logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ 4 ಸಾವು, 100ಕ್ಕೂ ಜನರಿಗೆ ಗಾಯ; ಅಕ್ರಮ ಮದರಸಾ ನೆಲಸಮದಿಂದ ಉಂಟಾದ ಉದ್ವಿಗ್ನತೆ, 10 ಅಂಶಗಳ ವಿವರಣೆ

ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ 4 ಸಾವು, 100ಕ್ಕೂ ಜನರಿಗೆ ಗಾಯ; ಅಕ್ರಮ ಮದರಸಾ ನೆಲಸಮದಿಂದ ಉಂಟಾದ ಉದ್ವಿಗ್ನತೆ, 10 ಅಂಶಗಳ ವಿವರಣೆ

Umesh Kumar S HT Kannada

Feb 09, 2024 10:05 AM IST

ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ 4 ಸಾವು, 100ಕ್ಕೂ ಜನರಿಗೆ ಗಾಯವಾಗಿದೆ. ಅಕ್ರಮ ಮದರಸಾ ನೆಲಸಮದಿಂದ ಉಂಟಾದ ಉದ್ವಿಗ್ನತೆ ಇದಾಗಿದ್ದು ಈ ವಿದ್ಯಮಾನದ ಕುರಿತ 10 ಅಂಶಗಳ ವಿವರಣೆ ಈ ವರದಿಯಲ್ಲಿದೆ.

  • ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ 4 ಸಾವು ಸಂಭವಿಸಿದ್ದು, 100ಕ್ಕೂ ಜನರಿಗೆ ಗಾಯವಾಗಿದೆ. ಅಕ್ರಮ ಮದರಸಾ ನೆಲಸಮದಿಂದ ಉಂಟಾದ ಉದ್ವಿಗ್ನತೆಯ ಕಾರಣ ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ಫ್ಯೂ ಜಾರಿಯಲ್ಲಿದೆ. ಈ ವಿದ್ಯಮಾನದ 10 ಅಂಶಗಳ ವಿವರಣೆ ಇಲ್ಲಿದೆ.

ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ 4 ಸಾವು, 100ಕ್ಕೂ ಜನರಿಗೆ ಗಾಯವಾಗಿದೆ. ಅಕ್ರಮ ಮದರಸಾ ನೆಲಸಮದಿಂದ ಉಂಟಾದ ಉದ್ವಿಗ್ನತೆ ಇದಾಗಿದ್ದು ಈ ವಿದ್ಯಮಾನದ ಕುರಿತ 10 ಅಂಶಗಳ ವಿವರಣೆ ಈ ವರದಿಯಲ್ಲಿದೆ.
ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ 4 ಸಾವು, 100ಕ್ಕೂ ಜನರಿಗೆ ಗಾಯವಾಗಿದೆ. ಅಕ್ರಮ ಮದರಸಾ ನೆಲಸಮದಿಂದ ಉಂಟಾದ ಉದ್ವಿಗ್ನತೆ ಇದಾಗಿದ್ದು ಈ ವಿದ್ಯಮಾನದ ಕುರಿತ 10 ಅಂಶಗಳ ವಿವರಣೆ ಈ ವರದಿಯಲ್ಲಿದೆ. (PTI)

ಉತ್ತರಾಖಂಡದ ಹಲ್ದ್‌ವಾನಿ ಜಿಲ್ಲೆಯ ಬನ್‌ಭೂಲ್‌ಪುರದಲ್ಲಿ ಅಕ್ರಮ ಮದರಸಾ ನೆಲಸಮಗೊಳಿಸುವ ವಿಚಾರದಲ್ಲಿ ಗುರುವಾರ ಸಂಜೆ ಭುಗಿಲೆದ್ದ ಹಿಂಸಾಚಾರದ ಕಾರಣ ನಾಲ್ವರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್ ಅಧಿಕಾರಿಗಳ ಹೇಳಿಕೆಯ ಆಧಾರದಲ್ಲಿ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

ಅಕ್ರಮ ಮದರಸಾವನ್ನು ನೆಲಸಮ ಮಾಡುವ ವಿಚಾರವಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಗಲಭೆಕೋರರ ಮೇಲೆ ಕಂಡಲ್ಲಿ ಗುಂಡು ಹಾರಿಸಬೇಕು ಎನ್ನುವ ಆದೇಶವನ್ನೂ ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿರುವುದಾಗಿ ಈ ವಿದ್ಯಮಾನದ ಅರಿವು ಇರುವ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಬನ್ಭೂಲ್ಪುರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಗಲಭೆಕೋರರ ವಿರುದ್ಧ 'ಗುಂಡು ಹಾರಿಸಿ' ಆದೇಶವೂ ಜಾರಿಯಲ್ಲಿದೆ.

ಬನ್‌ಭೂಲ್‌ಪುರ ಹಿಂಸಾಚಾರದಲ್ಲಿ ಈವರೆಗೆ ಮೂರರಿಂದ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 100 ಕ್ಕೂ ಹೆಚ್ಚು ಜನರು, ಮುಖ್ಯವಾಗಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಹಲ್ದ್ವಾನಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ, ಆದರೆ ನಗರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ, ಈ ಪ್ರದೇಶದ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಹೇಳಿದ್ದಾರೆ.

ಹಲ್ದ್‌ವಾನಿ ಹಿಂಸಾಚಾರ; ಇತ್ತೀಚಿನ ನ್ಯೂಸ್ ಅಪ್ಡೇಟ್ಸ್‌ ಹೀಗಿವೆ..

1) ಅಕ್ರಮವಾಗಿ ನಿರ್ಮಿಸಲಾದ ಮದರಸಾವನ್ನು ನೆಲಸಮಗೊಳಿಸಿದ ಕಾರಣ ಸ್ಥಳೀಯ ನಿವಾಸಿಗಳು ಹಿಂಸಾಚಾರಕ್ಕೆ ಇಳಿದರು. ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲೆಸೆತ ಆರಂಭಿಸಿದ್ದರಿಂದ ಕನಿಷ್ಠ 100 ಜನ ಗಾಯಗೊಂಡರು. ಈ ಘಟನೆಯ ಬಳಿಕ ಹಲ್ದ್‌ವಾನಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

2) ಹಲ್ದ್‌ವಾನಿ ನಗರದ ಬನ್‌ಭೂಲ್‌ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡವರ ಪೈಕಿ ಬಹುತೇಕರು ಪೊಲೀಸ್ ಸಿಬ್ಬಂದಿ, ನೆಲಸಮಗೊಳಿಸಿದ ಪುರಸಭೆಯ ಕಾರ್ಮಿರು ಎಂದು ಪೊಲೀಸರು ತಿಳಿಸಿದ್ದಾರೆ.

ಬನ್‌ಭೂಲ್‌ಪುರ ಅಕ್ರಮ ಮದರಸಾ ತೆರವು ಕಾರ್ಯಾಚರಣೆ ವಿಡಿಯೋ

3) ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮದರಸಾ ತೆರವುಗೊಳಿಸುವಂತೆ ಈ ಹಿಂದೆಯೇ ನೋಟಿಸ್ ನೀಡಲಾಗಿದೆ. ಆದರೆ ಅವರು ಅದನ್ನು ನಿರ್ಲಕ್ಷಿಸಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ ತಿಳಿಸಿದರು.

4) ಬನ್‌ಭೂಲ್ಪುರ ಪೊಲೀಸ್ ಠಾಣೆಯ ಹೊರಗೆ ನಡೆದ ಹಿಂಸಾಚಾರದಲ್ಲಿ ಕೆಲವರು ಗುಂಡು ಹಾರಿಸಿದ್ದಾರೆ. ಅವು ಕಾನೂನುಬಾಹಿರ ಅಥವಾ ಕಾನೂನುಬದ್ಧ ಶಸ್ತ್ರಾಸ್ತ್ರಗಳೇ ಎಂಬುದನ್ನು ಪರಿಶೀಲಿಸಿ ದೃಢಪಡಿಸಲಾಗುತ್ತಿದೆ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಹೇಳಿದ್ದಾರೆ.

5) ಗಲಭೆಕೋರರ ಕಡೆಯಿಂದ ಗುಂಡಿನ ದಾಳಿ ನಡೆದುದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಗುಂಡೇಟಿನಿಂದ ಗಾಯಗೊಂಡ ಮೂರರಿಂದ ನಾಲ್ಕು ಜನರನ್ನು ಆಸ್ಪತ್ರೆಗಳಿಗೆ ಕರೆತರಲಾಯಿತು. ಮೃತರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಅವರು ಪೊಲೀಸ್ ಗುಂಡಿನ ದಾಳಿಯಲ್ಲಿ ಅಥವಾ ಅವರ ನಡುವಿನ ಜನರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಕಾಯಬೇಕಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಂದನಾ ತಿಳಿಸಿದ್ದಾರೆ.

6) ಗಲಭೆಕೋರರು ಬನ್ಭೂಲ್ಪುರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಆ ಸಮಯದಲ್ಲಿ, ನಮ್ಮ ಪೊಲೀಸರು ಠಾಣೆಯಲ್ಲಿದ್ದರು. ಆದಾಗ್ಯೂ, ಪೊಲೀಸ್ ಪಡೆ ಅವರನ್ನು ನಿಯಂತ್ರಿಸಿತು

7) ಅವರನ್ನು ಪೊಲೀಸ್ ಠಾಣೆಗೆ ಪ್ರವೇಶಿಸಲು ಅನುಮತಿಸಲಿಲ್ಲ. ನಂತರ ಹಿಂಸಾಚಾರವು ಬನ್ಭೂಲ್ಪುರ ಬಳಿಯ ಗಾಂಧಿ ನಗರ ಪ್ರದೇಶಕ್ಕೆ ಹರಡಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಂದನಾ ವಿವರಿಸಿದರು.

8) ಬನ್‌ಭೂಲ್‌ಪುರ ಹಿಂಸಾಚಾರವು "ಪೂರ್ವಯೋಜಿತ ಮತ್ತು ಅಪ್ರಚೋದಿತ" ಮತ್ತು "ಕಲ್ಲುಗಳನ್ನು ಮನೆಗಳಲ್ಲಿ ಮೊದಲೇ ಸಂಗ್ರಹಿಸಲಾಗಿದೆ". "ಗಲಭೆಕೋರರು ಪೆಟ್ರೋಲ್ ಬಾಂಬ್ಗಳನ್ನು ಸಹ ಬಳಸಿದ್ದಾರೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಂದನಾ ಶಂಕಿಸಿದ್ದಾರೆ.

9) ಡಿಎಂ ಪ್ರಕಾರ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಬನ್ಭೂಲ್ಪುರದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲಾಗಿದೆ ಮತ್ತು ಮುಖ್ಯ ನಗರಕ್ಕೆ ಹರಡಲು ಅನುಮತಿಸಲಾಗಿಲ್ಲ.

10) "ಈ ಪ್ರದೇಶದಲ್ಲಿ ಅರೆಸೈನಿಕ ಪಡೆಗಳನ್ನು ಸಹ ನಿಯೋಜಿಸಲಾಗಿದೆ ಮತ್ತು ಹೆಚ್ಚಿನವರು ದಾರಿಯಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ನೆರೆಯ ಜಿಲ್ಲೆಗಳ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ" ಎಂದು ಅವರು ಹೇಳಿದರು.

ರಾಜಧಾನಿ ಡೆಹ್ರಾಡೂನ್‌ನಲ್ಲಿ ಉನ್ನತಾಧಿಕಾರಿಗಳ ಜೊತೆಗೆ ಸಿಎಂ ಸಭೆ

ರಾಜಧಾನಿ ಡೆಹ್ರಾಡೂನ್ ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮುನ್ಸಿಪಲ್ ಕಮಿಷನರ್ ಪಂಕಜ್ ಉಪಾಧ್ಯಾಯ, ನಗರ ಮ್ಯಾಜಿಸ್ಟ್ರೇಟ್ ರಿಚಾ ಸಿಂಗ್ ಮತ್ತು ಎಸ್ಡಿಎಂ ಪರಿತೋಷ್ ವರ್ಮಾ ಅವರ ಸಮ್ಮುಖದಲ್ಲಿ ನೆಲಸಮಗೊಳಿಸಲಾಗಿದೆ ಎಂದು ಎಸ್ಎಸ್ಪಿ ಮೀನಾ ತಿಳಿಸಿದ್ದಾರೆ.

(ಡೆಹ್ರಾಡೂನ್‌ನಿಂದ ನೀರಜ್ ಸಂತೋಷಿ ಅವರು ನೀಡಿದ ಮಾಹಿತಿ ಆಧರಿಸಿದ ಸುದ್ದಿ)

(This copy first appeared in Hindustan Times Kannada website. To read more like this please logon to kannada.hindustantime.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ