logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Evm: ಇವಿಎಂನಲ್ಲಿ ಯಾವ ಬಟನ್​ ಒತ್ತಿದ್ರೂ ಬಿಜೆಪಿಗೇ ಓಟು - ಸುಳ್ಳು ವಿಡಿಯೋ ಶೇರ್ ಮಾಡಿದವ ಅರೆಸ್ಟ್

EVM: ಇವಿಎಂನಲ್ಲಿ ಯಾವ ಬಟನ್​ ಒತ್ತಿದ್ರೂ ಬಿಜೆಪಿಗೇ ಓಟು - ಸುಳ್ಳು ವಿಡಿಯೋ ಶೇರ್ ಮಾಡಿದವ ಅರೆಸ್ಟ್

HT Kannada Desk HT Kannada

Feb 19, 2023 10:15 AM IST

ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​​ (ಸಂಗ್ರಹ ಚಿತ್ರ)

    • ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​​ (ಇವಿಎಂ)ನಲ್ಲಿ ಯಾವ ಬಟನ್​ ಒತ್ತಿದ್ರೂ ಬಿಜೆಪಿಗೇ ಓಟು ಬೀಳುತ್ತದೆ ಎಂದು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಕ್ಕಾಗಿ ಮೇಘಾಲಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​​ (ಸಂಗ್ರಹ ಚಿತ್ರ)
ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​​ (ಸಂಗ್ರಹ ಚಿತ್ರ)

ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​​ (ಇವಿಎಂ)ನಲ್ಲಿ ಯಾವ ಬಟನ್​ ಒತ್ತಿದ್ರೂ ಬಿಜೆಪಿಗೇ ಓಟು ಬೀಳುತ್ತದೆ ಎಂದು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಕ್ಕಾಗಿ ಮೇಘಾಲಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

Dhruv Rathee: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಯಾರು? ಈತ ಮೋದಿ ಸರ್ಕಾರವನ್ನೇ ಟಾರ್ಗೆಟ್‌ ಮಾಡಲು ಕಾರಣವೇನು?

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

ಮೇಘಾಲಯದ ಪಶ್ಚಿಮ ಗರೊ ಹಿಲ್ಸ್ ಜಿಲ್ಲೆಯ ವ್ಯಕ್ತಿಯನ್ನು ಇವಿಎಂನಲ್ಲಿ ಯಾವ ಬಟನ್​ ಒತ್ತಿದರೂ ಮತ ಮಾತ್ರ ಬಿಜೆಪಿಗೆ ಹೋಗುತ್ತದೆ ಎಂದು ತೋರಿಸುವ ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿದ್ದಕ್ಕಾಗಿ ಅರೆಸ್ಟ್ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಎಫ್ ಆರ್ ಖಾರ್ಕೊಂಗೊರ್ ಶನಿವಾರ ಹೇಳಿದ್ದಾರೆ.

ಆರೋಪಿಯನ್ನು ಬೊಲೊಂಗ್ ಆರ್ ಸಂಗ್ಮಾ ಎಂದು ಗುರುತಿಸಲಾಗಿದ್ದು, ಫೆಬ್ರವರಿ 16 ರಂದು ಇವಿಎಂಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಈತ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದನು. ರೊಂಗ್ಜೆಂಗ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪೊಲೀಸರಿಗೆ ದೂರು ನೀಡಿದ ನಂತರ ಸಂಗ್ಮಾ ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಯೊಂದಿಗೆ ವ್ಯವಹರಿಸುವ ಐಪಿಸಿ ಸೆಕ್ಷನ್ 171 ಜಿ ಅಡಿಯಲ್ಲಿ ಸಂಗ್ಮಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಖಾರ್ಕೊಂಗೊರ್ ಹೇಳಿದರು. ಇವಿಎಂಗಳು ಅಥವಾ ವಿದ್ಯುನ್ಮಾನ ಮತಯಂತ್ರಗಳು ಟ್ಯಾಂಪರ್-ಪ್ರೂಫ್ ಆಗಿರುತ್ತವೆ ಮತ್ತು ಯಾವುದೇ ಕುಶಲತೆಯನ್ನು ಪ್ರಯತ್ನಿಸಿದರೆ ಫ್ಯಾಕ್ಟರಿ ರೀಸೆಟ್ ಮೋಡ್‌ಗೆ ಹೋಗುತ್ತವೆ, ಪ್ರತಿ ಹಂತದಲ್ಲೂ ಹಲವಾರು ರಕ್ಷಣಾತ್ಮಕ ಕ್ರಮಗಳು ಇರುತ್ತವೆ ಎಂದು ಅವರು ಹೇಳಿದರು.

ಈ ವರ್ಷ ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ - ಈ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ಕರ್ನಾಟಕದಲ್ಕಿ ಏಪ್ರಿಲ್​​ ತಿಂಗಳ ಮಧ್ಯದಲ್ಲಿ ಅಥವಾ ಮೇ ತಿಂಗಳ ಆರಂಭದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಗಳು 2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್​ ಇದ್ದಂತೆ. ಹೀಗಾಗಿ ಎಲ್ಲಾ ಪಕ್ಷಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ತ್ರಿಪುರಾದಲ್ಲಿ ಫೆಬ್ರವರಿ 16 ರಂದು ಚುನಾವಣೆ ನಡೆದಿದೆ. 60 ಸ್ಥಾನಗಳಿಗೆ 20 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 259 ಅಭ್ಯರ್ಥಿಗಳು ಕಣದಲ್ಲಿದ್ದರು. ತ್ರಿಪುರಾ ಮುಖ್ಯಮಂತ್ರಿ ಡಾ.ಮಾಣಿಕ್ ಸಹಾ, ಉಪಮುಖ್ಯಮಂತ್ರಿ ಜಿಷ್ಣು ದೆಬ್ಬಾರ್ಮನ್, ಸಿಪಿಎಂ ನಾಯಕ ಜಿತೇಂದ್ರ ಚೌಧರಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್ ಸೇರಿದಂತೆ ವಿವಿಧ ರಾಜಕೀಯ ಪ್ರಮುಖರು ಕಣದಲ್ಲಿದ್ದಾರೆ.

ಬಿಜೆಪಿ–ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಮೈತ್ರಿಕೂಟ, ಭಾರತೀಯ ಕಮ್ಯೂನಿಸ್ಟ್ ಪಕ್ಷ -ಮಾರ್ಕ್​​​ವಾದ (ಸಿಪಿಐ-ಎಂ)–ಕಾಂಗ್ರೆಸ್‌ ಮೈತ್ರಿಕೂಟ ಮತ್ತು ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ನೇತೃತ್ವದ ರಾಜ್ಯದ ಹೊಸ ಪ್ರಾದೇಶಿಕ ಪಕ್ಷವಾದ ಟಿಪ್ರಮೋಥಾ ನಡುವೆ ತ್ರಿಪುರಾದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿಯು 55 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಐಪಿಎಫ್‌ಟಿ 6 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಬಾರಿ ಸಿಪಿಎಂ ಮತ್ತು ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಆಲ್​ ಇಂಡಿಯಾ ಫಾರ್ವರ್ಡ್ ಬ್ಲಾಕ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ) ಸೇರಿದಂತೆ 47 ಕ್ಷೇತ್ರಗಳಲ್ಲಿ ಸಿಪಿಐ-ಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಹಾಗೂ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಟಿಪ್ರಮೋಥಾ ಪಕ್ಷವು 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ