ಕನ್ನಡ ಸುದ್ದಿ  /  ಕ್ರೀಡೆ  /  ಭಾರತ Vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ ಯಾವಾಗ; ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?

ಭಾರತ vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ ಯಾವಾಗ; ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?

Jayaraj HT Kannada

Mar 21, 2024 03:35 PM IST

ಭಾರತ vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ

    • 2026ರ ಫಿಫಾ ವಿಶ್ವಕಪ್ ಪಂದ್ಯಾವಳಿಗಿಂತ ಮುಂಚಿತವಾಗಿ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ. ಭಾರತ ಫುಟ್ಬಾಲ್‌ ತಂಡವು ಅಫ್ಘಾನಿಸ್ತಾನ ವಿರುದ್ಧ ಸೆಣಸಲು ಸಜ್ಜಾಗಿದೆ. ಅಫ್ಘನ್ನರ ವಿರುದ್ಧ ಸುನಿಲ್‌ ಛೆಟ್ರಿ ಬಳಗ ಗೆದ್ದರೆ, ಮೂರನೇ ಸುತ್ತಿಗೆ ಪ್ರವೇಶಿಸಲಿದೆ.
ಭಾರತ vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ
ಭಾರತ vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ

ಭಾರತ ಫುಟ್ಬಾಲ್‌ ತಂಡ ಮತ್ತೆ ಅಖಾಡಕ್ಕಿಳಿಯಲಿದೆ. 2026ರ ಫಿಫಾ ವಿಶ್ವಕಪ್ ಆಡುವ ಗುರಿ ಇಟ್ಟುಕೊಂಡಿರುವ ಸುನಿಲ್‌ ಛೆಟ್ರಿ (Sunil Chhetri) ಬಳಗ, ಫಿಫಾ ವಿಶ್ವಕಪ್ (2026 FIFA World Cup Qualifier) ಮತ್ತು 2027ರ ಎಎಫ್‌ಸಿ ಏಶ್ಯನ್ ಕಪ್ ಅರ್ಹತಾ ಅಭಿಯಾನವನ್ನು ಮಾರ್ಚ್‌ 22ರ ಶುಕ್ರವಾರ ಪುನರಾರಂಭಿಸುತ್ತಿದೆ. ಸೌದಿ ಅರೇಬಿಯಾದ ಅಭಾದಲ್ಲಿ ನಡೆಯಲಿರುವ ಪ್ರಾಥಮಿಕ ಜಂಟಿ ಅರ್ಹತಾ ಪಂದ್ಯಗಳ 2ನೇ ಸುತ್ತಿನಲ್ಲಿ ಅಫ್ಘಾನಿಸ್ತಾನವನ್ನು (India vs Afghanistan) ಎದುರಿಸಲಿದೆ. ಇಲ್ಲಿ ಗೆದ್ದರೆ ಭಾರತವು ಮೂರನೇ ಸುತ್ತಿಗೆ ಪ್ರವೇಶಿಸಲಿದೆ.

ಟ್ರೆಂಡಿಂಗ್​ ಸುದ್ದಿ

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಅರ್ಹತಾ ಸುತ್ತಿನಲ್ಲಿ ಈಗಾಗಲೇ ಭಾರತವು ಎರಡು ಪಂದ್ಯಗಳಲ್ಲಿ ಆಡಿದ್ದು, ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತಿದೆ. ಮೂರು ಅಂಕಗಳನ್ನು ಗಳಿಸಿರುವ ಭಾರತ 'ಎ' ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ತ ಕತಾರ್ ತಂಡವು ಆಡಿದ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಆರು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕುವೈತ್ ಎರಡು ಪಂದ್ಯಗಳಲ್ಲಿ ಮೂರು ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ತಂಡವು ಆಡಿರುವ ಎರಡು ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಭಾರತ ಹಾಗೂ ಅಫ್ಘನ್‌ ತಂಡಗಳು ಫುಟ್ಬಾಲ್‌ ಇತಿಹಾಸದಲ್ಲಿ ಈವರೆಗೆ 11 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಭಾರತವು 7 ಬಾರಿ ಗೆದ್ದರೆ, ಅಫ್ಘಾನಿಸ್ತಾನ ಒಮ್ಮೆ ಮಾತ್ರ ಜಯ ಸಾಧಿಸಿದೆ. ಮೇಲ್ನೋಟಕ್ಕೆ ಅಫ್ಘನ್ನರ ವಿರುದ್ಧ ಭಾರತವೇ ಬಲಿಷ್ಠವಾಗಿದೆ. ಈ ನಡುವೆ ಮೂರು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ಇದನ್ನೂ ಓದಿ | Video: ನಾಯಕತ್ವ ಬದಲಾವಣೆ ಬಳಿಕ ಮತ್ತೆ ಒಂದಾದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ; ಅಪ್ಪುಗೆಯ ವಿಡಿಯೋ ವೈರಲ್

ಕಳೆದ ಐದು ವರ್ಷಗಳಲ್ಲಿ ನಡೆದ ಅಧಿಕೃತ ಪಂದ್ಯದಲ್ಲಿ ಭಾರತವು ನಾಲ್ಕನೇ ಬಾರಿಗೆ ಅಫ್ಘಾನಿಸ್ತಾನವನ್ನು ಎದುರಿಸಲಿದೆ. 2019 ಮತ್ತು 2021ರ ವಿಶ್ವಕಪ್ ಅರ್ಹತಾ ಸುತ್ತಿನ ಎರಡೂ ಪಂದ್ಯಗಳು ತಲಾ 1-1ರಿಂದ ಸಮಬಲಗೊಂಡಿದ್ದವು. ಕೋಲ್ಕತ್ತಾದಲ್ಲಿ ನಡೆದ 2022ರ ಏಷ್ಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತವು 2-1 ಅಂತರದಿಂದ ಗೆಲುವು ಸಾಧಿಸಿತ್ತು.

ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ ಮಾರ್ಚ್ 22ರಂದು ನಡೆಯಲಿದೆ. ಪಂದ್ಯ ಮಧ್ಯರಾತ್ರಿ 12.30ಕ್ಕೆ ಆರಂಭವಾಗಲಿದೆ. ಪಂದ್ಯವು ಅಭಾದ ದಮಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯವನ್ನು ಭಾರತದಲ್ಲಿ ನೇರಪ್ರಸಾರ ವೀಕ್ಷಿಸುವುದು ಹೇಗೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್ ಮೂಲಕ ವೀಕ್ಷಿಸಬಹುದು.

ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ ಲೈವ್‌ ಸ್ಟ್ರೀಮಿಂಗ್‌ ವೀಕ್ಷಣೆ ಹೇಗೆ?

ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯವನ್ನು ಫ್ಯಾನ್ ಕೋಡ್ ಅಪ್ಲಿಕೇಶನ್‌ ಮೂಲಕ ಲೈವ್‌ ಸ್ಟ್ರೀಮ್‌ ವೀಕ್ಷಣೆ ಮಾಡಬಹುದು.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌ ಪಡೆದವರು ಯಾರು; ವಿರಾಟ್‌ ದಾಖಲೆಗೆ ಬೇಕು 1 ರನ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This Football copy first appeared in Hindustan Times Kannada website. To read more Sports stories please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ