logo
ಕನ್ನಡ ಸುದ್ದಿ  /  ಮನರಂಜನೆ  /  ಹಾಸ್ಟೆಲ್‌ನಿಂದ ಹೊರಹಾಕಿದ್ರು, ಸಹಾಯ ಮಾಡಿದಾತನ ಸಾಲ ತೀರಿಸಿಲ್ಲ, ಸಾಧನೆ ಮಾಡದೆ ವಾಪಸ್‌ ಬರಬೇಡ ಅಂದ್ರು ಅಮ್ಮ ; ಆಂಕರ್‌ ಅನುಶ್ರೀ ಮನದ ಮಾತು

ಹಾಸ್ಟೆಲ್‌ನಿಂದ ಹೊರಹಾಕಿದ್ರು, ಸಹಾಯ ಮಾಡಿದಾತನ ಸಾಲ ತೀರಿಸಿಲ್ಲ, ಸಾಧನೆ ಮಾಡದೆ ವಾಪಸ್‌ ಬರಬೇಡ ಅಂದ್ರು ಅಮ್ಮ ; ಆಂಕರ್‌ ಅನುಶ್ರೀ ಮನದ ಮಾತು

Praveen Chandra B HT Kannada

May 15, 2024 09:29 AM IST

google News

ಆಂಕರ್‌ ಅನುಶ್ರೀ ಯೂಟ್ಯೂಬ್‌ ಸಂದರ್ಶನ

    • Anchor Anushree Interview: ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಆಂಕರ್‌, ನಟಿ ಅನುಶ್ರೀ ಇದೇ ಮೊದಲ ಬಾರಿಗೆ ತುಳು ಯೂಟ್ಯೂಬ್‌ ಚಾನೆಲ್‌ "ದಿ ಪವರ್‌ ಹೌಸ್‌ ವೈನ್ಸ್‌" ಜತೆ ತನ್ನ ಬದುಕು, ಕರಿಯರ್‌, ಮದುವೆ, ವದಂತಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಆಂಕರ್‌ ಅನುಶ್ರೀ ಯೂಟ್ಯೂಬ್‌ ಸಂದರ್ಶನ
ಆಂಕರ್‌ ಅನುಶ್ರೀ ಯೂಟ್ಯೂಬ್‌ ಸಂದರ್ಶನ

ಬೆಂಗಳೂರು: ದಿ ಪವರ್‌ಹೌಸ್‌ ವೈನ್ಸ್‌ ತುಳು ಯೂಟ್ಯೂಬ್‌ ಚಾನೆಲ್‌ಗೆ ಆಂಕರ್‌, ನಟಿ ಅನುಶ್ರೀ ಸಂದರ್ಶನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ತುಳು ಭಾಷೆಯಲ್ಲಿ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ನಟಿ ಅನುಶ್ರೀ ಪ್ರಯಾಣ ಆರಂಭವಾದದ್ದು ಮಂಗಳೂರಿನಲ್ಲಿ. ಮಂಗಳೂರು ಟಿವಿಯಲ್ಲಿ ಕರಿಯರ್‌ ಆರಂಭಿಸಿದ್ದರು. ಇವರು ಮೊದಲು ಮಂಗಳೂರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಬಳಿಕ ಬೆಂಗಳೂರಿನಲ್ಲಿ ತರಕಾರಿ ಮಾರಾಟ ಮಾಡುವವರಲ್ಲಿ ಸೇರಿದಂತೆ ಬೀದಿಬದಿ ವ್ಯಾಪಾರಿಗಳಲ್ಲಿ ಮಾತನಾಡುತ್ತ ಬೆಂಗಳೂರು ಕನ್ನಡದ ಸ್ಲಾಂಗ್‌ ಅರ್ಥಮಾಡಿಕೊಂಡರಂತೆ. ಇವರ ಬಾಲ್ಯದಲ್ಲಿ ಬಡತನವಿತ್ತು. ತಾಯಿ ಕೆಲಸಕ್ಕೆ ಹೋಗುತ್ತಿದ್ದರು. 25 ವರ್ಷದ ಹಿಂದೆಯೇ ತಂದೆ ಮನೆ ಬಿಟ್ಟಿದ್ದರು. "ಎಲ್ಲರ ಬಾಲ್ಯವೂ ಕಷ್ಟದಲ್ಲಿ ಇರುತ್ತಿತ್ತು. ಹೀಗಾಗಿ ಬಾಲ್ಯದ ಕಷ್ಟದ ಕುರಿತು ಹೆಚ್ಚು ಹೇಳೋದಿಲ್ಲ" ಎಂದು ಹೇಳುತ್ತಾ ಅನುಶ್ರೀ ಸಾಕಷ್ಟು ವಿಚಾರಗಳನ್ನು ತುಳು ಯೂಟ್ಯೂಬ್‌ ಚಾನೆಲ್‌ ದಿ ಪವರ್‌ ಹೌಸ್‌ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ನಟಿ ಅನುಶ್ರೀ ಆ ದಿನಗಳು

ಟಾಟಾ ಎಎಜಿಯಲ್ಲಿ ಟೆಲಿ ಕಾಲರ್‌ ಆಗಿ ಕೆಲಸ ಆರಂಭಿಸಿದ್ದರು. ಆಗ ದಕ್ಷಿಣ ಕನ್ನಡದ ಅರುಣ್‌ ಆಳ್ವಾ ಎಂಬ ಡ್ಯಾನ್ಸರ್‌ ಪರಿಚಯವಾಗಿತ್ತು. ಅವರನ್ನು ಪ್ರಭುದೇವ್‌ ಎಂದೇ ಕರೆಯುತ್ತಿದ್ದರು. ಅವರು ನನ್ನನ್ನು ಕೆಲವೊಂದು ಡ್ಯಾನ್ಸ್‌ ಶೋಗೆ ಕರೆದುಕೊಂಡು ಹೋದರು. ಆಗಲೇ ಗುರುಕಿರಣ್‌, ಮುರುಳಿ ಸೇರಿದಂತೆ ಪ್ರಮುಖ ನಟರನ್ನು ನೋಡಿದ್ದೆ. ಆಗ ನಾನು ಪಿಂಕಿಫ್ಯಾಷನ್‌ ಉಡುಗೆ ತೊಡ್ತಾ ಇದ್ದೆ. ನಾನು ವೇದಿಕೆಯಲ್ಲಿ ಇದ್ದ ಒಂದು ಸಂದರ್ಭದಲ್ಲಿ ಇದ್ದಾಗ ಬಿಳಿ ಪಂಚೆ ಉಟ್ಟುಕೊಂಡ ವ್ಯಕ್ತಿಯೊಬ್ಬರು ಬಂದಿದ್ದರು. ಜನರು ತಕ್ಷಣ ಅಲಾರ್ಟ್‌ ಆಗಿ ಎಲ್ಲರೂ ಅವರ ಸುತ್ತ ಸೇರಿದರು. ಯಾರೆಂದು ನೋಡುವೆ, ಡಾ. ರಾಜ್‌ಕುಮಾರ್.‌ ತಕ್ಷಣ ಸಾಷ್ಟಾಂಗ ನಮಸ್ಕಾರ ಮಾಡಿದೆ. ನಾನು ಮತ್ತು ನನ್ನ ಅಮ್ಮ ರಾಜ್‌ಕುಮಾರ್‌ ಫ್ಯಾನ್ಸ್‌ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಾನು ತುಂಬಾ ಮಾತನಾಡುತ್ತ ಇದ್ದೆ. "ನೀನು ಇಷ್ಟು ಮಾತನಾಡ್ತಾ ಇದ್ದಿಯಲ್ವ. ನಮ್ಮ ಟೀವಿಗೆ ಆಂಕರಿಂಗ್‌ ಅಡಿಷನ್‌ ನಡೀತಾ ಇತ್ತು. ಅಲ್ಲಿಗೆ ಹೋಗು ಅಂದ್ರು" ನಾನು ಹೋದೆ. ನಾನು ಸೆಲೆಕ್ಟ್‌ ಆದೆ. ನನ್ನ ಆಂಕರಿಂಗ್‌ ಪ್ರಯಾಣ ಆರಂಭವಾದದ್ದು ಅಲ್ಲಿ. ನನಗೆ ನಂಗ್‌ ಫಿಶ್‌ ಇಷ್ಟ. ಎಲ್ಲಿ ಹೋದರೂ "ನಂಗ್‌ ಉಂಡೇ" ಎಂದು ಕೇಳುತ್ತ ಇದ್ದೆ. ನಾನು ಎಲ್ಲಿ ಹೋದರೂ ನಿಂಬೆ ಹಣ್ಣು ಹಿಡಿದುಕೊಂಡು "ನಿಂಬುಡ ನಿಂಬುಡ, ರಂಗಿಲಾ ರಂಗಿಲಾ" ಡ್ಯಾನ್ಸ್‌ ಮಾಡ್ತಾ ಇದ್ದೆ. ಡ್ಯಾನ್ಸ್‌ ಬಗ್ಗೆ ತುಂಬಾ ಕ್ರೇಜ್‌ ಇತ್ತು ಎಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದಿ ಪವರ್‌ ಹೌಸ್‌ ತುಳು ಚಾನೆಲ್‌ ಜತೆ ಆಂಕರ್‌ ಅನುಶ್ರೀ ಮಾತು

ಸಾಧನೆ ಮಾಡದೆ ವಾಪಸ್‌ ಬರಬೇಡ ಅಂದ್ರು ಅಮ್ಮ

ಇಷ್ಟೊಂದು ಮಾತು ಕಲಿತದ್ದು ಹೇಗೆ? ಎಂಬ ಪ್ರಶ್ನೆಗೆ "ಇದೊಂದೇ ನನಗೆ ತಂದೆಯಿಂದ ಬಂದ ಬಳವಳಿ. ಅವರು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು" ಎಂದು ಹೇಳಿದ್ದಾರೆ. ಒಂದು ಸಮಯದಲ್ಲಿ ನನಗೆ ಯಾವುದೇ ಕೆಲಸ ಇರಲಿಲ್ಲ. ಹಾಸ್ಟೆಲ್‌ ಫೀಸ್‌ ಕಟ್ಟುತ್ತಿರಲಿಲ್ಲ. ಮನೆಗೆ ಹಣ ಕಳುಹಿಸಲು ಆಗುತ್ತಿರಲಿಲ್ಲ. ಸಾಕಷ್ಟು ಸಮಯ ಉಪವಾಸ ಇರುತ್ತಿದ್ದೆ. ನನಗೆ ಕೆಲಸ ಸಿಗುತ್ತಿಲ್ಲ, ಬೆಂಗಳೂರು ಬಿಡೋಣ ಎಂದುಕೊಂಡಿದ್ದೆ. ನಾನು ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡ್‌ಗೆ ಬಂದಿದ್ದೆ. ಅಮ್ಮನಿಗೆ ಕಾಲ್‌ ಮಾಡಿದೆ. ಬಾ ಅಂದ್ರು. "ನೀನು ಪ್ರಯತ್ನನೇ ಮಾಡದೇ ಬರೋದು ತಪ್ಪು, ನೀನು ಈ ರೀತಿ ಮಾಡಿದ್ರೆ ನನ್ನ ಮಗಳಲ್ಲ" ಎಂದು ಅಮ್ಮ ಹೇಳಿದರು. ನನಗೂ ಅನಿಸಿತು, ನಾನೂ ಯಾವುದೇ ಪ್ರಯತ್ನ ಮಾಡಿಲ್ಲ, ಪ್ರಯತ್ನ ಮಾಡೋಣ" ಎಂದುಕೊಂಡೆ. "ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಕೆಲಸವನ್ನು ಪ್ರೀತಿಸಿದರೆ ಕೆಲಸ ನಮ್ಮನ್ನು ಪ್ರೀತಿಸುತ್ತದೆ. ಇದೇ ನನ್ನ ಯಶಸ್ಸಿನ ಗುಟ್ಟು" ಎಂದು ಅವರು ಹೇಳಿದ್ದಾರೆ. ಯಾವಾಗ ನಾನು ಕೆಲಸವನ್ನು ಇಷ್ಟಪಟ್ಟೆ, ಅವತ್ತಿನಿಂದ ನನ್ನ ಯಶಸ್ಸು ಆರಂಭವಾಯಿತು" ಎಂದು ಅವರು ಹೇಳಿದ್ದಾರೆ. "ನೀವು ನಿಮ್ಮ ಕೆಲಸಕ್ಕೆ ಹೃದಯ ಮತ್ತು ಆತ್ಮ ನೀಡಬೇಕು" ಎಂದು ಅವರು ಹೇಳಿದ್ದಾರೆ. ನನ್ನ ತಾಯಿ ಹೇಳಿದ ಮಾತು ನನ್ನ ಕರಿಯರ್‌ನಲ್ಲಿ ಟರ್ನಿಂಗ್‌ ಪಾಯಿಂಟ್‌ ಆಯ್ತು ಎಂದು ಅವರು ಹೇಳಿದ್ದಾರೆ.

ಬಿಗ್‌ಬಾಸ್‌ನಲ್ಲಿ ಕೆಲವೊಮ್ಮೆ ಉಪ್ಪೂ ಸಿಗುತ್ತಿರಲಿಲ್ಲ

ಬಿಗ್‌ಬಾಸ್‌ ಸೀಸನ್‌ 1ನಲ್ಲಿ ಭಾಗವಹಿಸಿದ್ದು ನನ್ನ ಜನಪ್ರಿಯತೆ ಹೆಚ್ಚಲು ಕಾರಣವಾಯಿತು. ಎರಡು ವಾರಕ್ಕೆ ಬೇಕಾದ ಡ್ರೆಸ್‌ ತರಲು ಹೇಳಿದ್ದರು. 83 ದಿನ ಅಲ್ಲಿದ್ದೆ. ನನಗೆ ಆ ಶೋ ಸಾಕಷ್ಟು ನೆರವಾಯಿತು. ನನ್ನ ಜನಪ್ರಿಯತೆ ಹೆಚ್ಚಾಯಿತು. ಜನರು ನನ್ನನ್ನು ಗುರುತಿಸಲು ಆರಂಭಿಸಿದರು. ಬಿಗ್‌ಬಾಸ್‌ನಲ್ಲಿ ನಾನು ಮೊದಲು ಭಾಗವಹಿಸಿದೆ. ವಿಜಯ ರಾಘವೇಂದ್ರ ವಿನ್ನರ್‌ ಆಗಿದ್ದರು. ಬಿಗ್‌ಬಾಸ್‌ ಸ್ಕ್ರಿಪ್ಟೆಡ್‌ ಅಲ್ಲ, ಅದೊಂದು ಮೈಂಡ್‌ ಗೇಮ್‌, ಕೆಲವೊಮ್ಮೆ ಉಪ್ಪು ಕೂಡ ನೀಡುತ್ತಿರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ. ಅದಾದ ಬಳಿಕ ನಾನು ಯಾವ ಶೋ ಮಾಡಿದರೂ ಜನಪ್ರಿಯತೆ ದೊರಕುತ್ತಿತ್ತು. ಸರೆಗಮಪ ಸೀಸನ್‌ 10ರಲ್ಲಿ ಭಾಗವಹಿಸಿದೆ. ಅರ್ಜುನ್‌ ಜನ್ಯ, ವಿಜಯ ಪ್ರಕಾಶ್‌, ರಾಜೇಶ್‌ ಕೃಷ್ಣನ್‌ ಮುಂತಾದ ಪ್ರಮುಖ ಗಾಯಕರು ಜಡ್ಜ್‌ ಆಗಿದ್ದರು. ಅಲ್ಲಿ ನಾನು ನೆಲೆಯಾದೆ. ಅಲ್ಲಿಂದ ನನ್ನ ಪವಾಡ ಆರಂಭವಾಯಿತು ಎಂದು ತನ್ನ ಯಶಸ್ಸಿನ ಕಥೆಯನ್ನು ದಿ ಪವರ್‌ ಹೌಸ್‌ ವೈನ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಂಕರ್‌ ಅನುಶ್ರೀ ತುಳುವಿನಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಹಾಸ್ಟೆಲ್‌ನಿಂದ ಹೊರಹಾಕಿದ್ರು

ಒಂದು ಸಮಯದಲ್ಲಿ ನನ್ನನ್ನು ಹಾಸ್ಟೆಲ್‌ನಿಂದ ಹೊರಹಾಕಿದರು. ಮೂರು ತಿಂಗಳು ಹಾಸ್ಟೆಲ್‌ ಫೀಸ್‌ ಕಟ್ಟಿರಲಿಲ್ಲ. ಹಾಸ್ಟೆಲ್‌ ಓನರ್‌ ತುಂಬಾ ಜೋರು ಇದ್ರು. ಮಾರಿಮುತ್ತು ರೀತಿ ಇದ್ರು. ಹಾಸ್ಟೆಲ್‌ನಿಂದ ಹೊರಹಾಕಿದಾಗ ಮತ್ತೆ ಮೆಜೆಸ್ಟಿಕ್‌ಗೆ ಹೋದೆ. ವಾಪಸ್‌ ಊರಿಗೆ ಹೋಗುವ ಪ್ಲಾನ್‌. ಆಗ ನನ್ನ ಸ್ನೇಹಿತ ತನುಷ್‌ ಸಹಾಯ ಮಾಡಿದ್ದರು. ಅವರ ಪಲ್ಸರ್‌ ಬೈಕ್‌ನಲ್ಲಿ ಕೂರಿಸಿಕೊಂಡು ಹಾಸ್ಟೆಲ್‌ಗೆ ಹೋಗಿ ಓನರ್‌ಗೆ ಬಯ್ದರು. ಹುಡುಗಿಯೊಬ್ಬಳನ್ನು ಹೇಗೆ ಹೊರಕ್ಕೆ ಹಾಕುವಿರಿ ಎಂದು ಹಾಸ್ಟೆಲ್‌ ಫೀಸ್‌ ಕಟ್ಟಿ ಬೇರೆ ಹಾಸ್ಟೆಲ್‌ಗೆ ಸೇರಿಸಿದರು. ಆ ಸ್ನೇಹಿತನ ಸಾಲ ತೀರಿಸಿಲ್ಲ. ಕೆಲವು ಸಾಲ ತೀರಿಸಬಾರದು. ಕೆಲವು ಋಣ ಇರಬೇಕು. ಕಷ್ಟಕಾಲದಲ್ಲಿ ನೆರವು ನೀಡಿದ ವ್ಯಕ್ತಿಯ ನೆನಪು ಸದಾ ಇರಬೇಕು. ಜೀವನದಲ್ಲಿ ಏನೂ ಇಲ್ಲ ಎಂದಾಗ ಶಾರ್ಟ್‌ಕಟ್‌ ತೆಗೆದುಕೊಳ್ಳಬೇಡಿ. ಸೋತಾಗ ನೆವೆರ್‌ ಗೀವಪ್‌, ಕೈಲಾಗದು ಎಂದು ಬಿಟ್ಟುಬಿಡಬೇಡಿ, ಪ್ರಯತ್ನ ಮಾಡಿ" ಎಂದು ಹೇಳಿದ್ದಾರೆ.

( ಕೃಪೆ: ದಿ ಪವರ್‌ ಹೌಸ್‌ ವೈನ್ಸ್‌, ತುಳು ಯೂಟ್ಯೂಬ್‌ ಚಾನೆಲ್‌ ಸಂದರ್ಶನ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ