ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Politics Explainer: ಮಹಾಮೈತ್ರಿ ವಿಪಕ್ಷಗಳದ್ದಷ್ಟೇ ಅಲ್ಲ, ಎನ್‌ಡಿಎ ಪುನಶ್ಚೇತನಕ್ಕೆ ಬಿಜೆಪಿ ಕೂಡ ಮುಂದಾಗಿದೆ

Politics Explainer: ಮಹಾಮೈತ್ರಿ ವಿಪಕ್ಷಗಳದ್ದಷ್ಟೇ ಅಲ್ಲ, ಎನ್‌ಡಿಎ ಪುನಶ್ಚೇತನಕ್ಕೆ ಬಿಜೆಪಿ ಕೂಡ ಮುಂದಾಗಿದೆ

Umesh Kumar S HT Kannada

Jun 25, 2023 05:30 PM IST

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೊಸದಾಗಿ ಎನ್‌ಡಿಎ ರಚಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಸಾಂಕೇತಿಕ ಚಿತ್ರ)

  • NDA Revival: ಬಿಜೆಪಿಯು ಹೊಸ ಎನ್‌ಡಿಎ ಅಂದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂಬ ಸುಳಿವು ಲಭ್ಯವಾಗಿವೆ. ವರದಿಯ ಪ್ರಕಾರ, ಅನೇಕ ಹಳೆಯ ಮತ್ತು ಕೆಲವು ಹೊಸ ಒಡನಾಡಿಗಳನ್ನು ಜತೆಗೂಡಿಸಿಕೊಂಡು ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಕೂಡ ತಂತ್ರಗಾರಿಕೆ ರೂಪಿಸತೊಡಗಿದೆ. ಇದರ ವಿವರಣೆ ಇಲ್ಲಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೊಸದಾಗಿ ಎನ್‌ಡಿಎ ರಚಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೊಸದಾಗಿ ಎನ್‌ಡಿಎ ರಚಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಸಾಂಕೇತಿಕ ಚಿತ್ರ) (HT_PRINT)

ಲೋಕಸಭಾ ಚುನಾವಣೆ 2024 (Lok Sabha Election 2024)ಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಎರಡು ಅವಧಿಯಲ್ಲಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ (BJP)ಯನ್ನು ಎದುರಿಸುವುದು ರಾಷ್ಟ್ರೀಯ ಪಕ್ಷವೆನಿಸಿದ ಕಾಂಗ್ರೆಸ್‌ (Congress) ಪಕ್ಷಕ್ಕಾಗಲೀ, ಬೇರಾವುದೇ ಪಕ್ಷಕ್ಕೂ ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿ ಹೆಸರಿಗಷ್ಟೇ ಇತ್ತು. ಹೊಸ ಹೆಸರಿನೊಂದಿಗೆ ವಿಪಕ್ಷ ಮೈತ್ರಿ ಸ್ಥಾಪಿಸುವ ಪ್ರಯತ್ನ ಕಳೆದ ಎರಡು ಚುನಾವಣೆ ವೇಳೆ ನಡೆಯಿತಾದರೂ ಫಲ ಕೊಟ್ಟಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

ಆದರೆ ಈ ಸಲ ಹಾಗಲ್ಲ. ಒಂದೆಡೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಶುಕ್ರವಾರ ಭಾರತೀಯ ಜನತಾ ಪಕ್ಷದ ವಿರುದ್ಧ 15 ವಿರೋಧ ಪಕ್ಷಗಳು ಒಗ್ಗೂಡಿದವು. ಅದೇ ವೇಳೆ, ಬಿಜೆಪಿಯು ಹೊಸ ಎನ್‌ಡಿಎ ಅಂದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂಬ ಸುಳಿವು ಲಭ್ಯವಾಗಿವೆ. ವರದಿಯ ಪ್ರಕಾರ, ಅನೇಕ ಹಳೆಯ ಮತ್ತು ಕೆಲವು ಹೊಸ ಒಡನಾಡಿಗಳನ್ನು ಜತೆಗೂಡಿಸಿಕೊಂಡು ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಕೂಡ ತಂತ್ರಗಾರಿಕೆ ರೂಪಿಸತೊಡಗಿದೆ. ಆದರೆ, ಇದುವರೆಗೂ ಬಿಜೆಪಿ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

ಎನ್‌ಡಿಎನಲ್ಲೂ ಸಂಚಲನ

ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದಿಂದ ಇತ್ತೀಚೆಗಷ್ಟೇ ದೂರ ಸರಿದಿದ್ದ ಜಿತನ್ ರಾಮ್ ಮಾಂಝಿ ಎನ್ ಡಿಎಗೆ ಮರಳುವುದಾಗಿ ಘೋಷಿಸಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಸೇರಿ ಹಲವು ಮಾಜಿ ಎನ್‌ಡಿಎ ಪಾಲುದಾರರು ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಾದ ನಂತರ ಮತ್ತೆ ಮೈತ್ರಿಕೂಟಕ್ಕೆ ಸೇರಲು ಉತ್ಸುಕರಾಗಿದ್ದಾರೆ. 2014ರಲ್ಲಿ ಲೋಕಸಭೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿತ್ತು. 2019ರಲ್ಲಿ ಈ ಸಂಖ್ಯೆ 303ಕ್ಕೆ ಏರಿಕೆಯಾಗಿದು ಈ ಬೆಳವಣಿಗೆಗೆ ಕಾರಣ.

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಇದೇ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಭೇಟಿಯಾದರು. ಬಿಹಾರದಲ್ಲಿಯೂ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಜೆಡಿ ಮತ್ತು ಮುಖೇಶ್ ಸಾಹ್ನಿಯ ವಿಐಪಿಯೊಂದಿಗೆ ಬಿಜೆಪಿಯು ಸಂಪರ್ಕವನ್ನು ಹೆಚ್ಚಿಸ ತೊಡಗಿದೆ. ಇದರೊಂದಿಗೆ ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರ ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಮೈತ್ರಿ ಏಕೆ ಬೇಕು?

ಪ್ರಧಾನಿ ಮೋದಿಯವರ ಜನಪ್ರಿಯತೆಯ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತಿರಬಹುದು. ಆದರೆ ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊಸ ತಂತ್ರವನ್ನು ರೂಪಿಸುವಂತಹ ಒತ್ತಡವನ್ನು ಪಕ್ಷದ ಮೇಲೆ ಹೇರಿದೆ. ಅದೇ ವೇಳೆ, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ ಸೇರಿ ಹಲವು ರಾಜ್ಯಗಳಲ್ಲಿ ಪಕ್ಷವು ಈಗಾಗಲೇ ಪ್ರಮುಖ ಚುನಾವಣಾ ವಿಜಯಗಳನ್ನು ಸಾಧಿಸಿದೆ. ಇನ್ನೂ ವಿಸ್ತರಣೆಗೆ ಸ್ವಲ್ಪ ಅವಕಾಶವಿದೆ.

ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳು ಇನ್ನೂ ಪ್ರಭಾವ ಹೊಂದಿವೆ. ಕರ್ನಾಟಕವನ್ನು ಕಳೆದುಕೊಳ್ಳುವುದರೊಂದಿಗೆ ದಕ್ಷಿಣ ಭಾರತದ ಏಕೈಕ ಭದ್ರಕೋಟೆಯನ್ನೂ ಬಿಜೆಪಿ ಕಳೆದುಕೊಂಡಿದೆ. ಹೊಸ ಶಿವಸೇನೆಯೊಂದಿಗೆ ಮಹಾರಾಷ್ಟ್ರ ಇನ್ನೂ ಚುನಾವಣಾ ಕಣಕ್ಕೆ ಪ್ರವೇಶಿಸಿಲ್ಲ. ಇದಲ್ಲದೇ, ಕೇಂದ್ರದಲ್ಲಿ 10 ವರ್ಷಗಳ ಆಡಳಿತ ವಿರೋಧಿ ಅಲೆಯೂ ಬಿಜೆಪಿಗೆ ಆತಂಕಕಾರಿ ವಿಷಯವಾಗಿ ಪರಿಣಮಿಸಬಹುದು ಎಂಬ ಮುನ್ನೆಚ್ಚರಿಕೆಯೂ ಇದೆ.

ವಿಪಕ್ಷಗಳ ಭದ್ರಕೋಟೆಯನ್ನೂ ಗೆಲ್ಲಬಲ್ಲ ತಂತ್ರಗಾರಿಕೆ

ಎನ್‌ಡಿಎ ಮತ್ತು ಯುಪಿಎ ಹೊರತಾದ ಪ್ರಾದೇಶಿಕ ಪಕ್ಷಗಳಿಗೆ ಅವುಗಳ ಭದ್ರಕೋಟೆಯಲ್ಲಿ ಮತ ಉಳಿಸುವ, ಗೆಲ್ಲುವ ಸವಾಲು ಇದೆ. ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ವಾತಾವರಣ ಅವುಗಳ ಎದುರಿಗೆ ಇದೆ ಎಂಬ ಅಂಶದ ಕಡೆಗೆ ಹಿಂದುಸ್ತಾನ್‌ ಟೈಮ್ಸ್‌ ಕನ್ನಡದ ಸೋದರ ತಾಣ ಲೈವ್‌ ಹಿಂದುಸ್ತಾನ್‌ ವಿಶೇಷ ವರದಿ ಹೇಳಿದೆ.

ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದ್ದು, ಕರ್ನಾಟಕದಲ್ಲಿ ಜೆಡಿಎಸ್, ಆಂಧ್ರಪ್ರದೇಶದಲ್ಲಿ ಟಿಡಿಪಿ, ಪಂಜಾಬ್‌ನಲ್ಲಿ ಎಸ್‌ಎಡಿ ಜತೆಗೆ ಬಿಜೆಪಿ ಸಂಪರ್ಕ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ರಾಷ್ಟ್ರಪತಿ ಚುನಾವಣೆಯಲ್ಲೂ ಈ ಮೂರು ಪಕ್ಷಗಳು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದವು ಎಂಬುದನ್ನು ಉಲ್ಲೇಖಿಸಿದೆ.

ಹೊಸ ಎನ್‌ಡಿಎ ರಚನೆ ಸುಳಿವಿನ ಮೇಲೆ ಸುಳಿವು

ಕಳೆದ ತಿಂಗಳು ನಡೆದ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ 20 ವಿರೋಧ ಪಕ್ಷಗಳು ಅಂತರ ಕಾಯ್ದುಕೊಂಡಿದ್ದವು. ಆದರೆ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಶಿರೋಮಣಿ ಅಕಾಲಿದಳ, ತೆಲುಗು ದೇಶಂ ಪಕ್ಷ ಮತ್ತು ಜಾತ್ಯತೀತ ಜನತಾದಳ ಭಾಗವಹಿಸಿದ್ದವು. ಇತ್ತೀಚೆಗಷ್ಟೇ ಹೊಸ ಸಂಸತ್‌ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ವಿಪಕ್ಷಗಳಿಗಿಂತ ಭಿನ್ನ ನಿಲುವು ತಾಳಿದ್ದು ಗಮನಾರ್ಹ ವಿದ್ಯಮಾನ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ