ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi Temple Run: ಮೋದಿ ದೇಗುಲ ದರ್ಶನ: ಉತ್ತರಾಖಂಡ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಧ್ಯಾನಸ್ಥ ಪ್ರಧಾನಿ

Modi Temple run: ಮೋದಿ ದೇಗುಲ ದರ್ಶನ: ಉತ್ತರಾಖಂಡ ಆದಿ ಕೈಲಾಸ, ಪಾರ್ವತಿ ಕುಂಡದಲ್ಲಿ ಧ್ಯಾನಸ್ಥ ಪ್ರಧಾನಿ

Oct 12, 2023 12:10 PM IST

ಪ್ರಧಾನಿ ನರೇಂದ್ರ ಮೋದಿ ಅವಕಾಶ ಸಿಕ್ಕಾಗಲೆಲ್ಲಾ ದೇಗುಲ ದರ್ಶನ ಮಾಡಿ ಧ್ಯಾನಸ್ಥ ಸ್ಥಿತಿಗೆ ಹೋಗುತ್ತಾರೆ. ಗುರುವಾರವೂ ಉತ್ತರಾಖಂಡ ಪ್ರವಾಸದಲ್ಲಿರುವ ಮೋದಿ ವಿಶಿಷ್ಟ ಉಡುಗೆಯಲ್ಲಿ ಭೇಟಿ ನೀಡಿದ್ದು ಪ್ರಸಿದ್ದ ಯಾತ್ರಾ ಸ್ಥಳ ಪಾರ್ವತಿ ಕುಂಡಕ್ಕೆ. ಅಲ್ಲಿಂದ ಆದಿಕೈಲಾಸ ಪರ್ವತ ಎದುರು ಕುಳಿತರು. ಒಂದೂವರೆ ತಾಸು ಉಲ್ಲಸಿತರಾದರು. ಹೀಗಿತ್ತು ಅವರ ದೇಗುಲ ದರ್ಶನದ ದಿನಚರಿ.

  • ಪ್ರಧಾನಿ ನರೇಂದ್ರ ಮೋದಿ ಅವಕಾಶ ಸಿಕ್ಕಾಗಲೆಲ್ಲಾ ದೇಗುಲ ದರ್ಶನ ಮಾಡಿ ಧ್ಯಾನಸ್ಥ ಸ್ಥಿತಿಗೆ ಹೋಗುತ್ತಾರೆ. ಗುರುವಾರವೂ ಉತ್ತರಾಖಂಡ ಪ್ರವಾಸದಲ್ಲಿರುವ ಮೋದಿ ವಿಶಿಷ್ಟ ಉಡುಗೆಯಲ್ಲಿ ಭೇಟಿ ನೀಡಿದ್ದು ಪ್ರಸಿದ್ದ ಯಾತ್ರಾ ಸ್ಥಳ ಪಾರ್ವತಿ ಕುಂಡಕ್ಕೆ. ಅಲ್ಲಿಂದ ಆದಿಕೈಲಾಸ ಪರ್ವತ ಎದುರು ಕುಳಿತರು. ಒಂದೂವರೆ ತಾಸು ಉಲ್ಲಸಿತರಾದರು. ಹೀಗಿತ್ತು ಅವರ ದೇಗುಲ ದರ್ಶನದ ದಿನಚರಿ.
ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಪ್ರಸಿದ್ದ ಯಾತ್ರಾ ಸ್ಥಳವಾದ ಪಿತೋರ್‌ ಗರ್ಹ್‌ನಲ್ಲಿರುವ ಶಿವಪಾರ್ವತಿ ದೇಗುಲದಲ್ಲಿ ಸಾಂಪ್ರದಾಯಿಕ ಉಡುಪಿನೊಂದಿಗೆ ಪೂಜೆ ಸಲ್ಲಿಸಿದರು
(1 / 7)

ಉತ್ತರಾಖಂಡದ ಕೈಲಾಸ ಪರ್ವದಲ್ಲಿರುವ ಶಿವ ಪಾರ್ವತಿ ದೇಗುಲ ಎದುರಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ಸ್ಥಳೀಯರು ಮೋದಿ ಅವರೊಂದಿಗೆ ಇದ್ದರು.
(2 / 7)

ಪ್ರಧಾನಿ ನರೇಂದ್ರ ಮೋದಿ ಉತ್ತರಾ ಖಂಡ ರಾಜ್ಯ ಪ್ರವಾಸದಲ್ಲಿರುವುದರಿಂದ ಗುರುವಾರ ಬೆಳಿಗ್ಗೆ ಪಿತೋರ್‌ಗರ್ಹ್‌ನಲ್ಲಿರುವ ಪಾರ್ವತಿ ಕುಂಡಕ್ಕೆ ತೆರಳಿ ಅಲ್ಲಿಂದ ಆದಿ ಕೈಲಾಸ ಪರ್ವತ ಶ್ರೇಣಿಯಲ್ಲಿರುವ ಶಿವನಿಗೂ ವಿಶೇಷ ಪೂಜೆ ಸಲ್ಲಿಸಿದರು.
(3 / 7)

ಶಿವ ಪಾರ್ವತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಅದೇ ಉಡುಪಿನಲ್ಲಿ ಸಮೀಪದಲ್ಲೇ ಇರುವ ಆದಿ ಕೈಲಾಸ ಪರ್ವತದ ಕಡೆಗೆ ಹೊರಟರು. ಅಲ್ಲಿ ಕೆಲ ಹೊತ್ತು ಕುಳಿತು ಧ್ಯಾನವನ್ನೂ ಮೋದಿ ಮಾಡಿದರು.
(4 / 7)

ಪ್ರಧಾನಿ ಮೋದಿ ಅವರು ಉತ್ತರ ಖಂಡದ ಆದಿಕೈಲಾಸ ಪರ್ವದ ಎದುರು ಧ್ಯಾನ ಕುಳಿತು ಕೆಲ ಹೊತ್ತು ಕಳೆದರು. ಇಲ್ಲಿ ಕಳೆದು ಮನಸು ಪ್ರಫುಲ್ಲವಾಗಿದೆ ಎಂದು ಹೇಳೊಂಡರು.
(5 / 7)

ಉತ್ತರಾಖಂಡದ ಪ್ರಸಿದ್ದ ಯಾತ್ರಾ ಸ್ಥಳವಾದ ಪಿತೋರ್‌ಗರ್ಹ್‌ನಲ್ಲಿರುವ ಸರೋವರ ಹಾಗೂ ಪರ್ವತದ ಎದುರು  ಮೋದಿ ಮೌನವಾಗಿ ಕುಳಿತು ಧ್ಯಾನಸ್ಥರಾದರು. ಹಿಂದೆಯೂ ಹಿಮಾಲಯ ಪರ್ವತದಲ್ಲಿ ಹೀಗೆಯೇ ಮೋದಿ  ಭೇಟಿ ನೀಡಿದ್ದರು.
(6 / 7)

ಉತ್ತರಾಖಂಡದ ಪಿಥೋರಗಢದ ಪವಿತ್ರ ಪಾರ್ವತಿ ಕುಂಡದ ದರ್ಶನ ಮತ್ತು ಪೂಜೆಯಿಂದ ನಾನು ತುಂಬಿ ಹೋಗಿದ್ದೇನೆ. ಇಲ್ಲಿಂದ ಆದಿ ಕೈಲಾಸ ದರ್ಶನದಿಂದ ಮನಸ್ಸೂ ಪ್ರಸನ್ನವಾಗಿದೆ. ಪ್ರಕೃತಿಯ ಮಡಿಲಲ್ಲಿರುವ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಈ ಸ್ಥಳದಿಂದ ನಮ್ಮ ದೇಶದ ಎಲ್ಲಾ ಕುಟುಂಬ ಸದಸ್ಯರಿಗೆ ಸಂತೋಷದ ಜೀವನ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಮೋದಿ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್‌ ಮಾಡಿದರು.
(7 / 7)

    ಹಂಚಿಕೊಳ್ಳಲು ಲೇಖನಗಳು