Youtube Channel: ಸ್ವಂತ ಯೂಟ್ಯೂಬ್ ಚಾನೆಲ್ ರಚಿಸುವುದು ಹೇಗೆ? ಆರಂಭಿಕರಿಗೆ ಕನ್ನಡ ಮಾರ್ಗದರ್ಶಿ
- How To create youtube channel: ಯೂಟ್ಯೂಬ್ ಚಾನೆಲ್ ಮೂಲಕ ಯಶಸ್ಸು ಪಡೆದವರ ಕತೆಗಳನ್ನು ಓದಿ ನೀವು ಯೂಟ್ಯೂಬ್ ಚಾನೆಲ್ ರಚಿಸಲು ಉದ್ದೇಶಿಸಿರಬಹುದು. ಹಿಂದೂಸ್ತಾನ್ ಟೈಮ್ಸ್ ಕನ್ನಡ ಹೌಟು ಸರಣಿಯಲ್ಲಿ ಯೂಟ್ಯೂಬ್ ಚಾನೆಲ್ ರಚನೆ ಮಾತ್ರವಲ್ಲದೆ, ಮಾನಿಟೈಜೇಷನ್, ಚಾನೆಲ್ ಯಶಸ್ಸು ಪಡೆಯಲು ಬೇಕಾದ ಸರಣಿ ಲೇಖನಗಳನ್ನು ಓದಲಿದ್ದೀರಿ.
- How To create youtube channel: ಯೂಟ್ಯೂಬ್ ಚಾನೆಲ್ ಮೂಲಕ ಯಶಸ್ಸು ಪಡೆದವರ ಕತೆಗಳನ್ನು ಓದಿ ನೀವು ಯೂಟ್ಯೂಬ್ ಚಾನೆಲ್ ರಚಿಸಲು ಉದ್ದೇಶಿಸಿರಬಹುದು. ಹಿಂದೂಸ್ತಾನ್ ಟೈಮ್ಸ್ ಕನ್ನಡ ಹೌಟು ಸರಣಿಯಲ್ಲಿ ಯೂಟ್ಯೂಬ್ ಚಾನೆಲ್ ರಚನೆ ಮಾತ್ರವಲ್ಲದೆ, ಮಾನಿಟೈಜೇಷನ್, ಚಾನೆಲ್ ಯಶಸ್ಸು ಪಡೆಯಲು ಬೇಕಾದ ಸರಣಿ ಲೇಖನಗಳನ್ನು ಓದಲಿದ್ದೀರಿ.
(1 / 13)
ಯೂಟ್ಯೂಬ್ ಚಾನೆಲ್ ರಚನೆ ಒಂದು ಸರಳ ಪ್ರಕ್ರಿಯೆ. ಆದರೆ, ಯೂಟ್ಯೂಬ್ ಚಾನೆಲ್‌ನಲ್ಲಿ ಯಶಸ್ಸು ಪಡೆಯುವುದು ಸವಾಲಿನ ಮತ್ತು ಸಾಕಷ್ಟು ಪರಿಶ್ರಮ ಬೇಡುವ ಪ್ರಕ್ರಿಯೆ. ಈಗ ಸಾಕಷ್ಟು ಯೂಟ್ಯೂಬ್ ಚಾನೆಲ್ ಮೂಲಕ ಆಡ್‌ಸೆನ್ಸ್‌ನಿಂದ ಹಣ ಪಡೆಯುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಯಶಸ್ಸು ಪಡೆದವರ ಕತೆಗಳನ್ನು ಓದಿ ನೀವು ಯೂಟ್ಯೂಬ್ ಚಾನೆಲ್ ರಚಿಸಲು ಉದ್ದೇಶಿಸಿರಬಹುದು. ಹಿಂದೂಸ್ತಾನ್ ಟೈಮ್ಸ್ ಕನ್ನಡ ಹೌಟು ಸರಣಿಯಲ್ಲಿ ಯೂಟ್ಯೂಬ್ ಚಾನೆಲ್ ರಚನೆ ಮಾತ್ರವಲ್ಲದೆ, ಮಾನಿಟೈಜೇಷನ್, ಚಾನೆಲ್ ಯಶಸ್ಸು ಪಡೆಯಲು ಬೇಕಾದ ಸರಣಿ ಲೇಖನಗಳನ್ನು ಓದಲಿದ್ದೀರಿ.
(2 / 13)
ಯೂಟ್ಯೂಬ್ ಚಾನೆಲ್ ಮೂಲಕ ಹಲವು ಸಾವಿರ, ಲಕ್ಷ ಹಣ ಸಂಪಾದನೆ ಮಾಡಬೇಕೆಂಬ ಕನಸು ಸಾಕಷ್ಟು ಜನರಲ್ಲಿ ಇರುತ್ತದೆ. ಬಹುತೇಕರು ಇಂತಹ ಕನಸಲ್ಲಿಯೇ ಕಾಲ ಕಳೆಯುತ್ತಾರೆ. ಈ ನಿಮ್ಮ ಕನಸು ನನಸಾಗುವ ಮೊದಲ ಹಂತ ಚಾನೆಲ್ ಕ್ರಿಯೆಟ್ ಮಾಡುವುದು. ಚಾನೆಲ್ ಕ್ರಿಯೆಟ್ ಮಾಡುವುದು ಹೇಗೆ? ಎಂದು ಬಹುತೇಕರಿಗೆ ತಿಳಿದಿರಬಹುದು. ತಿಳಿಯದೆ ಇರುವವರಿಗಾಗಿ ಇಲ್ಲಿ ಹಂತಹಂತವಾಗಿ ಮಾರ್ಗದರ್ಶನ ನೀಡಲಾಗಿದೆ.
(Unsplash)(3 / 13)
ಮೊದಲನೆಯದಾಗಿ ನಿಮ್ಮಲ್ಲಿ ಗೂಗಲ್ ಇಮೇಲ್ ಖಾತೆ ಇರಬೇಕು. ಮೊದಲಿಗೆ youtube.com ಗೆ ಹೋಗಿ, ಅಲ್ಲಿ ನಿಮ್ಮ ಖಾತೆಯಿಂದ ಲಾಗಿನ್ ಆಗಿ. ಯೂಟ್ಯೂಬ್ ಮೇಲ್ಬಾಗದಲ್ಲಿ ಕ್ರಿಯೆಟ್ ಎಂಬ ಆಯ್ಕೆ ಕಾಣಿಸುತ್ತದೆ. ನೇರವಾಗಿ ನೀವಿರುವ ಖಾತೆಗೆ ವಿಡಿಯೋ ಅಪ್ಲೋಡ್ ಮಾಡಲು ಸೂಚಿಸುತ್ತದೆ. ಹಾಗೆ ಮಾಡಬೇಡಿ. ನಿಮ್ಮ ಪ್ರೊಫೈಲ್ ಫೋಟೊ ಇರುವಲ್ಲಿ ಕ್ಲಿಕ್ ಮಾಡಿದಾಗ ಹಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಕ್ರಿಯೆಟ್ ನ್ಯೂ ಚಾನೆಲ್ ಎಂಬಲ್ಲಿ ಕ್ಲಿಕ್ ಮಾಡಿ.
(4 / 13)
ನಿಮ್ಮ ಪ್ರೊಫೈಲ್ ಫೋಟೊ ಇರುವಲ್ಲಿ ಕ್ಲಿಕ್ ಮಾಡಿದಾಗ ಹಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಕ್ರಿಯೆಟ್ ನ್ಯೂ ಚಾನೆಲ್ ಎಂಬಲ್ಲಿ ಕ್ಲಿಕ್ ಮಾಡಿ.
(5 / 13)
ನಿಮ್ಮ ಚಾನೆಲ್‌ಗೆ ಹೆಸರು ನೀಡಿ. ಇದು ಅತ್ಯಂತ ಪ್ರಮುಖವಾದದ್ದು. ಈಗಾಗಲೇ ಯಶಸ್ಸು ಪಡೆದಿರುವ ಚಾನೆಲ್‌ಗಳ ಹೆಸರನ್ನು ಹೋಲುವಂತಹ ಹೆಸರು ನೀಡಬೇಡಿ. ಡಾಕ್ಟರ್ ಬ್ರೋ ಹೆಸರು ನೋಡಿ ಎಷ್ಟು ವಿಶೇಷವಾಗಿದೆ. ಅದೇ ರೀತಿ ವಿಶೇಷವಾದ ಹೆಸರನ್ನು ನೀಡಿ. ಮುಂದೆ ನೀವು ಏನು ವಿಡಿಯೋ ಹಾಕಲಿದ್ದೀರಿ ಎನ್ನುವ ಕುರಿತು ಸ್ಪಷ್ಟತೆ ಇರಲಿ. ಅದಕ್ಕೆ ತಕ್ಕಂತೆ ಹೆಸರು ಇರಲಿ. ಪ್ರೊಫೈಲ್ ಪಿಕ್ಚರ್ ಇರುವಲ್ಲಿ ನಿಮ್ಮ ಚಾನೆಲ್‌ನ ಲೋಗೊ ಹಾಕಿ. ಕ್ರಿಯೆಟ್ ಚಾನೆಲ್ ಮೇಲೆ ಕ್ಲಿಕ್ ಮಾಡಿ.
(6 / 13)
ಇಷ್ಟಕ್ಕೆ ನಿಮ್ಮ ಹೆಸರಿನಲ್ಲಿ ಒಂದು ಚಾನೆಲ್ ಸಿದ್ಧವಾಯಿತು. ನೀವಿಗ ನೀವು https://studio.youtube.com ನಲ್ಲಿ ಇರುವಿರಿ. ಈಗ ಈ ಚಾನೆಲ್‌ಗೆ ಒಂದು ಕವರ್ ಇಮೇಜ್ ಬೇಕು. ಅದನ್ನು ಹಾಕಿ. ಮುಂದೆ ಇದನ್ನು ಬದಲಾಯಿಸಬಹುದು. ಅಲ್ಲಿಯೇ ಕಸ್ಟಮೈಜೇಷನ್ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ, ಬಳಿಕ ಅಲ್ಲಿಯೇ ಲೇಔಟ್, ಬ್ರಾಂಡಿಂಗ್, ಬೇಸಿಕ್ ಇನ್ಫೋ ಎಂಬ ಆಯ್ಕೆ ಇರುತ್ತದೆ. ಬ್ರಾಂಡಿಂಗ್‌ನಲ್ಲಿ ಕವರ್ ಇಮೇಜ್ ಬದಲಾಯಿಸಿ. ನಿಮ್ಮ ಚಾನೆಲ್ ಲೋಗೊವನ್ನು ಕೆಳಗೆ ಇರುವ ವಾಟರ್ ಮಾರ್ಕ್‌ನಲ್ಲಿ ಹಾಕಿರಿ.
(7 / 13)
ಬೇಸಿಕ್ ಇನ್ಫೋ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಚಾನೆಲ್ ಬ್ರಾಂಡಿಂಗ್ ಮಾಡಲು, ಎಲ್ಲರಿಗೂ ಸುಲಭವಾಗಿ ಸಿಗುವಂತೆ ಆಗಲು ಸೂಕ್ತವಾದ ವಿವರಣೆ ನೀಡಿ. ನಿಮ್ಮದು ಅಡುಗೆ ಚಾನೆಲ್ ಆಗಿದ್ದರೆ ಅಲ್ಲಿ ಇಂಡಿಯನ್ ರೆಸಿಪಿ ಇತ್ಯಾದಿ ಪದಗಳು ಇರಲಿ. ಜನರು ಹುಡುಕುವಾಗ ಸುಲಭವಾಗಿ ಸಿಗುವಂತೆ ನಿಮ್ಮ ಚಾನೆಲ್ ವಿವರ ಬರೆಯಿರಿ. ಇನ್ನು ಕೆಳಗೆ ಹೋದರೆ ನಿಮ್ಮ ಸಂಪರ್ಕ ಮಾಹಿತಿ ಇತ್ಯಾದಿಗಳನ್ನು ಬರೆಯಬಹುದು.
(8 / 13)
ಅಡಿಯೋ ಲೈಬ್ರೆರಿ ಆಯ್ಕೆಯಲ್ಲಿ ಕಾಪಿರೈಟ್ ಇಲ್ಲದ ಆಡಿಯೋಗಳು ಇರುತ್ತವೆ. ಅದನ್ನು ನಿಮ್ಮ ವಿಡಿಯೋಗಳಿಗೆ ಬಳಸಬಹುದು. ಕಾಪಿರೈಟ್ ಇರುವ ವಿಡಿಯೋ, ಆಡಿಯೋ ಯಾವುದನ್ನೂ ಬಳಸಬೇಡಿ. ಮುಂದೆ ನಿಮಗೆ ಯೂಟ್ಯೂಬ್‌ನಿಂದ ಹಣ ಸಂಪಾದನೆ ಮಾಡಲು ತೊಂದರೆಯಾಗಬಹುದು.
(9 / 13)
ಡ್ಯಾಷ್‌ಬೋರ್ಡ್‌ನಲ್ಲಿ ಅಪ್ಲೋಡ್ ಎಂಬ ಆಯ್ಕೆ ಇರುತ್ತದೆ. ಅಲ್ಲಿ ನೀವು ವಿಡಿಯೋ ಅಪ್ಲೋಡ್ ಮಾಡಬೇಕು. ವಿಡಿಯೋ ಅಪ್ಲೋಡ್ ಆದ ಬಳಿಕ ಟೈಟಲ್, ಥಂಬ್‌ನೈಲ್, ಡಿಸ್ಕ್ರಿಪ್ಷನ್ ಆಯ್ಕೆಗಳು ದೊರಕುತ್ತವೆ. ವಿಡಿಯೋಗೆ ಸಂಬಂಧಪಟ್ಟ ಆಕರ್ಷಕ ಥಂಬ್‌ನೈಲ್ ಇಮೇಜ್ (ಮೊದಲಿಗೆ ಕಾಣಿಸುವ ಆಕರ್ಷಕ ಚಿತ್ರ) ಹಾಕಬಹುದು. ಇಲ್ಲಿ ಹೆಡ್‌ಲೈನ್ ಅನ್ನು ಗೂಗಲ್ ಯೂಟ್ಯೂಬ್ ಸರ್ಚ್‌ನಲ್ಲಿ ಸುಲಭವಾಗಿ ದೊರಕುವಂತೆ ಹಾಕಿ. ಕನ್ನಡ ಚಾನೆಲ್ ಆಗಿದ್ದರೆ ಇಂಗ್ಲಿಷ್‌ನಲ್ಲಿಯೂ ಕೀವರ್ಡ್ ಒಳಗೊಂಡ ಟೈಟಲ್, ವಿವರಣೆ ಹಾಕಿ. ನಂತರ ನೆಕ್ಸ್ಟ್ ಹೋಗಿ. ಈ ರೀತಿ ಹಂತಹಂತವಾಗಿ ಹೋಗಿ ವಿಡಿಯೋ ಪಬ್ಲಿಷ್ ಮಾಡಬಹುದು. ನಿಮ್ಮ ಮೊದಲ ಚಾನೆಲ್ ರೆಡಿಯಾಯ್ತು.
(10 / 13)
ನೆನಪಿಡಿ, ಯೂಟ್ಯೂಬ್ ಚಾನೆಲ್ ರಚಿಸುವುದು ತುಂಬಾ ಸುಲಭ. ಆದರೆ, ಇದರಿಂದ ಹಣ ಸಂಪಾದನೆ ಅಥವಾ ಯಶಸ್ಸು ಪಡೆಯಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಒಂದು ಚಾನೆಲ್ ಆರಂಭಿಸುವ ಮೊದಲು ಸಾಕಷ್ಟು ರಿಸರ್ಚ್, ತಯಾರಿ ನಡೆಸಿ. ಸರಿಯಾದ ಯೋಜನೆ ಇದ್ದರೆ ಖಂಡಿತಾ ಯಶಸ್ಸು ಪಡೆಯುವಿರಿ.
(11 / 13)
ಸೋಷಿಯಲ್ ಮೀಡಿಯಾ ಅಥವಾ ಇತರೆ ಕಡೆಗಳಲ್ಲಿ ದೊರಕುವ ವಿಡಿಯೋಗಳನ್ನು ಅಪ್ಲೋಡ್ ಮಾಡಬೇಡಿ. ನೀವೇ ಸ್ವಂತ ತೆಗೆದ ಕಾಪಿರೈಟ್ ಇಲ್ಲದ ವಿಡಿಯೋಗಳನ್ನು ಅಪ್ಲೋಡ್ ಮಾಡಿ. ಇದೇ ರೀತಿ ಕಾಪಿರೈಟ್ ಇರುವ ಮ್ಯೂಸಿಕ್‌ಗಳನ್ನು ಬಳಸಬೇಡಿ.
(Unsplash)(12 / 13)
ಚಾನೆಲ್ ಹೆಸರು ಆಗಾಗ ಬದಲಾಯಿಸುತ್ತ ಇರಬೇಡಿ. ಇದೇ ರೀತಿ ಚಾನೆಲ್ ಟಾಪಿಕ್ ಕೂಡ ಬದಲಾಯಿಸಬೇಡಿ. ಆರಂಭದಲ್ಲಿಯೇ ಸ್ಪಷ್ಟ ಗುರಿ ನಿಗದಿಪಡಿಸಿ ಇಂತಹ ಕಂಟೆಂಟ್ ಮಾತ್ರ ಇದರಲ್ಲಿ ಪ್ರಕಟಿಸುತ್ತೇನೆ ಎಂದು ಸ್ಪಷ್ಟವಾಗಿ ನಿರ್ಧರಿಸಿ ಮುಂದುವರೆಯಿರಿ.
(Unsplash)(13 / 13)
ಚಾನೆಲ್‌ನಲ್ಲಿ ಹಣ ಸಂಪಾದನೆ ಆರಂಭವಾಗಲು ಕನಿಷ್ಠ 1 ಸಾವಿರ ಚಂದಾದಾರರು ಒಂದು ವರ್ಷದಲ್ಲಿ ಆಗಬೇಕು. ಜತೆಗೆ, ಆ ಒಂದು ವರ್ಷದಲ್ಲಿ ನಾಲ್ಕು ಸಾವಿರ ಗಂಟೆಗಳ ಕಾಲ ನಿಮ್ಮ ವಿಡಿಯೋ ವೀಕ್ಷಣೆಯಾಗಿರಬೇಕು. ಕೊಂಚ ದೊಡ್ಡ ವಿಡಿಯೋಗಳನ್ನು ಹಾಕಿದರೆ ವಾಚ್ ಅವರ್ ಬೇಗ ಪೂರ್ಣಗೊಳ್ಳಬಹುದು. ಯೂಟ್ಯೂಬ್‌ನಲ್ಲಿ ಹಣ ಸಂಪಾದನೆಗೆ ಪೂರಕವಾದ ಸಲಹೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಪಡೆಯಲಿದ್ದೀರಿ.
ಇತರ ಗ್ಯಾಲರಿಗಳು