ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶುರು; ಯಾರ ಟೀಮ್‌ಗೆ ಯಾರು ಸೆಲೆಕ್ಟ್? ಹೀಗಿದೆ ನಗು ಉಕ್ಕಿಸುವವರು ಪಟ್ಟಿ
- ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶುರುವಾಗಿದೆ. ಈ ಸಲ ಒಂದಷ್ಟು ವಿಶೇಷತೆಗಳ ಜತೆಗೆ ಈ ಶೋ ಆಗಮಿಸುತ್ತಿದೆ. ವಾಹಿನಿಯ ಐವರು ನಿರೂಪಕರನ್ನೇ ಟೀಮ್ ಮಾಲೀಕರನ್ನಾಗಿ ಮಾಡಿ, ಅವರೇ ಹರಾಜಿನ ಮೂಲಕ ಹಾಸ್ಯ ಕಲಾವಿದರನ್ನು ಖರೀದಿಸಿ, ನಗಿಸುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಹಾಗಾದರೆ, ಈ ಸಲದ ಕಾಮಿಡಿ ಕಿಲಾಡಿಗಳು ಯಾರು?

(1 / 8)
ನಿರೂಪಕರುಗಳಾದ ಅನುಶ್ರೀ, ಮಾಸ್ಟರ್ ಆನಂದ್, ಅಕುಲ್, ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಆಗಮಿಸುತ್ತಿದ್ದಾರೆ. ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್ ಮ್ಯಾಚ್ ನಡೆಯಲ್ಲಿದೆ. ಕ್ರಿಕೆಟ್ ತಂಡಗಳಂತೆ ಮಾಲೀಕರು, ಕ್ಯಾಪ್ಟನ್‌ಗಳು ಇಲ್ಲಿಯೂ ಇರಲಿದ್ದಾರೆ. ಹರಾಜಿನ ಮೂಲಕ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನು ಮೆಗಾ ಆಕ್ಷನ್ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ. ಆ ಪೈಕಿ ಶನಿವಾರ ಐದು ತಂಡಗಳ ಕ್ಯಾಪ್ಟನ್ ಮತ್ತು ಇಂಪ್ಯಾಕ್ಟ್ ಪ್ಲೇಯರ್‌ಗಳನ್ನು ಆಯ್ಕೆ ಮಾಡಿದೆ. ಯಾರು ಯಾವ ತಂಡವನ್ನು ಸೇರಿಕೊಂಡರು? ಇಲ್ಲಿದೆ ವಿವರ.
ಇತರ ಗ್ಯಾಲರಿಗಳು