ಕನ್ನಡ ಸುದ್ದಿ  /  ಮನರಂಜನೆ  /  ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ರೀಲ್ಸ್‌ ಮಾಡ್ಕೊಂಡೇ ಡಿಗ್ರಿ ಪಡೆಯಲು ಅವಕಾಶ ನೀಡಿದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು

ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ರೀಲ್ಸ್‌ ಮಾಡ್ಕೊಂಡೇ ಡಿಗ್ರಿ ಪಡೆಯಲು ಅವಕಾಶ ನೀಡಿದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು

Praveen Chandra B HT Kannada

Apr 25, 2024 07:00 AM IST

ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ರೀಲ್ಸ್‌ ಮಾಡ್ಕೊಂಡೇ ಡಿಗ್ರಿ ಪಡೆಯಲು ಅವಕಾಶ

    • ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ನೀಡಿರುವ ಜಾಹೀರಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ಎಂದು ಬಿವೋಕ್‌ ಇನ್‌ ಡಿಜಿಟಲ್‌ ಮೀಡಿಯಾ ಆಂಡ್‌ ಫಿಲ್ಮ್‌ ಮೇಕಿಂಗ್‌ ಕೋರ್ಸ್‌ನ ಅಡ್ಮಿಷನ್‌ಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ರೀಲ್ಸ್‌ ಮಾಡ್ಕೊಂಡೇ ಡಿಗ್ರಿ ಪಡೆಯಲು ಅವಕಾಶ
ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ರೀಲ್ಸ್‌ ಮಾಡ್ಕೊಂಡೇ ಡಿಗ್ರಿ ಪಡೆಯಲು ಅವಕಾಶ

ಬೆಂಗಳೂರು: ಈಗ ರೀಲ್ಸ್‌ ಕಾಲ. ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಬಹುತೇಕ ಸೋಷಿಯಲ್‌ ಮೀಡಿಯಾಗಳಲ್ಲಿ ಪುಟ್ಟ ವಿಡಿಯೋ ಹಂಚಿಕೊಂಡು ಖ್ಯಾತಿ, ಹಣ ಗಳಿಸಬಹುದು. ಡಿಜಿಟಲ್‌ ವಿಡಿಯೋ ಕಂಟೆಂಟ್‌ ರಚನೆ, ಸಿನಿಮಾ ರಚನೆ ಇತ್ಯಾದಿ ಕೋರ್ಸ್‌ಗಳನ್ನು ಕಲಿತವರು ಅತ್ಯುತ್ತಮ ಅವಕಾಶವನ್ನು ಈ ಡಿಜಿಟಲ್‌ ಜಗತ್ತಿನಲ್ಲಿ ಪಡೆದುಕೊಳ್ಳಬಹುದು. ಈಗ ದೇಶ-ವಿದೇಶಗಳಲ್ಲಿ ಡಿಜಿಟಲ್‌ ವಿಡಿಯೋ ಕಂಟೆಂಟ್‌ ಕ್ರಿಯೆಟ್‌ ಮಾಡುವವರಿಗೆ ಹಲವು ಕೋರ್ಸ್‌ಗಳು ಲಭ್ಯ ಇವೆ. ಕರ್ನಾಟಕದಲ್ಲಿಯೂ ವಿವಿಧ ಶಿಕ್ಷಣ ಸಂಸ್ಥೆಗಳು ಇಂತಹ ಕೋರ್ಸ್‌ಗಳನ್ನು ತಮ್ಮ ಕರಿಕ್ಯುಲಮ್‌ಗೆ ಸೇರಿಸಿಕೊಂಡಿವೆ.

ಟ್ರೆಂಡಿಂಗ್​ ಸುದ್ದಿ

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಗೌರಿ ಚಿತ್ರದಿಂದ ಹೊರಬಂತು ‘ಒಳ್ಳೆ ಟೈಮ್‌ ಬರುತ್ತೆ’ ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕೂಡ "ಬಿವೋಕ್‌ ಇನ್‌ ಡಿಜಿಟಲ್‌ ಮೀಡಿಯಾ ಆಂಡ್‌ ಫಿಲ್ಮ್‌ ಮೇಕಿಂಗ್‌" ಎಂಬ ಕೋರ್ಸ್‌ ಅನ್ನು ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಈ ಕೋರ್ಸ್‌ ಪ್ರಚಾರಕ್ಕಾಗಿ ಸೋಷಿಯಲ್‌ ಮೀಡಿಯಾದಲ್ಲಿ ಆಕರ್ಷಕ ಜಾಹೀರಾತೊಂದನ್ನು ಹಂಚಿಕೊಂಡಿದೆ. "ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ?" ಎಂಬ ಶೀರ್ಷಿಕೆಯ ಈ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರೀಲ್ಸ್‌ ಮಾಡ್ಕೋಂಡೇ ಡಿಗ್ರಿ ಪಡೆಯಿರಿ ಎಂದು ಬಿವೋಕ್‌ ಇನ್‌ ಡಿಜಿಟಲ್‌ ಮೀಡಿಯಾ ಆಂಡ್‌ ಫಿಲ್ಮ್‌ ಮೇಕಿಂಗ್‌ ಕೋರ್ಸ್‌ ಪ್ರಚಾರಕ್ಕೆ ಬಳಸಿದ ಐಡಿಯಾ ವರ್ಕ್‌ ಆಗಿದೆ.

ರೀಲ್ಸ್‌ ಮಾಡುವುದು ಹೇಗೆ

ಈ ಪೋಸ್ಟರ್‌ನಲ್ಲಿಯೇ ರೀಲ್ಸ್‌ ಬರೆಯಲು ಐದು ಟಿಪ್ಸ್‌ ಕೂಡ ನೀಡಿರುವುದು ವಿಶೇಷ.

  1. ವಾಟರ್‌ ಮಾರ್ಕ್‌ ಇರದ ಫೋಟೋ, ವಿಡಿಯೋ ಬಳಸಿ.
  2. ಟ್ರೆಂಡಿಂಗ್‌ ಹಾಡುಗಳನ್ನೇ ಆದಷ್ಟು ಬಳಸಿ.
  3. ವಿಡಿಯೋ ಕ್ವಾಲಿಟಿ ಚೆನ್ನಾಗಿರಲಿ. ಬ್ಲರ್‌ ಇರೋ ವಿಡಿಯೋಗಳನ್ನು ಬಳಸಬೇಡಿ.
  4. ಕವರ್‌ ಫೋಟೋ ಆಕರ್ಷಕವಾಗಿರಲಿ.
  5. ಕ್ಯಾಪ್ಷನ್‌/ ಹ್ಯಾಷ್‌ಟ್ಯಾಗ್‌ ಸೂಕ್ತವಾಗಿರಲಿ. ಕಂಟೆಂಟ್‌ಗೆ ಹೊಂದುವಂತೆ ಇರಲಿ

ಇದನ್ನೂ ಓದಿ: Digital Jagathu: ಈ ಚುನಾವಣೆಯಲ್ಲಿ ರೀಲ್ಸ್ ಅಧಿಪತಿಗಳಿಗೆ ಡಿಮ್ಯಾಂಡ್‌; ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗೂ ಇರಲಿ ಸಾಮಾಜಿಕ ಬದ್ಧತೆ

ಏನಿದು ಕೋರ್ಸ್‌?

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿರುವ ಈ ಪೋಸ್ಟರ್‌ಗೆ ಸಂಬಂಧಪಟ್ಟಂತೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿವೋಕ್‌ ಡಿಜಿಟಲ್‌ ಮೀಡಿಯಾ ಮತ್ತು ಫಿಲ್ಮ್‌ ಮೇಕಿಂಗ್‌ ವಿಭಾಗದ ಎಚ್‌ಒಡಿ ಮತ್ತು ಅಸಿಸ್ಟೆಂಟ್‌ ಪ್ರೊಫೆಸರ್‌ ಮಾಧವ ಹೊಳ್ಳ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ.

"ಬಿವೋಕ್‌ ಎಂದರೆ ಬಿ. ವೋಕೇಶನಲ್‌ ಕೋರ್ಸ್‌. ಇದರಡಿ ಡಿಜಿಟಲ್‌ ಮೀಡಿಯಾ ಆಂಡ್‌ ಫಿಲ್ಮ್‌ ಮೇಕಿಂಗ್‌ ಮಾತ್ರವಲ್ಲದೆ ಆಪ್‌-ಸಾಫ್ಟ್‌ವೇರ್‌, ರಿಟೇಲ್‌-ಸಪ್ಲೈಚೇನ್‌ ವಿಭಾಗದ ವೋಕೇಶನಲ್‌ ಕೋರ್ಸ್‌ಗಳೂ ಇವೆ. ಬಿವೋಕ್‌ ಸ್ಟ್ರೀಮ್‌ನಲ್ಲಿ ಡಿಜಿಟಲ್‌ ಮೀಡಿಯಾ ಮತ್ತು ಫಿಲ್ಮ್‌ ಮೇಕಿಂಗ್‌ ಕಲಿಸ್ತಾ ಇದ್ದೇವೆ. ಕರ್ನಾಟಕದಲ್ಲಿ ಈ ರೀತಿ ಪ್ರಯತ್ನ ಕೆಲವೇ ಕೆಲವು ಕಡೆ ಆಗಿದೆ. ಅಲೋಸಿಯಸ್‌, ಮೈಸೂರಿನ ಫಿಲೋಮಿನ, ರಾಮಯ್ಯ ಕಾಲೇಜು ಮುಂತಾದ ಕಡೆ ಇಂತಹ ವೊಕೆಷನಲ್‌ ಕೋರ್ಸ್‌ಗಳಿವೆ. ಯೂನಿವರ್ಸಿಟಿಯಲ್ಲಿ ಫಿಲ್ಮ್‌ ಮೇಕಿಂಗ್‌ ಅನ್ನು ಡಿಗ್ರಿಯ ಪರಿಮಿತಿಯೊಳಗೆ ಕಲಿಸುವಂತಹ ಪ್ರಯತ್ನ ಇದೇ ಮೊದಲು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಆಗಿದೆ" ಎಂದು ಬಿವೋಕ್‌ ಡಿಜಿಟಲ್‌ ಮೀಡಿಯಾ ಆಂಡ್‌ ಫಿಲ್ಮ್‌ ಮೇಕಿಂಗ್‌ ವಿಭಾಗದ ಮಾಧವ್‌ ಹೊಳ್ಳ ಮಾಹಿತಿ ನೀಡಿದ್ದಾರೆ.

"ಈ ಕೋರ್ಸ್‌ ಉಳಿದ ಕೋರ್ಸ್‌ಗಳಿಗಿಂತ ಭಿನ್ನ. ನಾವು ಪ್ರ್ಯಾಕ್ಟಿಕಲ್‌ಗೆ ಒತ್ತು ನೀಡುತ್ತವೆ. ಎನ್‌ಇಟಿಯ ಪರಿಕಲ್ಪನೆಯಂತೆ ಅದಕ್ಕೂ ಮೊದಲೇ ಇಂತಹ ಒಂದು ಪ್ರಯತ್ನ ನಮ್ಮಲ್ಲಿ ಆಗಿದೆ. ಈ ಕೋರ್ಸ್‌ನಲ್ಲಿ ಹಲವು ವಿಷಯಗಳಿವೆ. ರೀಲ್ಸ್‌ ಮಾಡುವುದು ಹೇಗೆ, ಯೂಟ್ಯೂಬ್‌ ಮಾಡುವುದು ಹೇಗೆ ಇತ್ಯಾದಿಗಳು ಮಾತ್ರವಲ್ಲದೆ ಎಸ್‌ಇಒ, ಗೂಗಲ್‌ ಅನಾಲಿಟಿಕ್ಸ್‌, ಸೀರಿಯಲ್‌ ರೈಟಿಂಗ್‌, ಸ್ಟೋರಿ ರೈಟಿಂಗ್‌, ಬ್ರಾಂಡಿಂಗ್‌, ಡಿಜಿಟಲ್‌ ಮಾರ್ಕೆಟಿಂಗ್‌ ಸೇರಿದಂತೆ ಹಲವು ವಿಷಯಗಳನ್ನು ಸೇರಿಸಿದ್ದೇವೆ. ಕಥೆ ಬರವಣಿಗೆ ಚಟುವಟಿಕೆ, ಸೋಷಿಯಲ್‌ ಮೀಡಿಯಾ ಪ್ರೊಫೈಲ್‌ ಬಿಲ್ಡಿಂಗ್‌, ಸ್ಕ್ರೀನ್‌ ಪ್ಲೇ ರೈಟಿಂಗ್‌, ಡಿಜಿಟಲ್‌ ಮೀಡಿಯಾ ಕಂಟೆಂಟ್‌ ಕ್ರಿಯೆಷನ್‌, ನಿರ್ದೇಶನ ಮತ್ತು ನಿರ್ಮಾಣ, ಡಿಎಂ ಟೂಲ್‌ ಮತ್ತು ಮಾರ್ಕೆಟಿಂಗ್‌ ಇತ್ಯಾದಿ ಹಲವು ವಿಷಯಗಳನ್ನು ಪ್ರಾಕ್ಟಿಕಲ್‌ ಅನುಭವದ ಜತೆ ವಿದ್ಯಾರ್ಥಿಗಳು ಕಲಿಯಬಹುದು. ಈಗ ಬಹುತೇಕರು ಪದವಿ ಪಡೆಯುತ್ತಾರೆ. ಆದರೆ, ಉದ್ಯೋಗಕ್ಕೆ ರೆಡಿ ಆಗಿರುವುದಿಲ್ಲ. ಈ ಕೋರ್ಸ್‌ ಕಲಿತರೆ ಡಿಜಿಟಲ್‌ ಮೀಡಿಯಾ ಮತ್ತು ಫಿಲ್ಮ್‌ ಮೇಕಿಂಗ್‌ ವಿಭಾಗದಲ್ಲಿ ಉದ್ಯೋಗಕ್ಕೆ ರೆಡಿಯಾಗುತ್ತಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.

"ಈ ಕೋರ್ಸ್‌ನಲ್ಲಿ ಶೇಕಡ 70ರಷ್ಟು ಪ್ರಾಯೋಗಿಕತೆ ಮತ್ತು ಶೇಕಡ 30ರಷ್ಟು ಥಿಯರಿ ಇರುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ಯಾವುದೇ ಮಿತಿಯಿಲ್ಲದ ಇಂಟರ್ನ್‌ಶಿಪ್‌ಗೆ ಅವಕಾಶ ಇರುತ್ತದೆ. ಈ ಹಿಂದಿನ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಮತ್ತು ಇತರೆ ಸಾಂಪ್ರದಾಯಿಕ ಕೋರ್ಸ್‌ಗಳಿಗಿಂತ ಭಿನ್ನವಾದ ಕೌಶಲಾಧರಿತ, ವೃತ್ತಿಪರ ಔದ್ಯೋಗಿಕ ವಲಯ ಕೇಂದ್ರಿತ ಕೋರ್ಸ್‌ ಇದಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ, ರೀಲ್ಸ್‌ ಮಾಡ್ತಿದ್ದೀರಾ? ವೈರಲ್‌ ಆಗ್ಬೇಕಾ? ರೀಲ್ಸ್‌ ಮಾಡ್ಕೊಂಡೇ ಡಿಗ್ರಿ ಪಡೆಯಿರಿ ಎಂದು ಕ್ರಿಯೆಟಿವ್‌ ಜಾಹೀರಾತು ನೀಡಿರುವ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ತನ್ನ ಹೊಸತನದ ಆಲೋಚನೆ ಮೂಲಕ ಎಲ್ಲರ ಗಮನ ಸೆಳೆದಿದೆ.

ಲೇಖನ: ಪ್ರವೀಣ್‌ ಚಂದ್ರ ಪುತ್ತೂರು

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ