ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Christmas Tree: ಬಾಹ್ಯಾಕಾಶದಲ್ಲಿ ಕಂಡಿತು ಕ್ರಿಸ್‌ ಮಸ್‌ ಟ್ರೀ : ನಾಸಾ ಬಿಡುಗಡೆ ಮಾಡಿದ ಬ್ರಹ್ಮಾಂಡದ ವಿಶೇಷ ಚಿತ್ರದಲ್ಲೇನಿದೆ

Christmas tree: ಬಾಹ್ಯಾಕಾಶದಲ್ಲಿ ಕಂಡಿತು ಕ್ರಿಸ್‌ ಮಸ್‌ ಟ್ರೀ : ನಾಸಾ ಬಿಡುಗಡೆ ಮಾಡಿದ ಬ್ರಹ್ಮಾಂಡದ ವಿಶೇಷ ಚಿತ್ರದಲ್ಲೇನಿದೆ

HT Kannada Desk HT Kannada

Dec 20, 2023 01:17 PM IST

ನಾಸಾ ಬಿಡುಗಡೆ ಮಾಡಿರುವ ಕ್ರಿಸ್‌ಮಸ್‌ ಟ್ರೀ ಹೋಲುವ ಬ್ರಹ್ಮಾಂಡದ ಚಿತ್ರ

    • Cosmic Christmas tree ಇನ್ನೇನು ಈ ವರ್ಷದ ಕ್ರಿಸ್‌ಮಸ್‌ ಬಂದೇ ಬಿಡ್ತು. ಕ್ರಿಸ್‌ಮಸ್ ಟ್ರೀ ಹೋಲುವ ಬ್ರಹ್ಮಾಂಡದ ಚಿತ್ರವನ್ನು ಅಮೆರಿಕದ ನಾಸಾ( NASA) ಸಂಸ್ಥೆ ಬಿಡುಗಡೆ ಮಾಡಿ ಚರ್ಚೆ ಹುಟ್ಟು ಹಾಕಿದೆ.
ನಾಸಾ ಬಿಡುಗಡೆ ಮಾಡಿರುವ ಕ್ರಿಸ್‌ಮಸ್‌ ಟ್ರೀ ಹೋಲುವ ಬ್ರಹ್ಮಾಂಡದ ಚಿತ್ರ
ನಾಸಾ ಬಿಡುಗಡೆ ಮಾಡಿರುವ ಕ್ರಿಸ್‌ಮಸ್‌ ಟ್ರೀ ಹೋಲುವ ಬ್ರಹ್ಮಾಂಡದ ಚಿತ್ರ

ಬಾಹ್ಯಾಕಾಶದಲ್ಲೂ ಕ್ರಿಸ್‌ ಮಸ್‌ ಟ್ರೀ ಇದೆಯಾ?. ಇಂತಹದೊಂದು ಕುತೂಹಲದ ಪ್ರಶ್ನೆಗೆ ಅಮೆರಿಕಾದ ನಾಸಾ(National Aeronautics and Space Administration) ಬಿಡುಗಡೆ ಮಾಡಿರುವ ಛಾಯಾಚಿತ್ರವೊಂದು ಉತ್ತರವನ್ನು ನೀಡುತ್ತದೆ. ಅದು ನಾಸಾ ಬಾಹ್ಯಾಕಾಶದಲ್ಲಿ ಸೆರೆ ಹಿಡಿದ ಚಿತ್ರ. ಆದರೂ ಇದು ಪ್ರತ್ಯೇಕ ಬ್ರಹ್ಮಾಂಡದ( Cosmos) ಸ್ವರೂಪವನ್ನೇ ಸಾರುತ್ತದೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಹೋಲಿಕೆ ಸೂಕ್ತ ವಿವರಣೆಯೊಂದಿಗೆ ಈ ಛಾಯಾಚಿತ್ರ ಬಿಡುಗಡೆ ಮಾಡಲಾಗಿದೆ. ಒಮ್ಮೆಲೆ ನೋಡಿದರೆ ಇದು ಕ್ರಿಸ್‌ ಮಸ್‌ ಮರವೇ. ಬಾಹ್ಯಾಕಾಶದಲ್ಲೂ ಕ್ರಿಸ್‌ಮಸ್‌ ಆಚರಣೆ ಇದೆಯೇ ಎನ್ನುವ ಒಕ್ಕಣೆಯಂತೂ ಕುತೂಹಲವನ್ನು ಖಂಡಿತಾ ಹೆಚ್ಚಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಇದು ನಮ್ಮೂರ ಚರ್ಚ್‌ಗಳಲ್ಲಿ ರೂಪಿಸುವ ಕ್ರಿಸ್‌ಮಸ್‌ ಟ್ರೀ ಮಾದರಿಯ ಚಿತ್ರ. ಹಸಿರು ಮರ, ಅದರ ಸುತ್ತಲೂ ಹೊಳೆಯುವ ನಕ್ಷತ್ರಗಳ ಸಾಲು ಸಾಲು. ಅಪ್ಪಟ ಅದೇ ಚಿತ್ರವನ್ನು ನಾಸಾ ಬಿಡುಗಡೆ ಮಾಡಿರುವ ಚಿತ್ರವು ಹೋಲುತ್ತದೆ.

ಅದೂ ಕ್ರಿಸ್‌ಮಸ್‌ ಹಬ್ಬದ ಸಡಗರ ಜಗತ್ತಿನಾದ್ಯಂತ ಶುರುವಾಗಿದೆ. ಇನ್ನೇನು ಹಬ್ಬದ ದಿನದ ಬಂದೇ ಬಿಟ್ಟಿತು ಎನ್ನುವಾಗಲೇ ನಾಸಾ ಇಂತಹದೊಂದು ವಿಶೇಷ ಚಿತ್ರ ಎನ್‌ಜಿಸಿ 2264( NGC 2264) ಬಿಡುಗಡೆ ಮಾಡಿದೆ.

ಇದು ಸಂಯೋಜಿತ ಚಿತ್ರ. ಅಲ್ಲಿನ ಸನ್ನಿವೇಶವನ್ನು ನೋಡಿದರೆ ಅದರ ಬಣ್ಣ, ಅದರ ಸುತ್ತಲೂ ತಿರುಗುವ ಸಹಸ್ರಾರು ನಕ್ಷತ್ರಗಳನ್ನು ಸಂಯೋಜಿಸಿ ವೀಕ್ಷಿಸಿದರೆ ಖಂಡಿತವಾಗಿಯೂ ಕ್ರಿಸ್ಮಸ್‌ ಟ್ರೀ ರೀತಿಯೇ ಕಾಣುತ್ತದೆ. ಇದರಲ್ಲಿ ಇನ್ನೂ ಹೆಚ್ಚು ಬೆಳಕಿನ ಹಾಗೂ ನಕ್ಷತ್ರಗಳ ಮಿನುಗುವಿಕೆಯ ಚಿತ್ರಗಳಿವೆ. ಇದನ್ನು ಕ್ರಿಸ್‌ಮಸ್‌ ಟ್ರೀಗೆ ಹೋಲಿಕೆಯಾಗುವ ರೀತಿಯಲ್ಲಿಯೇ ತಿರುಗಿಸಿ ಸ್ಪಷ್ಟ ರೂಪ ನೀಡಲಾಗಿದೆ.

ನಾನಾ ಇಲ್ಲಿನ ನಕ್ಷತ್ರಗಳು, ಬಣ್ಣದ ಎಲ್ಲ ಅಂಶಗಳನ್ನು ಆಧರಿಸಿ ಬಾಹ್ಯಾಕಾಶ ತಜ್ಞರಿಂದ ವಿಸ್ತೃತ ವಿವರಣೆಯನ್ನೂ ಪಡೆದುಕೊಂಡಿದೆ. ನಾಸಾ ನೀಡುವ ವಿವರಣೆ ಪ್ರಕಾರ, ಈ ಗುಂಪು ಒಂದರಿಂದ ಐದು ಮಿಲಿಯನ್ ವರ್ಷಗಳ ನಡುವಿನ ನಕ್ಷತ್ರಗಳನ್ನು ಹೊಂದಿವೆ. ಇದು ನಮ್ಮ ಗ್ರಹದ ಕಾಸ್ಮಿಕ್ ನೆರೆಹೊರೆಯಾಗಿದೆ . ಭೂಮಿಯಿಂದ ಕೇವಲ 2,500 ಬೆಳಕಿನ ವರ್ಷಗಳ ದೂರದಲ್ಲಿದೆ.

ಕ್ರಿಸಮಸ್‌ ಹಬ್ಬಕ್ಕೂ ಮುನ್ನ ಬಿಡುಗಡೆಯಾದ ಈ ವಿಶೇಷ ಚಿತ್ರ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ