ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tamil Nadu Earthquake: ಚೆನ್ನೈ ಸಮೀಪದ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪನ

Tamil Nadu Earthquake: ಚೆನ್ನೈ ಸಮೀಪದ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪನ

Raghavendra M Y HT Kannada

Dec 08, 2023 09:03 AM IST

ಚೆನ್ನೈ ಸಮೀಪದ ಚೆಂಗಲ್‌ಪಟ್ಟುನಲ್ಲಿ ಭೂಕಂಪನವಾಗಿದೆ ( National Center for Seismology)

  • ಚೆನ್ನೈ ಸಮೀಪದ ಚೆಂಗಲ್‌ಪಟ್ಟುನಲ್ಲಿ 3.2 ತೀವ್ರತೆಯ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಚೆನ್ನೈ ಸಮೀಪದ ಚೆಂಗಲ್‌ಪಟ್ಟುನಲ್ಲಿ ಭೂಕಂಪನವಾಗಿದೆ (
National Center for Seismology)
ಚೆನ್ನೈ ಸಮೀಪದ ಚೆಂಗಲ್‌ಪಟ್ಟುನಲ್ಲಿ ಭೂಕಂಪನವಾಗಿದೆ ( National Center for Seismology)

ಚೆನ್ನೈ (ತಮಿಳುನಾಡು): ತಮಿಳುನಾಡು ರಾಜಧಾನಿ ಚೆನ್ನೈ ಸಮೀಪದ ಚೆಂಗಲ್‌ಪಟ್ಟುನಲ್ಲಿ ಇಂದು (ಡಿಸೆಂಬರ್ 8, ಶುಕ್ರವಾರ) ಬೆಳಗ್ಗೆ ಭೂಕಂಪನವಾಗಿದೆ (Tamil Nadu Earthquake). ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರ-ಎನ್‌ಸಿಎಸ್‌ ಮಾಹಿತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

ಚೆಂಗಲ್‌ಪುಟ್ಟನಲ್ಲಿ ಬೆಳಗ್ಗೆ 7.39ಕ್ಕೆ ಸಂಭವಿಸಿರುವ ಭೂಕಂಪನದ ಆಳ 10 ಕಿಲೋ ಮೀಟರ್ ಆಗಿದ್ದು, ಲ್ಯಾಟಿಟ್ಯೂಡ್ 12.50 ಮತ್ತು ಉದ್ದ 79.58 ಇದೆ ಎಂದು ಹೇಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಎನ್‌ಸಿಎಸ್‌ ಮಾಹಿತಿ ಹಂಚಿಕೊಂಡಿದೆ.

ಕಳೆದ ನಾಲ್ಕೈದು ದಿನಗಳಿಂದ ಚೆನ್ನೈ, ಚೆಂಗಲ್‌ಪಟ್ಟು ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸೈಕ್ಲೋನ್ ಮಿಚಾಂಗ್ ಅಬ್ಬರಿಸಿತ್ತು. ಬಿರುಗಾಳಿ ಸಹಿತಿ ಭಾರಿ ಮಳೆಯ ಪರಿಣಾಮ ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ, ಚೆಂಗಲ್‌ಪಟ್ಟು ಸೇರಿ ಕೆಲ ಜಿಲ್ಲೆಗಳಲ್ಲಿ ಭಕ್ತ ಸೇರಿ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿತ್ತು. ಚಂಡಮಾರುತ ಹೊಡೆತದಿಂದ ಇನ್ನೇನು ಹೊರಬಂದೆವು ಎನ್ನುವಷ್ಟರಲ್ಲಿ ಇದೀಗ ಭೂಕಂಪನವಾಗಿರುವುದು ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ