿಸಿದರೆ 150 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 557500 ರೂ. ನೀಡಬೇಕು. ನಿನ್ನೆಯ 559000 ರೂ.ಗೆ ಹೋಲಿಸಿದರೆ ಇಂದು 1500 ರೂ. ಇಳಿಕೆ ಕಂಡಿದೆ.

24 ಕ್ಯಾರೆಟ್‌ ಚಿನ್ನದ ದರ (24 carat gold rate)

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6081 ರೂ. ಇದೆ. ನಿನ್ನೆಯ 6098 ರೂ.ಗೆ ಹೋಲಿಸಿದರೆ 17 ರೂ. ಇಳಿಕೆಯಾಗಿದೆ. ಎಲ್ಲಾದರೂ 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48648 ರೂ. ನೀಡಬೇಕು. ನಿನ್ನೆ 48784 ರೂ. ಇತ್ತು. 136 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60810 ರೂ. ಇದೆ. ನಿನ್ನೆಯ 60980 ರೂ. ಗೆ ಹೋಲಿಸಿದರೆ 170 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 608100 ರೂ. ನೀಡಬೇಕು. ನಿನ್ನೆಯ 609800 ರೂ.ಗೆ ಹೋಲಿಸಿದರೆ ಇಂದು 1700 ರೂ. ಇಳಿಕೆ ಕಂಡಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55750 ರೂ. ಇದೆ. ಮಂಗಳೂರು 55750 ರೂ., ಮೈಸೂರಿನಲ್ಲಿ 55750 ರೂ. ಇದೆ. ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 56300 ರೂ. , ಮುಂಬೈನಲ್ಲಿ 55700 ರೂ. , ದೆಹಲಿಯಲ್ಲಿ 55850 ರೂ. , ಕೋಲ್ಕತಾದಲ್ಲಿ 55700 ರೂ., ಹೈದರಾಬಾದ್‌ 55700 ರೂ., ಕೇರಳ 55700 ರೂ., ಪುಣೆ 55700 ರೂ., ಅಹಮದಾಬಾದ್‌ 55750 ರೂ., ಜೈಪುರ 55850 ರೂ., ಲಖನೌ 55850 ರೂ., ಕೊಯಮುತ್ತೂರು 56300 ರೂ. ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60810 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 61420 ರೂ. , ಮುಂಬೈನಲ್ಲಿ 60760 ರೂ. , ದೆಹಲಿಯಲ್ಲಿ 60910 ರೂ. , ಕೋಲ್ಕತಾದಲ್ಲಿ60760 ರೂ., ಹೈದರಾಬಾದ್‌ 60760 ರೂ., ಕೇರಳ 60760 ರೂ., ಪುಣೆ 60760 ರೂ., ಅಹಮದಾಬಾದ್‌ 60810 ರೂ., ಜೈಪುರ 60910 ರೂ., ಲಖನೌ 60910 ರೂ., ಕೊಯಮುತ್ತೂರು 61420 ರೂ., ಮದುರೈ 61420 , ವಿಜಯವಾಡ 60760 ರೂ. ಇದೆ.

ಕರ್ನಾಟಕದಲ್ಲಿ ಶನಿವಾರ ಬೆಳ್ಳಿ ದರ ಎಷ್ಟು?

ರಾಜ್ಯದಲ್ಲಿ ಇಂದು ಬೆಳ್ಳಿ ದರ ತುಸು ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 80.20 ರೂ., 8 ಗ್ರಾಂ ಬೆಳ್ಳಿಗೆ 641.60 ರೂ., 10 ಗ್ರಾಂ ಬೆಳ್ಳಿ ದರ 802 ರೂ. ಮತ್ತು 1 ಕೆ.ಜಿ. ಬೆಳ್ಳಿ ದರ 80200 ರೂಪಾಯಿ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ