ಕನ್ನಡ ಸುದ್ದಿ  /  ಮನರಂಜನೆ  /  Rajinikanth: ತಲೈವಾ ಬಗ್ಗೆ ನಿಮಗೆಷ್ಟು ಗೊತ್ತು? ರಜನಿಕಾಂತ್‌ ಕುರಿತ ಸೋಜಿಗದ 10 ಸಂಗತಿಗಳಿವು

Rajinikanth: ತಲೈವಾ ಬಗ್ಗೆ ನಿಮಗೆಷ್ಟು ಗೊತ್ತು? ರಜನಿಕಾಂತ್‌ ಕುರಿತ ಸೋಜಿಗದ 10 ಸಂಗತಿಗಳಿವು

ತಲೈವಾ ಅಭಿಮಾನಿಗಳು ತಿಳಿದಿರಬೇಕಾದ ರಜನಿಕಾಂತ್‌ ಕುರಿತಾದ ಪ್ರಮುಖ 10 ಫ್ಯಾಕ್ಟ್‌ಗಳ ವಿವರ ಇಲ್ಲಿ ನೀಡಲಾಗಿದೆ. ಬೆಂಗಳೂರಿನಲ್ಲಿ ಮರಾಠ ಕುಟುಂಬದಲ್ಲಿ ಜನಿಸಿದ ರಜನಿಕಾಂತ್‌ ಅವರ ನಿಜವಾದ ಹೆಸರು ಶಿವಾಜಿ ರಾವ್‌ ಗಾಯಕ್‌ವಾಡ್‌. ರಜನಿಕಾಂತ್‌ ಅವರಿಗೆ ಪದ್ಮವಿಭೂಷಣ ಮತ್ತು ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ ದೊರಕಿದೆ.

ರಜನಿಕಾಂತ್‌ ಕುರಿತ ಸೋಜಿಗದ 10 ಸಂಗತಿಗಳು
ರಜನಿಕಾಂತ್‌ ಕುರಿತ ಸೋಜಿಗದ 10 ಸಂಗತಿಗಳು

ಬೆಂಗಳೂರು ಬಿಎಂಟಿಸಿ ಚಾಲಕರಾಗಿದ್ದ ರಜನಿಕಾಂತ್‌ ಈಗ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಮೇರುನಟ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇವರು ಫೇಮಸ್‌. ಇವರ ನಟನೆ, ಆಂಗೀಕ ಅಭಿನಯ, ಸಿಗರೇಟು ಸೇದುವ ಸ್ಟೈಲ್‌, ಕನ್ನಡಕ ಏರಿಸುವ ಗತ್ತು ಎಲ್ಲದಕ್ಕೂ ಅಭಿಮಾನಿಗಳಿದ್ದಾರೆ. ಇದೇ ಸಮಯದಲ್ಲಿ ರಜನಿಕಾಂತ್‌ ಡೈಲಾಗ್‌ಗಳೆಂದರೆ ಫ್ಯಾನ್ಸ್‌ಗೆ ಅಚ್ಚುಮೆಚ್ಚು. ಎಲ್ಲರ ಪ್ರೀತಿಪಾತ್ರರಾದ ರಜನಿಕಾಂತ್‌ ಅವರ ಲಾಲ್‌ ಸಲಾಮ್‌ ಸಿನಿಮಾ ಸದ್ಯದಲ್ಲಿ ಬಿಡುಗಡೆಯಾಗಲಿದೆ. ತನ್ನ ಮಗಳ ಚಿತ್ರದಲ್ಲಿ ರಜನಿಕಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಜನಿಕಾಂತ್‌ ಪ್ರತಿಚಿತ್ರಕ್ಕೆ ಅಂದಾಜು 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರ ಬಹುತೇಕ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕರಾಗಿದ್ದ ರಜನಿಕಾಂತ್‌ ಈಗ ಜಗತ್ತಿನ ಪ್ರಮುಖ ನಟರಲ್ಲಿ ಒಬ್ಬರು. ಇವರು ದಕ್ಷಿಣ ಭಾರತದ ಅತ್ಯಧಿಕ ವೇತನ ಪಡೆಯುವ ನಟರಾಗಿದ್ದಾರೆ.

ರಜನಿಕಾಂತ್‌ ಕುರಿತಾದ ಫ್ಯಾಕ್ಟ್‌ಗಳು

ತಲೈವಾ ಅಭಿಮಾನಿಗಳು ತಿಳಿದಿರಬೇಕಾದ ರಜನಿಕಾಂತ್‌ ಕುರಿತಾದ ಪ್ರಮುಖ 10 ಫ್ಯಾಕ್ಟ್‌ಗಳ ವಿವರ ಇಲ್ಲಿ ನೀಡಲಾಗಿದೆ.

1. ಬೆಂಗಳೂರಿನಲ್ಲಿ ಮರಾಠ ಕುಟುಂಬದಲ್ಲಿ ಜನಿಸಿದ ರಜನಿಕಾಂತ್‌ ಅವರ ನಿಜವಾದ ಹೆಸರು ಶಿವಾಜಿ ರಾವ್‌ ಗಾಯಕ್‌ವಾಡ್‌. ಚತ್ರಪತಿ ಶಿವಾಜಿ ಅವರ ಹೆಸರನ್ನು ಇವರಿಗೆ ಇಡಲಾಗಿತ್ತು.

2. ಮನೆಯಲ್ಲಿ ಇವರು ಕನ್ನಡ ಮತ್ತು ಮರಾಠಿ ಮಾತನಾಡುತ್ತಾರೆ. ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೊಮಾ ಓದುವ ಸಮಯದಲ್ಲಿ ಇವರು ತಮಿಳು ಕಲಿತರು.

3. ರಜನಿಕಾಂತ್‌ ಅವರು ನಟರಾಗುವ ಮುನ್ನ ಬಸ್‌ ಕಂಡಕ್ಟರ್‌ ಆಗಿದ್ದರು. ಇದಕ್ಕೂ ಮೊದಲು ಇವರು ಕೂಲಿ ಮತ್ತು ಕಾರ್ಪೆಂಟರ್‌ ಆಗಿಯೂ ದುಡಿದಿದ್ದರು ಎಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

4. ಸೂಪರ್‌ಸ್ಟಾರ್‌, ಸೂಪರ್‌ಹೀರೋ ಆಗಿ ಈಗ ಜನಪ್ರಿಯತೆ ಪಡೆದಿರುವ ರಜನಿಕಾಂತ್‌ ಅವರು ಆರಂಭದಲ್ಲಿ ವಿಲನ್‌ ರೋಲ್‌ಗಳಲ್ಲಿ ನಟಿಸುತ್ತಿದ್ದರು. 1977ರಲ್ಲಿ ಇವರಿಗೆ ಭುವನ ಒರು ಕೆಲ್ವಿಕುರಿಯಲ್ಲಿ ಸಕಾರಾತ್ಮಕ ಪಾತ್ರ ದೊರಕಿತ್ತು.

5. ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ಗೆ ಸ್ಪೂರ್ತಿದಾಯಕ ವ್ಯಕ್ತಿ ಯಾರು ಗೊತ್ತೆ? ಬಾಲಿವುಡ್‌ನ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅಂತೆ. ಅಮಿತಾಬ್‌ ಬಚ್ಚನ್‌ ನಟನೆಯ ಹನ್ನೊಂದು ರಿಮೇಕ್‌ ತಮಿಳು ಸಿನಿಮಾದಲ್ಲಿ ರಜನಿಕಾಂತ್‌ ನಟಿಸಿದ್ದಾರೆ.

6. ರಜನಿಕಾಂತ್‌ ಇಲ್ಲಿಯವರೆಗೆ 170ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ.

7. ರಜನಿಕಾಂತ್‌ ಅವರಿಗೆ ಪದ್ಮವಿಭೂಷಣ ಮತ್ತು ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ ದೊರಕಿದೆ. 2020ರಲ್ಲಿ ಇವರಿಗೆ ಫೋರ್ಬ್ಸ್‌ ಪತ್ರಿಕೆಯು "ಮೋಸ್ಟ್‌ ಇನ್‌ಫ್ಲ್ಯೂಯೆನ್ಸಲ್‌ ಇಂಡಿಯನ್‌" ಎಂಬ ಬಿರುದು ನೀಡಿತ್ತು.

8. ಸಿಬಿಎಸ್‌ಇ ಪಾಠ ಪುಸ್ತಕದಲ್ಲಿ ರಜನಿಕಾಂತ್‌ ಕುರಿತು "ಫ್ರಂ ಬಸ್‌ ಕಂಡಕ್ಟರ್‌ ಟು ಸೂಪರ್‌ಸ್ಟಾರ್‌" ಎಂಬ ಪಾಠವಿದೆ. ̈

9. ರಜನಿಕಾಂತ್‌ ಅಭಿಮಾನಿಗಳ ಕುರಿತ ಚಿತ್ರಣವಿರುವ ಫಾರ್‌ ದಿ ಲವ್‌ ಆಫ್‌ ಎ ಮ್ಯಾನ್‌ ಎಂಬ ಸಿನಿಮಾವನ್ನು 71ನೇಯ ವಿನ್ಸಿ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಾಗಿತ್ತು.

10. 2010ರಲ್ಲಿ ಈಥಿರನ್‌ ಎಂಭ ತಮಿಳು ಸಿನಿಮಾ ಐಎಂಡಿಬಿಯ ಟಾಪ್‌ 50 ಸಿನಿಮಾವಾಗಿತ್ತು. ಅಂದರೆ, ಜಗತ್ತಿನ 50 ಅಗ್ರ ಸಿನಿಮಾಗಳಲ್ಲಿ ತಮಿಳು ಸಿನಿಮಾ ಸ್ಥಾನ ಪಡೆದಿತ್ತು. ಇದು ರಜನಿಕಾಂತ್‌ ನಟನೆಯ ಸಿನಿಮಾ.

ಟಿ20 ವರ್ಲ್ಡ್‌ಕಪ್ 2024