ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೆಟ್ರೋಲ್‌ ಡೀಸೆಲ್‌ ದರ ಶೇ 500ರಷ್ಟು ಹೆಚ್ಚಳ, ಸರಕಾರದ ನಿರ್ಧಾರದಿಂದ ಈ ದೇಶದ ಪ್ರಜೆಗಳು ತತ್ತರ

ಪೆಟ್ರೋಲ್‌ ಡೀಸೆಲ್‌ ದರ ಶೇ 500ರಷ್ಟು ಹೆಚ್ಚಳ, ಸರಕಾರದ ನಿರ್ಧಾರದಿಂದ ಈ ದೇಶದ ಪ್ರಜೆಗಳು ತತ್ತರ

Praveen Chandra B HT Kannada

Jan 10, 2024 12:52 PM IST

ಪೆಟ್ರೋಲ್‌ ಬಂಕ್‌ನಲ್ಲಿ ಇಂಧನ ತುಂಬಿಸುವ ಸರದಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಕಾರನ್ನು ತಳ್ಳಿಕೊಂಡು ಹೋಗುವುದು.

    • ಕ್ಯೂಬಾವೆಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಫೆಬ್ರವರಿ 1ರಿಂದ ಇಂಧನ ದರ ಐದು ಪಟ್ಟು ಅಂದರೆ ಶೇಕಡ 500ರಷ್ಟು ಹೆಚ್ಚಾಗಲಿದೆ. ಈ ಕುರಿತು ಕ್ಯೂಬಾ ಸರಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಹಣದುಬ್ಬರ ಮತ್ತು ಉತ್ಪನ್ನದ ಕೊರತೆಯಿಂದ ಬಳಲುತ್ತಿರುವ ಕ್ಯೂಬಾದ ಜನರ ಪರಿಸ್ಥಿತಿ ಇದರಿಂದ ಇನ್ನಷ್ಟು ಬಿಗಡಾಯಿಸಲಿದೆ.
ಪೆಟ್ರೋಲ್‌ ಬಂಕ್‌ನಲ್ಲಿ ಇಂಧನ ತುಂಬಿಸುವ ಸರದಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಕಾರನ್ನು ತಳ್ಳಿಕೊಂಡು ಹೋಗುವುದು.
ಪೆಟ್ರೋಲ್‌ ಬಂಕ್‌ನಲ್ಲಿ ಇಂಧನ ತುಂಬಿಸುವ ಸರದಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಕಾರನ್ನು ತಳ್ಳಿಕೊಂಡು ಹೋಗುವುದು. (Photo: REUTERS/Yander Zamora)

ಬೆಂಗಳೂರಿನಲ್ಲೀಗ ಪೆಟ್ರೋಲ್‌ ದರ ಲೀಟರ್‌ಗೆ 101.94 ರೂಪಾಯಿ ಇದೆ. ಭಾರತದಲ್ಲಿ ಇಂಧನ ದರದಲ್ಲಿ ಸ್ಥಿರತೆ ಇದೆ. ಆದರೆ, ಜಗತ್ತಿನ ಕೆಲವು ದೇಶಗಳಲ್ಲಿ ಪೆಟ್ರೋಲ್‌, ಡೀಸೆಲ್‌ಗೆ ತತ್ತ್ವಾರ ಉಂಟಾಗಿದೆ. ಕ್ಯೂಬಾ ಎಂಬ ಪುಟ್ಟ ದೇಶವು ಇಂಧನ ಕೊರತೆಯಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ತನ್ನ ದೇಶದ ನಾಗರಿಕರಿಗೆ ಆಘಾತವಾಗುವಂತಹ ಸುದ್ದಿಯೊಂದನ್ನು ನೀಡಿದೆ. ಫೆಬ್ರವರಿ 1ರಿಂದ ಅನ್ವಯವಾಗುವಂತೆ ಇಂಧನ ದರವನ್ನು ಐದು ಪಟ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ.

ಟ್ರೆಂಡಿಂಗ್​ ಸುದ್ದಿ

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಈಗಾಗಲೇ ಹಣದುಬ್ಬರ ಮತ್ತು ಉತ್ಪನ್ನದ ಕೊರತೆಯಿಂದ ಪರಿತಪಿಸುತ್ತಿರುವ ಕ್ಯೂಬಾ ಎಂಬ ದ್ವೀಪರಾಷ್ಟ್ರದಲ್ಲಿ ಇಂಧನ ದರವು ಐದು ಪಟ್ಟು ಹೆಚ್ಚಾಗಲಿದೆ. ಫೆಬ್ರವರಿ 1ರಿಂದ ಅನ್ವಯವಾಗುವಂತೆ ಇಂಧನ ದರ ಶೇಕಡ 500ರಷ್ಟ ಏರಿಕೆ ಮಾಡುವುದಾಗಿ ಅಲ್ಲಿನ ಕಮ್ಯುನಿಸ್‌ ಸರಕಾರ ಪ್ರಕಟಿಸಿದೆ. ಸರಕಾರವು ತನ್ನ ಬಜೆಟ್‌ ಕೊರತೆ ನಿಭಾಯಿಸುವ ಸಲುವಾಗಿ ಇಂತಹ ಕ್ರಮಕ್ಕೆ ಮುಂದಾಗಿದೆ.

ಕ್ಯೂಬಾದಲ್ಲಿ ಪೆಟ್ರೋಲ್‌ ದರ ಎಷ್ಟು?

ಸದ್ಯ ಕ್ಯೂಬಾದಲ್ಲಿ ಒಂದು ಲೀಟರ್‌ ಸಾಮಾನ್ಯ ಪೆಟ್ರೋ ದರ 25 ಪೆಸೊ ಇದೆ. ಫೆಬ್ರವರಿ 1ರಿಂದ ಈ ದರವು 132 ಪೆಸೊಗೆ ತಲುಪಲಿದೆ. ಪ್ರೀಮಿಯಂ ಗ್ಯಾಸೊ ದರವು ಈಗಿನ 30 ಪೆಸೊದಿಂದ 156 ಪೆಸೊಗೆ ಏರಲಿದೆ. ಪೆಸೊ ಎನ್ನುವುದು ಕ್ಯೂಬಾದ ಕರೆನ್ಸಿ.

ಕ್ಯೂಬಾದಲ್ಲಿ ಒಬ್ಬ ವ್ಯಕ್ತಿ ತನ್ನ ಬೈಕ್‌ಗೆ ಹತ್ತು ಲೀಟರ್‌ ಪೆಟ್ರೋಲ್‌ ಖರೀದಿಸಲು ಬಯಸಿದರೆ ಅವರು ತನ್ನ ತಿಂಗಳ ವೇತನದ ಅರ್ಧದಷ್ಟು ಖರ್ಚು ಮಾಡಬೇಕಾಗುತ್ತದೆ. ಅಂದರೆ, ಅಲ್ಲಿ ಒಬ್ಬರು ತನ್ನ ಸರಾಸರಿ ತಿಂಗಳ ವೇತನದಲ್ಲಿ ಅರ್ಧದಷ್ಟು ಅಂದರೆ 21 ಡಾಲರ್‌ ರೂಪಾಯಿಯನ್ನು ಪೆಟ್ರೋಲ್‌ಗೆ ವ್ಯಯಿಸಬೇಕಾಗುತ್ತದೆ. ಕ್ಯೂಬಾದ ಸರಾಸರಿ ವೇತನ 40 ಡಾಲರ್‌. ಇಷ್ಟು ಹಣದಲ್ಲಿ ಆತ ಒಂದು ವಾರ ಮಾತ್ರ ಬೈಕ್‌ ಓಡಿಸಲು ಸಾಧ್ಯ ಎಂದು ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

"ಹತ್ತು ಲೀಟರ್‌ ಪೆಟ್ರೋಲ್‌ನಲ್ಲಿ ನಾನು ದೈನಂದಿನ ಅಗತ್ಯಗಳನ್ನು ಮಾತ್ರ ಪೂರೈಸಬಹುದು. ಅಂದರೆ, ದಿನ ಕೆಲಸಕ್ಕೆ ಹೋಗುವುದು, ಮಗಳನ್ನು ಶಾಲೆಗೆ ಕಳುಹಿಸುವುದು ಮತ್ತು ಶಾಲೆಯಿಂದ ಕರೆತರುವುದು, ತಂಗಿಯನ್ನು ಭೇಟಿ ಮಾಡುವುದು ಇಷ್ಟೇ ಮಾಡಲು ಸಾಧ್ಯ" ಎಂದು ಪೆಟ್ರೋಲ್‌ ಬಂಕ್‌ನಲ್ಲಿ ತಾಳ್ಮೆಯಿಂದ ಸರದಿ ಕಾಯುತ್ತಿದ್ದ 57ವರ್ಷದ ಬಿಲ್ಡಿಂಗ್‌ ಗಾರ್ಡ್‌ ಎಂಬ ವ್ಯಕ್ತಿ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಸುಮಾರು 1.1 ಕೋಟಿ ಜನರು ಇರುವ ಕ್ಯೂಬಾ ಎಂಬ ದ್ವೀಪ ರಾಷ್ಟ್ರವು 1990ರ ದಶಕದಲ್ಲಿ ಸೋವಿಯತ್‌ ಕುಸಿತದಿಂದ ತೊಂದರೆ ಅನುಭವಿಸಿತ್ತು. ಇತ್ತೀಚಿಗೆ ಕೊರೊನಾ ವೈರಸ್‌ ಸಾಂಕ್ರಾಮಿಕದ ಪರಿಣಾಮದಿಂದ ಆರ್ಥಿಕತೆ ಹದಗೆಟ್ಟಿತ್ತು. ಕ್ಯೂಬಾದ ಕುರಿತು ಅಮೆರಿಕವು ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಇದೇ ಸಮಯದಲ್ಲಿ ಕ್ಯೂಬಾ ಸರಕಾರದ ನೀತಿಗಳು, ಆರ್ಥಿಕ ದೌರ್ಬಲ್ಯಗಳೂ ಅಲ್ಲಿನ ಜನರ ಸಂಕಷ್ಟಕ್ಕೆ ದೂಡಿದೆ.

ಒಂದು ಅಂದಾಜಿನ ಪ್ರಕಾರ ಕ್ಯೂಬಾ ದೇಶದ ಆರ್ಥಿಕತೆಯು 2023ರಲ್ಲಿ ಶೇಕಡ 2ರಷ್ಟು ಕುಸಿದಿತ್ತು. ಆದರೆ, ಅಲ್ಲಿನ ಹಣದುಬ್ಬರವು ಕಳೆದ ವರ್ಷ ಶೇಕಡ 30ಕ್ಕೆ ತಲುಪಿತ್ತು. ಆದರೆ, ಕ್ಯೂಬಾದ ನಿಜವಾದ ಪರಿಸ್ಥಿತಿ ಈ ಅಂದಾಜಿಗಿಂತಲೂ ಹೀನಾಯವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಕ್ಯೂಬಾ ದೇಶದಲ್ಲಿ ಇಂಧನ ಮತ್ತು ಇತರೆ ಮೂಲಭೂತ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಅಗತ್ಯ ಸರಕು ಮತ್ತು ಸೇವೆಗಳಿಗೆ ಸಬ್ಸಿಡಿ ನೀಡುವ ಕ್ಯೂಬಾ ಸರಕಾರವು ಇಂಧನ ಬೆಲೆ ಹೆಚ್ಚಿಸಬೇಕಾಗುತ್ತದೆ ಎಂದು ಕಳೆದ ತಿಂಗಳೇ ಸೂಚನೆ ನೀಡಿತ್ತು. ದೇಶದಲ್ಲಿ ಇಂಧನವನ್ನು ಈ ದರಕ್ಕೆ ನೀಡಲು ಸಾಧ್ಯವಿಲ್ಲ. ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಇಲ್ಲಿನ ದರವು ಅಗ್ಗವಾಗಿದೆ ಎಂದು ಆರ್ಥಿಕ ಸಚಿವ ಅಲೆಜಾಂಡ್ರೊ ಗಿಲ್‌ ಹೇಳಿದ್ದರು. ಕ್ಯೂಬಾದ ಜನರು ಈಗ ಕೆಟ್ಟ ಹಣದುಬ್ಬರದ ತೊಂದರೆಗೆ ಒಳಗಾಗಿದ್ದಾರೆ. ಕ್ಯೂಬಾದ ಜನರ ಸರಾಸರಿ ಮಾಸಿಕ ವೇತನವು 40 ಡಾಲರ್‌ಗೆ ಸಮವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ