ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆಯ ವಡ್ಡರಹಳ್ಳಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಫೋಟೋ ವರದಿ

Jun 30, 2023 05:32 PM IST

Hospete Accident: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಸೇತುವೆ ಸಮೀಪ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರಂತದಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅಪಘಾತ ಸ್ಥಳದ ಫೋಟೋಸ್‌ ಇಲ್ಲಿವೆ.

ಹೊಸಪೇಟೆ ತಾಲೂಕು ವಡ್ಡರಹಳ್ಳಿ ಸೇತುವೆ ಸಮೀಪ ಶುಕ್ರವಾರ ಎರಡು ಆಟೋ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ತುಂಗಭದ್ರಾ ಡ್ಯಾಮ್‌ ಕಡೆಗೆ ಆಟೋ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. 
(1 / 3)

ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಒಂದು ಆಟೋ ರಸ್ತೆಯಿಂದ ಹೊರಕ್ಕೆ ಎಸೆಯಲ್ಪಟ್ಟು ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನೊಂದು ಕಾರ್ಗೊ ಆಟೋ ಲಾರಿಯ ಬದಿಗೆ ಅಂಟಿಕೊಂಡಂತೆ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. 
(2 / 3)

ಮೃತಪಟ್ಟವರು ಬಳ್ಳಾರಿಯ ಗೌತಮ ನಗರದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳ ಚಿಕಿತ್ಸೆಗೆ 50,000 ರೂಪಾಯಿಯನ್ನು ಸರಕಾರ ಘೋಷಿಸಿದೆ. 
(3 / 3)

    ಹಂಚಿಕೊಳ್ಳಲು ಲೇಖನಗಳು