logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Irctc Updates: ರೈಲಲ್ಲಿ ರಾತ್ರಿ ಪ್ರಯಾಣ ಮಾಡ್ತಿರಾ, ಜೋರಾಗಿ ಮಾತನಾಡುವಂತಿಲ್ಲ, ಐಆರ್‌ಸಿಟಿಸಿ ಬಿಡುಗಡೆ ಮಾಡಿದ ಮಾರ್ಗಸೂಚಿ ತಪ್ಪದೇ ಓದಿ

IRCTC Updates: ರೈಲಲ್ಲಿ ರಾತ್ರಿ ಪ್ರಯಾಣ ಮಾಡ್ತಿರಾ, ಜೋರಾಗಿ ಮಾತನಾಡುವಂತಿಲ್ಲ, ಐಆರ್‌ಸಿಟಿಸಿ ಬಿಡುಗಡೆ ಮಾಡಿದ ಮಾರ್ಗಸೂಚಿ ತಪ್ಪದೇ ಓದಿ

Praveen Chandra B HT Kannada

Oct 22, 2023 09:57 PM IST

IRCTC Updates: ರೈಲಲ್ಲಿ ರಾತ್ರಿ ಪ್ರಯಾಣ ಮಾಡ್ತಿರಾ, ಐಆರ್‌ಸಿಟಿಸಿಯಿಂದ ಹೊಸ ಮಾರ್ಗಸೂಚಿ

    • Indian Railway Night Travel Guidelines: ಭಾರತೀಯ ರೈಲ್ವೆಯಲ್ಲಿ ರಾತ್ರಿ ಹೊತ್ತು ಪ್ರಯಾಣ ಮಾಡುವವರಿಗಾಗಿ ಐಆರ್‌ಸಿಟಿಸಿಯು ವಿಶೇಷ ಹೊಸ ಮಾರ್ಗಸೂಚಿಗಳನ್ನು  ಈಗಾಗಲೇ ಪ್ರಕಟಿಸಿದೆ. ರಾತ್ರಿ 10 ಗಂಟೆಯ ಬಳಿಕ ರೈಲಲ್ಲಿ ಪ್ರಯಾಣಿಸುವವರು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ.
IRCTC Updates: ರೈಲಲ್ಲಿ ರಾತ್ರಿ ಪ್ರಯಾಣ ಮಾಡ್ತಿರಾ, ಐಆರ್‌ಸಿಟಿಸಿಯಿಂದ ಹೊಸ ಮಾರ್ಗಸೂಚಿ
IRCTC Updates: ರೈಲಲ್ಲಿ ರಾತ್ರಿ ಪ್ರಯಾಣ ಮಾಡ್ತಿರಾ, ಐಆರ್‌ಸಿಟಿಸಿಯಿಂದ ಹೊಸ ಮಾರ್ಗಸೂಚಿ

ರಾತ್ರಿ ಹೊತ್ತು ರೈಲಲ್ಲಿ ಪ್ರಯಾಣಿಸುವವರು ನೀವಾಗಿದ್ದರೆ ಪ್ರತಿನಿತ್ಯ ಒಂದಲ್ಲ ಒಂದು ಅನುಭವ ನಿಮಗೆ ಉಂಟಾಗಬಹುದು. ಕೆಲವೊಮ್ಮೆ ಸಹ ಪ್ರಯಾಣಿಕರು ಜೋರಾಗಿ ಮಾತನಾಡುವುದು ನಿಮಗೆ ಕಿರಿಕಿರಿ ಅನಿಸಬಹುದು. ಇನ್ನು ಕೆಲವರು ರಾತ್ರಿಯಿಡಿ ಲೈಟ್‌ ಆನ್‌ ಆಗಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಹೆಡ್‌ಪೋನ್‌ ಬಳಸದೆ ಲೌಡ್‌ ಸ್ಪೀಕರ್‌ನಲ್ಲಿ ಸಿನಿಮಾ ಹಾಡು ಕೇಳುತ್ತಿರಬಹುದು, ಸಿನಿಮಾ ನೋಡುತ್ತಿರಬಹುದು. ಇಂತಹ ಕಿರಿಕಿರಿಯಿಂದ ಜರ್ಜರಿತರಾಗಿರುವವರಿಗೆ ಇದು ನಿಜಕ್ಕೂ ಸಿಹಿಸುದ್ದಿಯಾಗಿದೆ. ಭಾರತೀಯ ರೈಲ್ವೆ ಕೆಟರಿಂಗ್‌ ಆಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ರಾತ್ರಿ ಪ್ರಯಾಣಿಸುವವರಿಗಾಗಿ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

Dhruv Rathee: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಯಾರು? ಈತ ಮೋದಿ ಸರ್ಕಾರವನ್ನೇ ಟಾರ್ಗೆಟ್‌ ಮಾಡಲು ಕಾರಣವೇನು?

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆಗಾಗಿ ಭಾರತೀಯ ರೈಲ್ವೆಯು ಈ ನಿಯಮಗಳನ್ನು ಹೊರತಂದಿದೆ. ರಾತ್ರಿ 10 ಗಂಟೆಯ ಬಳಿಕ ರೈಲಲ್ಲಿ ಪ್ರಯಾಣಿಸುವವರು ಈ ಮುಂದಿನ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ.

  1. ರಾತ್ರಿ 10 ಗಂಟೆಯ ಬಳಿಕ ರೈಲಿನಲ್ಲಿ ಪ್ರಯಾಣಿಸುವವರು ತಮ್ಮ ಸೀಟಿನಲ್ಲಿ, ಕಂಪಾರ್ಟ್‌ಮೆಂಟ್‌ನಲ್ಲಿ ಅಥವಾ ಕೋಚ್‌ನಲ್ಲಿ ದೊಡ್ಡ ಧ್ವನಿಯಲ್ಲಿ ತಮ್ಮ ಮೊಬೈಲ್‌ ಫೋನ್‌ನಲ್ಲಿ ಮಾತನಾಡುವಂತಿಲ್ಲ.
  2. ರೈಲಿನಲ್ಲಿ ರಾತ್ರಿ ಪ್ರಯಾಣಿಸುವಾಗ ಹೆಡ್‌ಫೋನ್‌ ಬಳಸದೆ ಲೌಡ್‌ ಸ್ಪೀಕರ್‌ನಲ್ಲಿ ಮ್ಯೂಸಿಕ್‌ ಕೇಳುವಂತಿಲ್ಲ, ಸಿನಿಮಾ ಪ್ಲೇ ಮಾಡುವಂತೆ ಇಲ್ಲ.
  3. ರಾತ್ರಿ 10 ಗಂಟೆಯ ಬಳಿಕ ರೈಲ್ವೆ ಪ್ರಯಾಣಿಕರು ಲೈಟ್‌ ಆನ್‌ ಮಾಡಿ ಇಡುವಂತೆ ಇಲ್ಲ. ನೈಟ್‌ ಲೈಟ್‌ (ಮಂದ ಬೆಳಕಿನ ಸಣ್ಣ ಲೈಟ್‌) ಬಳಸಲು ಅನುಮತಿ ಇದೆ.
  4. ರೈಲಿನಲ್ಲಿ ಧೂಮಪಾನ, ಮದ್ಯಪಾನ ಅಥವಾ ಸಾರ್ವಜನಿಕರಿಗೆ ಸಹ್ಯವಾಗದ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಇಲ್ಲ.
  5. ಬೆಂಕಿ ಹತ್ತಿಕೊಳ್ಳುವ ಅಥವಾ ದಹನಕಾರಿ ವಸ್ತುಗಳನ್ನು ರೈಲಿನಲ್ಲಿ ಕೊಂಡೊಯ್ಯಬಾರದು. ಇದು ಭಾರತೀಯ ರೈಲ್ವೆಯ ನಿಯಮಗಳಿಗೆ ವಿರುದ್ಧವಾಗಿದೆ.
  6. ಗುಂಪಾಗಿ ಪ್ರಯಾಣಿಸುವ ಪ್ರಯಾಣಿಕರು ರಾತ್ರಿ 10 ಗಂಟೆಯ ಬಳಿಕ ಇನ್ನೊಬ್ಬರಿಗೆ ತೊಂದರೆಯಾಗುವಂತೆ ಮಾತನಾಡುವಂತೆ ಇಲ್ಲ.
  7. ರಾತ್ರಿ ಹತ್ತು ಗಂಟೆ ಬಳಿಕ ರೈಲಿನಲ್ಲಿ ಆಹಾರ ಸರ್ವ್‌ ಮಾಡುವಂತೆ ಇಲ್ಲ. ಆದರೆ, ರೈಲ್ವೆಯ ಇ-ಕೇಟರಿಂಗ್‌ ಸರ್ವೀಸ್‌ನಿಂದ ಮೊದಲೇ ಆರ್ಡರ್‌ ಮಾಡಿದ ಆಹಾರ ಅಥವಾ ಬ್ರೇಕ್‌ಫಾಸ್ಟ್‌ ಸೇವಿಸಬಹುದು.
  8. ಮಧ್ಯದ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಸೀಟ್‌ ತೆರೆಯಲು ಬಯಸಿದರೆ ಕೆಳಗಿನ ಬರ್ತ್‌ನವರು ದೂರು ನೀಡುವಂತೆ ಇಲ್ಲ. ಆದರೆ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ತಮ್ಮ ಮಧ್ಯಮ ಸೀಟ್‌ನಲ್ಲಿ ಆ ಸೀಟ್‌ನ ಪ್ರಯಾಣಿಕರು ಮಲಗಬಹುದು.

ರೈಲು ಸಿಬ್ಬಂದಿಗಳಿಗೂ ಹೊಸ ನಿಯಮ ಅನ್ವಯ

  1. ರೈಲು ಟಿಕೆಟ್‌ ಪರೀಕ್ಷೆ ಮಾಡುವ ಟಿಟಿಇ ಅವರು ರಾತ್ರಿ 10 ಗಂಟೆ ಬಳಿಕ ಪ್ರಯಾಣಿಕರ ಟಿಕೆಟ್‌ ಪರಿಶೀಲನೆಗೆ ಬರುವಂತೆ ಇಲ್ಲ.
  2. ರೈಲು ಪ್ರಯಾಣಿಕರು ಇತರೆ ಪ್ರಯಾಣಿಕರ ಕುರಿತು ಮಾಡುವ ದೂರುಗಳನ್ನು ಆಲಿಸಿ ಕ್ರಮ ಕೈಗೊಳ್ಳಲು ರೈಲಿನ ಸಿಬ್ಬಂದಿ ರಾತ್ರಿ ಇರಬೇಕು.
  3. ಎಲ್ಲಾದರೂ ನಿಗದಿತ ನಿಲ್ದಾಣದಲ್ಲಿ ಆಗಮಿಸುವ ಪ್ರಯಾಣಿಕ ಬಾರದೆ ಇದ್ದರೆ ಒಂದು ಗಂಟೆ ಬಳಿಕ ಅಥವಾ ಎರಡು ನಿಲ್ದಾಣ ಕಳೆದ ಬಳಿಕವಷ್ಟೇ ಆ ಸೀಟನ್ನು ಇತರೆ ಪ್ರಯಾಣಿಕರಿಗೆ ಟಿಟಿಇ ಹಂಚಿಕೆ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ