ಕನ್ನಡ ಸುದ್ದಿ  /  ಮನರಂಜನೆ  /  ‘ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು’; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌

‘ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು’; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌

Apr 28, 2024 10:47 AM IST

‘ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು’; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌

    • ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಿನಿಮಾ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ. ಅದೇ ರೀತಿ ಕೆಟ್ಟ ಸಿನಿಮಾಗಳನ್ನು ಮಾಡಿ ಸಾಲು ಸಾಲು ಸೋಲುಗಳನ್ನೂ ಕಂಡಿದ್ದಾರೆ. ಇದೀಗ ಇದೇ ರವಿಚಂದ್ರನ್‌  ಆ ಕೆಟ್ಟ ಚಿತ್ರಗಳನ್ನು ಮಾಡಿದ್ದು ಏಕೆ ಎಂಬುದನ್ನು ಹೇಳಿಕೊಂಡಿದ್ದಾರೆ. 
‘ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು’; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌
‘ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು’; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್‌

Ravichandran: ಕ್ರೇಜಿಸ್ಟಾರ್‌ ರವಿಚಂದ್ರನ್‌ ಸ್ಯಾಂಡಲ್‌ವುಡ್‌ ಕಂಡ ಹಿರಿಯ ನಟ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ರಿಯಾಲಿಟಿ ಶೋಗಳ ಮೂಲಕ ಟಿವಿ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದ್ದಾರೆ. ಜತೆಯಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕನಸಿನ ಪ್ರೇಮಲೋಕ 2 ಪ್ರಾಜೆಕ್ಟ್‌ ಮೇಲೆಯೂ ಹೆಚ್ಚು ಸಮಯ ಹಾಕುತ್ತಿದ್ದಾರೆ. ಈ ನಡುವೆ ಬಿಡುವಿನ ಸಮಯ ಸಿಕ್ಕಾಗ ದೂರದೂರಿಗೆ ಕಾರ್ಯಕ್ರಮಗಳಿಗೂ ಹೋಗುವುದುಂಟು. ಹೀಗಿರುವಾಗ ಇತ್ತೀಚೆಗಷ್ಟೇ ಯಾದಗಿರಿಯ ಇಬ್ರಾಂಹಿಪುರಂಕ್ಕೆ ಹೋಗಿ ಬಂದಿದ್ದರು.

ಟ್ರೆಂಡಿಂಗ್​ ಸುದ್ದಿ

JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ

ನೇರವಾಗಿ ಒಟಿಟಿಗೆ ಬಂದ ಎಂಥಾ ಕಥೆ ಮಾರಾಯ ಸಿನಿಮಾ; ಇದು ಕಾಡಿನ ನೆಂಟರು ಕಥಾಸಂಕಲನ ಆಧರಿತ ಚಿತ್ರ

ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

ಸಾಯಿಬಾಬಾ ದೇವಸ್ಥಾನ ಮತ್ತು 101 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಜೀವನದ ಏರುಪೇರುಗಳ ಬಗ್ಗೆಯೂ ರವಿಚಂದ್ರನ್‌ ಮಾತನಾಡಿದರು. ದೇವಸ್ಥಾನಕ್ಕೆ ಹೋಗದಿದ್ದರೂ ಆ ದೇವರ ಬಗ್ಗೆ ಅವರಿಗಿದ್ದ ನಂಬಿಕೆಯನ್ನೂ ಹೇಳಿಕೊಂಡಿದ್ದಾರೆ. ಜೀವನದಲ್ಲಿ ಮಾಡಿದ ತಪ್ಪುಗಳು, ಹೊಟ್ಟೆಪಾಡಿಗಾಗಿ ಮಾಡಿದ ಕೆಟ್ಟ ಸಿನಿಮಾಗಳ ಬಗ್ಗೆಯೂ ರವಿಚಂದ್ರನ್‌ ಮಾತನಾಡಿದ್ದಾರೆ. ಹೀಗಿದೆ ಅವರ ಮಾತು.

ದೇವರೇ ನನ್ನನ್ನು ಕರೆಸಿಕೊಳ್ತಾನೆ..

"ತಿರುಪತಿ ದೇವಸ್ಥಾನಕ್ಕೆ ಆಗಾಗ ಹೋಗ್ತಿದ್ದೆ. ಅರೇ ತಿಮ್ಮಪ್ಪನೇ ಅವನ ಸಾಲ ತೀರಿಸಿಕೊಂಡಿಲ್ಲ. ಇನ್ನು ನನ್ನ ಸಾಲ ಹೇಗೆ ತೀರಿಸ್ತಾನೆ ಅಂತ, ಆವತ್ತಿಂದ ನಾನು ಹೋಗೋದನ್ನ ಬಿಟ್ಟೆ. ನಾನು ಹೋಗೋದನ್ನ ಬಿಟ್ಟೆ ಅಂತ ಆ ದೇವರು ನನ್ನನ್ನು ಬಿಡಲಿಲ್ಲ. ಅವನು ಎಲ್ಲ ಕಡೆ ಕರೆಸಿಕೊಳ್ತಾನೆ ನನ್ನ. ಇವತ್ತು ಸಾಯಿಬಾಬ ಕರೆಸಿಕೊಂಡಿದ್ದಾರೆ. ಮಸ್ಕಿತ್‌ಗೆ ಹೋದ್ರೆ 300 ವರ್ಷದ ಶಿವ ಕರೆಸಿಕೊಂಡಿದ್ದ. ಅದೇ ಮಸ್ಕಿತ್‌ನಲ್ಲಿ ಯಾರೋ ಒಬ್ಬ ಬಂದು, ತಿರುಪತಿಯಿಂದ ತಂದ ಶಾಲನ್ನು ನನಗೆ ಹಾಕ್ತಾನೆ, ಕನಕಗಿರಿಯಲ್ಲಿ ವೆಂಕಟೇಶ್ವರ ಕರೆಸಿಕೊಂಡಿದ್ದ. ದೇವರು ನನ್ನನ್ನು ಹುಡುಕಿಕೊಂಡು ಬರ್ತಾಯಿದ್ದಾನೆ. ಇದಕ್ಕಿಂತ ಇನ್ನೇನು ಬೇಕು ನನಗೆ" ಎಂದಿದ್ದಾರೆ.

ಮತ್ತೊಂದು ಪ್ರೇಮಲೋಕ ಸೃಷ್ಟಿಗೆ ಕಷ್ಟ ಏನಿಲ್ಲ

"ಸ್ವಾಮಿಜಿ ಅವ್ರು ಯಾದಗಿರಿಗೆ ಬನ್ನಿ ಎಂದು ಕರೆದಾಗ, ಅಷ್ಟು ದೂರ ಬರಲು ಆಗಲ್ಲ. ನನಗೆ ಬ್ಯಾಕ್‌ ಪೇನ್‌ ಇದೇ ಎಂದೆ. ತಕ್ಷಣ, ನಾನಿಲ್ಲಿ 50 ಸಾವಿರ ಜನರಿಗೆ ಊಟ ಹಾಕಿಸ್ತಿದ್ದೀನಿ. 101 ಜೋಡಿಯ ಮದುವೆ ಮಾಡಿಸ್ತಿದ್ದೀನಿ. ದೊಡ್ಡ ದೇವಸ್ಥಾನ ಕಟ್ಟಿದ್ದೀನಿ, ನೀವು ಬರಲೇಬೇಕು ಎಂದರು. ತಕ್ಷಣ ಹೊರಟು ಬಂದೆ. ಈಗ ಈ ಶರಣರ ಸಮ್ಮುಖದಲ್ಲಿ ಕೂತಿದ್ದೇ ನನ್ನ ಭಾಗ್ಯ. ಈ ಆಶೀರ್ವಾದದಿಂದ ಇನ್ನೊಂದು ಪ್ರೇಮಲೋಕ ಸೃಷ್ಟಿ ಮಾಡಲು ನನಗೇನೂ ಕಷ್ಟ ಆಗಲ್ಲ" ಎಂದೂ ಹೇಳಿಕೊಂಡರು.

ಬದುಕು ಕೆಟ್ಟ ಸಿನಿಮಾಗಳನ್ನು ಮಾಡಿಸ್ತು..

"ಬಹುಶಃ ಪರಿಸ್ಥಿತಿ, ಮನಸ್ಥಿತಿ ಬದಲಾದಾಗ, ನೀವೆಲ್ಲ ಅಂದುಕೊಳ್ಳುತ್ತಿರಬಹುದು, ರವಿಚಂದ್ರನ್‌ ಈ ಮಧ್ಯೆ ಏನೆನೋ ಕೆಟ್ಟ ಸಿನಿಮಾಗಳನ್ನು ಮಾಡಿದ್ರು ಎಂದು ಅಂದುಕೊಂಡಿರಬಹುದು. ಪರಿಸ್ಥಿತಿ ಪ್ರತಿ ಮನುಷ್ಯನನ್ನು ಒಂದು ಸಲ ಕೆಳಗೆ ಕರೆದುಕೊಂಡು ಹೋಗುತ್ತೆ. ಆದರೆ, ಅದರಾಚೆಗೂ ನಾವು ಬದುಕಬೇಕಲ್ಲ. ಜೀವನ ಸಾಗಿಸಲೇಬೇಕು. ನಮ್ಮನ್ನು ನಂಬಿ ಬಂದವರ ಹೊಟ್ಟೆ ತುಂಬಿಸಲೇಬೇಕು. ಆ ಬದುಕಿಗಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು" ಎಂದಿದ್ದಾರೆ.

ನನಗೂ ಕುಟುಂಬ ಇದೆ, ಮಕ್ಕಳಿದ್ದಾರೆ..

"ನನಗೆ ಅಂತ ಒಂದು ಕುಟುಂಬ ಇದೆ, ನನಗೆ ಅಂತ ಮಕ್ಕಳಿದ್ದಾರೆ. ಅವರಿಗೋಸ್ಕರ ಬದುಕ್ತಾ ಬಂದಿದ್ದೀನಿ. ಅವರಿಗಾಗಿಯಾದ್ರೂ ನಾನು ನನ್ನ ಖಜಾನೆ ತುಂಬಿಸಿಕೊಳ್ಳಬೇಕಾಗುತ್ತೆ. ಹಾಗಾಗಿ ಒಂದಷ್ಟು ಕೆಟ್ಟ ನಿರ್ಧಾರಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಯ್ತು. ಆದರೆ ಕನಸು ಮಾತ್ರ ಮತ್ತೊಂದು ಪ್ರೇಮಲೋಕ ಕಟ್ಟಲೇಬೇಕು ಅಂತಿದೆ. ನಾನು ಯಾರಿಗೂ ಕಡಿಮೆ ಇಲ್ಲ ಅಂತ ಇವತ್ತಿಂದಲ್ಲ, ಆವತ್ತಿಂದಲೇ ಹೇಳಿಕೊಂಡು ಬಂದಿದ್ದೀನಿ. ಅದು ಹಾಗೆಯೇ ಮುಂದುವರಿಯಲಿದೆ" ಎಂದು ಹೇಳಿಕೊಂಡಿದ್ದಾರೆ ರವಿಚಂದ್ರನ್.‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ