logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  North East Election Result: ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು; ಪ್ರಗತಿಯಲ್ಲಿದೆ ಮತ ಎಣಿಕೆ- ಗಮನಿಸಬೇಕಾದ 10 ಅಂಶಗಳು

North East Election Result: ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು; ಪ್ರಗತಿಯಲ್ಲಿದೆ ಮತ ಎಣಿಕೆ- ಗಮನಿಸಬೇಕಾದ 10 ಅಂಶಗಳು

HT Kannada Desk HT Kannada

Mar 02, 2023 09:30 AM IST

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಶುರುವಾಗಿದೆ. (ಸಾಂಕೇತಿಕ ಚಿತ್ರ)

  • North East Election Result: ಈ ಮೂರು ರಾಜ್ಯಗಳ ಪೈಕಿ, ತ್ರಿಪುರಾದ 60 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೊದಲ ಬಾರಿಗೆ ಕೈಜೋಡಿಸಿವೆ. ಪರಿಣಾಮ ರಾಷ್ಟ್ರೀಯವಾಗಿ ಉಳಿದೆರಡು ರಾಜ್ಯಗಳಿಗಿಂತ ತ್ರಿಪುರಾ ಹೆಚ್ಚು ಗಮನವನ್ನು ಸೆಳೆದಿದೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಶುರುವಾಗಿದೆ. (ಸಾಂಕೇತಿಕ ಚಿತ್ರ)
ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಶುರುವಾಗಿದೆ. (ಸಾಂಕೇತಿಕ ಚಿತ್ರ) (HT File Photo)

ಮೂರು ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌ಗಳಲ್ಲಿ ಹೈವೋಲ್ಟೇಜ್‌ ಪ್ರಚಾರದ ಬಳಿಕ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

Dhruv Rathee: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಧ್ರುವ್ ರಾಠೀ ಯಾರು? ಈತ ಮೋದಿ ಸರ್ಕಾರವನ್ನೇ ಟಾರ್ಗೆಟ್‌ ಮಾಡಲು ಕಾರಣವೇನು?

ಭಾರತೀಯ ಜನತಾ ಪಕ್ಷ (ಬಿಜೆಪಿ)ವು ತ್ರಿಪುರಾದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸುವುದಕ್ಕೆ ನೋಡುತ್ತಿದೆ. (ಬಹುತೇಕ ಎಕ್ಸಿಟ್‌ಪೋಲ್‌ ಫಲಿತಾಂಶ ಬಿಜೆಪಿಯ ವಿಜಯವನ್ನು ಬಿಂಬಿಸಿದೆ). ಹಿಂದಿನ ಚುನಾವಣೆಯ ತನಕ ಅಂದರೆ 2018ರ ತನಕ ತ್ರಿಪುರಾ ರಾಜ್ಯವು ಎಡ ಪಕ್ಷದ ಭದ್ರಕೋಟೆಯಾಗಿತ್ತು.

ಆರಂಭಿಕ ಟ್ರೆಂಡ್‌ ಪ್ರಕಾರ, ತ್ರಿಪುರಾದಲ್ಲಿ ಎಡ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್ ಪಕ್ಷಗಳ ಮೈತ್ರಿ ಆರಂಭ ಬಲವಾಗಿತ್ತಾದರೂ, ಅದಕ್ಕೆ ಹೋಲಿಸಿದರೆ ಬಿಜೆಪಿ ಹೆಚ್ಚಿನ ಮುನ್ನಡೆ ಸಾಧಿಸಿದೆ. ನಾಗಾಲ್ಯಾಂಡ್‌ನಲ್ಲಿ ಎನ್‌ಪಿಎಫ್‌ ಖಾತೆ ತೆರೆದಿದೆ.

ಈ ಮೂರು ರಾಜ್ಯಗಳ ಪೈಕಿ, ತ್ರಿಪುರಾದ 60 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೊದಲ ಬಾರಿಗೆ ಕೈಜೋಡಿಸಿವೆ. ಪರಿಣಾಮ ರಾಷ್ಟ್ರೀಯವಾಗಿ ಉಳಿದೆರಡು ರಾಜ್ಯಗಳಿಗಿಂತ ತ್ರಿಪುರಾ ಹೆಚ್ಚು ಗಮನವನ್ನು ಸೆಳೆದಿದೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. ಭಾರತೀಯ ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿರುವ ಪ್ರಕಾರ "ಮಾರ್ಚ್ 2 ರಂದು ಬೆಳಗ್ಗೆ 8 ರಿಂದ ಫಲಿತಾಂಶದ ಟ್ರೆಂಡ್‌ಗಳು ಪ್ರಾರಂಭವಾಗುತ್ತವೆ". ಅಂಚೆ ಮತಪತ್ರಗಳ ಎಣಿಕೆ ಮೊದಲು. ನಂತರ ಇವಿಎಂಗಳು ಎಣಿಕೆ ನಡೆಯುತ್ತವೆ. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಅಪ್ಡೇಟ್‌ ಆಗತೊಡಗಿದೆ.

ಚುನಾವಣಾ ಫಲಿತಾಂಶದ ದೃಷ್ಟಿಯಿಂದ ಗಮನಿಸಬೇಕಾದ ಟಾಪ್‌ 10 ಅಂಶಗಳು

1. ತ್ರಿಪುರಾ ಫೆಬ್ರವರಿ 16 ರಂದು ಮತದಾನ ನಡೆದಿತ್ತು. ರಾಷ್ಟ್ರೀಯ ಪಕ್ಷಗಳ ನಡುವಿನ ಈ ಕದನದಲ್ಲಿ, ಪ್ರದ್ಯೋತ್ ದೆಬ್‌ಬರ್ಮಾ ನೇತೃತ್ವದ ಟಿಪ್ರಾ ಮೋಥಾವು ಅದರ ಸಂಸ್ಥಾಪಕ, ಹಿಂದಿನ ರಾಜಮನೆತನದ ಕುಡಿಯಾಗಿ ಎಕ್ಸ್-ಫ್ಯಾಕ್ಟರ್ ಆಗಿ ಹೊರಹೊಮ್ಮಿದೆ. 2018 ರಲ್ಲಿ ಬುಡಕಟ್ಟು ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಉತ್ತಮ ಸಾಧನೆ ಮಾಡಿದ್ದರಿಂದ ಬುಡಕಟ್ಟು ಜನಸಂಖ್ಯೆಯು ಸಾಂಪ್ರದಾಯಿಕ ಲೆಕ್ಕಾಚಾರಗಳಿಗೆ ಅಡ್ಡಿ ಆಗಿದೆ.

2. ಕಳೆದ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 36 ಮತ್ತು ಐಪಿಎಫ್‌ಟಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಅದರ ಸಂಸ್ಥಾಪಕ ಎನ್‌ಸಿ ದೆಬ್‌ಬರ್ಮಾ ಅವರ ನಿಧನದ ನಂತರ ಐಪಿಎಫ್‌ಟಿ ಕ್ಷೀಣಿಸಿತು. ಪರಿಣಾಮ ಬಹುಮತ ಪಡೆಯುವ ಹೊರೆ ಹೆಚ್ಚಾಗಿ ಬಿಜೆಪಿಯ ಹೆಗಲೇರಿದೆ. ಇದೇ ವೇಳೆ, ಅದರ ಎರಡು ಪ್ರಮುಖ ಪ್ರತಿಸ್ಪರ್ಧಿಗಳು ಮೈತ್ರಿ ಸಾಧಿಸಿವೆ.

3. ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ಫೆಬ್ರವರಿ 27 ರಂದು ನಡೆಯಿತು. ಮೇಘಾಲಯ ಮತ್ತು ನಾಗಾಲ್ಯಾಂಡ್ ಎರಡರಲ್ಲೂ ಪ್ರಾದೇಶಿಕ ಪಕ್ಷಗಳು ದೊಡ್ಡ ಆಟಗಾರರಾಗಿ ಉಳಿದಿವೆ. ಬಿಜೆಪಿಯು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ತನ್ನ ದೊಡ್ಡ ನಾಯಕರೊಂದಿಗೆ ದೃಢವಾದ ಪ್ರಚಾರವನ್ನು ನಡೆಸಿತು. ಅದರ ಹೆಜ್ಜೆಗುರುತುಗಳನ್ನು ವಿಸ್ತರಿಸುವ ಪ್ರಯತ್ನ ಮಾಡಿದೆ.

4. ಮೊದಲ ಬಾರಿಗೆ, ಬಿಜೆಪಿಯು ಮೇಘಾಲಯದ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ದೇಶದಲ್ಲಿ "ಅತ್ಯಂತ ಭ್ರಷ್ಟ" ರಾಜ್ಯ ಸರ್ಕಾರವನ್ನು ನಡೆಸಿದೆ ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ನಾಯಕ ಮತ್ತು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರನ್ನು ಬಿಜೆಪಿ ನಿರಂತರವಾಗಿ ಗುರಿಯಾಗಿಸಿದೆ. ಕುತೂಹಲಕಾರಿ ವಿಚಾರ ಎಂದರೆ, ರಾಜ್ಯದಲ್ಲಿ ಎನ್‌ಪಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಇತ್ತು. ಆದರೆ, ಚುನಾವಣೆಗೆ ಮುಂಚಿತವಾಗಿ ಈ ಮೈತ್ರಿ ಕಡಿದುಹೋಗಿದೆ.

5. ಮೇಘಾಲಯದಲ್ಲಿ ಅತಂತ್ರ ಫಲಿತಾಂಶ ಬರಬಹುದೆಂಬ ಕಾರಣಕ್ಕೆ ಆರೋಪ, ಪ್ರತ್ಯಾರೋಪಗಳ ಹೊರತಾಗಿಯೂ, ಸಂಗ್ಮಾ ಮಂಗಳವಾರ ರಾತ್ರಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿದ್ದರು.

6. ಮೂರು ಈಶಾನ್ಯ ರಾಜ್ಯಗಳಲ್ಲಿ, ಎಕ್ಸಿಟ್ ಪೋಲ್‌ಗಳ ಪ್ರಕಾರ ಅತ್ಯಂತ ನಿಕಟ ಸ್ಪರ್ಧೆ ಮೇಘಾಲಯದಲ್ಲಿ ನಿರೀಕ್ಷಿಸಲಾಗುತ್ತಿದೆ. ಅಲ್ಲಿ ಅತಂತ್ರ ಫಲಿತಾಂಶದ ಸುಳಿವು ಲಭ್ಯವಾಗಿದೆ. ಆಡಳಿತಾರೂಢ ಎನ್‌ಪಿಪಿಗೆ 20 ಸ್ಥಾನ ಸಿಗಬಹುದಷ್ಟೆ. ಬಿಜೆಪಿ ಈ ಬಾರಿ 2 ರಿಂದ 6 ಸ್ಥಾನಗಳನ್ನು ಹೆಚ್ಚಿಸಬಹುದು. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ 11 ಸ್ಥಾನಗಳನ್ನು ಗಳಿಸಬಹುದು ಎಂದು ಎಕ್ಸಿಟ್‌ ಪೋಲ್‌ ವರದಿ ಹೇಳಿದೆ.

7. ನಾಗಾಲ್ಯಾಂಡ್‌ನ 60 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಅಸ್ತಿತ್ವ ಹೊಂದಿರುವ ಎಲ್ಲ ಪಕ್ಷಗಳು ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರಿಂದ ಯಾವುದೇ ವಿರೋಧವಿಲ್ಲ ಎಂಬ ವಿಶಿಷ್ಟ ಲಕ್ಷಣವನ್ನು ಹೊಂದಿದ್ದ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತೆ ಎನ್‌ಡಿಪಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ.

8. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕೆಲವು ಎಕ್ಸಿಟ್‌ ಪೋಲ್‌ ಸಮೀಕ್ಷೆಗಳಲ್ಲಿ ಭವಿಷ್ಯ ನುಡಿದಿರುವಂತೆ ತ್ರಿಪುರಾ, ನಾಗಾಲ್ಯಾಂಡ್ ಅಥವಾ ಮೇಘಾಲಯದಲ್ಲಿ ಯಾವುದೇ ಹಂಗ್ ಅಸೆಂಬ್ಲಿ ಇರುವುದಿಲ್ಲ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದ್ದಾರೆ.

9. ತ್ರಿಪುರಾದಲ್ಲಿ ಶೇ 87.76 ರಷ್ಟು ಮತದಾನವಾಗಿದ್ದರೆ, ನಾಗಾಲ್ಯಾಂಡ್‌ನಲ್ಲಿ ಶೇ 85.90 ಮತ್ತು ಮೇಘಾಲಯದಲ್ಲಿ ಕ್ರಮವಾಗಿ ಶೇ 85.27 ರಷ್ಟು ಮತದಾನವಾಗಿದೆ.

10. ಮೂರು ಈಶಾನ್ಯ ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಈ ವರ್ಷದ ನಂತರದ ರಾಜ್ಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಭವಿಷ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ