logo
ಕನ್ನಡ ಸುದ್ದಿ  /  ಮನರಂಜನೆ  /  Lal Salaam Ott: ರಜನಿಕಾಂತ್‌ ಚಿತ್ರಕ್ಕೆ ಏನಾಯ್ತು? ಲಾಲ್‌ ಸಲಾಮ್ ಕಲೆಕ್ಷನ್‌ ಗಳಿಕೆ ಪಾತಾಳಕ್ಕೆ! ಒಟಿಟಿ ರಿಲೀಸ್‌ ಅಪ್‌ಡೇಟ್‌ ಹೀಗಿದೆ

Lal Salaam OTT: ರಜನಿಕಾಂತ್‌ ಚಿತ್ರಕ್ಕೆ ಏನಾಯ್ತು? ಲಾಲ್‌ ಸಲಾಮ್ ಕಲೆಕ್ಷನ್‌ ಗಳಿಕೆ ಪಾತಾಳಕ್ಕೆ! ಒಟಿಟಿ ರಿಲೀಸ್‌ ಅಪ್‌ಡೇಟ್‌ ಹೀಗಿದೆ

Feb 11, 2024 09:46 AM IST

google News

Lal Salaam OTT: ರಜನಿಕಾಂತ್‌ ಚಿತ್ರಕ್ಕೆ ಏನಾಯ್ತು? ಲಾಲ್‌ ಸಮಾಲ್‌ ಕಲೆಕ್ಷನ್‌ ಗಳಿಕೆ ಪಾತಾಳಕ್ಕೆ! ಒಟಿಟಿ ರಿಲೀಸ್‌ ಅಪ್‌ಡೇಟ್‌ ಹೀಗಿದೆ

    • ರಜನಿಕಾಂತ್‌ ನಟಿಸಿರುವ ಲಾಲ್ ಸಲಾಮ್‌ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿಯೂ ರಿಲೀಸ್‌ ಆಗಿದೆ. ಅಚ್ಚರಿಯ ವಿಚಾರ ಏನೆಂದರೆ ತಮಿಳಿನಲ್ಲಿ ರಜನಿ ಸಿನಿಮಾಕ್ಕೆ ಸಿಗಬೇಕಿದ್ದ ಆ ಕ್ರೇಜ್‌ ಸಿಗಲಿಲ್ಲ. ತೆಲುಗಲ್ಲೂ ಅದೇ ಕಥೆ!
Lal Salaam OTT: ರಜನಿಕಾಂತ್‌ ಚಿತ್ರಕ್ಕೆ ಏನಾಯ್ತು? ಲಾಲ್‌ ಸಮಾಲ್‌ ಕಲೆಕ್ಷನ್‌ ಗಳಿಕೆ ಪಾತಾಳಕ್ಕೆ! ಒಟಿಟಿ ರಿಲೀಸ್‌ ಅಪ್‌ಡೇಟ್‌ ಹೀಗಿದೆ
Lal Salaam OTT: ರಜನಿಕಾಂತ್‌ ಚಿತ್ರಕ್ಕೆ ಏನಾಯ್ತು? ಲಾಲ್‌ ಸಮಾಲ್‌ ಕಲೆಕ್ಷನ್‌ ಗಳಿಕೆ ಪಾತಾಳಕ್ಕೆ! ಒಟಿಟಿ ರಿಲೀಸ್‌ ಅಪ್‌ಡೇಟ್‌ ಹೀಗಿದೆ

Lal Salaam OTT: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಲಾಲ್ ಸಲಾಮ್ ಸಿನಿಮಾ ಶುಕ್ರವಾರವಷ್ಟೇ (ಫೆ. 9) ಬಿಡುಗಡೆಯಾಗಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಸಂತೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಭಾರತದ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಮತ್ತು ಜಿವಿತಾ ರಾಜಶೇಖರ್ ಲಾಲ್ ಸಲಾಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಲ್ ಸಲಾಮ್ ಚಿತ್ರವನ್ನು ಭಾರತದ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಎ ಸುಭಾಸ್ಕರನ್ ಇದರ ನಿರ್ಮಾಪಕರು.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್‌ ಆಯಿತು. ತಮಿಳಿನಲ್ಲಿ ದಾಖಲೆ ಸೃಷ್ಟಿಸಿದ್ದ ಈ ಸಿನಿಮಾ ತೆಲುಗು, ಕನ್ನಡದಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಬಳಿಕ ರಜನಿಕಾಂತ್‌ ನಟಿಸಿರುವ ಲಾಲ್ ಸಲಾಮ್‌ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿಯೂ ರಿಲೀಸ್‌ ಆಗಿದೆ. ಅಚ್ಚರಿಯ ವಿಚಾರ ಏನೆಂದರೆ ತಮಿಳಿನಲ್ಲಿ ರಜನಿ ಸಿನಿಮಾಕ್ಕೆ ಸಿಗಬೇಕಿದ್ದ ಆ ಕ್ರೇಜ್‌ ಸಿಗಲಿಲ್ಲ. ತೆಲುಗಲ್ಲೂ ಅದೇ ಕಥೆ!

ತೆಲುಗಲ್ಲಿ ಬೆಳಗಿನ ಶೋ ರದ್ದು

ಮೂಲ ತಮಿಳಿನ ಈ ಸಿನಿಮಾ ತೆಲುಗಿನಲ್ಲಿ ರಿಲೀಸ್‌ ಆಗಲಿದೆ ಎಂದು ಅಲ್ಲಿನವರಿಗೆ ಗೊತ್ತಿರಲಿಲ್ಲ. ಈ ನಡುವೆಯೇ ಶಾಕ್‌ ಎಂಬಂತೆ ತೆಲುಗು ರಾಜ್ಯಗಳಲ್ಲಿ ಲಾಲ್ ಸಲಾಮ್ ಚಿತ್ರದ ಬೆಳಗಿನ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು. ಏತನ್ಮಧ್ಯೆ, ಲಾಲ್ ಸಲಾಂ ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಗಮನಿಸಿದರೆ, ರಜನಿ ವೃತ್ತಿಜೀವನದಲ್ಲಿ ಅನಿರೀಕ್ಷಿತ ದಾಖಲೆಗಳು ನಿರ್ಮಾಣವಾಗಿವೆ. ರಜನಿ ಕ್ರೇಜ್ ಒತ್ತಟ್ಟಿಗಿರಲಿ, ಕಲೆಕ್ಷನ್ ವಿಚಾರದಲ್ಲೂ ಅತ್ಯಂತ ಕಳಪೆ ಸಾಧನೆ ಮಾಡಿದೆ ಎಂದೇ ಹೇಳಲಾಗುತ್ತಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರ ಆಗಮನವೂ ಆಗುತ್ತಿಲ್ಲವಂತೆ.

ಮೊದಲ ದಿನದ ಗಳಿಕೆ

ರಜನಿಕಾಂತ್‌ ಸಿನಿಮಾಗಳೆಂದರೆ ಅಲ್ಲಿರುವ ಕ್ರೇಜ್‌ ಸಣ್ಣದಲ್ಲ. ಈ ಹಿಂದಿನ ಜೈಲರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 650 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು. ಇದೀಗ ಲಾಲ್‌ ಸಲಾಮ್‌ ಸಿನಿಮಾಕ್ಕೆ ಆ ಯಾವ ಹೈಪ್‌ ಸಿಕ್ಕಿಲ್ಲ. ಮೊದಲ ದಿನ ಅಂದಾಜು 15 ಕೋಟಿ ಗಳಿಕೆಯನ್ನಾದರೂ ಕಾಣಬಹುದು ಎಂದುಕೊಂಡಿದ್ದ ಲಾಲ್‌ ಸಲಾಮ್‌ ಸಿನಿಮಾ, Sacnilk ವರದಿಯ ಪ್ರಕಾರ ಶುಕ್ರವಾರ ಕೇವಲ 3 ಕೋಟಿ, ಶನಿವಾರ 3 ಕೋಟಿಯನ್ನಷ್ಟೇ ಗಳಿಸಿದೆ. ಒಟ್ಟಾರೆ ಎರಡು ದಿನಗಳಲ್ಲಿ 6.55 ಕೋಟಿ ಗಳಿಸಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗಬಹುದು ಎಂಬ ನಿರೀಕ್ಷೆಯೂ ಮೊದಲ ದಿನವೇ ಹುಸಿಯಾಗಿದೆ.

ಲಾಲ್‌ ಸಲಾಮ್‌ ಯಾವ ಒಟಿಟಿಗೆ, ಯಾವಾಗ?

ಚಿತ್ರಮಂದಿರದಲ್ಲಿನ ಓಟದ ಬಳಿಕ 60 ದಿನಗಳ ನಂತರವೇ ಲಾಲ್‌ ಸಲಾಮ್‌ ಸಿನಿಮಾ ಒಟಿಟಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಈ ಚಿತ್ರವನ್ನು ದೊಡ್ಡ ಮೊತ್ತಕ್ಕೆ ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ ಪಡೆದುಕೊಂಡಿದೆ. ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿರುವ ಈ ಸಿನಿಮಾ ಒಂದು ತಿಂಗಳ ಅವಧಿಯಲ್ಲಿಯೇ ಒಟಿಟಿಗೆ ಬರು ಸಾಧ್ಯತೆ ದಟ್ಟವಾಗಿದೆ. ಲಾಲ್ ಸಲಾಮ್‌ಗೆ ಬರುತ್ತಿರುವ ಟಾಕ್ ಮತ್ತು ಕಲೆಕ್ಷನ್‌ ಗಮನಿಸಿದರೆ, ತಿಂಗಳಾಂತ್ಯದೊಳಗೆ ಒಟಿಟಿಯಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಗಳಿವೆ. ಲಾಲ್ ಸಲಾಂ ಸ್ಯಾಟಲೈಟ್‌ ಹಕ್ಕುಗಳನ್ನು ಸನ್‌ ನೆಟ್‌ವರ್ಕ್‌ ಪಡೆದುಕೊಂಡಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ