ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tanishq In New Jersey: ಅಮೆರಿಕದ ಮೊದಲ ತನಿಷ್ಕ್‌ ಮಳಿಗೆ ನ್ಯೂಜೆರ್ಸಿಯಲ್ಲಿ ಶುರು; ವೈವಿಧ್ಯಮಯ ಚಿನ್ನಾಭರಣಗಳ ಮಳಿಗೆ

Tanishq in New Jersey: ಅಮೆರಿಕದ ಮೊದಲ ತನಿಷ್ಕ್‌ ಮಳಿಗೆ ನ್ಯೂಜೆರ್ಸಿಯಲ್ಲಿ ಶುರು; ವೈವಿಧ್ಯಮಯ ಚಿನ್ನಾಭರಣಗಳ ಮಳಿಗೆ

HT Kannada Desk HT Kannada

Jan 23, 2023 01:45 PM IST

ಭಾರತದ ಜ್ಯುವೆಲ್ಲರಿ ಬ್ರಾಂಡ್‌ ತನಿಷ್ಕ್‌ ಅಮೆರಿಕದಲ್ಲಿ ತನ್ನ ಮೊದಲ ಮಳಿಗೆಯನ್ನು ನ್ಯೂಜೆರ್ಸಿಯಲ್ಲಿ ತೆರೆದಿದೆ.

  • Tanishq in New Jersey: ನ್ಯೂಜೆರ್ಸಿಯ ಐಸೆಲಿನ್‌ ಓಕ್‌ ಟ್ರೀ ರಸ್ತೆಯಲ್ಲಿ ಈ ಎರಡು ಮಹಡಿಯ ಮಳಿಗೆ ಇದ್ದು, 3750 ಚದರ ಅಡಿ ವಿಸ್ತೀರ್ಣ ಹೊಂದಿದೆ. 18 ಮತ್ತು 22 ಕ್ಯಾರಟ್‌ ಚಿನ್ನ, ವಜ್ರದ 6,500ಕ್ಕೂ ಹೆಚ್ಚು ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯ ಇವೆ.

ಭಾರತದ ಜ್ಯುವೆಲ್ಲರಿ ಬ್ರಾಂಡ್‌ ತನಿಷ್ಕ್‌ ಅಮೆರಿಕದಲ್ಲಿ ತನ್ನ ಮೊದಲ ಮಳಿಗೆಯನ್ನು ನ್ಯೂಜೆರ್ಸಿಯಲ್ಲಿ ತೆರೆದಿದೆ.
ಭಾರತದ ಜ್ಯುವೆಲ್ಲರಿ ಬ್ರಾಂಡ್‌ ತನಿಷ್ಕ್‌ ಅಮೆರಿಕದಲ್ಲಿ ತನ್ನ ಮೊದಲ ಮಳಿಗೆಯನ್ನು ನ್ಯೂಜೆರ್ಸಿಯಲ್ಲಿ ತೆರೆದಿದೆ.

ಭಾರತದ ಜ್ಯುವೆಲ್ಲರಿ ಬ್ರಾಂಡ್‌ ತನಿಷ್ಕ್‌ ಅಮೆರಿಕದಲ್ಲಿ ತನ್ನ ಮೊದಲ ಮಳಿಗೆಯನ್ನು ನ್ಯೂಜೆರ್ಸಿಯಲ್ಲಿ ತೆರೆದಿದೆ. ಅಮೆರಿಕದಲ್ಲಿರುವ ದೊಡ್ಡ ಪ್ರಮಾಣದ ಅನಿವಾಸಿ ಭಾರತೀಯರ ಅಗತ್ಯಗಳನ್ನು ಪೂರೈಸುವ ಉದ್ದೇಶ ಇದರದ್ದು ಎಂದು ಕಂಪನಿ ತಿಳಿಸಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

CBSE 10th Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಿಡುಗಡೆ; ಶೇ 93.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

ನ್ಯೂಜೆರ್ಸಿಯ ಈ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ನ್ಯೂಜೆರ್ಸಿಯ ಸೆನಟರ್‌ ರಾಬರ್ಟ್‌ ಮೆನೆಂಡೆಜ್‌, ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲ್‌ ಜನರಲ್‌ ರಣಧೀರ್‌ ಜೈಸ್ವಾಲ್‌, ವುಡ್‌ಬ್ರಿಜ್‌ ಮೇಯರ್‌ ಜಾನ್‌ ಇ. ಕ್ಯಾರ್ಮಾಕ್‌, ಎಡಿಸನ್‌ ಮೇಯರ್‌ ಸ್ಯಾಮ್‌ ಜೋಶಿ, ಚೂಸ್‌ ನ್ಯೂಜೆರ್ಸಿ ಇನ್‌ಕಾರ್ಪೊರೇಷನ್‌ನ ವೆಸ್ಲಿ ಮ್ಯಾಥ್ಯೂಸ್‌, ನ್ಯೂ ಜೆರ್ಸಿ ಸ್ಟೇಟ್‌ ಸೆನೆಟರ್‌ ವಿನ್‌ ಗೋಪಾಲ್‌, ಕಾಂಗ್ರೆಸ್‌ಮನ್‌ ಫ್ರಾಂಕ್‌ ಪಾಲ್ಲೋನ್‌ ಅತಿಥಿಗಳಾಗಿ ಪಾಲ್ಗೊಂಡರು.

ನ್ಯೂಜೆರ್ಸಿ ಸ್ಟೇಟ್‌ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 4.35 ಪಾಲು ಭಾರತೀಯ ಅಮೆರಿಕನ್ನರಿದ್ದಾರೆ. ಅಂದರೆ 3.87 ಲಕ್ಷ ಭಾರತೀಯರಿದ್ದಾರೆ. ಇವರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕಂಪನಿಯು ಈ ಮಳಿಗೆಯನ್ನು ಅಲ್ಲಿ ಆರಂಭಿಸಿದೆ.

ಅಮೆರಿಕದ ಸೆನ್ಸಸ್‌ ಬ್ಯೂರೋ ದತ್ತಾಂಶ ಪ್ರಕಾರ, 2020ರಲ್ಲಿ ಜುವೆಲ್ಲರಿ ಸ್ಟೋರ್‌ಗಳ ಮಾರಾಟ 33.2 ಶತಕೋಟಿ ಡಾಲರ್‌ ಆಗಿತ್ತು. ಇದು ಹಿಂದಿನ ದಶಕಕ್ಕೆ ಹೋಲಿಸಿದರೆ ಶೇಕಡ 25 ಹೆಚ್ಚಳ ಎಂಬ ಉಲ್ಲೇಖವಿದೆ. ತನಿಷ್ಕ್‌ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅಮೆರಿಕ ಮಾರುಕಟ್ಟೆಯಲ್ಲಿ ಇ-ಕಾಮರ್ಸ್‌ ಮೂಲಕ ವಹಿವಾಟು ನಡೆಸುತ್ತಿದ್ದು, ಧನಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ವ್ಯಾಪಾರ ವಿಸ್ತರಣೆಯ ಭಾಗವಾಗಿ ಈಗ ತನಿಷ್ಕ್‌ ಮಳಿಗೆಯಲ್ಲಿ ಇಲ್ಲಿ ಆರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ.

ನ್ಯೂಜೆರ್ಸಿಯ ಐಸೆಲಿನ್‌ ಓಕ್‌ ಟ್ರೀ ರಸ್ತೆಯಲ್ಲಿ ಈ ಎರಡು ಮಹಡಿಯ ಮಳಿಗೆ ಇದ್ದು, 3750 ಚದರ ಅಡಿ ವಿಸ್ತೀರ್ಣ ಹೊಂದಿದೆ. 18 ಮತ್ತು 22 ಕ್ಯಾರಟ್‌ ಚಿನ್ನ, ವಜ್ರದ 6,500ಕ್ಕೂ ಹೆಚ್ಚು ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯ ಇವೆ. ಅದೇ ರೀತಿ ಸಾಲಿಟೇರ್‌ ಮತ್ತು ಕಲರ್‌ ಸ್ಟೋನ್‌ಗಳೂ ಇವೆ. ಉದ್ಘಾಟನಾ ಕಾರ್ಯಕ್ರಮದ ವೇಳೆ ಮಳಿಗೆಯಲ್ಲಿ ಕಲರ್‌ ಮಿ ಜಾಯ್‌ ಎಂಬ ಕಾಕ್‌ಟೇಲ್‌ ಜುವೆಲ್ಲರಿ ಕಲೆಕ್ಷನ್‌, ರೊಮಾನ್ಸ್‌ ಆಫ್‌ ಪೊಲ್ಕಿ, ರಿದಮ್ಸ್‌ ಆಫ್‌ ರೇನ್‌, ಮೂಡ್ಸ್‌ ಆಫ್‌ ಅರ್ಥ್‌, ಅಲೆಖ್ಯಾ ಮುಂತಾದ ಕಲೆಕ್ಷನ್ಸ್‌ ಅನ್ನು ಪ್ರದರ್ಶನ ಮಾಡಲಾಗಿತ್ತು. ಜುವೆಲ್ಲರಿ ಖರೀದಿ ಸಂದರ್ಭದಲ್ಲಿ ಉಚಿತ ಚಿನ್ನದ ನಾಣ್ಯ ಮತ್ತು ವಜ್ರದ ಆಭರಣ ಖರೀದಿಗೆ ಶೇಕಡ 25ರ ತನಕ ರಿಯಾಯಿಯನ್ನೂ ಕಂಪನಿ ಒದಗಿಸಿತ್ತು.

"ನಾವು ತನಿಷ್ಕ್ ಅನ್ನು ಜಾಗತಿಕ ಬ್ರಾಂಡ್ ಆಗಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಮ್ಮ ರಿಟೇಲ್‌ ಶೋರೂಮ್ ವಿಸ್ತರಣೆಯು ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ತನಿಷ್ಕ್ ದಶಕಗಳಿಂದ ಆಧುನಿಕತೆಯ ತೇಜಸ್ಸಿನೊಂದಿಗೆ ಸಂಪ್ರದಾಯದ ಸೊಬಗನ್ನು ಸಮತೋಲನಗೊಳಿಸುತ್ತಿದೆ. ನಾವು ಅದನ್ನು ನ್ಯೂಜೆರ್ಸಿಗೆ ತರಲು ಬಯಸುತ್ತೇವೆ ಎಂದು ತನಿಷ್ಕ್‌ನ ಮಾತೃಸಂಸ್ಥೆ ಟೈಟಾನ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿ ಕೆ ವೆಂಕಟರಾಮನ್ ಹೇಳಿದರು.

ಟೈಟಾನ್ ಕಂಪನಿ ಲಿಮಿಟೆಡ್‌ನ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಡಿವಿಷನ್ ಸಿಇಒ ಕುರುವಿಲ್ಲಾ ಮಾರ್ಕೋಸ್, “ತನಿಷ್ಕ್ ಈಗಾಗಲೇ ಯುಎಸ್ ಮಾರುಕಟ್ಟೆಯಲ್ಲಿ ಗಮನಾರ್ಹ ಆನ್‌ಲೈನ್ ಉಪಸ್ಥಿತಿಯನ್ನು ಹೊಂದಿದೆ. ಭಾರತೀಯ ಅಮೆರಿಕನ್ ಸಮುದಾಯವು ತೋರಿಸಿದ ಹೆಚ್ಚಿನ ಬೇಡಿಕೆ ಮತ್ತು ಆಸಕ್ತಿಯ ಕಾರಣ ಇಲ್ಲಿ ಮಳಿಗೆ ಆರಂಭಿಸುವುದಕ್ಕೆ ನಮಗೆ ಉತ್ತೇಜನ ನೀಡಿತು. ಈ ಶೋರೂಂನಲ್ಲಿ ನಮ್ಮ ಇತ್ತೀಚಿನ ಕಲೆಕ್ಷನ್ಸ್‌ ಮತ್ತು ಉತ್ಕೃಷ್ಣಚಿನ್ನಾಭರಣಗಳನ್ನು ಭಾರತೀಯ ಅಮೆರಿಕನ್ನರ ಎಲ್ಲ ಆಭರಣ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದರು.

ಟೈಟಾನ್‌ ಕಂಪನಿಯ ನಾರ್ತ್‌ ಅಮೆರಿಕ ಬ್ಯುಸಿನೆಸ್‌ ಹೆಡ್‌ ಅಮೃತ್‌ ಪಾಲ್‌ ಸಿಂಗ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ