ಕನ್ನಡ ಸುದ್ದಿ  /  ಕ್ರಿಕೆಟ್  /  ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ, 5 ಬಾರಿಯ ಚಾಂಪಿಯನ್‌ ವಿರುದ್ಧ ಸೋತರೆ ಅವಮಾನವಲ್ಲ: ಗವಾಸ್ಕರ್

ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ, 5 ಬಾರಿಯ ಚಾಂಪಿಯನ್‌ ವಿರುದ್ಧ ಸೋತರೆ ಅವಮಾನವಲ್ಲ: ಗವಾಸ್ಕರ್

Jayaraj HT Kannada

Nov 20, 2023 10:55 AM IST

ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್, ರವಿಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್

    • Sunil Gavaskar on Team India: ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದರಿಂದ ದುಂಬಾ ದುಃಖವಾಗಿದೆ, ಆದರೆ ಪಂದ್ಯಾವಳಿಯಲ್ಲಿ ಟೀಮ್‌ ಇಂಡಿಯಾ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್, ರವಿಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್
ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್, ರವಿಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್ (PTI)

ಏಕದಿನ ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಸಂಪೂರ್ಣ ಪ್ರಾಬಲ್ಯದೊಂದಿಗೆ ಅಬ್ಬರಿಸಿದ್ದ ಟೀಮ್‌ ಇಂಡಿಯಾ, ಫೈನಲ್‌ ಪಂದ್ಯದಲ್ಲಿ ತನ್ನ ನೈಜ ಸಾಮರ್ಥ್ಯ ಪ್ರದರ್ಶಿಸಲು ವಿಫಲವಾಯ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್‌ 19ರ ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ ತಂಡ, ಮೂರನೇ ವಿಶ್ವಕಪ್‌ ಗೆಲ್ಲುವಲ್ಲಿ ಎಡವಿತು. ಇದು ಭಾರತೀಯ ಕ್ರಿಕೆಟಿಗರಿಗೆ ಅರಗಿಸಿಕೊಳ್ಳಲಾಗದಷ್ಟು ನೋವಾಗಿದೆ. ಮಾತ್ರವಲ್ಲದೆ ದೇಶದ ಕೋಟಿ ಕೋಟಿ ಅಭಿಮಾನಿಗಳ ದುಃಖಕ್ಕೂ ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ

ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗ್ಬೇಕು, ಕ್ರೀಡೆಯಲ್ಲಿ ವಿಕಸನ ಅಗತ್ಯ; ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ

ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಸಿಎಸ್‌ಕೆ ಅಥವಾ ಆರ್‌ಸಿಬಿ, ಮಳೆಯಿಂದ ಲಾಭ ಯಾರಿಗೆ?

ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ

ಸತತ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಓಡಾಟ ನಡೆಸಿ, ದೇಶಕ್ಕಾಗಿ ಆಟವಾಡುತ್ತಿದ್ದ ಭಾರತೀಯ ಕ್ರಿಕೆಟಿಗರ ಸತತ ಪ್ರಯತ್ನದ ಹೊರತಾಗಿಯೂ ವಿಶ್ವಕಪ್‌ ಗೆಲುವು ಸಾಧ್ಯವಾಗಲಿಲ್ಲ. ಸತತ ಹತ್ತು ಪಂದ್ಯಗಳಲ್ಲಿ ಗೆದ್ದು ಟೂರ್ನಿಯ ಅಜೇಯ ತಂಡವಾಗಿದ್ದ ಟೀಮ್‌ ಇಂಡಿಯಾಗೆ, ಈ ಸೋಲು ನಿಜಕ್ಕೂ ದೊಡ್ಡ ಗಾಯವಾದಂತೆ ಮಾಡಿದೆ. ಆದರೆ, ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಆಟಗಾರರ ಆಟವನ್ನು ಪ್ರತಿಯೊಬ್ಬ ಅಭಿಮಾನಿಯೂ ಮೆಚ್ಚಿದ್ದಾರೆ. ಪ್ರತಿಯೊಂದೂ ಪಂದ್ಯಗಳಲ್ಲೂ ಗಾಂಭೀರ್ಯದಿಂದ ಆಡಿ ಅರ್ಹ ಜಯ ಸಾಧಿಸಿದ ರೋಹಿತ್‌ ಪಡೆ, ಕೆಲವೊಂದು ಸಣ್ಣ ಸಣ್ಣ ತಪ್ಪುಗಳಿಂದ ಸೋತು ಕಪ್‌ ಗೆಲ್ಲದಿರಬಹುದು. ಆದರೆ, ಜಗತ್ತಿನ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದೆ. ನಾವು ನಮ್ಮ ಆಟಗಾರರ ಪರ ನಿಲ್ಲಬೇಕು.

ಅಭಿಮಾನಿಗಳಿಗಾಗಿ ಕಪ್‌ ಗೆಲ್ಲಬೇಕೆಂದು ಪಣತೊಟ್ಟು ನಿಸ್ವಾರ್ಥದಿಂದ ಆಟವಾಡಿದ ಭಾರತೀಯರು, ಪಂದ್ಯದಲ್ಲಿ ಸೋತು ತಲೆ ತಗ್ಗಿಸಿದರು. ಆದರೆ, ನಮ್ಮ ಆಟಗಾರರ ಶ್ರಮ, ನಿಸ್ವಾರ್ಥ ಆಟ ಏನೆಂಬುದು ಅಭಿಮಾನಿಗಳಾದ ನಮಗೆಲ್ಲಾ ತಿಳಿದಿದೆ. ದೇಶವೇ ಹೆಮ್ಮೆಪಡುವಂತೆ ಟೂರ್ನಿಯಲ್ಲಿ ಆಡಿ ಫೈನಲ್‌ವರೆಗೂ ಅಜೇಯರಾಗಿ ಬಂದ ನೀವು, ತಲೆತಗ್ಗಿಸಬಾರದು. ತಲೆ ಎತ್ತಿ ನಡೆದು ಎದುಯುಬ್ಬಿಸಿ ನಿಲ್ಲಬೇಕು. ಇದು ಕೋಟಿ ಕೋಟಿ ಅಭಿಮಾನಿಗಳ ಆಸೆ.

ಟೀಮ್‌ ಇಂಡಿಯಾ ಆಟದ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಗವಾಸ್ಕರ್

ಪಂದ್ಯದ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದ ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್, ಟೀಮ್‌ ಇಂಡಿಯಾ ಆಟಗಾರರ ಬೆನ್ನಿಗೆ ನಿಂತಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಗವಾಸ್ಕರ್, ಭಾರತದ ಸೋಲಿನಿಂದ ದುಃಖಿತರಾಗಿರುವುದಾಗಿ ತಿಳಿಸಿದರು. ಆದರೆ, ಪಂದ್ಯಾವಳಿಯುದ್ದಕ್ಕೂ ಭಾರತದ ಆಟ ನೋಡಿ ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ನನಗೆ ತುಂಬಾ ದುಃಖವಾಗಿದೆ. ಭಾರತ ತಂಡವು ಕಳೆದ ಹತ್ತು ಪಂದ್ಯಗಳಲ್ಲಿ ಸೊಗಸಾದ ಕ್ರಿಕೆಟ್ ಆಡಿದೆ. ಆದರೆ ದುರಾದೃಷ್ಟವಶಾತ್‌ ಟ್ರೋಫಿ ಗೆಲ್ಲಬಹುದಾಗಿದ್ದ ಆ ಒಂದು ಹೆಜ್ಜೆಯನ್ನು ಇಡಲು ಸಾಧ್ಯವಾಗಿಲ್ಲ. ಆದರೆ ಟೀಮ್‌ ಇಂಡಿಯಯಾ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕು ಎಂದು ನಾನು ಭಾವಿಸುತ್ತೇನೆ. ತಂಡವು ಅಮೋಘ ಕ್ರಿಕೆಟ್ ಆಡಿದೆ. ಹೌದು, ಕೆಲವೊಮ್ಮೆ ಫೈನಲ್ ಪಂದ್ಯವು ನಾವು ಅಂದುಕೊಂಡಂತೆ ಆಗುವುದಿಲ್ಲ. ಆದರೆ, ನಮ್ಮ ತಂಡವು ಆಡಿದ ಎಲ್ಲಾ ಹತ್ತು ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿತ್ತು” ಎಂದು ಗವಾಸ್ಕರ್‌ ಟೀಮ್‌ ಇಂಡಿಯಾ ಬೆಂಬಲಿಸಿ ಮಾತನಾಡಿದ್ದಾರೆ.

“ಈ ಬಾರಿ ಒಂದೆರಡು ವಿಷಯಗಳು ನಾವಂದುಕೊಂಡತಾಗಲಿಲ್ಲ. ಆದರೂ ಪರವಾಗಿಲ್ಲ. ಕೆಲವೊಮ್ಮ ಅದೃಷ್ಟ ಕೈಕೊಡುತ್ತದೆ. ಉತ್ತಮ ತಂಡವೊಂದರ ವಿರುದ್ಧ ಸೋತರೆ ಅದು ಅವಮಾನವಲ್ಲ. ಐದು ಬಾರಿಯ ಚಾಂಪಿಯನ್‌ಗಳ ಎದುರು ಸೋತಿದ್ದಕ್ಕೆ ಅವಮಾನವೇನೂ ಇಲ್ಲ. ಫೈನಲ್‌ನಲ್ಲಿ ಹೇಗೆ ಗೆಲ್ಲಬೇಕು ಎಂಬುದು ಅವರಿಗೆ ಗೊತ್ತಿದೆ. ಭಾರತ ತಂಡ ಮಾಡಿದ ಎಲ್ಲಾ ಪ್ರಯತ್ನಗಳ ಬಗ್ಗೆ ತುಂಬಾ ಹೆಮ್ಮೆಯಿದೆ. ಕೋಟ್ಯಂತರ ಅಭಿಮಾನಿಗಳಿಗೆ ಅವರು ನೀಡಿದ ಸಂತೋಷದ ಬಗ್ಗೆ ತುಂಬಾ ಹೆಮ್ಮೆ ನಿಜಕ್ಕೂ ಹೆಮ್ಮೆ ಇದೆ,” ಎಂದು ಗವಾಸ್ಕರ್ ಹೇಳಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ