ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ ಮತ್ತೊಂದು ಮೈಲಿಗಲ್ಲು; ಇಂಗ್ಲೆಂಡ್‌ ವಿರುದ್ಧ ಈ ದಾಖಲೆ ಬರೆದ ಮೊದಲ ಭಾರತೀಯ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ ಮತ್ತೊಂದು ಮೈಲಿಗಲ್ಲು; ಇಂಗ್ಲೆಂಡ್‌ ವಿರುದ್ಧ ಈ ದಾಖಲೆ ಬರೆದ ಮೊದಲ ಭಾರತೀಯ

Feb 23, 2024 01:10 PM IST

Ravichandran Ashwin: ಟೆಸ್ಟ್‌ ಕ್ರಿಕೆಟ್‌ನಲ್ಲಿ ಇತ್ತೀಚೆಗಷ್ಟೆ 500 ವಿಕೆಟ್‌ ಸಾಧನೆ ಮಾಡಿದ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಆಂಗ್ಲರ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

  • Ravichandran Ashwin: ಟೆಸ್ಟ್‌ ಕ್ರಿಕೆಟ್‌ನಲ್ಲಿ ಇತ್ತೀಚೆಗಷ್ಟೆ 500 ವಿಕೆಟ್‌ ಸಾಧನೆ ಮಾಡಿದ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಆಂಗ್ಲರ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ 100 ವಿಕೆಟ್ ಗಳಿಸಿದ ಭಾರತದ ಮೊದಲ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.
(1 / 6)
ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ 100 ವಿಕೆಟ್ ಗಳಿಸಿದ ಭಾರತದ ಮೊದಲ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.(AFP)
ಸಕ್ರಿಯ ಆಟಗಾರರ ಪೈಕಿ, ಆಸ್ಟ್ರೇಲಿಯಾದ ನಾಥನ್ ಲಿಯಾನ್ ಮಾತ್ರ ಇಂಗ್ಲೆಂಡ್ ವಿರುದ್ಧ 100 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸಾರ್ವಕಾಲಿಕ ದಾಖಲೆಯು ಶೇನ್ ವಾರ್ನ್ ಅವರ ಹೆಸರಿನಲ್ಲಿದೆ. ಅವರು 72 ಇನ್ನಿಂಗ್ಸ್‌ಗಳಿಂದ 195 ವಿಕೆಟ್‌ಗಳನ್ನು ಗಳಿಸಿದ್ದಾರೆ.
(2 / 6)
ಸಕ್ರಿಯ ಆಟಗಾರರ ಪೈಕಿ, ಆಸ್ಟ್ರೇಲಿಯಾದ ನಾಥನ್ ಲಿಯಾನ್ ಮಾತ್ರ ಇಂಗ್ಲೆಂಡ್ ವಿರುದ್ಧ 100 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸಾರ್ವಕಾಲಿಕ ದಾಖಲೆಯು ಶೇನ್ ವಾರ್ನ್ ಅವರ ಹೆಸರಿನಲ್ಲಿದೆ. ಅವರು 72 ಇನ್ನಿಂಗ್ಸ್‌ಗಳಿಂದ 195 ವಿಕೆಟ್‌ಗಳನ್ನು ಗಳಿಸಿದ್ದಾರೆ.(AFP)
ಫೆಬ್ರವರಿ 23ರ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 100ನೇ ವಿಕೆಟ್ ಪಡೆದಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲು ತಮ್ಮ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ವಿಕೆಟ್‌ ಪಡೆಯುವ ಮೂಲಕ ಅಶ್ವಿನ್ ಈ ಮೈಲಿಗಲ್ಲು ತಲುಪಿದರು.
(3 / 6)
ಫೆಬ್ರವರಿ 23ರ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 100ನೇ ವಿಕೆಟ್ ಪಡೆದಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲು ತಮ್ಮ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ವಿಕೆಟ್‌ ಪಡೆಯುವ ಮೂಲಕ ಅಶ್ವಿನ್ ಈ ಮೈಲಿಗಲ್ಲು ತಲುಪಿದರು.(PTI)
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್‌ಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅಶ್ವಿನ್. ಭಾರತದ ವಿರುದ್ಧ 38 ಟೆಸ್ಟ್ ಪಂದ್ಯಗಳಲ್ಲಿ‌ ಜೇಮ್ಸ್ ಆಂಡರ್ಸನ್ 145 ವಿಕೆಟ್ ಪಡೆದಿದ್ದಾರೆ.
(4 / 6)
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್‌ಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅಶ್ವಿನ್. ಭಾರತದ ವಿರುದ್ಧ 38 ಟೆಸ್ಟ್ ಪಂದ್ಯಗಳಲ್ಲಿ‌ ಜೇಮ್ಸ್ ಆಂಡರ್ಸನ್ 145 ವಿಕೆಟ್ ಪಡೆದಿದ್ದಾರೆ.(AFP)
ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಆಟಗಾರ ಅಶ್ವಿನ್‌. ಈ ಪಟ್ಟಿಯಲ್ಲಿ ಬಿಎಸ್ ಚಂದ್ರಶೇಖರ್ ಅವರು 95 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
(5 / 6)
ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಆಟಗಾರ ಅಶ್ವಿನ್‌. ಈ ಪಟ್ಟಿಯಲ್ಲಿ ಬಿಎಸ್ ಚಂದ್ರಶೇಖರ್ ಅವರು 95 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.(AP)
ಅನಿಲ್ ಕುಂಬ್ಳೆ 92 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಬಿಶನ್ ಸಿಂಗ್ ಬೇಡಿ 85 ವಿಕೆಟ್‌ ಪಡೆದರೆ, ಕಪಿಲ್ ದೇವ್ 85 ವಿಕೆಟ್‌ ಕಬಳಿಸಿದ್ದಾರೆ.
(6 / 6)
ಅನಿಲ್ ಕುಂಬ್ಳೆ 92 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಬಿಶನ್ ಸಿಂಗ್ ಬೇಡಿ 85 ವಿಕೆಟ್‌ ಪಡೆದರೆ, ಕಪಿಲ್ ದೇವ್ 85 ವಿಕೆಟ್‌ ಕಬಳಿಸಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು