logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Earthquake: ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ 6.2 ತೀವ್ರತೆಯ ಭೂಕಂಪನದ ಅನುಭವ, ನೇಪಾಳದಲ್ಲಿತ್ತು ಕೇಂದ್ರ ಬಿಂದು

Delhi Earthquake: ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ 6.2 ತೀವ್ರತೆಯ ಭೂಕಂಪನದ ಅನುಭವ, ನೇಪಾಳದಲ್ಲಿತ್ತು ಕೇಂದ್ರ ಬಿಂದು

HT Kannada Desk HT Kannada

Oct 03, 2023 05:33 PM IST

google News

ಭೂಕಂಪನ ವಾದ ಕೂಡಲೇ ನೋಯ್ಡಾ ವಸತಿ ಸಂಕೀರ್ಣದಲ್ಲಿ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದು ನಿಂತ ಕ್ಷಣ.

  • Delhi Earthquake Today: ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮಂಗಳವಾರ ಅಪರಾಹ್ನ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.  

ಭೂಕಂಪನ ವಾದ ಕೂಡಲೇ ನೋಯ್ಡಾ ವಸತಿ ಸಂಕೀರ್ಣದಲ್ಲಿ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದು ನಿಂತ ಕ್ಷಣ.
ಭೂಕಂಪನ ವಾದ ಕೂಡಲೇ ನೋಯ್ಡಾ ವಸತಿ ಸಂಕೀರ್ಣದಲ್ಲಿ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದು ನಿಂತ ಕ್ಷಣ.

ನವದೆಹಲಿ: ದೆಹಲಿ- ಎನ್‌ಸಿಆರ್ ಪ್ರದೇಶದಲ್ಲಿ ಮಂಗಳವಾರ ಅಪರಾಹ್ನ ಭಾರಿ ಭೂಕಂಪನ (Delhi Earthquake Today) ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನ ತೀವ್ರತೆ 6.2 ದಾಖಲಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ.

ಭೂಕಂಪನದ ಆಳ 5 ಕಿ.ಮೀ. ಎಂದು ಗುರುತಿಸಲಾಗಿದೆ. ಮಂಗಳವಾರ ಅಪರಾಹ್ನ 2.51ಕ್ಕೆ ಈ ಭೂಕಂಪನ ಸಂಭವಿಸಿದೆ. ನೇಪಾಳದಲ್ಲಿ ಇದರ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೆಸಿಮಾಲಜಿ ಎಕ್ಸ್‌ನಲ್ಲಿ ಹೇಳಿಕೊಂಡಿದೆ.

ಈ ಭೂಕಂಪನ 40 ಸೆಕೆಂಡ್‌ಗಳಿಗೂ ಹೆಚ್ಚು ಹತ್ತು ಸಂಭವಿಸಿದ್ದು, ಮನೆಗಳಲ್ಲಿರುವ ಜನ ಭಯಭೀತರಾಗಿ ರಸ್ತೆ ಬಂದ ಘಟನೆಯೂ ನಡೆದಿದೆ.

"ಪಶ್ಚಿಮ ನೇಪಾಳದಲ್ಲಿ 6.2 M ಭೂಕಂಪ ಸಂಭವಿಸಿದೆ. ಇದು ಜೋಶಿಮಠದ ಆಗ್ನೇಯಕ್ಕೆ ಸುಮಾರು 200 ಕಿಮೀ ದೂರದಲ್ಲಿದೆ. ಇದು ಹೆಚ್ಚೇನೂ ಆಳದಲ್ಲಿಲ್ಲ. ಆದ್ದರಿಂದ ಉತ್ತರ ಭಾರತದ ಮೇಲೆ ಬಲವಾದ ಕಂಪನಗಳನ್ನು ಅನುಭವಕ್ಕೆ ಬಂದಿದೆ ಎಂದು ಎನ್‌ಸಿಎಸ್‌ನ ಕಚೇರಿಯ ಮುಖ್ಯಸ್ಥ ಜೆಎಲ್ ಗೌತಮ್ ಹೇಳಿದ್ದಾರೆ.

ಆಳವು ಹೆಚ್ಚಿರುವಾಗ ಕಂಪನ ಪ್ರಮಾಣವು ತುಲನಾತ್ಮಕವಾಗಿ ಕಡಿಮೆ. ಬಹಳ ದೊಡ್ಡ ಪ್ರದೇಶವು ನಡುಕವನ್ನು ಅನುಭವಿಸುವ ಸಾಧ್ಯತೆಯಿದೆ. ಆದರೆ ಇದಕ್ಕೆ ತದ್ವಿರುದ್ಧವಾದುದಂತೂ ಪ್ರಸ್ತುತ ಪ್ರಕರಣದಲ್ಲಿ ಆಳ ಕಡಿಮೆ ಇತ್ತು. ತೀವ್ರತೆ ಹೆಚ್ಚಿರುವುದರಿಂದ ಇಲ್ಲಿ ಕಂಪನದ ಅನುಭವವಾಗಿದೆ. ಇದು 10 ರಿಂದ 15 ಸೆಕೆಂಡುಗಳ ಕಾಲ ಅನುಭವಿಸಿತು ಎಂದು ಗೌತಮ್ ವಿವರಿಸಿದ್ದಾರೆ.

ಎನ್‌ಸಿಎಸ್‌ ಸಂಗ್ರಹಿಸಿದ ದತ್ತಾಂಶವು 6.2 ತೀವ್ರತೆಯ ಭೂಕಂಪದ ಮೊದಲು ಅಪರಾಹ್ನ 2.25​ಕ್ಕೆ 4.6-ತೀವ್ರತೆಯ ಭೂಕಂಪನವು ಸಂಭವಿಸಿದೆ ಎಂದು ಸೂಚಿಸುತ್ತದೆ ಮತ್ತು ನಂತರ ಅಪರಾಹ್ನ 3.06 (3.6 ತೀವ್ರತೆ) ಮತ್ತು ಅಪರಾಹ್ನ 3.19 (3.1 ತೀವ್ರತೆ) ಕ್ಕೆ ಎರಡು ಕಂಪನಗಳು ಸಂಭವಿಸಿದವು.

ಭೂಕಂಪ ಸಂಭವಿಸುತ್ತಿದ್ದಂತೆಯೇ, "ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬನ್ನಿ, ಆದರೆ ಭಯಪಡಬೇಡಿ. ಎಲಿವೇಟರ್‌ಗಳನ್ನು ಬಳಸಬೇಡಿ! ಯಾವುದೇ ತುರ್ತು ಸಹಾಯಕ್ಕಾಗಿ, 112 ಅನ್ನು ಡಯಲ್ ಮಾಡಿ” ಎಂದು ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭೂಕಂಪದಂತಹ ಕಳವಳಕಾರಿ ಸನ್ನಿವೇಶದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಲ್ಲಿನ ಹೇಗೆ ಪ್ರತಿಕ್ರಿಯಿಸಿದರು..

ರಾಷ್ಟ್ರ ರಾಜಧಾನಿ ಮತ್ತು ಯುಪಿಯಲ್ಲಿ ನಡುಕ ಅನುಭವಿಸಿದ ನಂತರ, ಜನರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮದ ಕಡೆಗೆ ತ್ವರಿತವಾಗಿ ತಿರುಗಿದರು.

“ನಿನ್ನೆಯಷ್ಟೇ ಎಸ್‌ಆರ್‌ಕೆ ಡುಂಕಿ ಮತ್ತು ಇಂದಿನ ಭೂಕಂಪನದ ಬಗ್ಗೆ ಪೋಸ್ಟ್ ಮಾಡಿದ್ದರು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ದೆಹಲಿಯಲ್ಲಿ ಸಂಭವಿಸಿದ ಹೆಚ್ಚು ಹೊತ್ತಿನ ಭೂಕಂಪನ ಇದು. ಶಕ್ತಿ ಶಾಲಿಯೂ ಆಗಿತ್ತು ಎಂದು ಒಬ್ಬ ಎಕ್ಸ್ ಬಳಕೆದಾರ ಹೇಳಿಕೊಂಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ