ಕನ್ನಡ ಸುದ್ದಿ  /  ಮನರಂಜನೆ  /  ಲಾಲ್‌ ಸಲಾಮ್‌: 5 ದಿನದಲ್ಲಿ ರಜನಿಕಾಂತ್‌ ಸಿನಿಮಾ ಗಳಿಸಿದ್ದು ಇಷ್ಟೇನಾ? ಇಲ್ಲಿದೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

ಲಾಲ್‌ ಸಲಾಮ್‌: 5 ದಿನದಲ್ಲಿ ರಜನಿಕಾಂತ್‌ ಸಿನಿಮಾ ಗಳಿಸಿದ್ದು ಇಷ್ಟೇನಾ? ಇಲ್ಲಿದೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

Praveen Chandra B HT Kannada

Feb 14, 2024 03:51 PM IST

ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 5

    • Lal Salaam box office collection day 5: ರಜನಿಕಾಂತ್‌ ಅತಿಥಿ ಪಾತ್ರದಲ್ಲಿ ನಟಿಸಿರುವ, ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಲಾಲ್‌ ಸಲಾಮ್‌ ಸಿನಿಮಾವು ಇಲ್ಲಿಯವರೆಗೆ ಭಾರತದಲ್ಲಿ 12.3 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಐದನೇ ದಿನ ಸುಮಾರು ಒಂದು ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ.
ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 5
ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 5

ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 5: ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಸ್ಪೋರ್ಟ್ಸ್‌ ಡ್ರಾಮಾ ಯಾಕೋ ನಿರೀಕ್ಷೆಯಷ್ಟು ಗಳಿಕೆ ಮಾಡುತ್ತಿಲ್ಲ. ಸಚ್‌ನಿಲ್ಕ್‌,ಕಾಂ ವರದಿ ಪ್ರಕಾರ ಲಾಲ್‌ ಸಲಾಮ್‌ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಐದನೇ ದಿನ 1.16 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಫೆಬ್ರವರಿ 9ರಂದು ಲಾಲ್‌ ಸಲಾಮ್‌ ಸಿನಿಮಾ ಬಿಡುಗಡೆಯಾಗಿತ್ತು. ಐಶ್ವರ್ಯ ರಜನಿಕಾಂತ್‌ ಆಕ್ಷನ್‌ ಕಟ್‌ ಹೇಳಿದ ಈ ಚಿತ್ರದಲ್ಲಿ ಇವರ ತಂದೆ ರಜನಿಕಾಂತ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Abbabba OTT: ಒಟಿಟಿಗೆ ಬಂತು ಕಾಮಿಡಿ ಕಚಗುಳಿ ಇಡುವ ಅಬ್ಬಬ್ಬ ಸಿನಿಮಾ; ಯಾವ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯ?

ಕಾಮಿಡಿ ಪಂಚು, ಡಬಲ್‌ ಮೀನಿಂಗ್‌ ಡೈಲಾಗ್‌ ಮಿಂಚು; ಬ್ಯಾಕ್‌ ಬೆಂಚರ್ಸ್‌ ಚಿತ್ರದ ಟೀಸರ್‌ ರಿಲೀಸ್‌

ಭಾಗ್ಯಾ ಕೈ ಸೇರಿದ ಶ್ರೇಷ್ಠಾ ತಾಂಡವ್‌ ಮದುವೆ ಲಗ್ನ ಪತ್ರಿಕೆ; ಎಲ್ಲಾ ವಿಚಾರ ಕುಸುಮಾಗೆ ತಿಳಿಯುವ ಸಮಯ ಬಂತಾ? ಭಾಗ್ಯಲಕ್ಷ್ಮೀ ಧಾರಾವಾಹಿ

JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಸಚ್‌ನಿಲ್ಕ್‌.ಕಾಂ ಪ್ರಕಾರ ಭಾರತದಲ್ಲಿ ಕಳೆದ ಐದು ದಿನಗಳಲ್ಲಿ ಲಾಲ್‌ ಸಲಾಂ ಸಿನಿಮಾವು 12.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನ ಲಾಲ್‌ ಸಲಾಮ್‌ ಸಿನಿಮಾ 3.55 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ 3.25 ಕೋಟಿ ರೂಪಾಯಿ ಗಳಿಸಿತ್ತು. ಮೂರನೇ ದಿನ 3.15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ವೀಕೆಂಡ್‌ ಮುಗಿದು ಸೋಮವಾರ ಬಂದಿರುವುದರಿಂದ ಲಾಲ್‌ ಸಲಾಮ್‌ ಗಳಿಕೆ ಮೂರರಿಂದ 1ಕ್ಕೆ ಇಳಿದಿದೆ. ಅಂದರೆ, ನಾಲ್ಕನೇ ದಿನ ಬಾಕ್ಸ್‌ ಆಫೀಸ್‌ನಲ್ಲಿ ಕೇವಲ 1.13 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಐದನೇ ದಿನ 1.16 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ತಂದೆಗೆ ಮಗಳ ಡೈರೆಕ್ಷನ್‌

ಲಾಲ್‌ ಸಲಾಮ್‌ ಸಿನಿಮಾದಲ್ಲಿ ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ತಂದೆ ರಜನಿಕಾಂತ್‌ಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ಲಾಲ್‌ ಸಲಾಮ್‌ನಲ್ಲಿ ರಜನಿಕಾಂತ್‌ ಅವರು ಮೊಯ್ದೀನ್‌ ಬಾವಾ ಆಗಿ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಲಾಮ್‌ ಸಿನಿಮಾದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಲಾಲ್‌ ಸಲಾಮ್‌ ರಿವ್ಯೂ

ತಿರು (ವಿಷ್ಣು ವಿಶಾಲ್) ಮತ್ತು ಮೊಯ್ದೀನ್ ಭಾಯ್ (ರಜನಿಕಾಂತ್) ಅವರ ಮಗ ಶಂಸುದ್ದೀನ್ (ವಿಕ್ರಾಂತ್) ಬಾಲ್ಯದಿಂದಲೂ ಪ್ರತಿಸ್ಪರ್ಧಿಗಳು. ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಾತ್ರವಲ್ಲದೆ ಗ್ರಾಮದಲ್ಲೂ ಇವರು ಸ್ಪರ್ಧಿಗಳೇ. ಮೊಯಿದ್ದೀನ್ ಭಾಯ್ ಪ್ರಾರಂಭಿಸಿದ ತ್ರೀ ಸ್ಟಾರ್ ಕ್ರಿಕೆಟ್‌ ತಂಡದಲ್ಲಿ ತಿರು ಮತ್ತು ಶಂಶು ಕೂಡ ಆಡಿದ್ದಾರೆ. ಅವರೂ ಗೆಲುವು ಪಡೆದಿದ್ದಾರೆ. ಆದರೆ, ತಿರುವಿನ ಯಶಸ್ಸು ಅವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಇದೇ ಕಾರಣಕ್ಕೆ ಆತನನ್ನು ತಂಡದಿಂದ ಹೊರಹಾಕುತ್ತಾರೆ. ತಿರು ಇದಕ್ಕೆ ಎದುರಾಗಿ ಎಂಸಿಸಿ ತಂಡ ಕಟ್ತಾನೆ. ಈ ಎರಡು ತಂಡಗಳು ಎರಡು ಪ್ರತ್ಯೇಕ ಧರ್ಮಗಳನ್ನು ಪ್ರತಿನಿಧಿಸುತ್ತವೆ. ಹಳ್ಳಿ ಎರಡು ಭಾಗವಾಗುತ್ತದೆ. ಹಿಂದೂ ಮತ್ತು ಮುಸ್ಲಿಂ ತಂಡಗಳಾಗುತ್ತವೆ. ಈ ಹಿಂದೆ ಶಾಂತಿಯುತ ಸಾಮರಸ್ಯದಿಂದ ವಾಸಿಸುತ್ತಿದ್ದ ಗ್ರಾಮದಲ್ಲಿ ಕ್ರಿಕೆಟ್‌ ಪಂದ್ಯವನ್ನು "ಭಾರತ ಮತ್ತು ಪಾಕಿಸ್ತಾನ" ಕ್ರಿಕೆಟ್‌ ಪಂದ್ಯವೆಂದು ಕರೆಯಲಾಗುತ್ತದೆ. ಇದು ಆಗಿನ ಕಥೆ. ಈ ಸಿನಿಮಾದ ಸಂಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ