logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nasa News: ಮುಂದಿನ 48 ಗಂಟೆಗಳಲ್ಲಿ ಭೂಮಿಯತ್ತ 5 ಕ್ಷುದ್ರಗ್ರಹಗಳು, ಅವುಗಳಲ್ಲಿ ಒಂದು ರಾಕ್ಷಸ ಗಾತ್ರದ ಕ್ಷುದ್ರಗ್ರಹ, ನಾಸಾದಿಂದ ಮಾಹಿತಿ

NASA News: ಮುಂದಿನ 48 ಗಂಟೆಗಳಲ್ಲಿ ಭೂಮಿಯತ್ತ 5 ಕ್ಷುದ್ರಗ್ರಹಗಳು, ಅವುಗಳಲ್ಲಿ ಒಂದು ರಾಕ್ಷಸ ಗಾತ್ರದ ಕ್ಷುದ್ರಗ್ರಹ, ನಾಸಾದಿಂದ ಮಾಹಿತಿ

Aug 31, 2023 04:50 PM IST

Asteroids approaching Earth: ಮುಂದಿನ 48 ಗಂಟೆಗಳಲ್ಲಿ ಭೂಮಿಯತ್ತ ಐದು ಬೃಹತ್‌ ಕ್ಷುದ್ರಗ್ರಹಗಳು ಬರಲಿವೆ. ವಿಮಾನದಿಂದ ಮನೆಯ ಗಾತ್ರದವರೆಗಿನ ವಿವಿಧ ಗಾತ್ರದ ಕ್ಷುದ್ರಗ್ರಹಗಳು ಭೂಮಿಯ ಸನಿಹದಲ್ಲಿ ಹಾದು ಹೋಗಲಿವೆ. ಈ ಕ್ಷುದ್ರಗ್ರಹಗಳಿಂದ ಭೂಮಿಗೆ ಅಪಾಯವಿದೆಯೇ ಎಂದು ತಿಳಿಯೋಣ.

Asteroids approaching Earth: ಮುಂದಿನ 48 ಗಂಟೆಗಳಲ್ಲಿ ಭೂಮಿಯತ್ತ ಐದು ಬೃಹತ್‌ ಕ್ಷುದ್ರಗ್ರಹಗಳು ಬರಲಿವೆ. ವಿಮಾನದಿಂದ ಮನೆಯ ಗಾತ್ರದವರೆಗಿನ ವಿವಿಧ ಗಾತ್ರದ ಕ್ಷುದ್ರಗ್ರಹಗಳು ಭೂಮಿಯ ಸನಿಹದಲ್ಲಿ ಹಾದು ಹೋಗಲಿವೆ. ಈ ಕ್ಷುದ್ರಗ್ರಹಗಳಿಂದ ಭೂಮಿಗೆ ಅಪಾಯವಿದೆಯೇ ಎಂದು ತಿಳಿಯೋಣ.
Asteroid 2023 QH:  ಆಸ್ಟ್ರಾಯ್ಡ್‌ 2023  ಕ್ಯೂಎಚ್‌ ಎಂಬ ಕ್ಷುದ್ರಗ್ರಹವು ಇಂದು ಭೂಮಿಯ ಸನಿಹಕ್ಕೆ ಬರಲಿದೆ ಎಂದು ನಾಸಾದ ಜೆಪಿಎಲ್‌ ಕಂಡುಕೊಂಡಿದೆ. ಇದು ಗಾತ್ರದಲ್ಲಿ ಸುಮಾರು 200ಅಡಿ ಇರಲಿದೆ. ಇದು ಭೂಮಿಯತ್ತ ಗಂಟೆಗೆ 57,259 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಇದು ಭೂಮಿಯ 4.6 ದಶಲಕ್ಷ ಸಮೀಪಕ್ಕೆ ಆಗಮಿಸಲಿದೆ. ಇದರ ಸಣ್ಣ ಗಾತ್ರದಿಂದಾಗಿ ಅತ್ಯಧಿಕ ವೇಗದಲ್ಲಿ ಬರಲಿದೆ. ಇದು ವಿಮಾನದಂತೆ ವೇಗವಾಗಿ ಬರಲಿದ್ದು, ಎಲ್ಲಾದರೂ ಭೂಮಿಗೆ ಅಪ್ಪಳಿಸಿದರೆ ದೊಡ್ಡ ನಗರವೊಂದನ್ನು ನಾಶಪಡಿಸುವ ಸಾಮರ್ಥ್ಯವಿದೆ. 
(1 / 5)
Asteroid 2023 QH:  ಆಸ್ಟ್ರಾಯ್ಡ್‌ 2023  ಕ್ಯೂಎಚ್‌ ಎಂಬ ಕ್ಷುದ್ರಗ್ರಹವು ಇಂದು ಭೂಮಿಯ ಸನಿಹಕ್ಕೆ ಬರಲಿದೆ ಎಂದು ನಾಸಾದ ಜೆಪಿಎಲ್‌ ಕಂಡುಕೊಂಡಿದೆ. ಇದು ಗಾತ್ರದಲ್ಲಿ ಸುಮಾರು 200ಅಡಿ ಇರಲಿದೆ. ಇದು ಭೂಮಿಯತ್ತ ಗಂಟೆಗೆ 57,259 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಇದು ಭೂಮಿಯ 4.6 ದಶಲಕ್ಷ ಸಮೀಪಕ್ಕೆ ಆಗಮಿಸಲಿದೆ. ಇದರ ಸಣ್ಣ ಗಾತ್ರದಿಂದಾಗಿ ಅತ್ಯಧಿಕ ವೇಗದಲ್ಲಿ ಬರಲಿದೆ. ಇದು ವಿಮಾನದಂತೆ ವೇಗವಾಗಿ ಬರಲಿದ್ದು, ಎಲ್ಲಾದರೂ ಭೂಮಿಗೆ ಅಪ್ಪಳಿಸಿದರೆ ದೊಡ್ಡ ನಗರವೊಂದನ್ನು ನಾಶಪಡಿಸುವ ಸಾಮರ್ಥ್ಯವಿದೆ. (Pexels)
Asteroid 2023 QB2: ಸೆಪ್ಟೆಂಬರ್‌ 1ರಂದು ಭೂಮಿಯ ಸಮೀಪಕ್ಷಕೆ ಬರುವ ಕ್ಷುದ್ರಗ್ರಹದ ಹೆಸರು ಆಸ್ಟ್ರಾಯ್ಡ್‌ 2023 ಕ್ಯುಬಿ2. ಇದು ಮನೆ ಗಾತ್ರದ ಕ್ಷುದ್ರಗ್ರಹವೆಂದು ನಾಸಾ ತಿಳಿಸಿದೆ. ಇದು ಗಂಟೆಗೆ 25,793 ಗರಿಷ್ಠ ವೇಗದಲ್ಲಿ ಆಗಮಿಸುತ್ತಿದೆ. ಇದು ಭೂಮಿಯಿಂದ 31.9 ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋಗಲಿದೆ. 
(2 / 5)
Asteroid 2023 QB2: ಸೆಪ್ಟೆಂಬರ್‌ 1ರಂದು ಭೂಮಿಯ ಸಮೀಪಕ್ಷಕೆ ಬರುವ ಕ್ಷುದ್ರಗ್ರಹದ ಹೆಸರು ಆಸ್ಟ್ರಾಯ್ಡ್‌ 2023 ಕ್ಯುಬಿ2. ಇದು ಮನೆ ಗಾತ್ರದ ಕ್ಷುದ್ರಗ್ರಹವೆಂದು ನಾಸಾ ತಿಳಿಸಿದೆ. ಇದು ಗಂಟೆಗೆ 25,793 ಗರಿಷ್ಠ ವೇಗದಲ್ಲಿ ಆಗಮಿಸುತ್ತಿದೆ. ಇದು ಭೂಮಿಯಿಂದ 31.9 ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋಗಲಿದೆ. (Unsplash)
Asteroid 2023 QZ1: ನಾಳೆ ಅಂದರೆ ಸೆಪ್ಟೆಂಬರ್‌ 1ರಂದು ವಿಮಾನ ಗಾತ್ರದ ಕ್ಯೂಝಡ್‌1 ಎಂಬ ಕ್ಷುದ್ರಗ್ರಹ ಭೂಮಿಯ ಸಮೀಪಕ್ಕೆ ಬರಲಿದೆ. ಇದು ಗಂಟೆಗೆ 35,337 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಇದರ ಗಾತ್ರ 160 ಅಡಿ ಇದೆ. ಭೂಮಿಯಿಂದ 6.97 ದಶಲಕ್ಷ ದೂರದಲ್ಲಿ ಹಾದು ಹೋಗಲಿದೆ.  
(3 / 5)
Asteroid 2023 QZ1: ನಾಳೆ ಅಂದರೆ ಸೆಪ್ಟೆಂಬರ್‌ 1ರಂದು ವಿಮಾನ ಗಾತ್ರದ ಕ್ಯೂಝಡ್‌1 ಎಂಬ ಕ್ಷುದ್ರಗ್ರಹ ಭೂಮಿಯ ಸಮೀಪಕ್ಕೆ ಬರಲಿದೆ. ಇದು ಗಂಟೆಗೆ 35,337 ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. ಇದರ ಗಾತ್ರ 160 ಅಡಿ ಇದೆ. ಭೂಮಿಯಿಂದ 6.97 ದಶಲಕ್ಷ ದೂರದಲ್ಲಿ ಹಾದು ಹೋಗಲಿದೆ.  (Pixels)
Asteroid 2023 QU: ನಾಡಿದ್ದು ಸೆಪ್ಟೆಂಬರ್‌ 2ರಂದು ಕ್ಷುದ್ರಗ್ರಹ ಕ್ಯುಯು ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಇದು 35,337 ಕಿ.ಮೀ. ವೇಗ ಹೊಂದಿರಲಿದೆ. ಇದು ವಿಮಾನ ಗಾತ್ರದ ಕ್ಷುದ್ರಗ್ರಹ. 100 ಅಡಿ ದೊಡ್ಡದಾಗಿದೆ. ಇದು ಭೂಮಿಯಿಂದ 52 ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋಗಲಿದೆ.  
(4 / 5)
Asteroid 2023 QU: ನಾಡಿದ್ದು ಸೆಪ್ಟೆಂಬರ್‌ 2ರಂದು ಕ್ಷುದ್ರಗ್ರಹ ಕ್ಯುಯು ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಇದು 35,337 ಕಿ.ಮೀ. ವೇಗ ಹೊಂದಿರಲಿದೆ. ಇದು ವಿಮಾನ ಗಾತ್ರದ ಕ್ಷುದ್ರಗ್ರಹ. 100 ಅಡಿ ದೊಡ್ಡದಾಗಿದೆ. ಇದು ಭೂಮಿಯಿಂದ 52 ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋಗಲಿದೆ.  (Pixabay)
Asteroid 2017 BY32: ನಾಡಿದ್ದು ಈ ಕ್ಷುದ್ರಗ್ರಹವೂ ಭೂಮಿಯ ಸಮೀಪಕ್ಕೆ ಬರುವ ನಿರೀಕ್ಷೆಯಿದೆ. ಇದು 58 ಅಡಿ ಗಾತ್ರದ ಪುಟಾಣಿ ಕ್ಷುದ್ರಗ್ರಹ. ಇದು ಗಂಟೆಗೆ 12,446  ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. 
(5 / 5)
Asteroid 2017 BY32: ನಾಡಿದ್ದು ಈ ಕ್ಷುದ್ರಗ್ರಹವೂ ಭೂಮಿಯ ಸಮೀಪಕ್ಕೆ ಬರುವ ನಿರೀಕ್ಷೆಯಿದೆ. ಇದು 58 ಅಡಿ ಗಾತ್ರದ ಪುಟಾಣಿ ಕ್ಷುದ್ರಗ್ರಹ. ಇದು ಗಂಟೆಗೆ 12,446  ಕಿ.ಮೀ. ವೇಗದಲ್ಲಿ ಆಗಮಿಸುತ್ತಿದೆ. (Pixabay)

    ಹಂಚಿಕೊಳ್ಳಲು ಲೇಖನಗಳು