ಕನ್ನಡ ಸುದ್ದಿ  /  ಮನರಂಜನೆ  /  ವಿಶೇಷ ಸೂಚನೆ; ರಕ್ಷಿತ್‌ ಶೆಟ್ಟಿಯ ‘ರಿಚರ್ಡ್‌ ಆಂಟನಿ’ ಚಿತ್ರದಲ್ಲಿ ಕರಾವಳಿ ಭಾಗದ ಕಲಾವಿದರಿಗಷ್ಟೇ ಅವಕಾಶ!

ವಿಶೇಷ ಸೂಚನೆ; ರಕ್ಷಿತ್‌ ಶೆಟ್ಟಿಯ ‘ರಿಚರ್ಡ್‌ ಆಂಟನಿ’ ಚಿತ್ರದಲ್ಲಿ ಕರಾವಳಿ ಭಾಗದ ಕಲಾವಿದರಿಗಷ್ಟೇ ಅವಕಾಶ!

ಎಲ್ಲಿಗೆ ಬಂತು ರಕ್ಷಿತ್‌ ಶೆಟ್ಟಿಯ ರಿಚರ್ಡ್‌ ಆಂಟನಿ ಸಿನಿಮಾ ಎಂದು ಕೇಳುತ್ತಿದ್ದವರಿಗೆ ಉತ್ತರ ನೀಡಿದ್ದಾರೆ ರಕ್ಷಿತ್‌ ಶೆಟ್ಟಿ. ಇನ್ನೇನು ಮೇ 1ರಿಂದಲೇ ಸಿನಿಮಾ ಕೆಲಸಗಳು ಶುರುವಾಗುವುದರಿಂದ ಇಡೀ ಟೀಮ್‌ ಉಡುಪಿ ಕಡೆಗೆ ಆಗಮಿಸಲಿದೆ.

ವಿಶೇಷ ಸೂಚನೆ; ರಕ್ಷಿತ್‌ ಶೆಟ್ಟಿಯ ‘ರಿಚರ್ಡ್‌ ಆಂಟನಿ’ ಚಿತ್ರದಲ್ಲಿ ಕರಾವಳಿ ಭಾಗದ ಕಲಾವಿದರಿಗಷ್ಟೇ ಅವಕಾಶ!
ವಿಶೇಷ ಸೂಚನೆ; ರಕ್ಷಿತ್‌ ಶೆಟ್ಟಿಯ ‘ರಿಚರ್ಡ್‌ ಆಂಟನಿ’ ಚಿತ್ರದಲ್ಲಿ ಕರಾವಳಿ ಭಾಗದ ಕಲಾವಿದರಿಗಷ್ಟೇ ಅವಕಾಶ!

Rakshit Shetty on Richard Anthony: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಳಿಕ ನಮ್ಮ ರಕ್ಷಿತ್‌ ಶೆಟ್ರು ಎಲ್ಲೋದ್ರು? ಹೀಗೊಂದು ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿ ಕಾಡುತ್ತಿತ್ತು. ಆದ್ರೆ ಅದಕ್ಕೆ ಸ್ಪಷ್ಟ ಉತ್ತರ ಮಾತ್ರ ಸಿಕ್ಕಿರಲಿಲ್ಲ. ರಿಚರ್ಡ್‌ ಆಂಟನಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ ಎಂಬ ವಿಚಾರ ಗೊತ್ತಿದ್ದರೂ, ಅದೇ ಸಿನಿಮಾದ ಬಗ್ಗೆಯೂ ಕೆಲವು ಊಹಾಪೋಹಗಳು ಹಬ್ಬಿದ್ದವು. ಸ್ವತಃ ರಕ್ಷಿತ್‌ ಅವರೇ ಈ ಸಿನಿಮಾ ನಿರ್ಮಾಣ ಮಾಡ್ತಾರೆ, ಹೊಂಬಾಳೆ ಫಿಲಂಸ್‌ ಈ ಚಿತ್ರದಿಂದ ಹಿಂದೆ ಸರಿದಿದೆ ಎಂದೆಲ್ಲ ವದಂತಿಗಳು ಹಬ್ಬಿದ್ದವು. ಆ ಪುಕಾರುಗಳೆಲ್ಲ ಸುಳ್ಳೆಂದು ಹೇಳಿ ಶೀಘ್ರದಲ್ಲಿ ರಿಚರ್ಡ್‌ ಆಂಟನಿ ಸಿನಿಮಾ ಶುರುವಾಗಲಿದೆ ಎಂದಿದ್ದರು ರಕ್ಷಿತ್.‌ ಈಗ ಇದೇ ಚಿತ್ರದ ಅಪ್‌ಡೇಟ್‌ ಮಾಹಿತಿ ಸಿಕ್ಕಿದೆ. ಜತೆಗೆ ವಿಶೇಷ ಸೂಚನೆಯೂ ಇಲ್ಲಿದೆ. 

ಟ್ರೆಂಡಿಂಗ್​ ಸುದ್ದಿ

ಕಳೆದ ಎರಡು ವರ್ಷಗಳ ಹಿಂದೆಯೇ ರಿಚರ್ಡ್‌ ಆಂಟನಿ ಸಿನಿಮಾ ಘೋಷಣೆ ಆಗಿತ್ತು. ಶೀರ್ಷಿಕೆ ಟೀಸರ್‌ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಸಿನಿಮಾ ಕೆಲಸಗಳು ಎಲ್ಲಿಗೆ ಬಂದವು ಎಂಬುದಕ್ಕೆ ರಕ್ಷಿತ್‌ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಈಗ ನಿನ್ನೆ (ಏ. 16) ಹುಟ್ಟೂರಿಗೆ ಮತದಾನಕ್ಕೆಂದು ಬಂದಾಗ ವೋಟ್‌ ಮಾಡಿ, ಮಾಧ್ಯಮದ ಮುಂದೆ ಬಂದಾಗ ರಿಚರ್ಡ್‌ ಆಂಟನಿ ಸಿನಿಮಾ ಬಗ್ಗೆ ಪ್ರಶ್ನೆಗಳು ಎದುರಾದವು. ಕೂಡಲೇ ಚಿತ್ರದ ಬಗ್ಗೆ ಹೊಸ ಹೊಸ ಅಪ್‌ಡೇಟ್‌ ನೀಡಿದ್ದಾರೆ. ಕಥೆ ಒಂದು ಹಂತದಲ್ಲಿ ಫೈನಲ್‌ ಆಗಿದೆ. ಶೀಘ್ರದಲ್ಲಿ ಉಡುಪಿ ಕಡೆಗೇ ಶಿಫ್ಟ್‌ ಆಗಲಿದ್ದೇವೆ ಎಂದಿದ್ದಾರೆ.

60- 70ರ ಕಾಲಘಟ್ಟದ ರೀ ಕ್ರಿಯೇಟ್

"ಅಷ್ಟಕ್ಕೂ ನಾನೀಗ ಮತದಾನ ಮಾಡಲು ಹುಟ್ಟೂರಿಗೆ ಬಂದಿದ್ದೇನೆ. ಇನ್ನೇನು ಶೀಘ್ರದಲ್ಲಿಯೇ ನನ್ನ ಇಡೀ ಸಿನಿಮಾ ತಂಡಮ ಬರಹಗಾರರು ಇದೇ ಉಡುಪಿಗೆ ಶಿಫ್ಟ್‌ ಆಗಲಿದೆ. ಅಂದರೆ ಇದೇ ಮೇ 1ರಿಂದ ಸಿನಿಮಾ ಕೆಲಸಗಳು ಸ್ಟಾರ್ಟ್‌ ಆಗಲಿದೆ. ಈಗಾಗಲೇ ಚಿತ್ರದ ಬರವಣಿಗೆಯ ಒಂದು ವರ್ಷನ್ ರೆಡಿಯಾಗಿದೆ. ಇಡೀ ಸಿನಿಮಾ ಕರಾವಳಿ ಭಾಗದಲ್ಲಿಯೇ ನಡೆಯಲಿದೆ. ಅದರಲ್ಲೂ 60 ಮತ್ತು 70ರ ಕಾಲಘಟ್ಟದಲ್ಲಿ ಶೂಟ್‌ ಮಾಡಬೇಕಿದೆ. ಹಾಗಾಗಿ ಲೊಕೇಷನ್‌ ಹುಡುಕಾಟವೂ ನಡೆದಿದೆ. ಜತೆಗೆ ಪಕ್ಕದ ಕೇರಳದಲ್ಲೂ ಸಿನಿಮಾದ ಶೂಟಿಂಗ್‌ ಮಾಡುವ ಪ್ಲಾನ್‌ ಇದೆ" ಎಂದಿದ್ದಾರೆ ರಕ್ಷಿತ್.‌

ಕರಾವಳಿ ಕಲಾವಿದರಷ್ಟೇ ನಟಿಸ್ತಾರೆ..

"ಇದಷ್ಟೇ ಅಲ್ಲದೇ ನಮ್ಮ ಉಳಿದವರು ಕಂಡಂತೆ ಸಿನಿಮಾ ತೆರೆಕಂಡು 10 ವರ್ಷಗಳು ಕಳೆದಿವೆ. ಆಗ ನಮ್ಮ ಸಿನಿಮಾ ಇದೇ ಉಡುಪಿಯಲ್ಲಿಯೇ ಶೂಟ್‌ ಮಾಡಿದ್ದೇವು. ಈಗ ಅಂದಿನ ಉಡುಪಿಗೂ ಇಂದಿನ ಉಡುಪಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಇಲ್ಲಿ ಶೂಟಿಂಗ್‌ ಅಸಾಧ್ಯ. ಇನ್ನು ಈ ಸಿನಿಮಾದಲ್ಲಿ ಬಹುತೇಕ ನಮ್ಮ ಕರಾವಳಿ ಭಾಗದ ಕಲಾವಿದರಷ್ಟೇ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಬಿಟ್ಟು ಬೇರೆ ಕಲಾವಿದರನ್ನು ತೆಗೆದುಕೊಳ್ಳಲು ಆಗದು. ಏಕೆಂದರೆ, ಇದು ಸಂಪೂರ್ಣ ಕರಾವಳಿಯ ಕಥೆ ಆಗಿರೋದ್ರಿಂದ, ನೈಜತೆಗೆ ಧಕ್ಕೆ ಆಗಬಾರದೆಂದು ನಮ್ಮವರನ್ನೇ ಬಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಹಾಗಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುವ ಪ್ರತಿ ಕಲಾವಿದನೂ ಕರಾವಳಿಯವರೇ ಆಗಿರ್ತಾರೆ ಎಂದಿದ್ದಾರೆ ರಕ್ಷಿತ್‌ ಶೆಟ್ಟಿ.

ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೆಲ್‌

ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೆಲ್‌ ಆಗಿ ಈ ಸಿನಿಮಾ ಮೂಡಿಬರಲಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ರಕ್ಷಿತ್‌ ಶೆಟ್ಟಿ ವಹಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ಮೂಡಿಬರಲಿದೆ.

IPL_Entry_Point