IPL 2025 ಪರ್ಪಲ್ ಕ್ಯಾಪ್, IPL ಪರ್ಪಲ್ ಕ್ಯಾಪ್ 2025: IPL 2025 Get the latest news on IPL 2025 Purple Cap winners in Kannada - HT Kannada

ಐಪಿಎಲ್ 2025 ಪರ್ಪಲ್‌ ಕ್ಯಾಪ್

ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌  /  ಐಪಿಎಲ್ 2025 ಪರ್ಪಲ್‌ ಕ್ಯಾಪ್
ಐಪಿಎಲ್ 2025 ಪರ್ಪಲ್ ಕ್ಯಾಪ್: ಐಪಿಎಲ್‌ನ ಒಂದು ಸೀಸನ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುವುದು. 2008 ರ ಮೊದಲ ಸೀಸನ್‌ನಿಂದ, ಪ್ರತಿ ವರ್ಷ ಅತಿ ಹೆಚ್ಚು ವಿಕೆಟ್ ಪಡೆದವರಿಗೆ ಈ ಕ್ಯಾಪ್ ನೀಡಲಾಗುತ್ತದೆ. 16 ಸೀಸನ್‌ಗಳಲ್ಲಿ ಐಪಿಎಲ್‌ನ 14 ಆಟಗಾರರು ಈ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.ಡ್ವೇನ್ ಬ್ರಾವೋ ಮತ್ತು ಭುವನೇಶ್ವರ್ ಕುಮಾರ್ ಎರಡು ಬಾರಿ ಈ ಕ್ಯಾಪ್ ಗೆದ್ದಿದ್ದಾರೆ.

ಡ್ವೇನ್ ಬ್ರಾವೋ 2013 ರಲ್ಲಿ 32 ಮತ್ತು 2015 ರಲ್ಲಿ 26 ವಿಕೆಟ್‌ಗಳೊಂದಿಗೆ ಎರಡು ಬಾರಿ ಪರ್ಪಲ್ ಕ್ಯಾಪ್ ಅನ್ನು ಗೆದ್ದರು. ಭುವನೇಶ್ವರ್ ಕುಮಾರ್ 2016 ಮತ್ತು 2017 ರ ಋತುಗಳಲ್ಲಿ ಕ್ರಮವಾಗಿ 23 ಮತ್ತು 26 ವಿಕೆಟ್‌ಗಳೊಂದಿಗೆ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದರು. ಇವರಿಬ್ಬರನ್ನು ಹೊರತುಪಡಿಸಿ, ಸೊಹೈಲ್ ತನ್ವಿರ್ (2008), ಆರ್.ಪಿ.ಸಿಂಗ್ (2009), ಪ್ರಗ್ಯಾನ್ ಓಜಾ (2010), ಲಸಿತ್ ಮಾಲಿಂಗ (2011), ಮೋರ್ನೆ ಮೊರ್ಕೆಲ್ (2012), ಮೋಹಿತ್ ಶರ್ಮಾ (2014), ಆಂಡ್ರ್ಯೂ ಟೈ (2018), ಇಮ್ರಾನ್ ತಾಹಿರ್ ( 2019), ಕಗಿಸೊ ರಬಾಡ (2020), ಹರ್ಷಲ್ ಪಟೇಲ್ (2021), ಯುಜ್ವೇಂದ್ರ ಚಹಾಲ್ (2022) ಮತ್ತು ಮೊಹಮ್ಮದ್ ಶಮಿ (2023) ಸಹ ಪರ್ಪಲ್ ಕ್ಯಾಪ್ ಪಡೆದರು.

2013ರ ಋತುವಿನಲ್ಲಿ ಡ್ವೇನ್ ಬ್ರಾವೊ ಮತ್ತು 2021ರ ಋತುವಿನಲ್ಲಿ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಡೆದರು. ಇವರಿಬ್ಬರೂ 2008 ರಿಂದ 2023 ರವರೆಗಿನ ಸೀಸನ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರಿಬ್ಬರೂ ಒಂದೇ ಋತುವಿನಲ್ಲಿ 32 ವಿಕೆಟ್ ಪಡೆದಿದ್ದಾರೆ. ಕಗಿಸೊ ರಬಾಡ 30 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2020ರಲ್ಲಿ ರಬಾಡ 30 ವಿಕೆಟ್‌ಗಳನ್ನು ಪಡೆದಿದ್ದರು.

ಪ್ರತಿ ಸೀಸನ್‌ನಲ್ಲಿಯೂ ಪರ್ಪಲ್ ಕ್ಯಾಪ್ ಕೂಡ ಕೈಗಳನ್ನು ಬದಲಾಯಿಸುತ್ತದೆ. ಪಂದ್ಯಗಳು ಮುಂದುವರೆದಂತೆ, ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯನ್ನು ನವೀಕರಿಸಲಾಗುತ್ತದೆ. ಆ ಪಟ್ಟಿಯನ್ನು ಅವಲಂಬಿಸಿ ಪರ್ಪಲ್ ಕ್ಯಾಪ್ ಕೂಡ ಬದಲಾಗುತ್ತದೆ. ಅಂತಿಮ ಪಂದ್ಯದ ನಂತರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ.

ಐಪಿಎಲ್ 2025 ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅನೇಕ ವಿಶ್ವ ದರ್ಜೆಯ ಬೌಲರ್‌ಗಳು ಇದ್ದಾರೆ. ಈ ಹಿಂದೆ ಕ್ಯಾಪ್ ಪಡೆದಿದ್ದ ಭುವನೇಶ್ವರ್, ಶಮಿ, ರಬಾಡ ಮತ್ತು ಚಹಾಲ್ ಜೊತೆಗೆ ಅಗ್ರ ಫಾರ್ಮ್‌ನಲ್ಲಿರುವ ಬುಮ್ರಾ ಕೂಡ ಈ ವರ್ಷ ಪರ್ಪಲ್ ಕ್ಯಾಪ್ ಮೇಲೆ ಕಣ್ಣಿಟ್ಟಿದ್ದಾರೆ. 2024 ರಲ್ಲಿ 24 ವಿಕೆಟ್ ಪಡೆದಿದ್ದ ಪಂಜಾಬ್ ಕಿಂಗ್ಸ್‌ನ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಡೆದಿದ್ದರು. 21 ವಿಕೆಟ್ ಪಡೆದಿದ್ದ ಕೊಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ ಎರಡನೇ ಸ್ಥಾನದಲ್ಲಿದ್ದರು.

2025 Data Not Available

ಐಪಿಎಲ್‌ FAQs

ಪ್ರಶ್ನೆ: ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಎಂದರೇನು? ಅದನ್ನು ಯಾರಿಗೆ ನೀಡಲಾಗುತ್ತದೆ?

ಉತ್ತರ: ಐಪಿಎಲ್‌ನಲ್ಲಿ ಒಂದು ಋತುವಿನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಈ ಪದ್ಧತಿಯು 2008 ರ ಮೊದಲ ಸೀಸನ್‌ನಿಂದ ಚಾಲನೆಯಲ್ಲಿದೆ.

ಪ್ರಶ್ನೆ: ಇದುವರೆಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪರ್ಪಲ್ ಕ್ಯಾಪ್ ಗೆದ್ದ ಆಟಗಾರ ಯಾರು?

ಉತ್ತರ: ಐಪಿಎಲ್ ಇತಿಹಾಸದಲ್ಲಿ ಡ್ವೇನ್ ಬ್ರಾವೋ ಮತ್ತು ಭುವನೇಶ್ವರ್ ಕುಮಾರ್ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಬ್ರಾವೋ 2013 ಮತ್ತು 2015ರ ಸೀಸನ್‌ಗಳಲ್ಲಿ ಗೆದ್ದರೆ, ಭುವನೇಶ್ವರ್ ಕುಮಾರ್ 2016 ಮತ್ತು 2017ರಲ್ಲಿ ಗೆದ್ದಿದ್ದರು.

ಪ್ರಶ್ನೆ: ಐಪಿಎಲ್‌ನಲ್ಲಿ ಒಂದು ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಯಾರು?

ಉತ್ತರ: ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಇಬ್ಬರು ಆಟಗಾರರಿದ್ದಾರೆ. 2013ರಲ್ಲಿ ಡ್ವೇನ್ ಬ್ರಾವೋ ಒಂದೇ ಋತುವಿನಲ್ಲಿ 32 ವಿಕೆಟ್ ಕಬಳಿಸಿದ್ದರು.2021ರಲ್ಲಿ ಹರ್ಷಲ್ ಪಟೇಲ್ ಕೂಡ 32 ವಿಕೆಟ್ ಪಡೆದು ಆ ದಾಖಲೆಯನ್ನು ಸರಿಗಟ್ಟಿದರು.

ಪ್ರಶ್ನೆ: ಐಪಿಎಲ್‌ನಲ್ಲಿ ಇದುವರೆಗೆ ಎಷ್ಟು ಆಟಗಾರರು ಪರ್ಪಲ್ ಕ್ಯಾಪ್ ಪಡೆದಿದ್ದಾರೆ?

ಉತ್ತರ: ಐಪಿಎಲ್‌ನ ಮೊದಲ 16 ಸೀಸನ್‌ಗಳಲ್ಲಿ 14 ಆಟಗಾರರು ಈ ಪರ್ಪಲ್ ಕ್ಯಾಪ್ ಪಡೆದರು. ಇವರಲ್ಲಿ ಸೊಹೈಲ್ ತನ್ವೀರ್ (2008), ಆರ್.ಪಿ.ಸಿಂಗ್ (2009), ಪ್ರಗ್ಯಾನ್ ಓಜಾ (2010), ಲಸಿತ್ ಮಾಲಿಂಗ (2011), ಮೊರ್ನೆ ಮೊರ್ಕೆಲ್ (2012), ಮೋಹಿತ್ ಶರ್ಮಾ (2014), ಆಂಡ್ರ್ಯೂ ಟೈ (2018), ಇಮ್ರಾನ್ ತಾಹಿರ್ (2019), ಕಗಿಸೊ ರಬಾಡ (2020), ಹರ್ಷಲ್ ಪಟೇಲ್ (2021), ಯುಜ್ವೇಂದ್ರ ಚಾಹಲ್ (2022), ಮೊಹಮ್ಮದ್ ಶಮಿ (2023), ಡ್ವೇನ್ ಬ್ರಾವೋ (2013, 2015), ಭುವನೇಶ್ವರ್ ಕುಮಾರ್ (2016, 2017).