ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kl Rahul: ವಿರಾಟ್ ಕೊಹ್ಲಿ ಹಿಂದಿಕ್ಕಿ ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕೆಎಲ್ ರಾಹುಲ್

KL Rahul: ವಿರಾಟ್ ಕೊಹ್ಲಿ ಹಿಂದಿಕ್ಕಿ ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕೆಎಲ್ ರಾಹುಲ್

Apr 28, 2024 07:27 AM IST

KL Rahul : ರಾಜಸ್ಥಾನ್ ರಾಯಲ್ಸ್ ವಿರುದ್ಧ 76 ರನ್ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಐಪಿಎಲ್​​ ಇತಿಹಾಸದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

  • KL Rahul : ರಾಜಸ್ಥಾನ್ ರಾಯಲ್ಸ್ ವಿರುದ್ಧ 76 ರನ್ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಐಪಿಎಲ್​​ ಇತಿಹಾಸದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
(1 / 5)
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.(AP)
ತಂಡವು ಆರಂಭದಲ್ಲಿ 11 ರನ್​ಗೆ 2 ವಿಕೆಟ್ ಕಳೆದುಕೊಂಡ ವೇಳೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ರಾಹುಲ್ 48 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​​ ಸಹಿತ 76 ರನ್ ಸಿಡಿಸಿ ಔಟಾದರು.
(2 / 5)
ತಂಡವು ಆರಂಭದಲ್ಲಿ 11 ರನ್​ಗೆ 2 ವಿಕೆಟ್ ಕಳೆದುಕೊಂಡ ವೇಳೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ರಾಹುಲ್ 48 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​​ ಸಹಿತ 76 ರನ್ ಸಿಡಿಸಿ ಔಟಾದರು.(PTI)
ಐಪಿಎಲ್​​ನಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ 4000 ರನ್ ಪೂರೈಸಿದರು. ಓಪನರ್ ಆಗಿ ವೇಗವಾಗಿ 4000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಹುಲ್ ಆರಂಭಿಕನಾಗಿ 94 ಇನ್ನಿಂಗ್ಸ್​​ಗಳಲ್ಲಿ 4041 ರನ್ ಗಳಿಸಿದ್ದಾರೆ. ಒಟ್ಟಾರೆ ಐಪಿಎಲ್​​ನಲ್ಲಿ 127 ಪಂದ್ಯಗಳಲ್ಲಿ 4,541 ರನ್ ಗಳಿಸಿದ್ದಾರೆ. 
(3 / 5)
ಐಪಿಎಲ್​​ನಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ 4000 ರನ್ ಪೂರೈಸಿದರು. ಓಪನರ್ ಆಗಿ ವೇಗವಾಗಿ 4000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಹುಲ್ ಆರಂಭಿಕನಾಗಿ 94 ಇನ್ನಿಂಗ್ಸ್​​ಗಳಲ್ಲಿ 4041 ರನ್ ಗಳಿಸಿದ್ದಾರೆ. ಒಟ್ಟಾರೆ ಐಪಿಎಲ್​​ನಲ್ಲಿ 127 ಪಂದ್ಯಗಳಲ್ಲಿ 4,541 ರನ್ ಗಳಿಸಿದ್ದಾರೆ. (PTI)
ವಿರಾಟ್ ಕೊಹ್ಲಿ ಆರಂಭಿಕನಾಗಿ 4000+ ರನ್ ಪೂರೈಸಲು 107 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಇದೀಗ ಕೊಹ್ಲಿ ದಾಖಲೆ ಹಿಂದಿಕ್ಕಿದ ಕೆಎಲ್ ರಾಹುಲ್ 94 ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲು ದಾಟುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
(4 / 5)
ವಿರಾಟ್ ಕೊಹ್ಲಿ ಆರಂಭಿಕನಾಗಿ 4000+ ರನ್ ಪೂರೈಸಲು 107 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಇದೀಗ ಕೊಹ್ಲಿ ದಾಖಲೆ ಹಿಂದಿಕ್ಕಿದ ಕೆಎಲ್ ರಾಹುಲ್ 94 ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲು ದಾಟುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.(PTI)
ಐಪಿಎಲ್​​ನಲ್ಲಿ 4000 ರನ್ ಗಡಿ ದಾಟಿದ 5ನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಶಿಖರ್ ಧವನ್ (6,362), ಡೇವಿಡ್ ವಾರ್ನರ್ (5,909), ಕ್ರಿಸ್ ಗೇಲ್ (4,480), ವಿರಾಟ್ ಕೊಹ್ಲಿ (4,041) ಮತ್ತು ಕೆಎಲ್ ರಾಹುಲ್ (4041) ಐಪಿಎಲ್​​​ನಲ್ಲಿ ಆರಂಭಿಕನಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ -5 ರಲ್ಲಿದ್ದಾರೆ. 
(5 / 5)
ಐಪಿಎಲ್​​ನಲ್ಲಿ 4000 ರನ್ ಗಡಿ ದಾಟಿದ 5ನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಶಿಖರ್ ಧವನ್ (6,362), ಡೇವಿಡ್ ವಾರ್ನರ್ (5,909), ಕ್ರಿಸ್ ಗೇಲ್ (4,480), ವಿರಾಟ್ ಕೊಹ್ಲಿ (4,041) ಮತ್ತು ಕೆಎಲ್ ರಾಹುಲ್ (4041) ಐಪಿಎಲ್​​​ನಲ್ಲಿ ಆರಂಭಿಕನಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ -5 ರಲ್ಲಿದ್ದಾರೆ. (PTI)

    ಹಂಚಿಕೊಳ್ಳಲು ಲೇಖನಗಳು