ಕನ್ನಡ ಸುದ್ದಿ  /  ಮನರಂಜನೆ  /  Winter Vacation: ಗಂಡನ ಮನೆಯಲ್ಲಿ ಬಿಟ್ಟು ಲಂಡನ್‌ ಪ್ರವಾಸ ಕೈಗೊಂಡ್ರ ದೀಪಿಕಾ ಪಡುಕೋಣೆ; ಚಳಿಗಾಲದ ಪ್ರವಾಸದ ಫೋಟೋಗಳನ್ನು ನೋಡಿ

Winter Vacation: ಗಂಡನ ಮನೆಯಲ್ಲಿ ಬಿಟ್ಟು ಲಂಡನ್‌ ಪ್ರವಾಸ ಕೈಗೊಂಡ್ರ ದೀಪಿಕಾ ಪಡುಕೋಣೆ; ಚಳಿಗಾಲದ ಪ್ರವಾಸದ ಫೋಟೋಗಳನ್ನು ನೋಡಿ

Praveen Chandra B HT Kannada

Dec 01, 2023 04:08 PM IST

ದೀಪಿಕಾ ಪಡುಕೋಣೆ ಚಳಿಗಾಲದ ಪ್ರವಾಸದ ಫೋಟೋಗಳು

    • Deepika Padukone Winter Vacation: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ತನ್ನ ಗೆಳತಿಯರ ಜತೆ ಚಳಿಗಾಲದ ಪ್ರವಾಸ ಕೈಗೊಂಡಿದ್ದಾರೆ. ತನ್ನ ಪತಿರಾಯ ರಣವೀರ್‌ ಸಿಂಗ್‌ ಜತೆಗೆ ಇವರು ಹೋಗಿಲ್ಲ. ಫ್ರೆಂಡ್ಸ್‌ ಜತೆ ಟ್ರಿಪ್‌ ಹೋಗಿರುವ ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಚಳಿಗಾಲದ ಪ್ರವಾಸದ ಫೋಟೋಗಳು
ದೀಪಿಕಾ ಪಡುಕೋಣೆ ಚಳಿಗಾಲದ ಪ್ರವಾಸದ ಫೋಟೋಗಳು (Instagram)

ಬೆಂಗಳೂರು: ಕ್ರಿಸ್‌ಮಸ್‌ ಹಬ್ಬ ಹತ್ತಿರದಲ್ಲಿದೆ. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಚಳಿಗಾಲದ ಪ್ರವಾಸದ ಮೂಡ್‌ನಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಲಂಡನ್‌ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಅವರು ತನ್ನ ಪತಿ ರಣಬೀರ್‌ ಕಪೂರ್‌ ಜತೆ ಪ್ರವಾಸ ಹೋಗಿಲ್ಲ. ಪ್ರತಿಬಾರಿಯೂ ಪತಿಯ ಜತೆಯೇ ಪ್ರವಾಸ ಹೋಗಬೇಕೆಂದಿಲ್ಲ ಅಲ್ವ. ರಣಬೀರ್‌ ಕಪೂರ್‌ ಬಿಝಿ ಇದ್ದಾರೋ ಏನೋ, ದೀಪಿಕಾ ಪಡುಕೋಣೆ ಈ ಬಾರಿ ತನ್ನ ಗೆಳತಿಯರಾದ ಸ್ನೇಹ ರಾಮಚಂದರ್‌ ಮತ್ತು ದಿವ್ಯ ನಾರಾಯಣ್‌ ಜತೆಗೆ ಚಳಿಗಾಲದ ಪ್ರವಾಸ ಕೈಗೊಂಡಿದ್ದಾರೆ. ಇದನ್ನೂ ಓದಿ: Churumuri: ಆಹಾ! ಚಳಿಗಾಲದಲ್ಲಿ ಸಂಜೆ ಖಾರ ಖಾರ ಚುರುಮುರಿ ತಿಂದ್ರೆ ಸ್ವರ್ಗ; ಇಲ್ಲಿದೆ ರೆಸಿಪಿ

ಟ್ರೆಂಡಿಂಗ್​ ಸುದ್ದಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಸೀತಾರಾಮ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌; ಅಮೃತಧಾರೆ ಜೀವನ್‌ ಸೇರಿದಂತೆ ಹೆಲ್ಮೆಟ್‌ ಧರಿಸದೆ ನಟಿಸಿರೋ ಕಲಾವಿದರನ್ನು ಎಚ್ಚರಿಸಿ

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ನಟಿ

ರೆಸ್ಟೂರೆಂಟ್‌ ಪಕ್ಕದಲ್ಲಿ ತೆಗೆದ ಫೋಟೋವನ್ನು ಇವರು ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ಈಗ ಮಂಜು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿದೆ. ಸಖತ್‌ ಕೂಲ್‌ ಆಗಿದೆ. ಇವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಸೆಲ್ಫಿಯನ್ನು ಸ್ವತಃ ದೀಪಿಕಾ ಪಡುಕೋಣೆ ತೆಗೆದಿದ್ದಾರೆ. ಇನ್ನೊಂದು ಫೋಟೋ ಬೇರೆ ಯಾರೋ ತೆಗೆದಿದ್ದಾರೆ. ಈ ಚಳಿಗೆ ಸೂಕ್ತವಾಗುವಂತಹ ಉಡುಗೆ ತೊಟ್ಟ ದೀಪಿಕಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಇವರು ರೆಸ್ಟೂರೆಂಟ್‌ನ ಒಳಗೆ ಕುಳಿತಿದ್ದಾರೆ. ಇವರು ಫುಡ್‌ಗೆ ಕಾಯುತ್ತಿದ್ದಾರೆ. ಇದನ್ನು ಓದಿದ್ದೀರಾ: ಸೋಲೋ ಟ್ರಿಪ್​ ತೆರಳಲು ಪ್ಲಾನ್​ ಮಾಡುತ್ತಿದ್ದೀರಾ? ಇಲ್ಲಿವೆ 5 ಬಜೆಟ್​ ಫ್ರೆಂಡ್ಲಿ ಪ್ರವಾಸಿ ತಾಣಗಳು

ರಣವೀರ್‌ ಸಿಂಗ್‌ ಪ್ರತಿಕ್ರಿಯೆ

ದೀಪಿಕಾ ಪಡುಕೋಣೆ ಹಂಚಿಕೊಂಡಿರುವ ಫೋಟೋಗಳಿಗೆ ರಣವೀರ್‌ ಸಿಂಗ್‌ ಪ್ರತಿಕ್ರಿಯೆ ನೀಡಿದ್ದಾರೆ. ಇವರು ಈ ಫೋಟೋಗಳಿಗೆ ಹೃದಯದ ಇಮೋಜಿ ಮತ್ತು ಕಣ್ಣುಂಬ ಪ್ರೀತಿ ತುಂಬಿರುವ ಇಮೋಜಿಗಳನ್ನು ಹಾಕಿದ್ದಾರೆ. ದೀಪಿಕಾ ಪಡುಕೋಣೆ ಫೋಟೋಗಳಿಗೆ ಎಷ್ಟೇ ಬ್ಯುಸಿ ಇದ್ದರೂ ರಣಬೀರ್‌ ಕಮೆಂಟ್‌ ಅಥವಾ ಲೈಕ್‌ ಒತ್ತಲು ಮರೆಯೋದಿಲ್ಲ. ಅಂದಹಾಗೆ, ಈ ಲಂಡನ್‌ ಪ್ರವಾಸವನ್ನು ದೀಪಿಕಾ ಪಡುಕೋಣೆ ತನ್ನ ಗೆಳತಿಯರ ಜತೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಗಂಡನ ಮನೆಯಲ್ಲೇ ಬಿಟ್ಟು ಗೆಳತಿಯರ ಜತೆ ಪ್ರವಾಸ ಹೋಗುವ ಮಜಾವೇ ಬೇರೆ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರಂತೆ. ಇದನ್ನು ನೋಡಿ: ಚಳಿಗಾಲದಲ್ಲಿ ವಿದೇಶ ಪ್ರವಾಸಕ್ಕೆ ತೆರಳುವ ಪ್ಲಾನ್​ ಇದ್ಯಾ? ವಿಶ್ವದ ಈ 5 ಚಳಿಗಾಲದ ಹಬ್ಬಗಳ ಬಗ್ಗೆ ತಿಳಿದಿರಲಿ

ದೀಪಿಕಾ ಪಡುಕೋಣೆ ಅವರ ಮುಂಬರುವ ಸಿನಿಮಾಗಳು

ಇತ್ತೀಚಿಗೆ ದೀಪಿಕಾ ಪಡುಕೋಣೆಯವರನ್ನು ಪಠಾಣ್‌ ಸಿನಿಮಾದಲ್ಲಿ ಡಾ. ರುಬಿನಾ ಆಗಿ ನೋಡಿರುವಿರಿ. ಜವಾನ್‌ ಸಿನಿಮಾದಲ್ಲಿ ಐಶ್ವರ್ಯ ಆಗಿ ನಟಿಸಿದ್ದರು. ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಚಿತ್ರದಲ್ಲೂ ಇವರು ನಟಿಸುತ್ತಿದ್ದಾರೆ. ಇದು ನಾಗ್‌ ಅಶ್ವೀನ್‌ ನಿರ್ದೇಶನದ ಚಿತ್ರ. ಈ ಸಿನಿಮಾದ ಶೂಟಿಂಗ್‌ ಇನ್ನೂ ನಡೆಯುತ್ತಿದೆ. ಮುಂದಿನ ವರ್ಷ ಈ ಸಿನಿಮಾ ಬಿಡುಗಡೆಯಾಗುವ ನಿರೀಕಷೆಯಿದೆ. ಇದಲ್ಲದೆ ಹೃತಿಕ್‌ ರೋಷನ್‌ ನಟನೆಯ ಫೈಟರ್‌ ಸಿನಿಮಾದಲ್ಲೂ ಇವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರು ಪೊಲೀಸ್‌ ಅಧಿಕಾರಿಯಾಗಿ ತೆರೆಮೇಲೆ ಕಾಣಿಸಲಿದ್ದಾರೆ. ಇವರು ಈ ಸಿನಿಮಾದಲ್ಲಿ ಶಕ್ತಿ ಶೆಟ್ಟಿ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ