ಯುಗಾದಿ 2024


ಯುಗಾದಿ ಹಬ್ಬವು ಚೈತ್ರ ಶುದ್ಧ ಪಾಡ್ಯಮಿಯಂದು ಬರುತ್ತದೆ. ಕರ್ನಾಟಕದಲ್ಲಿರುವ ಹಿಂದೂಗಳು ಯುಗಾದಿಯನ್ನು ಹೊಸ ವರ್ಷವಾಗಿ, ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತಾರೆ. ಯುಗದ ಆದಿ ಯುಗಾದಿ. ಇದನ್ನು ಜನ್ಮ ಮತ್ತು ಜೀವನದ ಆರಂಭ ಎಂದೂ ಪರಿಗಣಿಸಲಾಗುತ್ತದೆ. ಚೈತ್ರ ಶುಕ್ಲ ಪಾಡ್ಯದಿಂದಲೇ ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದ ಎಂಬ ನಂಬಿಕೆ ಇದೆ. ಪ್ರತಿ ಯುಗಾದಿಯಿಂದಲೂ ಹೊಸ ಸಂವತ್ಸರವೂ ಆರಂಭವಾಗುತ್ತದೆ. ಈ ಬಾರಿಯ ಯುಗಾದಿಯಿಂದ ಶ್ರೀ ಕ್ರೋಧಿನಾಮ ಸಂವತ್ಸರವು ಅಸ್ತಿತ್ವಕ್ಕೆ ಬರಲಿದೆ. ಹಿಂದೂ ಪಂಚಾಂಗದ ಪ್ರಕಾರ ಒಟ್ಟು 60 ಸಂವತ್ಸರಗಳಿವೆ. ಈ ಸಾಲಿನಲ್ಲಿ ಕ್ರೋಧಿನಾಮ ಸಂವತ್ಸರವು 38 ನೆಯದು. ಕ್ರೋಧಿನಾಮ ಸಂವತ್ಸರಕ್ಕೆ ಕೋಪದ ಸ್ವಭಾವ ಎನ್ನುವ ಅರ್ಥವೂ ಇದೆ.

9ನೇ ಏಪ್ರಿಲ್ 2024, ಮಂಗಳವಾರ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.

...

ಯುಗಾದಿ 2024

ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅಡ್ವೋಕೇಟ್‌;

ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅಡ್ವೊಕೇಟ್; ಸೂಪರ್‌ ಟ್ವಿಸ್ಟ್‌ ಅಣ್ಣಾ ಅಂದ್ರು ಶಿವಣ್ಣ ಫ್ಯಾನ್ಸ್‌

Tuesday, April 9, 2024

ವೃಶ್ಚಿಕ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ವೃಶ್ಚಿಕ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಧನಲಾಭವಿದೆ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ

Tuesday, April 9, 2024

ತುಲಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ತುಲಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಇವರಿಗೆ ಮಿಶ್ರಫಲ, ಮುನ್ನೆಚ್ಚರಿಕೆ ಅಗತ್ಯ

Monday, April 8, 2024

ಕನ್ಯಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಕನ್ಯಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿ ಜಾತಕರಿಗೆ ಶಾಂತಿ, ಸಂತಸ, ನೆಮ್ಮದಿ

Monday, April 8, 2024

ಕುಂಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಕುಂಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಮಿಶ್ರಫಲ ದೊರೆಯಲಿದೆ, ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು

Monday, April 8, 2024

ಮಕರ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಮಕರ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಹಣಕಾಸು, ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಎಚ್ಚರ ಅಗತ್ಯ

Monday, April 8, 2024

ಬೆಂಗಳೂರಿನಲ್ಲಿ ಖರೀದಿ ಭರಾಟೆ ಜೋರು.

Ugadi 2024: ಯುಗಾದಿ ಹಬ್ಬಕ್ಕೆ ಖರೀದಿ ಭರಾಟೆ, ಹೂವು, ಹಣ್ಣು, ತರಕಾರಿ ಬೆಲೆ ಹೇಗಿದೆ

Monday, April 8, 2024

ಯುಗಾದಿ ಹಬ್ಬದ ಸಂಭ್ರಮ ಹೆಚ್ಚಲು ಹೀಗಿರಲಿ ಮನೆಯ ಸಿಂಗಾರ

Yugadi 2024: ಯುಗಾದಿ ಹಬ್ಬದಂದು ಮನೆ ಅಲಂಕಾರಕ್ಕಿದೆ ವಿಶೇಷ ಮಹತ್ವ, ಹಬ್ಬದ ಸಂಭ್ರಮ ಹೆಚ್ಚಲು ಹೀಗಿರಲಿ ಮನೆಯ ಸಿಂಗಾರ

Monday, April 8, 2024

ಯುಗಾದಿ ವರ್ಷ ಭವಿಷ್ಯ

ಯುಗಾದಿ ಅಡುಗೆ

ತಾಜಾ ಫೋಟೊಗಳು

<p>ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯ. ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವ ಸಂಪ್ರದಾಯ ಹಲವು ಕಡೆಯಿದೆ, ಮಂಡ್ಯ ಭಾಗದಲ್ಲಿ ಉಳುಮೆ ನಿರತ ರೈತರು.</p>

Ugadi 2024: ಯುಗಾದಿ ಎಂದರೆ ಅನ್ನದಾತರ ಉಳುಮೆ, ಪೂಜೆ, ಸಡಗರ, ಹೋಳಿಗೆ ಊಟ, ಹೀಗಿತ್ತು ಕರ್ನಾಟಕದಲ್ಲಿ ಹಬ್ಬ ಖುಷಿ ಕ್ಷಣಗಳು

Apr 09, 2024 05:34 PM

ತಾಜಾ ವೆಬ್‌ಸ್ಟೋರಿ

ಯುಗಾದಿಯ ದಿನ ಕರ್ನಾಟಕದ ಜನರು ಹೊಸ ಬಟ್ಟೆ ಧರಿಸಿ ದೇವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಯುಗಾದಿಯಿಂದಲೇ ಹಲವು ಹೊಸ ಕೆಲಸಗಳನ್ನೂ ಜನರು ಆರಂಭಿಸುತ್ತಾರೆ. ಯುಗಾದಿಯಂದು ಬೇವಿನ ಹೂ, ಬೇವಿನ ಎಲೆ ಮತ್ತು ಬೆಲ್ಲವನ್ನು ಬೆರೆಸಿ ಕುಟುಂಬದ ಸದಸ್ಯರು, ಆಪ್ತರಿಗೆ ಹಂಚಲಾಗುತ್ತದೆ. ಬೇವಿನ ಕಹಿಯು ಕಷ್ಟವನ್ನೂ, ಬೆಲ್ಲದ ಸಿಹಿಯು ಸುಖವನ್ನೂ ಸಂಕೇತಿಸುತ್ತದೆ. ಸುಖ-ದುಃಖಗಳನ್ನು ಸಮಾನವಾಗಿ ಪರಿಗಣಿಸಬೇಕು ಎನ್ನುವ ಸಂದೇಶ ನೀಡುವ ಬೇವು-ಬೆಲ್ಲ ಸೇವಿಸುವ ಮೂಲಕ ಕಹಿ-ಸಿಹಿಗಳನ್ನು ಬದುಕಿನ ಭಾಗ ಎಂದು ಜನರು ಭಾವಿಸುತ್ತಾರೆ. ಈ ಮೂಲಕ ಯುಗಾದಿಯು ಬದುಕಿಗೆ ಭರವಸೆಯನ್ನೂ ನೀಡುತ್ತದೆ. ಯುಗಾದಿ ಹಬ್ಬದಂದು ವಿಶೇಷ ‘ಯುಗಾದಿ ಪಚಡಿ’ ತಯಾರಿಸಿ ಸೇವಿಸುವ ಸಂಪ್ರದಾಯವೂ ಕರ್ನಾಟಕದ ಕೆಲವೆಡೆ ಇದೆ. ಸಿಹಿ, ಕಹಿ, ಹುಳಿ, ಖಾರ, ಒಗರು ಮತ್ತು ಕಹಿ ಎಂಬ ಆರು ರುಚಿಗಳ ಸಂಯೋಜನೆ ಪಚಡಿಯಲ್ಲಿ ಇರುತ್ತದೆ. ಇದೂ ಸಹ ಬದುಕಿನ ಏರಿಳಿತಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎನ್ನುವ ಸಂದೇಶವನ್ನು ಇದು ನೀಡುತ್ತದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಯುಗಾದಿ ದೊಡ್ಡ ಹಬ್ಬ. ಮಹಾರಾಷ್ಟ್ರದ ಜನರು ಈ ಹಬ್ಬವನ್ನು ಗುಡಿಪಾಡ್ವಾ ಎಂದು ಆಚರಿಸುತ್ತಾರೆ. ಸಿಖ್ಖರು ಇದನ್ನು ವೈಶಾಖಿ ಎಂದು ಮತ್ತು ಕೇರಳದಲ್ಲಿ ವಿಷು ಹಬ್ಬವಾಗಿ ಆಚರಿಸುತ್ತಾರೆ. ಯುಗಾದಿ ಹಬ್ಬದಂದು ಪಂಚಾಂಗ ಶ್ರವಣದ ಪದ್ಧತಿ ಇದೆ. ಹೊಸ ವರ್ಷದಲ್ಲಿ ತಮ್ಮ ರಾಶಿ ಭವಿಷ್ಯ ಹೇಗಿದೆ? ಮಳೆ ಬೆಳೆ ಹೇಗಿರುತ್ತದೆ ಎನ್ನುವ ಕುತೂಹಲವನ್ನು ಜನರು ಯುಗಾದಿಯಂದು ತಣಿಸಿಕೊಳ್ಳುತ್ತಾರೆ. ಶಾಸ್ತ್ರಕ್ಕೆಂದು ಹಲವು ರೈತರು ಯುಗಾದಿಯಿಂದ ‘ಆರಂಭ’ (ವ್ಯವಸಾಯ ಅಥವಾ ಉಳುಮೆ) ಶುರು ಮಾಡುವ ಸಂಪ್ರದಾಯವನ್ನೂ ಪಾಲಿಸುತ್ತಾರೆ.

FAQs

ಉತ್ತರ: ಶ್ರೀ ಕ್ರೋಧಿನಾಮ ಸಂವತ್ಸರ
+
ಉತ್ತರ: ಹೊಸ ವರ್ಷ ಹೇಗಿರಲಿದೆ? ಮಳೆ ಹೇಗೆ ಬರುತ್ತದೆ? ಯಾವ ಬೆಳೆಗಳು ಹೆಚ್ಚು ಬೆಳೆಯುತ್ತವೆ? ಯಾವುದು ಹೆಚ್ಚು ಬೇಡಿಕೆಯಲ್ಲಿದೆ? ಜಾಗತಿಕ ಸಂಘರ್ಷಗಳು, ಏರುತ್ತಿರುವ ಬೆಲೆಗಳು ಮತ್ತು ವ್ಯಾಪಾರದ ಭವಿಷ್ಯದ ಬಗ್ಗೆ ಪಂಚಾಂಗವು ಮುನ್ನೋಟ ನೀಡುತ್ತದೆ. ರಾಶಿ ಪ್ರಕಾರ ವರ್ಷ ಭವಿಷ್ಯವನ್ನೂ ಜನರು ಯುಗಾದಿ ಪಂಚಾಂಗ ಶ್ರವಣದ ಮೂಲಕ ತಿಳಿದುಕೊಳ್ಳುತ್ತಾರೆ.
+
ಉತ್ತರ: ಯುಗಾದಿ ಮಂಗಳಕರ ದಿನ. ಹೊಸ ಕೆಲಸಗಳನ್ನು ಪ್ರಾರಂಭಿಸುವ ದಿನ. ಮುಂಜಾನೆ ಬೇಗನೇ ಎದ್ದು ಎಣ್ಣೆನೀರು ಹಾಕಿಕೊಳ್ಳಬೇಕು. ಹೊಸ ಬಟ್ಟೆ ಅಥವಾ ಶುದ್ಧಪಡಿಸಿದ (ಒಗೆದ / ತೊಳೆದ) ಬಟ್ಟೆಗಳನ್ನು ಧರಿಸಬೇಕು. ಕುಲದೇವರನ್ನು ಆರಾಧಿಸಿ, ದೇಗುಲಗಳಿಗೆ ಭೇಟಿ ನೀಡಬೇಕು. ಬೇವು-ಬೆಲ್ಲ ಅಥವಾ ಪಚಡಿಯನ್ನು ಹಿರಿಯರಿಂದ ಪಡೆದು ಸೇವಿಸಬೇಕು. ಅದನ್ನು ಆಪ್ತರಿಗೆ, ಬಂಧುಗಳಿಗೆ, ಮಿತ್ರರಿಗೆ ಹಂಚಬೇಕು. ಯುಗಾದಿ ಪಂಚಾಂಗವನ್ನು ಕೇಳಿ, ರಾಶಿ ಫಲಗಳನ್ನು ತಿಳಿಯಬೇಕು.
+
ಉತ್ತರ: ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಕನ್ನಡದ ಜನಪ್ರಿಯ ಪಂಚಾಂಗಗಳಲ್ಲಿ ನಮೂದಿಸಿರುವ 60 ಸಂವತ್ಸರಗಳ ಹೆಸರು ಹೀಗಿದೆ. ಪ್ರಭವ, ವಿಭವ, ಶುಕ್ಲ, ಪ್ರಮೋದೂತ, ಪ್ರಜೋತ್ಪತಿ, ಅಂಗೀರಸ, ಶ್ರೀಮುಖ, ಭವ, ಯುವ, ಧಾತ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ / ವಿಷು, ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತು, ಸರ್ವಧಾರಿ, ವಿಕೃತ. ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇವಿಳಂಬಿ, ವಿಳಂಬಿ, ವಿಚಾರಿ, ಶಾರ್ವರಿ, ಪ್ಲವ, ಶುಭಕೃತು, ಶೋಭಾಕೃತು, ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತು, ಪರಿಧಾವಿ, ಪ್ರಮಾದಿ, ಆನಂದ, ರಾಕ್ಷಸ, ನಳ, ಪಿಂಗಳ, ಕಾಳಯುಕ್ತಿ, ಸಿದ್ಧಾರ್ಥಿ, ರುದ್ರ / ರೌದ್ರಿ, ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ, ಅಕ್ಷಯ / ಕ್ಷಯ.
+
ಉತ್ತರ: ಕ್ರೋಧಿನಾಮ ಸಂವತ್ಸರ ಎಂದರೆ ಕೋಪ. ಕೋಪದ ಸ್ವಭಾವ ಎಂದರ್ಥ.
+