ಕನ್ನಡ ಸುದ್ದಿ  /  ಮನರಂಜನೆ  /  Hondisi Bareyiri Update: ಮೊದಲ ಪ್ರಯತ್ನದಲ್ಲೇ ಗೆದ್ದ ರಾಮೇನಹಳ್ಳಿ ಜಗನ್ನಾಥ್‌..'ಹೊಂದಿಸಿ ಬರೆಯಿರಿ' ಚಿತ್ರವನ್ನು ಅಪ್ಪಿದ ಸಿನಿಪ್ರಿಯರು

Hondisi Bareyiri Update: ಮೊದಲ ಪ್ರಯತ್ನದಲ್ಲೇ ಗೆದ್ದ ರಾಮೇನಹಳ್ಳಿ ಜಗನ್ನಾಥ್‌..'ಹೊಂದಿಸಿ ಬರೆಯಿರಿ' ಚಿತ್ರವನ್ನು ಅಪ್ಪಿದ ಸಿನಿಪ್ರಿಯರು

HT Kannada Desk HT Kannada

Feb 14, 2023 06:31 PM IST

ಸಿನಿಪ್ರಿಯರ ಮನಸ್ಸು ಗೆದ್ದ 'ಹೊಂದಿಸಿ ಬರೆಯಿರಿ'

    • 'ಹೊಂದಿಸಿ ಬರೆಯಿರಿ' ಚಿತ್ರದ ಪ್ರಮುಖ ಹೈಲೈಟ್‌ ಈ ಚಿತ್ರದ ತಾರಾಗಣ. ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್ ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಸಿನಿಪ್ರಿಯರ ಮನಸ್ಸು ಗೆದ್ದ 'ಹೊಂದಿಸಿ ಬರೆಯಿರಿ'
ಸಿನಿಪ್ರಿಯರ ಮನಸ್ಸು ಗೆದ್ದ 'ಹೊಂದಿಸಿ ಬರೆಯಿರಿ'

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಜಗನ್ನಾಥ್, ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಹಾಡುಗಳು, ಟ್ರೇಲರ್‌ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದ್ದ ಸಿನಿಮಾ ಈಗ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.

ಟ್ರೆಂಡಿಂಗ್​ ಸುದ್ದಿ

ಹಾಸ್ಟೆಲ್‌ನಿಂದ ಹೊರಹಾಕಿದ್ರು, ಸಹಾಯ ಮಾಡಿದಾತನ ಸಾಲ ತೀರಿಸಿಲ್ಲ, ಸಾಧನೆ ಮಾಡದೆ ವಾಪಸ್‌ ಬರಬೇಡ ಅಂದ್ರು ಅಮ್ಮ ; ಆಂಕರ್‌ ಅನುಶ್ರೀ ಮನದ ಮಾತು

ಒಟಿಟಿಯಲ್ಲಿ ಈ ವಿಕೆಂಡ್‌ನಲ್ಲಿ ಬಿಡುಗಡೆ: ಉಂಡೆಖಿ, ಕುಕ್ಕಿಂಗ್‌ ಆಫ್‌ ಮರ್ಡರ್‌, ಡಾಕ್ಟರ್‌ ಹೂ ಸೇರಿದಂತೆ ಹೊಸ ಸರಣಿ, ಸಿನಿಮಾಗಳ ವಿವರ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ಕಾಲೇಜು ಹಂತದ ಸ್ನೇಹಿತರ ಬದುಕಿನಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ನಿರ್ದೇಶಕ ಜಗನ್ನಾಥ್‌ ಬದುಕಿನ ಪಾಠ ಹೇಳಿದ್ದಾರೆ. ಭಾವನೆಗಳ ಜರ್ನಿ ಜೊತೆಗೆ ಒಂದಿಷ್ಟು ಪ್ರೀತಿ, ಸ್ನೇಹ, ತ್ಯಾಗ, ಹರಟೆ ಎಲ್ಲವೂ ಈ ಚಿತ್ರದಲ್ಲಿದೆ. ತೆರೆ ಮೇಲೆ ಸಿನಿಮಾ ನೋಡಿದವರಿಗೆ ಹೊಸ ಅನುಭವ ನೀಡುವ ಹೊಂದಿಸಿ ಬರೆಯಿರಿ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ ಸಿಕ್ಕಿದೆ. ಸಿನಿಪ್ರಿಯರು ಸಿನಿಮಾವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಪ್ರೇಮಿಗಳ ದಿನಕ್ಕೆ ಒಂದು ಅರ್ಥಪೂರ್ಣ ಸಿನಿಮಾ ಈ ಚಿತ್ರ ಎಂದರೆ ತಪ್ಪಾಗುವುದಿಲ್ಲ.

'ಹೊಂದಿಸಿ ಬರೆಯಿರಿ' ಚಿತ್ರದ ಪ್ರಮುಖ ಹೈಲೈಟ್‌ ಈ ಚಿತ್ರದ ತಾರಾಗಣ. ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್ ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಹಾಡು, ಸಂಗೀತ, ಎಲ್ಲರನ್ನೂ ಕಾಡುವ ಕಥೆ, ಸಿನಿಮಾ ಬಗ್ಗೆ ಕೇಳಿ ಬರುತ್ತಿರುವ ಉತ್ತಮ ವಿಮರ್ಶೆ ಎಲ್ಲವೂ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರೇಕ್ಷಕರು ಮನ ಸೋಲುವಂತೆ ಮಾಡಿದೆ. ಸಂಡೇ ಸಿನಿಮಾಸ್ ಬ್ಯಾನರ್ ಅಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೋ ಕೋಸ್ಟ್‌ ಸಂಗೀತ ನಿರ್ದೇಶನ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕೆ ಇದೆ.

 'ಹೊಂದಿಸಿ ಬರೆಯಿರಿ' ಚಿತ್ರದ ದೃಶ್ಯ

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಇಲ್ಲಿ ಓದಿ

ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಾಗಲಿ ಎಂದು ತಮಗೆ ತಾವೇ ಹಾರೈಸಿಕೊಂಡ ರಶ್ಮಿಕಾ!

ರಶ್ಮಿಕಾ ಮಂದಣ್ಣ ಇಷ್ಟೆಲ್ಲಾ ಆಸ್ತಿ ಹೊಂದಿದ್ದಾರೆ ಎಂದು ತಿಳಿದ ನೆಟಿಜನ್ಸ್‌ ನಾನಾ ರೀತಿ ಕಮೆಂಟ್‌ ಮಾಡುತ್ತಿದ್ದಾರೆ. ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತೀರಿ..? ಇದು ನೀವೇ ಖರೀದಿಸಿದ್ದಾ..ಗಿಫ್ಟ್‌ ಬಂದಿದ್ದಾ..? ಫ್ಲಾಟ್‌ ಬೆಲೆ ಎಷ್ಟು...? ಇಷ್ಟೇನಾ, ಇನ್ನೂ ಬೇರೆ ಕಡೆ ಆಸ್ತಿ ಇದ್ಯಾ..? ಎಂದೆಲ್ಲಾ ಕೇಳುತ್ತಿದ್ದಾರೆ. ಆದರೆ ರಶ್ಮಿಕಾ ಮಾತ್ರ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಇದು ನಿಜವಾಗಲಿ ಎಂದು ನಾನೂ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

ಗಂಡಂದಿರು ಅಡ್ಜೆಸ್ಟ್‌ ಮಾಡಿಕೊಳ್ಳದಿದ್ದರೆ ಬಹಳ ಕಷ್ಟ... 'ಕನ್ನಡತಿ'ಯ ಅಮ್ಮಮ್ಮ ಹೀಗೆ ಹೇಳಿದ್ದೇಕೆ...?

'ಕನ್ನಡತಿ' ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಕೊನೆಯಾದಾಗಲಂತೂ ವೀಕ್ಷಕರು ತಮ್ಮ ಮನೆ ಸದಸ್ಯರನ್ನೇ ಕಳೆದುಕೊಂಡಂತೆ ಬೇಸರ ವ್ಯಕ್ತಪಡಿಸಿದ್ದರು. ಯಾವುದಾದರೂ ರೂಪದಲ್ಲಿ ಮತ್ತೆ ರತ್ನಮಾಲಾ ಅವರನ್ನು ಕರೆತನ್ನಿ ಎಂದು ಮನವಿ ಇಡುವಷ್ಟು ಚಿತ್ಕಳಾ ಕಿರುತೆರೆಪ್ರಿಯರಿಗೆ ಬಹಳ ಹತ್ತಿರವಾಗಿದ್ದರು. ಚಿತ್ಕಳಾ ಬಿರಾದಾರ್‌ ನಟನೆಯ ನೈಜ ಘಟನೆ ಆಧಾರಿತ 'ತನುಜಾ' ಎಂಬ ಸಿನಿಮಾ ಫೆಬ್ರವರಿ 3 ರಂದು ತೆರೆ ಕಂಡಿದೆ. ಚಿತ್ರತಂಡ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಈ ಚಿತ್ರತಂಡ ಸುವರ್ಣ ವಾಹಿನಿಯ ಸೂಪರ್‌ ಸ್ಟಾರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಚಿತ್ಕಳಾ ಅನೇಕ ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ