ಕನ್ನಡ ಸುದ್ದಿ  /  ಕ್ರೀಡೆ  /  ಕ್ರಿಸ್ಟಿಯಾನೊ ರೊನಾಲ್ಡೊ 39ನೇ ಹುಟ್ಟುಹಬ್ಬ; ಪೋರ್ಚುಗಲ್ ಫುಟ್ಬಾಲ್ ದೈತ್ಯನ 5 ವಿಶ್ವದಾಖಲೆಗಳು ಹೀಗಿವೆ

ಕ್ರಿಸ್ಟಿಯಾನೊ ರೊನಾಲ್ಡೊ 39ನೇ ಹುಟ್ಟುಹಬ್ಬ; ಪೋರ್ಚುಗಲ್ ಫುಟ್ಬಾಲ್ ದೈತ್ಯನ 5 ವಿಶ್ವದಾಖಲೆಗಳು ಹೀಗಿವೆ

Jayaraj HT Kannada

Feb 05, 2024 05:53 PM IST

ಪೋರ್ಚುಗಲ್ ಫುಟ್ಬಾಲ್ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ಹುಟ್ಟುಹಬ್ಬ

    • Cristiano Ronaldo Birthday: ಪೋರ್ಚುಗಲ್‌ ಫುಟ್ಬಾಲ್‌ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜಾಗತಿಕ ಫುಟ್ಬಾಲ್‌ ಐಕಾನ್ ರೊನಾಲ್ಡೊ ಅವರ ಐದು ಪ್ರಮುಖ ದಾಖಲೆಗಳನ್ನು ನೋಡೋಣ.
 ಪೋರ್ಚುಗಲ್ ಫುಟ್ಬಾಲ್ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ಹುಟ್ಟುಹಬ್ಬ
ಪೋರ್ಚುಗಲ್ ಫುಟ್ಬಾಲ್ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ಹುಟ್ಟುಹಬ್ಬ (REUTERS)

ಫುಟ್ಬಾಲ್‌ ಕ್ರೀಡೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಗೋಲ್ ಮಷಿನ್‌ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ (Cristiano Ronaldo turns 39). ಫೆಬ್ರವರಿ 05ರ ಸೋಮವಾರ 39ನೇ ವರ್ಷಕ್ಕೆ ಕಾಲಿಡುತ್ತಿರುವ ಪೋರ್ಚುಗಲ್ ಐಕಾನ್ ರೊನಾಲ್ಡೊ, ಫುಟ್ಬಾಲ್ ಜಗತ್ತಿನಲ್ಲಿ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಹೊತ್ತು ತಂದ 19ನೇ ಶತಮಾನದ ಹಡಗು; ಜುಲೈ 26ರಂದು ಸೀನ್​ ನದಿಯಲ್ಲಿ ಉದ್ಘಾಟನಾ ಸಮಾರಂಭ

ಪೋರ್ಚುಗಲ್ ಫುಟ್ಬಾಲ್‌ ತಂಡದ ಸ್ಟಾರ್‌ ಆಟಗಾರ, ಮ್ಯಾಂಚೆಸ್ಟರ್ ಯುನೈಟೆಡ್ (ಇಂಗ್ಲಿಷ್ ಪ್ರೀಮಿಯರ್ ಲೀಗ್), ರಿಯಲ್ ಮ್ಯಾಡ್ರಿಡ್ (ಲಾಲಿಗಾ) ಮತ್ತು ಜುವೆಂಟಸ್ (ಸೀರೀಸ್ ಎ) ಪರ ಆಡಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ | ಫಿಫಾ ವಿಶ್ವಕಪ್ 2026: ಜೂನ್ 11ರಂದು ಫುಟ್ಬಾಲ್ ಪಂದ್ಯಾವಳಿ ಆರಂಭ; 48 ತಂಡಗಳು ಭಾಗಿ, ನ್ಯೂಜೆರ್ಸಿಯಲ್ಲಿ ಫೈನಲ್

“ನಾನು ದಾಖಲೆಗಳನ್ನು ಅನುಸರಿಸುವುದಿಲ್ಲ; ದಾಖಲೆಗಳೇ ನನ್ನನ್ನು ಅನುಸರಿಸುತ್ತವೆ,” ಎಂದು ಖುದ್ದು ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿಕೊಂಡಿದ್ದಾರೆ. ಆಟದ ಬಗ್ಗೆ ಅವರಿಗಿರುವ ಧೈರ್ಯ ಅಂತಹದು. ಸಿಆರ್7 (CR7) ಎಂದೇ ಖ್ಯಾತರಾಗಿರುವ ರೊನಾಲ್ಡೊ, ಸದ್ಯ ಅಲ್ ನಾಸರ್‌ ಪರ ಆಡುತ್ತಿದ್ದಾರೆ. ರಿಯಲ್ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರನ ಐದು ಪ್ರಮುಖ ದಾಖಲೆಗಳನ್ನು ನೋಡೋಣ

ಹ್ಯಾಟ್ರಿಕ್‌ ಕಿಂಗ್

ಪುರುಷರ ಅಂತಾರಾಷ್ಟ್ರೀಯ ಫುಟ್ಬಾಲ್‌ಲ್ಲಿ 10 ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ರೊನಾಲ್ಡೊ. ಪೋರ್ಚುಗೀಸ್ ಗೋಲ್ ಮಷಿನ್‌ 2021ರಲ್ಲಿ ಈ ದಾಖಲೆ ಬರೆದರು. ಲಕ್ಸೆಂಬರ್ಗ್ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡವು 5-0 ಅಂತರದ ಗೆಲುವು ಸಾಧಿಸುವಲ್ಲಿ ರೊನಾಲ್ಡೊ ದಾಖಲೆಯ 10ನೇ ಹ್ಯಾಟ್ರಿಕ್ ನರವಾಯ್ತು.

ಇದನ್ನೂ ಓದಿ | ಜೈಸ್ವಾಲ್-ಗಿಲ್ ಜಾಗತಿಕ ಕ್ರಿಕೆಟ್ ಆಳುತ್ತಾರೆ; ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳು

2021ರಲ್ಲಿ 110ನೇ ಗೋಲು ಬಾರಿಸಿದ ರೊನಾಲ್ಡೊ, ಅಲಿ ಡೇಯ್ ಅವರನ್ನು ಹಿಂದಿಕ್ಕಿದರು. ಪೋರ್ಚುಗಲ್ ಪರ ರೊನಾಲ್ಡೊ ಗಳಿಸಿದ ಆ ಗೋಲು, ಆ ಸಮಯದಲ್ಲಿ ಡೇಯ್ ಅವರ 109 ಗೋಲುಗಳ ದಾಖಲೆಯನ್ನು ಮುರಿಯಲು ನೆರವಾಯ್ತು. ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 118ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ.

3 ಚಾಂಪಿಯನ್ಸ್ ಲೀಗ್ ಫೈನಲ್‌ಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ

ರೊನಾಲ್ಡೊ ಅವರನ್ನು ಮಿಸ್ಟರ್ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಎಂದು ಕರೆಯಲು ಕಾರಣವಿದೆ. ರಿಯಲ್ ಮ್ಯಾಡ್ರಿಡ್ ಮತ್ತು ಜುವೆಂಟಸ್ ತಂಡದ ಮಾಜಿ ಸ್ಟಾರ್‌, ಮೂರು ಚಾಂಪಿಯನ್ಸ್ ಲೀಗ್ ಫೈನಲ್‌ಗಳಲ್ಲಿ ಗೋಲು ಗಳಿಸಿದ್ದಾರೆ. ಚಾಂಪಿಯನ್ಸ್ ಲೀಗ್‌ನ ಫೈನಲ್‌ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಪರ ಒಂದು ಗೋಲು ಮತ್ತು ರಿಯಲ್ ಮ್ಯಾಡ್ರಿಡ್ ಪರ ಮೂರು ಗೋಲುಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ | ಪ್ಲೀಸ್ ಸ್ಯಾಲರಿ ಕೊಡಿ; ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ

ಹೆಚ್ಚು ಚಾಂಪಿಯನ್ಸ್ ಲೀಗ್ ಗೋಲುಗಳು

ಪೋರ್ಚುಗಲ್ ನಾಯಕ ಕ್ಲಬ್ ಮಟ್ಟದಲ್ಲಿ ಯುರೋಪಿನ ಅತಿದೊಡ್ಡ ಸ್ಪರ್ಧೆಯಲ್ಲಿ ಸಾರ್ವಕಾಲಿಕ ಪ್ರಮುಖ ಗೋಲ್ ಸ್ಕೋರರ್ ಆಗಿದ್ದಾರೆ. ರೊನಾಲ್ಡೊ ಈ ಪ್ರತಿಷ್ಠಿತ ಲೀಗ್‌ನಲ್ಲಿ ಬರೋಬ್ಬರಿ 140 ಗೋಲುಗಳನ್ನು ಗಳಿಸಿದ್ದಾರೆ. ಅನುಭವಿ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಐದು ಬಾರಿ ಪ್ರಸಿದ್ಧ ಟ್ರೋಫಿ ಎತ್ತಿಹಿಡಿದಿದ್ದಾರೆ. ಚಾಂಪಿಯನ್ಸ್ ಲೀಗ್‌ನಲ್ಲಿ ಅತಿ ಹೆಚ್ಚು, ಅಂದರೆ 183 ಪಂದ್ಯಗಳನ್ನು ಆಡಿದ್ದಾರೆ.

ವೃತ್ತಿಜೀವನದಲ್ಲಿ 800 ಗೋಲುಗಳನ್ನು ಗಳಿಸಿದ ಮೊದಲ ಆಟಗಾರ

ರೊನಾಲ್ಡೊ ಅವರು ಕ್ಲಬ್ ಮತ್ತು ದೇಶದ ಪರ 800 ಗೋಲುಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2022ರ ನವೆಂಬರ್ ತಿಂಗಳಲ್ಲಿ ಅವರು ಈ ಸಾಧನೆಯನ್ನು ಮಾಡಿದರು.

(This copy first appeared in Hindustan Times Kannada website. To read more like this please logon to kannada.hindustantime.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ