logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಹುಲ್-ಸ್ಯಾಮ್ಸನ್​ಗಿಲ್ಲ ಚಾನ್ಸ್, ಆರ್‌ಸಿಬಿ ವೇಗಿಗಳಿಗೆ ಅಚ್ಚರಿಯ ಕರೆ: ಟಿ20 ವಿಶ್ವಕಪ್‌ಗೆ ಭಾರತ ತಂಡ ಕಟ್ಟಿದ ಜಹೀರ್ ಖಾನ್

ರಾಹುಲ್-ಸ್ಯಾಮ್ಸನ್​ಗಿಲ್ಲ ಚಾನ್ಸ್, ಆರ್‌ಸಿಬಿ ವೇಗಿಗಳಿಗೆ ಅಚ್ಚರಿಯ ಕರೆ: ಟಿ20 ವಿಶ್ವಕಪ್‌ಗೆ ಭಾರತ ತಂಡ ಕಟ್ಟಿದ ಜಹೀರ್ ಖಾನ್

Apr 27, 2024 08:49 PM IST

Zaheer Khan : 2024ರ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಮಾಜಿ ವೇಗಿ ಜಹೀರ್​ ಖಾನ್ ಅವರು ಆರಿಸಿದ್ದಾರೆ. ತನ್ನ ನೆಚ್ಚಿನ ತಂಡದಲ್ಲಿ ಆರ್​ಸಿಬಿ ವೇಗಿ ಯಶ್ ದಯಾಳ್​​ಗೆ ಅವಕಾಶ ನೀಡಿದ್ದಾರೆ.

  • Zaheer Khan : 2024ರ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಮಾಜಿ ವೇಗಿ ಜಹೀರ್​ ಖಾನ್ ಅವರು ಆರಿಸಿದ್ದಾರೆ. ತನ್ನ ನೆಚ್ಚಿನ ತಂಡದಲ್ಲಿ ಆರ್​ಸಿಬಿ ವೇಗಿ ಯಶ್ ದಯಾಳ್​​ಗೆ ಅವಕಾಶ ನೀಡಿದ್ದಾರೆ.
ಜೂನ್ 1 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿಗೆ ಶೀಘ್ರದಲ್ಲೇ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್​ ಖಾನ್ 15 ಸದಸ್ಯರ ತಂಡವನ್ನು ಕಟ್ಟಿದ್ದಾರೆ.
(1 / 5)

ವೇಗದ ಬೌಲರ್​ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿ ಡೆತ್​ ಓವರ್​​​ಗಳಿಗೆ ಆರ್​ಸಿಬಿ ತಂಡದ ಯುವ ವೇಗಿ ಯಶ್ ದಯಾಳ್​ಗೆ ಅವಕಾಶ ಚಾನ್ಸ್ ಕೊಡಬೇಕೆಂದು ತಿಳಿಸಿದ್ದಾರೆ. ಇದಲ್ಲದೆ, ವಿಕೆಟ್ ಕೀಪರ್ ಸ್ಥಾನಕ್ಕೆ ಒಬ್ಬರನ್ನಷ್ಟೇ ಆಯ್ಕೆ ಮಾಡಿದ್ದಾರೆ.
(2 / 5)

ಯಶ್ ದಯಾಳ್​ಗೆ ಸ್ಥಾನ ನೀಡಿದರೆ, ಡೆತ್​ ಓವರ್​ಗಳಲ್ಲಿ ಬಲ ಹೆಚ್ಚಲಿದೆ. ಶಮಿ ಸ್ಥಾನವನ್ನು ತುಂಬುವ ಸಾಮರ್ಥ್ಯ ಅವರಿಗಿದೆ. ಏಕೆಂದರೆ ಸಿರಾಜ್ ಲಯ ಕಳೆದುಕೊಂಡಿದ್ದು, ಯಶ್ ದಯಾಳ್​ಗೆ ಅವಕಾಶ ನೀಡಿದರೆ ನಂಬಿಕೆ ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
(3 / 5)

ಭಾರತ ತಂಡದಲ್ಲಿ ಒಬ್ಬ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡುತ್ತೇನೆ. ರಿಷಭ್ ಪಂತ್ ಈ ಅವಕಾಶ ಪಡೆಯಲಿದ್ದಾರೆ. ಆದರೆ ನಾನು ನಾಲ್ವರು ವೇಗಿಗಳಿಗೆ ಆದ್ಯತೆ ಕೊಡುತ್ತೇನೆ. ಒಬ್ಬ ಹೆಚ್ಚುವರಿ ವಿಕೆಟ್ ಕೀಪರ್​​ಗಾಗಿ ಫಾಸ್ಟ್​ ಬೌಲರ್​ ಅನ್ನು ತ್ಯಾಗ ಮಾಡುವುದು ಸರಿಯಲ್ಲ ಎಂದಿದ್ದಾರೆ.
(4 / 5)

ಜಹೀರ್​ ಖಾನ್ ಕಟ್ಟಿದ ಟಿ20 ತಂಡ ಇಲ್ಲಿದೆ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸುರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಂಡ್ಯ, ರವಿಂದ್ರ ಜಡೇಜಾ, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಯಶ್ ದಯಾಳ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್.
(5 / 5)

    ಹಂಚಿಕೊಳ್ಳಲು ಲೇಖನಗಳು