ಕನ್ನಡ ಸುದ್ದಿ  /  ಕ್ರಿಕೆಟ್  /  Cricket Records: 2024ರಲ್ಲಿ ಮುರಿಯಬಹುದಾದ ಅತಿ ದೊಡ್ಡ ಐದು ವಿಶ್ವದಾಖಲೆಗಳ ನೋಟ ಇಲ್ಲಿದೆ!

Cricket Records: 2024ರಲ್ಲಿ ಮುರಿಯಬಹುದಾದ ಅತಿ ದೊಡ್ಡ ಐದು ವಿಶ್ವದಾಖಲೆಗಳ ನೋಟ ಇಲ್ಲಿದೆ!

Prasanna Kumar P N HT Kannada

Jan 06, 2024 03:45 PM IST

ಬಾಬರ್ ಅಜಮ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡ, ರಶೀದ್ ಖಾನ್.

    • 5 Cricket Records That Can Be Broken: 2024ರ ಕ್ಯಾಲೆಂಡರ್​ ವರ್ಷದಲ್ಲೂ ಹಲವು ವಿಶ್ವದಾಖಲೆಗಳು ನಿರ್ಮಾಣವಾಗಲಿವೆ. ಈ ಪೈಕಿ ಮುರಿಯಬಹುದಾದ ಅತಿದೊಡ್ಡ 5 ಪ್ರಮುಖ ಕ್ರಿಕೆಟ್ ದಾಖಲೆಗಳ ನೋಟ ಇಲ್ಲಿದೆ. 
ಬಾಬರ್ ಅಜಮ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡ, ರಶೀದ್ ಖಾನ್.
ಬಾಬರ್ ಅಜಮ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡ, ರಶೀದ್ ಖಾನ್.

2023ರ ಅದ್ಭುತ ವರ್ಷದ ನಂತರ 2024ರ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಬಾರಿಯೂ ಕ್ರಿಕೆಟ್​ ಲೋಕದಲ್ಲಿ ಭರಪೂರ ಮನರಂಜನೆಗೆ ಕೊರತೆಯೇ ಇರುವುದಿಲ್ಲ ಎಂಬುದಕ್ಕೆ ಮುಂದಿನ ದಿನಗಳಲ್ಲಿರುವ ಸರಣಿಗಳೇ ಸಾಕ್ಷಿ. ಹಲವು ವಿಶ್ವ ದಾಖಲೆಗಳು ನಿರ್ಮಾಣವಾಗುವುದೂ ಖಚಿತ. ಹಾಗಾದರೆ 2024ರಲ್ಲಿ ಮುರಿಯಬಹುದಾದ ಐದು ಪ್ರಮುಖ ಕ್ರಿಕೆಟ್ ದಾಖಲೆಗಳ ನೋಟ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್;‌ ಉಭಯ ತಂಡಗಳ ಪ್ಲೇಆಪ್‌ ಕನಸು ಬಹುತೇಕ ಅಂತ್ಯ

ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ; ಎದ್ದು ನಿಂತು ಚಪ್ಪಾಳೆ ತಟ್ಟಿದ ಎಲ್‌ಎಸ್‌ಜಿ ಮಾಲೀಕ

ವಿಶೇಷ ಔತಣಕೂಟದಲ್ಲಿ ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್

ಚೆನ್ನೈ ಪಾಲಿಗೆ ಎಂಎಸ್ ಧೋನಿ ದೇವರು; ಅಭಿಮಾನಿಗಳು ಅವರ ದೇವಾಲಯ ನಿರ್ಮಿಸಲಿದ್ದಾರೆ ಎಂದ ಅಂಬಟಿ ರಾಯುಡು

ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು

ಅಫ್ಘಾನಿಸ್ತಾನದ ಪ್ರೀಮಿಯರ್ ಸ್ಪಿನ್ನರ್ ರಶೀದ್ ಖಾನ್ ಇಲ್ಲಿಯವರೆಗೆ 410 ಟಿ20 ಪಂದ್ಯಗಳಲ್ಲಿ ಒಟ್ಟು 556 ವಿಕೆಟ್‌ (ಒಟ್ಟಾರೆ ಟಿ20 ಕ್ರಿಕೆಟ್​) ಪಡೆದಿದ್ದಾರೆ. ಈ ವರ್ಷ ಟಿ20 ಕ್ರಿಕೆಟ್​ನಲ್ಲಿ 619 ವಿಕೆಟ್ ಕಬಳಿಸಿದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಡ್ವೇನ್ ಬ್ರಾವೊ, ದಾಖಲೆ ಮುರಿಯುವ ಗುರಿಯನ್ನು ಹೊಂದಿದ್ದಾರೆ. ಸದ್ಯ ಬ್ರಾವೋ ಸಕ್ರಿಯ ಕ್ರಿಕೆಟಿಗನಾದ ಕಾರಣ, ರಶೀದ್​ಗೆ ಇದೊಳ್ಳೆ ಅವಕಾಶವಾಗಿದೆ. ವಿಶ್ವ ಎಲ್ಲಾ ಫ್ರಾಂಚೈಸ್​​ ಲೀಗ್​​ಗಳಲ್ಲೂ ಆಡುವ ರಶೀದ್​, ಇನ್ನು 63 ವಿಕೆಟ್ ಪಡೆದರೆ ಬ್ರಾವೋ ಅವರ ವಿಕೆಟ್​ಗಳನ್ನು ಮೀರಿಸುವ ಅವಕಾಶ ಇದೆ.

700 ಟೆಸ್ಟ್ ವಿಕೆಟ್​ನತ್ತ ಆ್ಯಂಡರ್​ಸನ್ ಚಿತ್ತ

ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಈವರೆಗೆ ಆಡಿರುವ 183 ಟೆಸ್ಟ್‌ಗಳಲ್ಲಿ ಒಟ್ಟು 690 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಪಡೆಯುವ ಹೊಸ್ತಿಲಲ್ಲಿರುವ ವೇಗಿ, ಇತಿಹಾಸ ನಿರ್ಮಿಸಲು ಇನ್ನೂ 10 ವಿಕೆಟ್‌ಗಳ ಅಗತ್ಯವಿದೆ. ಜನವರಿ 25 ರಂದು ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಂಡರ್ಸನ್, ಈ ಮೈಲಿಗಲ್ಲು ಸಾಧಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಈ ವರ್ಷ ಟೆಸ್ಟ್​ ಕ್ರಿಕೆಟ್​ನಲ್ಲಿ 19 ವಿಕೆಟ್‌ ಉರುಳಿಸಿದ್ದೇ ಆದರೆ ಶೇನ್ ವಾರ್ನ್ ಅವರ 708 ವಿಕೆಟ್‌ಗಳ ದಾಖಲೆಯನ್ನೂ ಮುರಿಯುತ್ತಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಬರ್ ಅಜಮ್ ಟಿ20 ಸರದಾರ

ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಈ ವರ್ಷ ಟಿ20ಯಲ್ಲಿ ಅಗ್ರ ರನ್ ಗಳಿಸುವ ಅವಕಾಶ ಹೊಂದಿರುತ್ತಾರೆ. ಇದುವರೆಗೆ 104 ಟಿ20 ಪಂದ್ಯಗಳಲ್ಲಿ 3485 ರನ್ ಗಳಿಸಿದ್ದಾರೆ. ಪ್ರಸ್ತುತ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (4008), ರೋಹಿತ್ ಶರ್ಮಾ (3853), ಮತ್ತು ಮಾರ್ಟಿನ್ ಗಪ್ಟಿಲ್ (3531) ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಟಿ20 ಕ್ರಿಕೆಟ್​ ಆಡುವುದೇ ಅನುಮಾನ ಇದೆ. ಹೀಗಾಗಿ, ಬಾಬರ್ ಭಾರತೀಯ ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿ ನಂ. 1 ಸ್ಥಾನ ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಕೊಹ್ಲಿ ದಾಖಲೆ ಮೀರಿಸಲು ಬಾಬರ್​ಗೆ 524 ರನ್‌ ಅಗತ್ಯ ಇದ್ದು, ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಹೊಸ ಟಿ20 ಕಪ್ ವಿಜೇತರು

ಆರು ತಂಡಗಳು- ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಇದುವರೆಗೆ ಟಿ20 ವಿಶ್ವಕಪ್ ಗೆದ್ದಿವೆ. ಆದರೆ, 2024ರಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶ ಸೇರಿದಂತೆ ಇದುವರೆಗೂ ಕಪ್​ ಗೆಲ್ಲದ ದೇಶಗಳು ಪ್ರಶಸ್ತಿಗೆ ಮುತ್ತಿಕ್ಕಿದ್ದೇ ಆದರೆ, ಹೊಸ ಟಿ20 ವಿಶ್ವಕಪ್ ಚಾಂಪಿಯನ್ ತಂಡ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

ಒಂದೇ ಸಮಯದಲ್ಲಿ 3 ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ

ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಲಿ ವಿಜೇತ ತಂಡ ಆಸ್ಟ್ರೇಲಿಯಾ 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಒಂದೇ ಸಮಯದಲ್ಲಿ ಕ್ರಿಕೆಟ್​ನ ಎಲ್ಲಾ ಮೂರು ಸ್ವರೂಪಗಳಲ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದ ಇತಿಹಾಸದಲ್ಲಿ ಮೊದಲ ತಂಡವಾಗುವ ಅವಕಾಶ ಹೊಂದಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ