ಕನ್ನಡ ಸುದ್ದಿ  /  ಮನರಂಜನೆ  /  Chitkala Biradar Latest News: ಗಂಡಂದಿರು ಅಡ್ಜೆಸ್ಟ್‌ ಮಾಡಿಕೊಳ್ಳದಿದ್ದರೆ ಬಹಳ ಕಷ್ಟ... 'ಕನ್ನಡತಿ'ಯ ಅಮ್ಮಮ್ಮ ಹೀಗೆ ಹೇಳಿದ್ದೇಕೆ...?

Chitkala Biradar Latest News: ಗಂಡಂದಿರು ಅಡ್ಜೆಸ್ಟ್‌ ಮಾಡಿಕೊಳ್ಳದಿದ್ದರೆ ಬಹಳ ಕಷ್ಟ... 'ಕನ್ನಡತಿ'ಯ ಅಮ್ಮಮ್ಮ ಹೀಗೆ ಹೇಳಿದ್ದೇಕೆ...?

ಇದಕ್ಕೂ ಮುನ್ನ ನಾನು ನನ್ನ ತಂದೆ ತಾಯಿ ಬಗ್ಗೆ ಮಾತನಾಡಿದ್ದೇನೆ, ಆದರೆ ಇತ್ತೀಚೆಗೆ ನನ್ನ ಪತಿಯೇ ನನ್ನ ಲೈಫ್‌ನ ಸೂಪರ್‌ ಸ್ಟಾರ್‌ ಅನ್ನಿಸುತ್ತಿದೆ. ಏಕೆಂದರೆ ನಾನು ಮದುವೆಯಾಗಿ ಬಹಳ ವರ್ಷಗಳ ನಂತರ ಸಿನಿಮಾರಂಗಕ್ಕೆ ಬಂದೆ. ನಾನು ನಟಿಸುತ್ತೇನೆ ಎಂದಾಗ ತಂದೆ, ತಾಯಿ, ಮಾವ ಎಲ್ಲರೂ ವಿರೋಧಿಸಿದರು. ಆದರೆ ಆಗ ನನ್ನ ಜೊತೆಗೆ ನಿಂತಿದ್ದು ನನ್ನ ಪತಿ.

ಚಿತ್ಕಲಾ ಬಿರಾದಾರ್
ಚಿತ್ಕಲಾ ಬಿರಾದಾರ್

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಕನ್ನಡತಿ' ಧಾರಾವಾಹಿಯಲ್ಲಿ ವೀಕ್ಷಕರಿಗೆ ಅತ್ಯಂತ ಇಷ್ಟವಾದ ಪಾತ್ರಗಳಲ್ಲಿ ಅಮ್ಮಮ್ಮ ಪಾತ್ರ ಕೂಡಾ ಒಂದು. ರತ್ನಮಾಲಾ ಗ್ರೂಪ್ಸ್‌ ಒಡತಿ ಅಮ್ಮಮ್ಮ ಅಲಿಯಾಸ್‌ ರತ್ನಮಾಲಾ, ತಮ್ಮ ಮುಗ್ಧ ಪಾತ್ರದಿಂದಲೇ ನೋಡುಗರನ್ನು ಸೆಳೆದ ಅತ್ಯದ್ಭುತ ಕಲಾವಿದೆ. ಇವರ ನಿಜ ಹೆಸರು ಚಿತ್ಕಳಾ ಬಿರಾದಾರ್‌ಗಿಂತ ಈಗಲೂ ಜನರು ಇವರನ್ನು ಅಮ್ಮಮ್ಮ ಎಂದೇ ಗುರುತು ಹಿಡಿಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

'ಕನ್ನಡತಿ' ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಕೊನೆಯಾದಾಗಲಂತೂ ವೀಕ್ಷಕರು ತಮ್ಮ ಮನೆ ಸದಸ್ಯರನ್ನೇ ಕಳೆದುಕೊಂಡಂತೆ ಬೇಸರ ವ್ಯಕ್ತಪಡಿಸಿದ್ದರು. ಯಾವುದಾದರೂ ರೂಪದಲ್ಲಿ ಮತ್ತೆ ರತ್ನಮಾಲಾ ಅವರನ್ನು ಕರೆತನ್ನಿ ಎಂದು ಮನವಿ ಇಡುವಷ್ಟು ಚಿತ್ಕಳಾ ಕಿರುತೆರೆಪ್ರಿಯರಿಗೆ ಬಹಳ ಹತ್ತಿರವಾಗಿದ್ದರು. ಚಿತ್ಕಳಾ ಬಿರಾದಾರ್‌ ನಟನೆಯ ನೈಜ ಘಟನೆ ಆಧಾರಿತ 'ತನುಜಾ' ಎಂಬ ಸಿನಿಮಾ ಫೆಬ್ರವರಿ 3 ರಂದು ತೆರೆ ಕಂಡಿದೆ. ಚಿತ್ರತಂಡ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಈ ಚಿತ್ರತಂಡ ಸುವರ್ಣ ವಾಹಿನಿಯ ಸೂಪರ್‌ ಸ್ಟಾರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಚಿತ್ಕಳಾ ಅನೇಕ ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶಾಲಿನಿ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ವಾರಕ್ಕೆ ಒಮ್ಮೆ ಸೆಲೆಬ್ರಿಟಿಗಳನ್ನು ಕರೆಸಲಾಗುತ್ತದೆ. ಈ ವೇಳೆ ಎಲ್ಲಾ ಮಹಿಳೆಯರಿಗೂ ಅವರ ಜೀವನದ ಸೂಪರ್‌ ಸ್ಟಾರ್‌ ಬಗ್ಗೆ ಕೇಳಲಾಗುತ್ತದೆ. ಚಿತ್ಕಳಾ ಅವರಿಗೂ ಈ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಅವರು, ''ನನ್ನ ಪತಿಯೇ ನನ್ನ ಜೀವನದ ಸೂಪರ್‌ ಸ್ಟಾರ್‌, ಇದಕ್ಕೂ ಮುನ್ನ ನಾನು ನನ್ನ ತಂದೆ ತಾಯಿ ಬಗ್ಗೆ ಮಾತನಾಡಿದ್ದೇನೆ, ಆದರೆ ಇತ್ತೀಚೆಗೆ ನನ್ನ ಪತಿಯೇ ನನ್ನ ಲೈಫ್‌ನ ಸೂಪರ್‌ ಸ್ಟಾರ್‌ ಅನ್ನಿಸುತ್ತಿದೆ. ಏಕೆಂದರೆ ನಾನು ಮದುವೆಯಾಗಿ ಬಹಳ ವರ್ಷಗಳ ನಂತರ ಸಿನಿಮಾರಂಗಕ್ಕೆ ಬಂದೆ. ನಾನು ನಟಿಸುತ್ತೇನೆ ಎಂದಾಗ ತಂದೆ, ತಾಯಿ, ಮಾವ ಎಲ್ಲರೂ ವಿರೋಧಿಸಿದರು. ಆದರೆ ಆಗ ನನ್ನ ಜೊತೆಗೆ ನಿಂತಿದ್ದು ನನ್ನ ಪತಿ.''

''ಎಷ್ಟೋ ಬಾರಿ ಶೂಟಿಂಗ್‌ ಮುಗಿಸಿ ಮನೆಗೆ ಬರುವುದು ತಡವಾಗುತ್ತದೆ. ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ನನ್ನ ಪತಿ ಸ್ವಲ್ಪವೂ ಬೇಸರ ಮಾಡಿಕೊಳ್ಳುವುದಿಲ್ಲ. ಗಂಡಂದಿರು ಹೀಗೆ ಅಡ್ಜೆಸ್ಟ್‌ ಮಾಡಿಕೊಳ್ಳದಿದ್ದರೆ ಬಹಳ ಕಷ್ಟ. ಪತಿಯನ್ನು ನೋಡಿ ಮಕ್ಕಳೂ ಕಲಿತ್ತಿದ್ದಾರೆ'' ಎಂದು ಚಿತ್ಕಲಾ ತಮ್ಮ ಪತಿ ಜಗದೀಶ್‌ ಕುಮಾರ್‌ ಬಗ್ಗೆ ಹೇಳಿಕೊಂಡಿದ್ದಾರೆ.‌

ಅಮ್ಮಮ್ಮ ಪಾತ್ರ ಕೊನೆಯಾದ ನಂತರ ದೇವಸ್ಥಾನದಲ್ಲಿ ಪೂಜೆ ಮಾಡಿಸುವಂತೆ ಒತ್ತಾಯಿಸಿದ್ದ ಅಭಿಮಾನಿಗಳು

'ಕನ್ನಡತಿ' ಧಾರಾವಾಹಿಯಲ್ಲಿ ಅಮ್ಮಮ್ಮ ಅಂತ್ಯಕ್ರಿಯೆ ದೃಶ್ಯಗಳನ್ನು ವಿಧಿ ವಿಧಾನಗಳ ಮೂಲಕ ತೋರಿಸಲಾಗಿತ್ತು. ಅಂತ್ಯಕ್ರಿಯೆ ದೃಶ್ಯಗಳನ್ನು ಹೀಗೇ ಮಾಡುತ್ತೇವೆ ಎಂದು ಧಾರಾವಾಹಿ ತಂಡ ಚಿತ್ಕಳಾ ಅವರಿಗೆ ಮೊದಲೇ ತಿಳಿಸಿದ್ದರಂತೆ. ಆದ್ದರಿಂದ ದೃಶ್ಯ ಲೀಕ್‌ ಆಗಬಾರದು ಎಂಬ ಕಾರಣಕ್ಕೆ ಕೆಲವೇ ಕೆಲವರ ಮುಂದೆ ಚಿತ್ರೀಕರಣ ಮಾಡಲಾಗಿತ್ತು. ಆದರೆ ಈ ದೃಶ್ಯಗಳು ಟಿವಿಯಲ್ಲಿ ಪ್ರಸಾರವಾದಾಗ, ಕಿರುತೆರೆಪ್ರಿಯರು ಬಹಳ ಬೇಸರ ವ್ಯಕ್ತಪಡಿಸಿದರು. ಅಂತ್ಯಕ್ರಿಯೆ ದೃಶ್ಯಗಳನ್ನು ಇಷ್ಟು ಆಳವಾಗಿ ತೋರಿಸುವ ಅವಶ್ಯಕತೆ ಇರಲಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಪ್ರತಿಕ್ರಿಯಿಸಿದ್ದರು. ಇನ್ನೂ ಕೆಲವರು ದೇವಸ್ಥಾನಗಳಿಗೆ ಹೋಗಿ ಬನ್ನಿ, ಪೂಜೆ, ಹೋಮ, ಹವನ ಮಾಡಿಸಿ ಎಂದು ಒತ್ತಾಯಿಸಿದ್ದರು ಎಂಬ ವಿಚಾರವನ್ನು ಚಿತ್ಕಳಾ ಸಂದರ್ಶನವೊಂದರಲ್ಲಿ ಹೇಳಿದ್ದರು.

IPL_Entry_Point