ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cylinder Price: ಸಿಲಿಂಡರ್ ಬೆಲೆ 200 ರೂಪಾಯಿ ಕಡಿತ, ಬೆಂಗಳೂರು ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೀಗಿದೆ

Cylinder Price: ಸಿಲಿಂಡರ್ ಬೆಲೆ 200 ರೂಪಾಯಿ ಕಡಿತ, ಬೆಂಗಳೂರು ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೀಗಿದೆ

Reshma HT Kannada

Aug 30, 2023 07:57 AM IST

ಸಿಲಿಂಡರ್‌ ದರ

    • LPG cylinder price: ರಕ್ಷಾಬಂಧನ ಹಾಗೂ ಓಣಂ ಹಬ್ಬದ ಸಂಭ್ರಮದ ನಡುವೆ ಎಲ್‌ಪಿಜಿ ಸಿಲಿಂಡರ್‌ ದರ ಇಳಿಸುವ ಮೂಲಕ ದೇಶದ ಜನತೆಗೆ ಖುಷಿ ನೀಡಿದೆ ಕೇಂದ್ರ ಸರ್ಕಾರ. ನಿನ್ನೆ (ಆಗಸ್ಟ್‌ 29) ಸಿಲಿಂಡರ್‌ ದರವನ್ನು 200 ರೂ. ಇಳಿಕೆ ಮಾಡಿದ್ದಾಗಿ ಸರ್ಕಾರ ಘೋಷಿಸಿದೆ. ದರ ಇಳಿಕೆಯ ಬಳಿಕ ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಿಲಿಂಡರ್‌ ದರ ಎಷ್ಟಿದೆ ನೋಡಿ. 
ಸಿಲಿಂಡರ್‌ ದರ
ಸಿಲಿಂಡರ್‌ ದರ

ನವದೆಹಲಿ: ಸತತ ಹಣದುಬ್ಬರದಿಂದ ಕಂಗೆಟ್ಟಿದ್ದ ದೇಶದ ಜನರಿಗೆ ನಿನ್ನೆ (ಆಗಸ್ಟ್‌ 29) ಖುಷಿ ಸುದ್ದಿಯೊಂದು ಸಿಕ್ಕಿತ್ತು. ಬೆಲೆ ಏರಿಕೆಯ ಸುದ್ದಿಗಳೇ ಕೇಳುತ್ತಿದ್ದ ಇತ್ತೀಚಿನ ದಿನಗಳಲ್ಲಿ ನಿನ್ನೆ ಬೆಲೆ ಇಳಿಕೆಯ ಸುದ್ದಿ ಕೇಳಿ ಸಾಮಾನ್ಯ ವರ್ಗದ ಜನರು ಖುಷಿ ಪಟ್ಟಿದ್ದಾರೆ. ಹೌದು, ನಿನ್ನೆ ನೈಸರ್ಗಿಕ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಇಳಿಕೆ ಮಾಡುವಂತೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದರು.

ಟ್ರೆಂಡಿಂಗ್​ ಸುದ್ದಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಬೆಲೆ ಇಳಿಕೆ ನಿರ್ಧಾರವು ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ. 14 ಕೆಜೆ ತೂಕದ ಗ್ಯಾಸ್ ಸಿಲಿಂಡರ್ ಮೇಲೆ ಉಜ್ವಲ ಯೋಜನೆ ಪಡೆಯುವ ಸಬ್ಸಿಡಿಯ ಒಟ್ಟು ಮೊತ್ತವು 400 ರೂಪಾಯಿ ಆಗಲಿದೆ.

ʼರಕ್ಷಾಬಂಧನ ಹಾಗೂ ಓಣಂ ಸಂಭಮ್ರದಲ್ಲಿರುವವರಿಗೆ ಪ್ರಧಾನಿ ಮೋದಿ ಅವರ ಕಡೆಯಿಂದ ಇದು ಗಿಫ್ಟ್‌ʼ ಎಂದು ಅನುರಾಗ್‌ ಠಾಕೂರ್‌ ತಿಳಿಸಿದ್ದರು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಉಜ್ವಲ್ ಯೋಜನೆಯಡಿ ಹೊಸದಾಗಿ 75 ಲಕ್ಷ ಮನೆಗಳಿಂದ ಸಿಲಿಂಡರ್ ಸಂಪರ್ಕ ಒದಗಿಸಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಳಿಕೆಯ ನಡುವೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ತಿಳಿಯೋಣ.

ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳ ಸಿಲಿಂಡರ್‌ ದರ

200 ರೂ. ಇಳಿಕೆಯಾದ ನಂತರ ನವದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ ದರ 903 ರೂ ಇದೆ. ಬೆಂಗಳೂರಿನಲ್ಲಿ ಸಿಲಿಂಡರ್‌ ದರ ಸದ್ಯ 905.50 ರೂ ಇದೆ. ಕೊಲ್ಕತ್ತಾದಲ್ಲಿ 903.00 ರೂ. ಇದೆ. ಮುಂಬೈನಲ್ಲಿ 1,102.50 ರೂ ಇದೆ. ಚೆನ್ನೈನಲ್ಲಿ 1,118.50 ರೂ ಇದ್ದರೆ, ಗುರುಗ್ರಾಮದಲ್ಲಿ 911.50 ರೂ ಇದೆ. ನೊಯ್ಡಾದಲ್ಲಿ 14.2 ಕೆಜಿ ಸಿಲಿಂಡರ್‌ ದರ 1,100.50 ರೂ ಇದೆ. ಭುವನೇಶ್ವರದಲ್ಲಿ 1,129.00 ರೂ ಇದ್ದರೆ, ಚಂಡೀಗಡದಲ್ಲಿ 912.50 ರೂ ಇದೆ.

ಹೈದರಾಬಾದ್‌ನಲ್ಲಿ ಸಿಲಿಂಡರ್‌ ದರ 1,155.00 ರೂ ಇದ್ದರೆ, ಜೈಪುರದಲ್ಲಿ 1,160.50 ರೂ ಇದೆ. ಲಕ್ನೋದಲ್ಲಿ 1,140.50, ಪಾಟ್ನಾದಲ್ಲಿ 1,001.00 ಹಾಗೂ ತಿರುವಂತನಂತಪುರದಲ್ಲಿ 1,112.00 ರೂ ಇದೆ.

ಇದನ್ನೂ ಓದಿ

ಅಡುಗೆ ಅನಿಲ ದರ ಕಡಿತಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ; 200 ರೂಪಾಯಿ ಕಡಿಮೆಯಾಯ್ತು ಎಲ್‌ಪಿಜಿ

ದೆಹಲಿ: ಕೇಂದ್ರ ಸಚಿವ ಸಂಪುಟವು ನೈಸರ್ಗಿಕ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಷ್ಟು ಕಡಿಮೆ ಮಾಡಲು ಸಮ್ಮತಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಬೆಲೆ ಇಳಿಕೆ ನಿರ್ಧಾರವು ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ. ಮುಂದಿನಗಳಲ್ಲಿ ಫಲಾನುಭವಿಗಳು ಹೆಚ್ಚುವರಿಯಾಗಿ 200 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ. 14 ಕೆಜೆ ತೂಕದ ಗ್ಯಾಸ್ ಸಿಲಿಂಡರ್ ಮೇಲೆ ಉಜ್ವಲ ಯೋಜನೆ ಪಡೆಯುವ ಸಬ್ಸಿಡಿಯ ಒಟ್ಟು ಮೊತ್ತವು 400 ರೂಪಾಯಿ ಆಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ